ಐಷಾರಾಮಿ ರೆಸ್ಟೋರೆಂಟ್​ಗಳ ಒಡತಿಯರು ಈ ಬಾಲಿವುಡ್​ ನಟಿಯರು!

ಹಲವು ಬಾಲಿವುಡ್​ ನಟಿಯರು ದೇಶ-ವಿದೇಶಗಳಲ್ಲಿ ಐಷಾರಾಮಿ ರೆಸ್ಟೋರೆಂಟ್​ ಮಾಲೀಕರಾಗಿದ್ದಾರೆ. ಅವರುಗಳ ವಿವರ ಇಲ್ಲಿದೆ.
 

Mouni Roy Badmash to Priyanka Chopra Sona bollywood actress food restaurants suc

ಬಾಲಿವುಡ್ ಸೆಲೆಬ್ರಿಟಿಗಳು ಚಲನಚಿತ್ರಗಳಿಂದ ಮಾತ್ರ ಗಳಿಸುವುದಿಲ್ಲ, ಅವರ ಗಳಿಕೆಗೆ ಹಲವಾರು ದಾರಿಗಳಿವೆ.  ಇವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಪ್ರತಿಯೊಂದು ಪೋಸ್ಟ್​ಗಳಿಗೂ ಲಕ್ಷ ಲಕ್ಷ ಎಣಿಸುತ್ತಾರೆ. ಅದರ ಹೊರತಾಗಿ ಜಾಹೀರಾತುಗಳಿಂದಲೂ, ವಿವಿಧ ರೀತಿಯ ಉದ್ಯಮಗಳಿಂದಲೂ ಕೋಟಿ ಕೋಟಿ ರೂ. ಗಳಿಸುತ್ತಾರೆ. ಇದೇ ಕಾರಣಕ್ಕೆ ಇವರ ಬಳಿ ಸರ್ವ ಸೌಲಭ್ಯಗಳುಳ್ಳ ನೂರಾರು ಕೋಟಿ ರೂಪಾಯಿಗಳ ಬಂಗಲೆಗಳು ಇರುವುದು ಸಹಜ. ಆದರೆ ನಿಮಗೆ  ಗೊತ್ತಾ? ಹಲವಾರು ಬಾಲಿವುಡ್​ ತಾರೆಯರು ಖುದ್ದು ಐಷಾರಾಮಿ ರೆಸ್ಟೋರೆಂಟ್​ಗಳ ಮಾಲೀಕರು ಕೂಡ ಹೌದು. ಅರ್ಥಾತ್​ ಕೆಲ ನಟಿಯರ ಹೆಸರಿನಲ್ಲಿ ಐಷಾರಾಮಿ ರೆಸ್ಟೋರೆಂಟ್​ಗಳಿವೆ.  ಅನೇಕ ಸುಂದರಿಯರು ತಮ್ಮದೇ ಆದ ಆಹಾರ ರೆಸ್ಟೋರೆಂಟ್‌ಗಳನ್ನು ಸಹ ನಡೆಸುತ್ತಾರೆ. ಮೌನಿ ರಾಯ್ ಇತ್ತೀಚೆಗೆ ಮುಂಬೈನಲ್ಲಿ ಬದ್ಮಾಶ್ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿದರು, ಅದಕ್ಕೆ ಅನೇಕ ಬಾಲಿವುಡ್ ತಾರೆಯರು ಆಗಮಿಸಿದ್ದರು. ಅಂದ ಮಾತ್ರಕ್ಕೆ ಮೌನಿ ರಾಯ್​ ಮಾತ್ರವಲ್ಲದೇ ಐಷಾರಾಮಿ ರೆಸ್ಟೋರೆಂಟ್‌ಗಳನ್ನು ಹಲವು ತಾರೆಯರು ಹೊಂದಿದ್ದು, ಅವರ ಪೈಕಿ ಟಾಪ್​ 5 ನಟಿಯರ ವಿವರ ಇಲ್ಲಿದೆ.
 
ಮೌನಿ ರಾಯ್​ (Mouni Roy)
ನಟಿ ಮೌನಿ ರಾಯ್ ಮತ್ತು ಅವರ ಪತಿ ಸೂರಜ್ ನಂಬಿಯಾರ್ ಮುಂಬೈನಲ್ಲಿ ತಮ್ಮ ರೆಸ್ಟೋರೆಂಟ್ 'ಬದ್ಮಾಶ್' ನ ಗ್ರ್ಯಾಂಡ್ ಲಾಂಚ್ ಪಾರ್ಟಿಯನ್ನು ಆಯೋಜಿಸಿದ್ದರು, ಇದರಲ್ಲಿ ಟಿವಿ ಮತ್ತು ಚಲನಚಿತ್ರ ಪ್ರಪಂಚದ ಗಣ್ಯರು ಭಾಗವಹಿಸಿದ್ದರು. ಈ ರೆಸ್ಟೋರೆಂಟ್ ತುಂಬಾ ಸುಂದರವಾಗಿದೆ. ಇದರ ಐಷಾರಾಮಿ ಒಳಾಂಗಣವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಮೂರು ಮದುವೆ, ಹಲವರ ಜೊತೆ ಲಿವ್​ ಇನ್​... ಹೀಗಿದ್ರೂ ಕಮಲ ಹಾಸನ್​ ಒಂಟಿಯಾಕೆ?

ಪ್ರಿಯಾಂಕಾ ಚೋಪ್ರಾ 
ಮತ್ತೊಂದೆಡೆ, ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ (Priyanka Chopra) ನ್ಯೂಯಾರ್ಕ್‌ನ ಐಷಾರಾಮಿ ರೆಸ್ಟೋರೆಂಟ್‌ನ ಮಾಲೀಕರೂ ಆಗಿದ್ದಾರೆ. ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್​ನಲ್ಲಿ 'ಸೋನಾ' ಹೆಸರಿನ ಭಾರತೀಯ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.  ಇದನ್ನು 2021 ರಲ್ಲಿ ಪ್ರಾರಂಭಿಸಲಾಯಿತು, ಅಲ್ಲಿ ನೀವು ದೇಸಿ ರುಚಿಗಳನ್ನು ಪಡೆಯುತ್ತೀರಿ. ಸೋನಾ ಇದು ನ್ಯೂಯಾರ್ಕ್​​ನ ಫೈನ್ ಡೈನ್ ರೆಸ್ಟೋರೆಂಟ್​​. ಈ ಸ್ಥಳ ಭಾರತೀಯ ಆಹಾರ ಪ್ರಿಯರಿಗೆ ಮೆಚ್ಚಿನ ತಾಣವಾಗಿದೆ.  ಭಾರತೀಯ ಆಹಾರಗಳು ಇಲ್ಲಿ ಸಿಗುತ್ತವೆ ಎಂದು ಇದರ ಉದ್ಘಾಟನೆ ವೇಳೆ ನಟಿ ಹೇಳಿಕೊಂಡಿದ್ದರು.

ಶಿಲ್ಪಾ ಶೆಟ್ಟಿ (Shilpa Shetty)
ಮಂಗಳೂರಿನ ಬೆಡಗಿ, ಬಾಲಿವುಡ್​ನಲ್ಲಿ ನೆಲೆಯೂರಿರುವ ಶಿಲ್ಪಾ ಶೆಟ್ಟಿ ಕುಂದ್ರಾ ಮುಂಬೈನ ಐಷಾರಾಮಿ ರೆಸ್ಟೋರೆಂಟ್‌ನ ಮಾಲೀಕರಾಗಿದ್ದಾರೆ. ಶಿಲ್ಪಾ ಅವರು ಬಾಸ್ಟಿಯನ್ ಸರಣಿ ರೆಸ್ಟೋರೆಂಟ್‌ಗಳ ಸಹ -ಪಾಲುದಾರರಾಗಿದ್ದಾರೆ. ಈ ಭವ್ಯವಾದ ಮತ್ತು ಐಷಾರಾಮಿ ರೆಸ್ಟೋರೆಂಟ್ ಅನ್ನು ಬಾಲಿವುಡ್ ತಾರೆಯರ ನೆಚ್ಚಿನ ಪಟ್ಟಿಯಲ್ಲಿ ಸೇರಿಸಲಾಗಿದೆ.

ಜಾಕ್ವೆಲಿನ್ ಫರ್ನಾಂಡಿಸ್ 
ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಕೂಡ 2 ರೆಸ್ಟೋರೆಂಟ್‌ಗಳ ಮಾಲೀಕರಾಗಿದ್ದಾರೆ. 2017 ರಲ್ಲಿ, ಜಾಕ್ವೆಲಿನ್ ತಮ್ಮ ಮೊದಲ ರೆಸ್ಟೋರೆಂಟ್ ಅನ್ನು ಕೊಲಂಬೊದಲ್ಲಿ ತೆರೆದಿದ್ದಾರೆ. ಇದರ ಹೆಸರು ಕಾಮಸೂತ್ರ. ಈ ಪಂಚತಾರಾ  ಹೋಟೆಲ್ ಶಾಂಗ್ರಿಲಾದಲ್ಲಿದೆ. ಇದರ ನಂತರ, 2018 ರಲ್ಲಿ, ಜಾಕ್ವೆಲಿನ್ ಮುಂಬೈನಲ್ಲಿಯೂ 'ಪಾಲಿ ಥಾಲಿ' ರೆಸ್ಟೋರೆಂಟ್ ಅನ್ನು ತೆರೆದಿದ್ದಾರೆ.  

ಕಿಡ್ನಿ ಮಾರಲು ಹೋಗಿದ್ದ ಕೆಜಿಎಫ್​ ಖ್ಯಾತಿಯ ರವಿ ಬಸ್ರೂರು! ಬದುಕು ದುರಂತಗಳ ಸರಮಾಲೆ!

ಜೂಹಿ ಚಾವ್ಲಾ (Juhi Chawla)
ಹಿಂದಿಯಲ್ಲಿ ಮಾತ್ರವಲ್ಲದೇ ಕನ್ನಡದಲ್ಲಿ ಪ್ರೇಮಲೋಕ ಬೆಡಗಿ ಎಂದೇ ಖ್ಯಾತಿ ಪಡೆದಿರುವ ನಟಿ ಜೂಹಿ ಚಾವ್ಲಾ ಮತ್ತು ಅವರ ಪತಿ ಜೈ ಮೆಹ್ತಾ ಕೂಡ 'ರೂ ಡು ಲಿಬಾನ್' ಹೆಸರಿನ ಭವ್ಯವಾದ ರೆಸ್ಟೋರೆಂಟ್ ಹೊಂದಿದ್ದಾರೆ. ಅವರ ಐಷಾರಾಮಿ ರೆಸ್ಟೋರೆಂಟ್‌ನಲ್ಲಿನ ಒಳಾಂಗಣವು ತುಂಬಾ ವಿಶೇಷವಾಗಿದೆ. ಜೂಹಿ ಚಾವ್ಲಾ ಚಲನಚಿತ್ರಗಳಲ್ಲಿ ಸಕ್ರಿಯವಾಗಿಲ್ಲದಿರಬಹುದು, ಆದರೆ ವ್ಯಾಪಾರದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇವರು ರೆಸ್ಟೋರೆಂಟ್​ ಅನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. 

Latest Videos
Follow Us:
Download App:
  • android
  • ios