2020ರ ಬಹು ನಿರೀಕ್ಷಿತ ಕಾಲಿವುಡ್‌ ಸಿನಿಮಾ 'ಮಾಸ್ಟರ್‌' ಫೆ.29 ರಂದು ಕೊನೆ ಹಂತದ ಚಿತ್ರೀಕರಣವನ್ನು ಮುಗಿಸಿದೆ. ಈ ವೇಳೆ ಚಿತ್ರತಂಡ  ಅಪರೂಪದ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದೆ. ಅದರಲ್ಲಿ ವಿಜಯ್‌ ಮುತ್ತಿಟ್ಟ ತುಣುಕು ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

ಅಭಿಮಾನಿಗಳೇ ಆಗಲಿ, ಕುಟುಂಬಸ್ಥರೇ ಆಗಲಿ ಎಲ್ಲರಿಗೂ ಸಮನಾಗಿ ಪ್ರೀತಿ ತೋರಿಸಿ ಹಾರೈಸುವುದು ವಿಜಯ್ ಸೇತುಪತಿ ಗುಣ. ಅದರಂತೆ ವಿಜಯ್, ದಳಪತಿಯನ್ನು ಅಪ್ಪಿಕೊಂಡು ಮುತ್ತಿಟ್ಟಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. 

ಹೆಲ್ಮೆಟ್‌ ಇಲ್ಲದೆ ದೇವರಕೊಂಡ ಸ್ಟಂಟ್‌; ಅನನ್ಯ ಪಾಂಡೆ ಜೊತೆ ರೋಡಲ್ಲೇ ರೊಮ್ಯಾನ್ಸ್‌!

Xavier Britto ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಲೋಕೇಶ್‌ ಆ್ಯಕ್ಷನ್‌ ಕಟ್ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರು ಕಾಲಿವುಡ್‌ ಸೂಪರ್‌ ಸ್ಟಾರ್‌ಗಳು ಒಂದೇ ಚಿತ್ರದಲ್ಲಿ ಮಿಂಚುತ್ತಿರುವುದು. ಫೆ. 14 ರಂದು ವಿಜಯ್ ಧ್ವನಿಯಲ್ಲಿ 'ಕುಟ್ಟಿ ಸ್ಟೋರಿ' ಬಿಡುಗಡೆ ಮಾಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ರಿಲೀಸ್‌ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿಕೊಳ್ಳುತ್ತಿದೆ.