Asianet Suvarna News Asianet Suvarna News

ಈ ವರ್ಷವೇ ಅಪ್ಪ-ಅಮ್ಮ ಆಗ್ತಿರೋ ಐವರು ಬಾಲಿವುಡ್​ ತಾರೆಯರು!

ಈ ವರ್ಷ ಕೆಲವು ತಾರಾ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಹಾಗಿದ್ದರೆ ಆ ಬಾಲಿವುಡ್​ ಜೋಡಿ ಯಾವುದು ಗೊತ್ತಾ?
 

Swara Bhasker Ileana Dcruz to Upasana Celebs expecting babies this year suc
Author
First Published Jun 7, 2023, 5:29 PM IST

ಕಳದೆರಡು ವರ್ಷಗಳಿಂದ ಬಾಲಿವುಡ್ ಸೇರಿದಂತೆ ಸಿನಿ ಇಂಡಸ್ಟ್ರಿಯಲ್ಲಿ  ಮದುವೆಯ ಸಂಭ್ರಮ, ಮಕ್ಕಳ ಕಲರವ. ಕೆಲವು ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ, ಇನ್ನು ಕೆಲವರಿಗೆ ಅಪ್ಪ-ಅಮ್ಮ ಆಗುವ ಭಾಗ್ಯ. ಇನ್ನು ಬಾಲಿವುಡ್​ನಲ್ಲಿ ಕಳೆದ ವರ್ಷದ ವಿಷಯ ಹೇಳುವುದಾದರೆ ಕರೀನಾ ಕಪೂರ್​, ಆಲಿಯಾ ಭಟ್, ಬಿಪಾಶಾ ಬಸು ಅವರು ಮಗುವಿಗೆ ತಾಯಿಯಾದರು. ಈ ಬಾರಿ ಮತ್ತೊಂದಷ್ಟು ನಟಿಯರು ಮದೊಲ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಲಿಸ್ಟ್​​ನಲ್ಲಿ ಯಾವ್ಯಾವ ನಟರು, ಯಾವ್ಯಾವ ನಟಿಯರಿದ್ದಾರೆ ನೋಡಿ.

ಸ್ವರಾ ಭಾಸ್ಕರ್​- ಫಹಾದ್ ಅಹ್ಮದ್​ (Swara Bhaskar)
ಸ್ವರಾ ಭಾಸ್ಕರ್ ಹಾಗೂ ಅವರ ಪತಿ ಫಹಾದ್ ಅಹ್ಮದ್ ಅವರು ಜನವರಿ 6ರಂದು ರಿಜಿಸ್ಟರ್ ಮದುವೆಯಾದರು. ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmad) ಅವರೊಂದಿಗೆ ಸ್ವರಾ ಮದುವೆಯಾಗಿದ್ದಾರೆ. ಪ್ರತಿಭಟನೆಯೊಂದರಲ್ಲಿ ತಾವು ಭೇಟಿಯಾಗಿರುವ ವಿಷಯ ಹಂಚಿಕೊಂಡಿದ್ದರು ಸ್ವರಾ. ಜನವರಿ 6, 2023 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು (Special Marriage Act) ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ  (Registered)  ತಿಳಿಸಿದ್ದರು.  ಹಳದಿ, ಮಹೆಂದಿ, ಸಂಗೀತ ಕಾರ್ಯಕ್ರಗಳು ಅದ್ಧೂರಿಯಾಗಿ ದೆಹಲಿಯಲ್ಲಿ ನಡೆದವು. ಇದೀಗ ಈ ಜೋಡಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಪೋಸ್ಟ್ ಮಾಡಿದೆ. ಈ ವಿಷಯವನ್ನು ಸ್ವತಃ ನಟಿ ಹಂಚಿಕೊಂಡಿದ್ದಾರೆ, ಈ ವರ್ಷದ ಆರಂಭದಲ್ಲಿ ಮದುವೆಯಾಗಿದ್ದು, ಇವರು ತಮ್ಮ ಮೊದಲ ಮಗು ಆಕ್ಟೋಬರ್‌ನಲ್ಲಿ ಬರಲಿದೆ ಎಂದು ಹೇಳಿಕೊಂಡಿದ್ದಾರೆ. ಇವರು ಮದುವೆಯಾಗುವ ಮೊದಲೇ ಗರ್ಭ ಧರಿಸಿದ್ರಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. 

ಐಷಾರಾಮಿ ರೆಸ್ಟೋರೆಂಟ್​ಗಳ ಒಡತಿಯರು ಈ ಬಾಲಿವುಡ್​ ನಟಿಯರು!

ಇಲಿಯಾನಾ ಡಿಕ್ರೂಜ್ 
ಬಹುಭಾಷಾ ನಟಿ ಇಲಿಯಾನಾ ಡಿಕ್ರೂಜ್ (Ileana Dcruz) ಕೂಡಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕತ್ರೀನಾ ಕೈಫ್ ಅವರ ಅಣ್ಣನನ್ನು ಡೇಟ್ ಮಾಡುತ್ತಿರುವ ಇಲಿಯಾನಾ ಅವರು ಮದುವೆಯ ಮೊದಲೇ ಗರ್ಭಿಣಿಯಾಗಿದ್ದಾರೆ. ಈಕೆ ಮದುವೆಯಾಗದೆ, ಮಗುವಿನ ತಂದೆ ಯಾರೆಂದು ರಿವೀಲ್ ಮಾಡದೆ ತಾಯಿ ಆಗುತ್ತಿರುವ ವಿಚಾರ ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದ್ದರು.  ಇತ್ತೀಚೆಗಷ್ಟೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದರು. ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಇಲಿಯಾನಾ ಬೇಬಿ ಬಂಪ್ ತೋರಿಸಿದ್ದರು. ನಂತರ  ಇಲಿಯಾನಾ ಬಾಯ್‌ಫ್ರೆಂಡ್ ಜೊತೆ ಫೋಟೋ ಹಂಚಿಕೊಂಡಿದ್ದರು. ಹಾಗಂತ ಆತ ಯಾರೆಂದು ರಿವೀಲ್ ಮಾಡಲಿಲ್ಲ. ಸದ್ಯ ಬಾಯ್‌ಫ್ರೆಂಡ್ ಜೊತೆ ಸುತ್ತಾಡುತ್ತಿರುವ ಇಲಿಯಾನಾ ಆತನ ಕೈ ಮೇಲೆ ತನ್ನ ಕೈ ಇಟ್ಟಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.

ವತ್ಸಲ್ ಶೇಠ್- ಇಶಿತಾ 
ವತ್ಸಲ್ ಶೇಠ್ ಹಾಗೂ ಇಶಿತಾ ದತ್ತಾ ಅವರು ಕೂಡ ಶೀಘ್ರವೇ ಅಪ್ಪ-ಅಮ್ಮ ಆಗಲಿದ್ದಾರೆ.  ಇವರು 2017ರಲ್ಲಿ ಮದುವೆಯಾಗಿದ್ದರು. ಮಾರ್ಚ್ 31ರಂದು ಈ ಜೋಡಿ ತಾವು ಪಾಲಕರಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಅಡಿತ್ತು. ಆದರೆ ಇವರು ಘೋಷಣೆ ಮಾಡುವ ಮೊದಲೇ  ಇಶಿತಾ ಅವರ ಫೋಟೋ ನೋಡಿ ಪ್ರೆಗ್ನೆಂಟಾ ಎಂದು ಕೇಳಿದ್ದರು ನೆಟ್ಟಿಗರು. ನಂತರ ಫ್ಯಾನ್ಸ್ ಪ್ರಶ್ನೆಗೆ ಉತ್ತರಿಸಿದ ನಟಿ ಕೊನೆಗೂ ಗರ್ಭಧಾರಣೆಯ ವಿಷಯವನ್ನು ತಿಳಿಸಿದ್ದರು. 

ಇಂಚಿಂಚು ದೇಹ ತೋರಿಸಿ ನಟಿ ಪೂಜಾ ವಿಡಿಯೋಶೂಟ್​: ಎರಡು ಕಣ್ಣು ಸಾಲ್ದು ಅಂತಿದ್ದಾರೆ ಫ್ಯಾನ್ಸ್​!

ರಾಮ್​ಚರಣ್​-  ಉಪಾಸನಾ (Upasana)
ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಮದುವೆಗಾಗಿ 11 ವರ್ಷಗಳ ಬಳಿಕ ಪಾಲಕರಾಗುತ್ತಿದ್ದಾರೆ. 2022 ಡಿಸೆಂಬರ್​ನಲ್ಲಿ ಈ ಜೋಡಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದು, ಈ ವರ್ಷ ಮಗು ಹುಟ್ಟಲಿದೆ. ಈ ಜೋಡಿ 2012ರಲ್ಲಿ ಮದುವೆಯಾಗಿದೆ.  ತಾವು ಸೆಟ್ಲ್​ ಆಗುವ ತನಕ ಮಕ್ಕಳನ್ನು ಹೊಂದಬಾರದು ಎಂದು ನಿರ್ಧಾರ ಮಾಡಿದ್ದರಿಂದ ಈಗ ಮಗು ಮಾಡಿಕೊಳ್ಳುತ್ತಿದ್ದಾರೆ. 

ಅರ್ಜುನ್ ರಾಂಪಾಲ್- ಗೆಬ್ರಿ
ಅರ್ಜುನ್ ರಾಂಪಾಲ್ ಗೆಳತಿ ಗೆಬ್ರಿಯೆಲ್ಲಾ ಅವರು ಇತ್ತೀವೆಗೆ ಪ್ರೆಗ್ನೆಂಟ್ ಎನ್ನುವ ಸುದ್ದಿ ಓಡಾಡಿತ್ತು. ಅವರು ಫೋಟೋ ಶೇರ್ ಮಾಡಿ ಇದು ನಿಜಾನಾ ಎಂದಿದ್ದರು. ಅವರಿಗೆ ಆರಿಕ್ ಎಂಬ ಮಗನಿದ್ದಾನೆ. ನಟನಿಗೆ ಮೊದಲ ಮದುವೆಯಲ್ಲಿ ಮಕ್ಕಳಿದ್ದಾರೆ.
 

Follow Us:
Download App:
  • android
  • ios