Asianet Suvarna News Asianet Suvarna News

ಸಮಂತಾ ಎಕ್ಸ್ ಬಾಯ್‌ಫ್ರೆಂಡ್ ಜೊತೆ ಪ್ರೀತಿಯಲ್ಲಿ ಬಿದ್ದ ನಟಿ ಅದಿತಿ ರಾವ್ ಹೈದರಿ

ತಮಿಳಿನ ಖ್ಯಾತ ನಟ ಸಿದ್ಧಾರ್ಥ್ ಮತ್ತು ಬಹುಭಾಷ ನಟಿ ಅದಿತಿ ರಾವ್ ಹೈದರಿ ಇಬ್ಬರು ಪರಸ್ಪರ ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ವೈರಲ್ ಆಗಿದೆ. ಸೈಲೆಂಟ್ ಆಗಿ ಈ ಸ್ಟಾರ್ ಕಲಾವಿದರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚಿಗೆ ಅದಿತಿ ಮತ್ತು ಸಿದ್ಧಾರ್ಥ್ ಇಬ್ಬರೂ ಹೆಚ್ಚಾಗಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದೆ. 

Siddharth and rumoured Girlfriend Aditi Rao Hydari spotted in Mumbai sgk
Author
Bengaluru, First Published Jul 20, 2022, 11:56 AM IST

ಸಿನಿಮಾರಂಗದಲ್ಲಿ ಡೇಟಿಂಗ್, ಪ್ರೀತಿ, ಮದುವೆ, ಬ್ರೇಕಪ್ ಕಾಮನ್. ಯಾರು ಯಾರ ಜೊತೆ ಪ್ರೀತಿಯಲ್ಲಿರುತ್ತಾರೆ, ಯಾರನ್ನು ಮದುವೆಯಾಗುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ. ಪ್ರೀತಿಯಲ್ಲಿದ್ದವರು ದಿಢೀರ್ ಅಂತ ಬ್ರೇಕಪ್ ಅಪ್ ಮಾಡಿಕೊಂಡು ಇನ್ನೊಬ್ಬರ ಜೊತೆ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ. ಇದೀಗ ಸೌತ್ ಸಿನಿರಂಗದಲ್ಲಿ ಮತ್ತೊಂದು ಪ್ರೀತಿ ವಿಚಾರ ಸದ್ದು ಮಾಡುತ್ತಿದೆ. ಹೌದು, ತಮಿಳಿನ ಖ್ಯಾತ ನಟ ಸಿದ್ಧಾರ್ಥ್ ಮತ್ತು ಬಹುಭಾಷ ನಟಿ ಅದಿತಿ ರಾವ್ ಹೈದರಿ ಇಬ್ಬರು ಪರಸ್ಪರ ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ವೈರಲ್ ಆಗಿದೆ. ಸೈಲೆಂಟ್ ಆಗಿ ಈ ಸ್ಟಾರ್ ಕಲಾವಿದರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚಿಗೆ ಅದಿತಿ ಮತ್ತು ಸಿದ್ಧಾರ್ಥ್ ಇಬ್ಬರೂ ಹೆಚ್ಚಾಗಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದೆ. ಇಬ್ಬರು ಕದ್ದುಮುಚ್ಚಿ ಭೇಟಿಯಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮೂಲಗಳ ತಿಳಿಸುವೆ.  

ಇತ್ತೀಚಿಗೆ ಇಬ್ಬರೂ ಮುಂಬೈ ಏರ್ಪೋಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಇಬ್ಬರ ನಡುವಿನ ಪ್ರೀತಿ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಅಂದಹಾಗೆ ಇಬ್ಬರನ್ನು ಕ್ಯಾಪ್ಚರ್ ಮೂಡಲು ಮುಗಿಬಿದ್ದ ಪಾಪರಾಜಿಗಳ ವಿರುದ್ಧ ಸಿರ್ಧಾರ್ಥ್ ಗರಂ ಆಗಿದ್ದಾರೆ. ತನ್ನ ಫೋಟೋ ಕ್ಲಿಕ್ಕಿಸದಂತೆ ಸಿದ್ಧಾರ್ಥ್ ಆಕ್ರೋಶ ಹೊರಹಾಕಿದರು. ಅಲ್ಲದೇ ಮುಂದಿನ ಬಾರಿ ಸ್ವಲ್ಪ ಸೌಜನ್ಯದಿಂದ ವರ್ತಿಸುವಂತೆ ಎಚ್ಚರಿಕೆ ನೀಡಿದರು. ಆದರೆ ಅದಿತಿ ಕ್ಯಾಮರಾಗೆ ಪೋಸ್ ನೀಡಿ ಸ್ಮೈಲ್ ಮಾಡಿದ್ದಾರೆ. 

ಅಂದಹಾಗೆ ಅದಿತಿ ಸದ್ಯ ಸೌತ್ ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಅದಿತಿ ಉತ್ತಮ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಅದಿತಿ ತಮಿಳು ನಟ ಸಿದ್ಧಾರ್ಥ್ ಜೊತೆ ಮಹಾ ಸಮುದ್ರಂದಲ್ಲಿ ನಟಿಸಿದ್ದರು. ಇದೇ ಸಿನಿಮಾದ ಸೆಟ್ ನಲ್ಲಿ ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು ಎನ್ನಲಾಗುತ್ತಿದೆ. ಸಿನಿಮಾ ಬಳಿಕವೂ ಇಬ್ಬರು ಹೆಚ್ಚಾಗಿ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ. ಮುಂಬೈ ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಇಬ್ಬರ ನಡುವಿನ ಪ್ರೀತಿ ವದಂತಿ ಹೆಚ್ಚಾಗಿದೆ. 

ಅಂದಹಾಗೆ ಪಾಪರಾಜಿಗಳಿಗೆ ಸಿದ್ಧಾರ್ಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ. 'ನಾನು ಇಲ್ಲಿಯವನು (ಮುಂಬೈ) ಅಲ್ಲ. ಇಲ್ಲಿನ ಜನರ ಫೋಟೋ ತೆಗೆಯಿರಿ. ಹೋಗಿ ಇಲ್ಲಿಂದ. ಮುಂದಿನ ಸರಿ ನಾನು ಇಷ್ಟು ಸೈಲೆಂಟ್ ಆಗಿ ಹೇಳಲ್ಲ. ಅರ್ಥ ಆಯ್ತಾ' ಎಂದು ಹೇಳಿ ಅಲ್ಲಿಂದ ಹೊರಟರು. 

ಕಾಂಜಿವರಂ ಸೀರೆಯಲ್ಲಿ ಕಂಗೊಳಿಸಿದ ಅದಿತಿ; ನಟಿಯ ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ

ಸಿದ್ಧಾರ್ಥ್‌ಗೆ ರೊಮ್ಯಾಂಟಿಕ್ ಬರ್ತಡೇ ವಿಶ್

ಅದಿತಿ ಇತ್ತೀಚಿಗಷ್ಟೆ ಸಿದ್ಧಾರ್ಥ್ ಹುಟ್ಟುಹಬ್ಬದ ದಿನ ರೊಮ್ಯಾಂಟಿಕ್ ಆಗಿ ಮಿಶ್ ಮಾಡಿದ್ದರು.  'ಹುಟ್ಟುಹಬ್ಬದ ಶುಭಾಶಯಗಳು ನನ್ನ ಪಿಕ್ಸೀ ಬಾಯ್. ಯಾವಾಗಲೂ ಕನಸುಗಳನ್ನು ಬೆನ್ನಟ್ಟ. ಯಾವಾಗಲೂ ನಗುತ್ತಿರಿ, ಮ್ಯಾಜಿಕ್ ಮಾಡುತ್ತಿರಿ. ಕೊನೆಯಿಲ್ಲದ ನಗು ಮತ್ತು ಸಾಹಸಗಳಿಗೆ ಧನ್ಯವಾದಗಳು. ನೀವು ಎಷ್ಟು ಪ್ರೀತಿಸುತ್ತಿದ್ದೀರಿ ಎಂದು ನಿಮಗೆ ಚೆನ್ನಾಗಿ ತಿಳಿದಿದೆ Mmmmmmmmmmmwah'ಎಂದು ಸಿನಿಮಾದ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಮದುವೆಯಾಗಿ ವಿಚ್ಛೇದನ ಪಡೆದಿರುವ ನಟಿ

ಅದಿತಿ ರಾವ್ ಹೈದರಿ ಬಗ್ಗೆ ಹೇಳುವುದಾದರೆ ನಟಿ ಈಗಾಗಲೇ ಮದುವೆಯಾಗಿದ್ದು ಪತಿಯಿಂದ ದೂರ ಆಗಿದ್ದಾರೆ. 2011ರಲ್ಲಿ ಅದಿತಿ ನಟ ಸತ್ಯದೀಪ್ ಮಿಶ್ರ ಜೊತೆ ಹಸೆಮಣೆ ಏರಿದ್ದರು. ಆದರೆ ಮದುವೆಯಾಗಿ ಎರಡು ವರ್ಷದಲ್ಲೇ ಪತಿಯಿಂದ ವಿಚ್ಛೇದನ ಪಡೆದು ದೂರ ಆದರು. ಬಳಿಕ ಸಿಂಗಲ್ ಆಗಿದ್ದ ಅದಿತಿ ಇದೀಗ ಸಿದ್ಧಾರ್ಥ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. 

ರಾಯಲ್‌ ಫ್ಯಾಮಿಲಿಯ ಈ ನಟಿಯ ಮಿಸ್ಟಿರಿಯಸ್‌ ಲೈಫ್‌!

ಸಿದ್ಧಾರ್ಥ್ ಬಗ್ಗೆ

ಇನ್ನು ಸಿದ್ಧಾರ್ಥ್ ಬಗ್ಗೆ ಹೇಳುವುದಾದರೆ ಸಿದ್ಧಾರ್ಥ್ 2003ರಲ್ಲಿ ಮೇಘನಾ ಎನ್ನುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆ ಆಗಿ ಕೆಲವೇ ವರ್ಷಗಳಲ್ಲಿ 2007ರಲ್ಲಿ ಇಬ್ಬರು ವಿಚ್ಛೇದನ ಪಡೆದು ದೂರ ಆದರು. ಬಳಿಕ ಸಿದ್ದಾರ್ಥ್ ನಟಿ ಸಮಂತಾ ಜೊತೆ ಪ್ರೀತಿಯಲ್ಲಿದ್ದರು. ಆದರೆ ಸಮಂತಾ ಅವರಿಂದನೂ ದೂರ ಆಗಿ ಸಿಂಗಲ್ ಆಗಿದ್ದರು. ಇದೀಗ ಅದಿತಿ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.     
 

Follow Us:
Download App:
  • android
  • ios