Asianet Suvarna News Asianet Suvarna News

ಹಿಂದಿಯಲ್ಲಿ ಮಾತಾಡಿ 20 ನಿಮಿಷ ಕಿರುಕುಳ ನೀಡಿದ್ರು; ನಟ ಸಿದ್ಧಾರ್ಥ್ ಆಕ್ರೋಶ

ವಿಮಾನ ನಿಲ್ದಾಣದ ಅಧಿಕಾರಿಗಳು ಹಿಂದಿಯಲ್ಲಿ ಮಾತನಾಡಿ 20 ನಿಮಿಷ ಕಿರುಕುಳ ನೀಡಿದರು ಎಂದು ಆಕ್ರೋಶ ಹೊರಹಾಕಿದ್ದಾರೆ. 

Tamil Actor Siddharth alleges his parents were harassed at airport for 20 minutes sgk
Author
First Published Dec 28, 2022, 12:39 PM IST

ಸೌತ್ ಸಿನಿಮಾರಂಗದ ಖ್ಯಾತ ನಟ ಸಿದ್ಧಾರ್ಥ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಜೊತೆಗೆ ಸಿದ್ಧಾರ್ಥ್ ಆಗಾಗ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುತ್ತಾರೆ. ಇದೀಗ ಸಿದ್ಧಾರ್ಥ್ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಧುರೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಸಿದ್ಧಾರ್ಥ್ ಗುಡುಗಿದ್ದಾರೆ. ಹಿಂದಿಯಲ್ಲಿ ಮಾತನಾಡಿ ತನಗೆ ಮತ್ತು ಪೋಷಕರಿಗೆ ಕಿರುಕುಳ ನೀಡಿದ್ದಾರೆ ಎಂದು ಸಿದ್ಧಾರ್ಥ್ ಆಕ್ರೋಶ ಹೊರಹಾಕಿದ್ದಾರೆ. ಇಂಗ್ಲಿಷ್‌ನಲ್ಲಿ ಮಾತಾಡುವಂತೆ ಕೇಳಿಕೊಂಡರೂ ಸಹ ಹಿಂದಿಯಲ್ಲಿಯೇ ಮಾತನಾಡಿದರು ಎಂದು ಸಿದ್ಧಾರ್ಥ್ ಹೇಳಿದ್ದಾರೆ. ಈ ಬಗ್ಗೆ ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ವಿಮಾನ ನಿಲ್ದಾಣದ ಫೋಟೋ ಶೇರ್ ಮಾಡಿ ಹಿಂದಿ ದಬ್ಬಾಳಿಕೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. 

'ಮಧುರೈ ವಿಮಾನ ನಿಲ್ದಾಣದಲ್ಲಿ CRPF ಅಧಿಕಾರಿಗಳು 20 ನಿಮಿಷಗಳ ಕಾಲ ಕಿರುಕುಳ ನೀಡಿದರು. ನನ್ನ ವಯಸ್ಸಾದ ಪೋಷಕರಿಗೆ ಬ್ಯಾಗ್‌ನಿಂದ ನಾಣ್ಯಗಳನ್ನು ತೆಗೆಯುವಂತೆ ಮಾಡಿದರು. ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ಹೇಳಿದ ನಂತರ ಪದೇ ಪದೇ ನಮ್ಮೊಂದಿಗೆ ಹಿಂದಿಯಲ್ಲಿ ಮಾತನಾಡುತ್ತಿದ್ದರು' ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ಸಿದ್ಧಾರ್ಥ್ ಹಿಂದಿ ಹೇರಿಕೆ ವಿರುದ್ಧವೂ ಧ್ವನಿ ಎತ್ತಿದ್ದರು. ಇದೀಗ ಮತ್ತೊಮ್ಮೆ ಸಿಡಿದೆದ್ದಿದ್ದಾರೆ. 

Puneeth Parva ಪುನೀತ್ ರಾಜ್‌ಕುಮಾರ್ ದೊಡ್ಡ ಅಭಿಮಾನಿ, ಶಿವಣ್ಣ ಡ್ಯಾನ್ಸ್‌ಗೆ ಫಿದಾ ಆಗಿರುವೆ: ಸಿದ್ಧಾರ್ಥ್

ಸಿದ್ಧಾರ್ಥ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಈ ವರ್ಷ ತಮಿಳು ನಟ ವೆಬ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಎಸ್ಕೇಪ್ ಲೈವ್ ವೆಬ್ ಸರಣಿಯಲ್ಲಿ ಸಿದ್ಧಾರ್ಥ್ ನಟಿಸಿದ್ದರು. ಈ ಸರಣಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗಿತ್ತು. ಇದು ಸಾಮಾಜಿಕ ಜಾಲತಾಣದ ಕರಾಳ ಭಾಗದ ಸುತ್ತ ಸುತ್ತಿದ ಸರಣಿಯಾಗಿತ್ತು. ಕೃಷ್ಣ ರಂಗಸ್ವಾಮಿ ಪಾತ್ರದಲ್ಲಿ ಸಿದ್ಧಾರ್ಥ್ ಕಾಣಿಸಿಕೊಂಡಿದ್ದರು. ಈ ವರ್ಷ ಸಿದ್ಧಾರ್ಥ್ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಕಳೆದ ವರ್ಷ ಸಿದ್ಧಾರ್ಥ್ ತೆಲುಗು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅನೇಕ ವರ್ಷಗಳ ಬಳಿಕ ಸಿದ್ಧಾರ್ಥ್ ತೆಲುಗು ಅಭಿಮಾನಿಗಳ ಮುಂದೆ ಬಂದಿದ್ದರು. 

ಸಮಂತಾ ಎಕ್ಸ್ ಬಾಯ್‌ಫ್ರೆಂಡ್ ಜೊತೆ ಪ್ರೀತಿಯಲ್ಲಿ ಬಿದ್ದ ನಟಿ ಅದಿತಿ ರಾವ್ ಹೈದರಿ

ಅಂದಹಾಗೆ ಸಿದ್ಧಾರ್ಥ್ ಇತ್ತೀಚಿಗೆ ಡೇಟಿಂಗ್ ವಿಚಾರವಾಗಿ ಸುದ್ದಿಯಾಗಿದ್ದರು. ಸಿದ್ಧಾರ್ಥ್ ನಟಿ ಅದಿತಿ ರಾವ್ ಹೈದರಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇಬ್ಬರೂ ಆಗಾಗ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಅಲ್ಲದೇ ತೆಲುಗಿನ ಮಹಾ ಸಮುದ್ರಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಬಳಿಕ ಇಬ್ಬರ ನಡುವೆ ಪ್ರೀತಿಯಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಿದ್ಧಾರ್ಥ್ ಎಲ್ಲಿಯೂ ಬಹಿರಂಗ ಪಡಿಸಿಲ್ಲ.  
  

Follow Us:
Download App:
  • android
  • ios