#BoycottDobaaraa; ಬಾಯ್ಕಟ್ ಮಾಡಿ ಎಂದಿದ್ದ ತಾಪ್ಸಿ ಈಗ ಸಿನಿಮಾ ನೋಡುವಂತೆ ಮನವಿ
ಅನುರಾಗ್ ಕಶ್ಯಪ್ ನಿರ್ದೇಶನದ, ತಾಪ್ಸಿ ಪನ್ನು ನಟನೆಯ ದೋಬಾರಾ ಸಿನಿಮಾಗೆ ಬಾಯ್ಕಟ್ ಬಿಸಿ ಹೆಚ್ಚಾಗಿದೆ.
ಬಾಲಿವುಡ್‌ನಲ್ಲಿ ಬಾಯ್ಕಟ್ ಟ್ರೆಂಡ್ ಜೋರಾಗಿದೆ. ನೆಟ್ಟಿಗರು ಬಾಲಿವುಡ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪ್ರತಿ ಸಿನಿಮಾವನ್ನು ಬಾಯ್ಕಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಟ್ ಟ್ರೆಂಡ್ ಜೋರಾಗಿದೆ. ಅಕ್ಷಯ್ ಕುಮಾರ್ ನಟನೆಯ ರಕ್ಷಾಬಂಧನ್, ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಬಳಿಕ ಇದೀಗ ಅನುರಾಗ್ ಕಶ್ಯಪ್ ನಿರ್ದೇಶನದ, ತಾಪ್ಸಿ ಪನ್ನು ನಟನೆಯ ದೋಬಾರಾ ಸಿನಿಮಾಗೆ ಬಾಯ್ಕಟ್ ಬಿಸಿ ಹೆಚ್ಚಾಗಿದೆ. ದೋಬಾರಾ ಸಿನಿಮಾ ರಿಲೀಸ್ ಆಗಿದೆ. ಆದರೀಗ ಚಿತ್ರಮಂದಿರಗಳಲ್ಲಿ ಜನರೇ ಇಲ್ಲ. ಚಿತ್ರಮಂದಿರಗಳು ಖಾಲಿ ಖಾಲಿ ಇರುವ ಕಾರಣ ಅನೇಕ ಶೋಗಳು ರದ್ದಾಗುತ್ತಿವೆ. ಇದರಿಂದ ಸಿನಿಮಾತಂಡ ಹೆದರಿದೆ. ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡುತ್ತಿದ್ದಾರೆ.
ಅಂದಹಾಗೆ ಸಿನಿಮಾ ಪ್ರಚಾರ ವೇಳೆ ನಟಿ ತಾಪ್ಸಿ ಪನ್ನು ಬಾಯ್ಕಟ್ ಬಗ್ಗೆ ಕೇಳಿದ್ದಕ್ಕೆ ದಯವಿಟ್ಟು ಬಾಯ್ಕಟ್ ಮಾಡಿ ಎಂದು ಕೇಳಿಕೊಂಡಿದ್ದರು. ಆಮೀರ್ ಖಾನ್, ಶಾರುಖ್ ಖಾನ್ ಲಿಸ್ಟ್‌ಗೆ ನನ್ನನ್ನು ಸೇರಿಸಿ ಎಂದು ಹೇಳಿದ್ದರು. ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್ ಇಬ್ಬರು ಬಾಯ್ಕಟ್ ಟ್ರೆಂಡ್ ಇಂದ ಸಿನಿಮಾಗೆ ಲಾಭವಾಗಲಿದೆ ಎಂದು ನಂಬಿದ್ದರು. ತಾಪ್ಸಿ ಪನ್ನು ಹೇಳಿಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ತಾಪ್ಸಿ ಪನ್ನು ನಡೆಗೆ ಅನೇಕರು ಅಸಮಧಾನ ಹೊರಹಾಕಿದ್ದರು. ಆದರೂ ತಾಪ್ಸಿ ಪನ್ನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಚಿತ್ರಮಂದಿರಕ್ಕೆ ಜನರೇ ಬರುತ್ತಿಲ್ಲ ಎಂದು ಗೊತ್ತಾದಾಗ ಬಾಯ್ಕಟ್ ಟ್ರೆಂಡ್ ನಿಂದ ಹೆದರಿ ಜನರಿಗೆ ಸಿನಿಮಾ ನೋಡುವಂತೆ ಮನವಿ ಮಾಡುತ್ತಿದ್ದಾರೆ.
ಈ ಬಗ್ಗೆ ತಾಪ್ಸಿ ಪನ್ನು ಇತ್ತೀಚಿಗಷ್ಟೆ ಪ್ರೆಸ್ ಮೀಟ್ ನಲ್ಲಿ ಮಾತನಾಡಿ, ಬಾಯ್ಕಾಟ್ ಟ್ರೆಂಡ್ ಬಗ್ಗೆ ಮಾತನಾಡಿ ಮೊನ್ನೆ ಹೇಳಿದ್ದು ಜೋಕ್ ಎಂದು ಹೇಳಿದು. ಈ ರೀತಿಯ ಏನಾದರೂ (ಬಹಿಷ್ಕರಿಸುವುದು ಮತ್ತು ಟ್ರೋಲ್ ಮಾಡುವುದು) ಪ್ರತಿದಿನ ಸಂಭವಿಸುತ್ತದೆ, ಇದರಿಂದ ಏನು ಪ್ರಯೋಜನವಿಲ್ಲ. ನನ್ನ ಸಿನಿಮಾವೊಂದರಲ್ಲಿ ಈ ಬಗ್ಗೆ ಒಂದು ಸಂಭಾಷಣೆ ಇದೆ' ಎಂದು ಹೇಳಿದರು.
ತಾಪ್ಸಿ ಪನ್ನುಗಿಂತ ನನ್ನ ಸ್ತನ ದೊಡ್ಡದಿದೆ; ದೋಬಾರಾ ನಟಿ ಕಾಲೆಳೆದ ನಿರ್ದೇಶಕ ಅನುರಾಗ್ ಕಶ್ಯಪ್
'ಪ್ರೇಕ್ಷಕರು ಇಷ್ಟಪಟ್ಟರೆ ಸಿನಿಮಾ ನೋಡಲು ಹೋಗುತ್ತಾರೆ. ಇಷ್ಟವಿಲ್ಲದಿದ್ದರೆ, ಅವರು ಹೋಗಲ್ಲ. ಆದರೆ ಬಹಿಷ್ಕಾರದ ಕರೆ ನೀಡುವುದು ನನ್ನ ಪ್ರೇಕ್ಷಕರ ಬುದ್ಧಿಮತ್ತೆಯನ್ನು ದುರ್ಬಲಗೊಳಿಸಿದಂತೆ' ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿರುವವ ನಟಿ ತಾಪ್ಸಿ, 'ಬಾಕ್ಸ್ ಆಫೀಸ್ ಫಲಿತಾಂಶ ಏನೇ ಇರಲಿ. ನಾವು ಹೆಮ್ಮೆ ಪಡುವಂತಹ ಸಿನಿಮಾ ಮಾಡಿದ್ದೇವೆ. ನೀವು ನಮಗೆ ಅವಕಾಶ ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.
ವಿಶೇಷ ಗಿಫ್ಟ್ ನೀಡಿದ ಅಭಿಮಾನಿಯನ್ನು ತಬ್ಬಿಕೊಂಡ ತಾಪ್ಸಿ; ವಿಡಿಯೋ ವೈರಲ್
ದೊಬೊರಾ ಸಿನಿಮಾ ಸಿನಿಮಾ ಆಗಸ್ಟ 19ರಂದು ರಿಲೀಸ್ ಆಗಿದೆ. ಅನುರಾಗ್ ಕಶ್ಯಪ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಹಿಳಾ ಪ್ರಧಾನ ಸಿನಿಮ ಇದಾಗಿದೆ. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಚಿತ್ರಮಂದಿರಗಳು ಖಾಲಿ ಖಾಲಿ ಇವೆ. ಅನೇಕ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಲಾಲಿ ಸಿಂಗ್ ಚಡ್ಜಾ ಮತ್ತು ರಕ್ಷಾಬಂಧನ್ ಸಿನಿಮಾಗೂ ಇದೇ ಸ್ಥಿತಿ ಎದುರಾಗಿತ್ತು. ಇದೀಗ ದೋಬಾರಾ ಕೂಡ ಸೋಲು ಕಂಡಿದೆ.