Asianet Suvarna News Asianet Suvarna News

ಒಂದು ವೇಳೆ ಕಂಗನಾ ಎದುರು ಬಂದ್ರೆ ಏನ್ ಮಾಡ್ತೀರಾ? ನಟಿ ತಾಪ್ಸಿ ರಿಯಾಕ್ಷನ್ ಹೀಗಿತ್ತು

ಒಂದು ವೇಳೆ ಕಂಗನಾ ಎದುರು ಬಂದ್ರೆ ಏನ್ ಮಾಡ್ತೀರಾ? ಎಂದು ಕೇಳಿದ ಪ್ರಶ್ನೆಗೆ ನಟಿ ತಾಪ್ಸಿ ಪನ್ನು ಕೂಲ್ ಆಗಿ ಉತ್ತರ ಕೊಟ್ಟಿದ್ದಾರೆ. 

Taapsee Pannu says I do not have a problem with Kangana Ranaut sgk
Author
First Published Mar 17, 2023, 5:32 PM IST

ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅಲ್ಲದೇ ಬಾಲಿವುಡ್‌ನ ಅನೇಕ ಸಹ ಕಲಾವಿದರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಅನೇಕರ ವಿರುದ್ಧ ಕಿಡಿ ಕಾರಿದ್ದಾರೆ. ಬಾಲಿವುಡ್‌ನ ಅನೇಕರ ಮಂದಿಯನ್ನು ಕಂಡರೇ ಕಂಗನಾಗೆ ಆಗಲ್ಲ. ಆ ಲಿಸ್ಟ್ ನಲ್ಲಿ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗದಲ್ಲಿ ಮಿಂಚಿದ ನಟಿ ತಾಪ್ಸಿ ಕೂಡ ಒಬ್ಬರು. ಕಂಗನಾ ಮತ್ತು ತಾಪ್ಸಿ ಇಬ್ಬರೂ  ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡಿದ್ದರು. ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸಿದ್ದರು. ತಾಪ್ಸಿ ಅವರನ್ನು ಕಂಗನಾ ಸರಿಯಾಗಿ ತರಾಟೆ ತೆಗೆದುಕೊಂಡಿದ್ದರು. ಬಿ ಗ್ರೇಡ್ ನಟಿ ಎಂದು ಜರಿದಿದ್ದರು. ಕಂಗನಾ ಮಾತ್ರವಲ್ಲದೇ ಕಂಗನಾ ಸಹೋದರು ಕೂಡ ಕಿಡಿ ಕಾರಿದ್ದರು. ಚೀಪ್ ನಟಿ ಎಂದು ಹೇಳಿದ್ದರು. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಯುದ್ಧ ಮಾಡಿದ್ದರು. 

ಇದೀಗ ತಾಪ್ಸಿ ನಟಿ ಕಂಗನಾ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ತಾಪ್ಸಿ, ಕಂಗನಾ ಭೇಟಿ ಆದರೆ ಏನ್ ಮಾಡ್ತಾರೆ ಎಂದು ರಿವೀಲ್ ಮಾಡಿದ್ದಾರೆ. ಕಂಗನಾ ಅವರನ್ನು ಯಾವತ್ತಾದರೂ  ಭೇಟಿ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ತಾಪ್ಸಿ, ನನಗೆ, 'ನಾನು ಏನು ಹೇಳುತ್ತೀನಿ  ಎಂದರೆ ನನಗ ಯಾವುದೇ ದುಃಖವಿಲ್ಲ. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ. ಅವರನ್ನು ನಾನು ಪಿಂಕ್ ಸಿನಿಮಾ ಸ್ಕ್ರೀನಿಂಗ್ ನಲ್ಲಿ ಭೇಟಿಯಾದೆ. ನಾನು ಆಗಷ್ಟೆ ಇಂಡಸ್ಟ್ರಿಗೆ ಸೇರಿದ್ದೆ. ಹಾಗಾಗಿ ಕೇವಲ ಹಾಯ್, ಧನ್ಯವಾದ ಎಂದು ಮಾತನಾಡಿಸಿದ್ದು ಅಷ್ಟೆ' ಎಂದು ಹೇಳಿದರು. 

ತಾಪ್ಸಿ ಪನ್ನುಗಿಂತ ನನ್ನ ಸ್ತನ ದೊಡ್ಡದಿದೆ; ದೋಬಾರಾ ನಟಿ ಕಾಲೆಳೆದ ನಿರ್ದೇಶಕ ಅನುರಾಗ್ ಕಶ್ಯಪ್

ಒಂದು ವೇಳೆ ಕಂಗನಾ ಮುಂದೆ ಬಂದರೆ ಏನು ಮಾಡುತ್ತೀರಿ ಎಂದು ಕೇಳಿದಾಗ, ಒಂದು ವೇಳೆ ನನ್ನ ಮಂದೆ ಬಂದರೇ ನಾನು ಹೋಗು ನಮಸ್ಕಾರ ಮಾಡುತ್ತೇನೆ. ನಾನು ಅವರಿಂದ ದೂರ ಹೋಗಲ್ಲ. ಯಾಕೆಂದರೆ ನನಗೆ ಅವರ ಜೊತೆ ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಸಮಸ್ಯೆ ಇದೆ ಅಷ್ಟೆ. ಅದು ಅವರಿಗೆ ಬಿಟ್ಟಿದ್ದು. ನಾನು ಶಾಕ್ ಆಗಿದ್ದೆ ಯಾಕೆಂದರೆ ಅವರು ತುಂಬಾ ಒಳ್ಳೆಯ ನಟಿ. ಅವರು ನನ್ನನ್ನು ಚೀಪ್ ನಟಿ ಎಂದು ಕರೆದಾಗಲೂ ನಾನು ಅವರನ್ನು ಉತ್ತಮ ನಟಿ ಇದು ನನ್ನ ಪ್ರಶಂಸೆ ಎಂದು ತೆಗೆದುಕೊಂಡೆ' ಎಂದು ಹೇಳಿದರು. 

ಈ ಹಿಂದಿನ ಸಂದರ್ಶನವೊಂದರಲ್ಲಿ ನಟಿ ತಾಪ್ಸಿ ಕಂಗನಾ ತನ್ನ ಜೀವನಕ್ಕೆ ಅಪ್ರಸ್ತುತ ಎಂದು ಹೇಳಿದ್ದರು. 'ನಾನು ಅವರನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಅವರು ಒಬ್ಬರು ಉತ್ತಮ ನಟಿ. ಅದಕ್ಕಿಂತ ಹೆಚ್ಚಾಗಿ ನನ್ನ ಜೀವನದಲ್ಲಿ ಆಕೆ ಏನು ಅಲ್ಲ. ಒಳ್ಳೆಯದಾಗಲಿ ಅಥವಾ ಕೆಟಟ್ದಾಗಲಿ ನನಗೆ ಅವರ ಬಗ್ಗೆ ಯಾವದೇ ಫೀಲಿಂಗ್ ಇಲ್ಲ' ಎಂದು ಹೇಳಿದರು. 

OSCAR ವೇದಿಕೆಯಲ್ಲಿ ದೀಪಿಕಾ ಪಡುಕೋಣೆ: ಹಾಡಿ ಹೊಗಳಿದ ಕಂಗನಾ ರಣಾವತ್

ತಾಪ್ಸಿ ಸದ್ಯ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿ ಜೊತೆಗೆ ತಮಿಳು ಸಿನಿಮಾ ಕೂಡ ಮಾಡುತ್ತಿದ್ದಾರೆ. ಕೊನೆಯದಾಗಿ ಬ್ಲರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶಾರುಖ್ ಖಾನ್ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಚಿತ್ರದಲ್ಲಿ ತಾಸ್ಪಿ ನಟಿಸುತ್ತಿದ್ದಾರೆ. 

Follow Us:
Download App:
  • android
  • ios