Asianet Suvarna News Asianet Suvarna News

ನನ್ನ ಸಿನಿಮಾ ಬಾಯ್ಕಟ್‌ ಮಾಡಿ ಎಂದ ತಾಪ್ಸಿ ಸಿನಿಮಾ ಹೀನಾಯ ಸೋಲು

ನನ್ನ ಸಿನಿಮಾ ಬಾಯ್ಕಾಟ್‌ ಮಾಡಿ ಎಂದ ತಾಪ್ಸಿ ಸಿನಿಮಾ ಫ್ಲ್ಯಾಪ್‌ ಆಗಿದೆ. 50 ಕೋಟಿಯಲ್ಲಿ ನಿರ್ಮಾಣವಾಗಿದ್ದ ದೋಬಾರ ಸಿನೆಮಾ 3 ಕೋಟಿ ಸಂಗ್ರಹ ಮಾಡಿದೆ.

taapsee pannu starrer dobaaraa film failure in box office sgk
Author
Bengaluru, First Published Aug 24, 2022, 11:12 AM IST

ಲಾಲ್‌ಸಿಂಗ್‌ ಚಡ್ಡಾ ಸಿನಿಮಾದ ಬಾಯ್ಕಾಟ್‌ ವಿವಾದದ ಹಿನ್ನೆಲೆಯಲ್ಲೇ ನನ್ನ ಸಿನಿಮಾವನ್ನು ಬಾಯ್ಕಾಟ್‌ ಮಾಡಿ ಎಂದು ದುರಂಹಕಾರದ ಹೇಳಿಕೆ ನೀಡಿದ್ದ ನಟಿ ತಾಪ್ಸಿ ಪನ್ನು ಅವರ ‘ದೋಬಾರಾ’ ಸಿನಿಮಾವೂ ಗಳಿಕೆಯಲ್ಲಿ ದಯನೀಯ ಸೋಲುಂಡಿದೆ. ಬಾಲಿವುಡ್‌ನಲ್ಲಿ ಬಾಯ್ಕಟ್ ಟ್ರೆಂಡ್ ಜೋರಾಗಿದೆ. ನೆಟ್ಟಿಗರು ಬಾಲಿವುಡ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪ್ರತಿ ಸಿನಿಮಾವನ್ನು ಬಾಯ್ಕಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಟ್ ಟ್ರೆಂಡ್ ಜೋರಾಗಿದೆ. ಅಕ್ಷಯ್ ಕುಮಾರ್ ನಟನೆಯ ರಕ್ಷಾಬಂಧನ್, ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಬಳಿಕ ಅನುರಾಗ್ ಕಶ್ಯಪ್ ನಿರ್ದೇಶನದ, ತಾಪ್ಸಿ ಪನ್ನು ನಟನೆಯ ದೋಬಾರಾ ಸಿನಿಮಾಗೆ ಬಾಯ್ಕಟ್ ಬಿಸಿ ತಟ್ಟಿದೆ. ಬಾಯ್ಕಟ್ ಟ್ರೆಂಡ್ ನಡುವೆಯೂ ತನ್ನ ಸಿನಿಮಾ ಬಾಯ್ಕಟ್ ಮಾಡಿ ಎಂದು ದುರಹಂಕರಾದಿಂದ ಹೇಳಿದ್ದ ತಾಪ್ಸಿಗೀಗ ಪ್ರೇಕ್ಷಕರು ತಕ್ಕ ಪಾಠ ಕಲಿಸಿದ್ದಾರೆ.  ದೋಬಾರಾ ಸಿನಿಮಾ ನೋಡಲು ಚಿತ್ರಮಂದಿರಗಳಲ್ಲಿ ಜನರೇ ಇಲ್ಲ. ಚಿತ್ರಮಂದಿರಗಳು ಖಾಲಿ ಖಾಲಿ ಇರುವ ಕಾರಣ  ಅನೇಕ ಶೋಗಳು ರದ್ದಾಗಿವೆ. 

#BoycottDobaaraa; ಬಾಯ್ಕಟ್ ಮಾಡಿ ಎಂದಿದ್ದ ತಾಪ್ಸಿ ಈಗ ಸಿನಿಮಾ ನೋಡುವಂತೆ ಮನವಿ

50 ಕೋಟಿ ರೂ ಬರ್ಜರಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ತಾಪ್ಸಿ ಪನ್ನು ನಟನೆಯ ದೋಬಾರಾ ಸಿನಿಮಾ ಆಗಸ್ಟ್ 19ರಂದು ಬಿಡುಗಡೆಯಾಗಿತ್ತು. ಚಿತ್ರದ ಪ್ರಚಾರವೇಳೆ ತಾಪ್ಸಿ ಪನ್ನು ತನ್ನ ಸಿನಿಮಾವನ್ನು ಬಾಯ್ಕಟ್ ಮಾಡಿ ಎಂದು ಕೇಳಿಕೊಂಡಿದ್ದರು. ತಾಪ್ಸಿ ಬೇಡಿಕೆಯಂತೆ ಜನರೂ ಚಿತ್ರವನ್ನು ಬಾಯ್ಕಾಟ್‌ ಮಾಡಿದ್ದು, ಮೊದಲ ದಿನ ದೇಶಾದ್ಯಂತ ಕೇವಲ 72 ಲಕ್ಷ ಮಾತ್ರ ಸಂಗ್ರಹಿಸಿದೆ. ಬಿಡುಗಡೆಯಾಗಿ ಮೊದಲ ವಾರಾಂತ್ಯವನ್ನು ತಲುಪಿದ್ದರೂ ಸಹ ಸಿನಿಮಾಗೆ 3 ಕೋಟಿ ರೂಪಾಯಿ ಗಡಿ ದಾಟಲಾಗಿಲ್ಲ. ಭಾನುವಾರ ಸುಮಾರು 1.1 ಕೋಟಿ ರೂಪಾಯಿ ಗಳಿಕೆ ಮಾಡಿದ್ದ ಸಿನಿಮಾ, ನಾಲ್ಕನೇ ದಿನವಾದ ಸೋಮವಾರ ಕೇವಲ 35 ಲಕ್ಷ ರೂಪಾಯಿ ಗಳಿಕೆ ಮಾಡಿದೆ. 

ತಾಪ್ಸಿ ಪನ್ನುಗಿಂತ ನನ್ನ ಸ್ತನ ದೊಡ್ಡದಿದೆ; ದೋಬಾರಾ ನಟಿ ಕಾಲೆಳೆದ ನಿರ್ದೇಶಕ ಅನುರಾಗ್ ಕಶ್ಯಪ್

 ದೋಬಾರಾ ಸಿನಿಮಾಗೂ ಮೊದಲು ಖ್ಯಾತ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಮಿಥಾಲಿ ರಾಜ್‌ ಜೀವನ ಕುರಿತು ನಿರ್ಮಿಸಿದ್ದ ‘ಶಬ್ಬಾಶ್‌ ಮೀತು’ ಚಿತ್ರದಲ್ಲೂ ತಾಪ್ಸಿ ನಟಿಸಿದ್ದರು. ಅದು ಕೂಡಾ ಹೀನಾಯ ಸೋಲು ಕಂಡಿತ್ತು. ತಾಪ್ಸಿ ಪನ್ನು ದೋಬಾರಾ ಸಿನಿಮಾ ಗೆದ್ದೆ ಗೆಲ್ಲುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೀಗ ಸಿನಿಮಾದ ಹೀನಾಯ ಸೋಲು ಭಾಗಿ ಮುಖಬಂಗವಾಗಿದೆ. ತಾಪ್ಸಿ ಸಿನಿಮಾ ಪ್ರಚಾರವೇಳೆ ಪಾಪರಾಜಿಗಳ ಜೊತೆ ದುರಹಂಕಾರದಿಂದ ನಡೆದುಕೊಂಡಿದ್ದರು. ಪಾಪರಾಜಿಗಳ ಜೊತೆ ಕಿರಿಕ್ ಮಾಡಿಕೊಂಡು ಸುದ್ದಿಯಾಗಿದ್ದರು. 

ಪಾಪರಾಜಿಗಳ ಜೊತೆ ಕಿತ್ತಾಟ

ದೋಬಾರಾ ಪ್ರಮೋಷನ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ತಾಪ್ಸಿಗೆ ಪಾಪರಾಜಿಗಳು ಎದುರಾದರು. ಕ್ಯಾಮರಾಗೆ ಪೋಸ್ ನೀಡುವಂತೆ ಕೇಳಿದರು. ಆದರೆ ತಾಪ್ಸಿ ಪೋಸ್ ಕೊಟ್ಟಿಲ್ಲ. ತನಗೆ ನೀಡಿದ ಸೂಚನೆ ಅನುಸರಿಸುತ್ತೇನೆ ಎಂದು ತಾಪ್ಸಿ ಹಾಗೆ ಹೊರಟರು. ಆಗ ಪಾಪರಾಜಿಗಳು ನಿಮಗಾಗಿ ಒಂದು ಗಂಟೆಗೂ ಅಧಿಕ ಸಮಯದಿಂದ ಕಾಯುತ್ತಿದ್ದೇವೆ ಎಂದು ಹೇಳಿದರು. ಇದರಿಂದ ಕೆಂಡವಾದ ತಾಪ್ಸಿ ನನ್ನ ತಪ್ಪು ಹೇಗಾಗುತ್ತದೆ ಎಂದು ಪಾಪರಾಜಿಗಳನ್ನು ತರಾಟೆ ತೆಗೆದುಕೊಂಡರು.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದುರಹಂಕಾರಿ ತಾಪ್ಸಿ ಎಂದು ಅನೇಕರು ಕಾಮೆಂಟ್ ಮಾಡಿದ್ದರು. 

Follow Us:
Download App:
  • android
  • ios