ಸದಾ ಬೋಲ್ಡ್​ ಫೋಟೋಶೂಟ್​ ಮಾಡಿಸಿಕೊಳ್ಳೋ ನಟಿ ಪೂಜಾ ಭಾತ್ರಾ ಈಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸಂಪೂರ್ಣ ನಗ್ನ ದೇಹ ಪ್ರದರ್ಶಿಸಿದ್ದಾರೆ.  

ಈಗೀಗ ಚಿತ್ರತಾರೆಯರು ಅದರಲ್ಲಿಯೂ ಬಾಲಿವುಡ್​ (Bollywood) ಬೆಡಗಿಯರು ತಮ್ಮ ಅಂಗಾಂಗ ಪ್ರದರ್ಶನ ಮಾಡಲು ಯಾವುದೇ ಮುಜುಗರ ಪಟ್ಟುಕೊಳ್ಳುತ್ತಿಲ್ಲ ಎನ್ನುವುದು ತಿಳಿದಿರುವ ವಿಷಯವೇ. ಪೈಪೋಟಿಗೆ ಬಿದ್ದವರಂತೆ ನಟಿಯರು ಅಂಗ ಪ್ರದರ್ಶನ ಮಾಡಿಕೊಂಡು ಫೋಟೋಶೂಟ್​, ವಿಡಿಯೋಶೂಟ್​ ಮಾಡಿಸಿಕೊಳ್ಳುತ್ತಿದ್ದಾರೆ. ಮೈಮೇಲೆ ಅತ್ಯಂತ ಕಡಿಮೆ ಬಟ್ಟೆ ತೊಟ್ಟು ಪೋಸ್​ ಕೊಟ್ಟು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳುತ್ತಾರೆ. ಅವರ ಫ್ಯಾನ್ಸ್​ಗೆ ಇದು ಇಷ್ಟವಾದರೂ ಕೆಲವೊಮ್ಮೆ ತೀರಾ ಅಶ್ಲೀಲ ಎನ್ನುವಂಥ ಫೋಟೋಗಳು ಎಂದು ಟ್ರೋಲಿಗರಿಂದ ಟ್ರೋಲ್​ಗೂ ಒಳಗಾಗುತ್ತಾರೆ. ಆದರೆ ಈಚಿನ ಟ್ರೆಂಡ್​ ಪ್ರಕಾರ ಹೆಚ್ಚು ಟ್ರೋಲ್​ಗೆ (Troll) ಒಳಗಾದರೆ ಹೆಚ್ಚು ಫೇಮಸ್​ ಆಗುತ್ತಾರೆ ಎನ್ನುವುದು ಇವರಿಗೂ ಗೊತ್ತು. ಅದೇ ಕಾರಣಕ್ಕೆ, ಚಿತ್ರಗಳಲ್ಲಿ ಅವಕಾಶ ಇಲ್ಲದಿದ್ದರೂ ಬೋಲ್ಡ್​ಡ್ರೆಸ್​ನಲ್ಲಿ ಎಷ್ಟೊ ನಟಿಯರು ಮಿಂಚುತ್ತಿರುವುದು ಇದೆ. ವಯಸ್ಸು 40 50 ದಾಟಿದರೂ ಕೆಲ ನಟಿಯರು ತಮ್ಮ ದೇಹವನ್ನು ಬಳಕುವ ಬಳ್ಳಿಯಂತೆ ಇಟ್ಟುಕೊಂಡು ಬಿಕಿನಿಯಲ್ಲಿ ಪೋಸ್​ ಕೊಡುವುದು ಮಾಮೂಲಾಗಿಬಿಟ್ಟಿದೆ.

ಆದರೆ ಇದೀಗ ಬಾಲಿವುಡ್​ನ ಇನ್ನೋರ್ವ ನಟಿ ಪೂಜಾ ಭಾತ್ರಾ (Pooja Batra) ಎಲ್ಲ ನಟಿಯರಿಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಭಾರತೀಯ ಅಮೆರಿಕನ್​ ನಟಿ ಮತ್ತು ರೂಪದರ್ಶಿಯಾಗಿರುವ ಪೂಜಾ ಕೆಲ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದವರು. ಸದ್ಯ ಇವುಗಳಿಂದ ದೂರವಿದ್ದರೂ ಮಾಡೆಲಿಂಗ್​ನಲ್ಲಿ ಮಿಂಚುತ್ತಿದ್ದಾರೆ. 1993 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಆದ ಮೇಲೆ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿರೋ ಈ ಬೆಡಗಿಗೆ ಈಗ ವಯಸ್ಸು 47. ಇಷ್ಟು ವಯಸ್ಸಿನಲ್ಲಿ ಸಾಮಾನ್ಯವಾಗಿ ಮಹಿಳೆಯರು ಎಲ್ಲಾ ಮುಗಿದು ಹೋಯ್ತು ಅಂದುಕೊಳ್ಳುವುದೇ ಹೆಚ್ಚು. ಆದರೆ ಪೂಜಾ ಮಾತ್ರ ಇತ್ತೀಚಿನ ನಟಿಯರನ್ನೂ ಹಿಂದಕ್ಕೆ ಸರಿಸಿ, ಅವರೂ ನಾಚುವಂತೆ ಆಗಾಗ್ಗೆ ಫೋಟೋಶೂಟ್​ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ.

ಅವರ ಜೊತೆ ಮಲಗಿದ್ರಷ್ಟೇ ಸಿನಿಮಾದಲ್ಲಿ ಫೇಮಸ್​ ಆಗೋದಂತೆ! ನಟಿ ನೋವಿನ ನುಡಿ

ಆದರೆ ಈಗ ಮಾಡಿಸಿಕೊಂಡಿರುವ ಫೋಟೋಶೂಟ್​ (Photoshoot) ನೋಡಿ ಮಡಿವಂತರು ಅಕ್ಷರಶಃ ಕಣ್ಣುಮುಚ್ಚಿಕೊಳ್ಳುತ್ತಿದ್ದಾರೆ. ನಟಿಯರು ತಮ್ಮ ಅಂಗಾಗ ಪ್ರದರ್ಶನ ಮಾಡುವಾಗ ಸ್ವಲ್ಪ ಮಾನ ಮರ್ಯಾದೆ ಮುಚ್ಚಿಕೊಳ್ಳುತ್ತಾರೆ. ಆದರೆ ಪೂಜಾ ಹಾಗೆಮಾಡಲಿಲ್ಲ. ತಮ್ಮ ಇಂಚಿಂಚು ದೇಹವನ್ನೂ ಪಾರದರ್ಶಕ ಉಡುಪಿನಲ್ಲಿ ತೋರಿಸಿದ್ದಾರೆ. ತಮ್ಮ ಡ್ರೆಸ್​ ಸೆನ್ಸ್​ನಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಸೆನ್​ಸೇಷನಲ್​ ಸೃಷ್ಟಿಸಿರೋ ಉರ್ಫಿ ಜಾವೇದ್​ ಅವರನ್ನೂ ಎಲ್ಲಾ ರೀತಿಯಲ್ಲಿ ಮೀರಿ ಪೂಜಾ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಆಗಾಗ್ಗೆ ಬೋಲ್ಡ್​ ಡ್ರೆಸ್​ನಿಂದ ಪೂಜಾ ಭಾರಿ ಸುದ್ದಿಯಾಗುತ್ತಲೇ ಇರುತ್ತಾರೆಯಾದರೂ ಈಗಿನ ಚಿತ್ರದಿಂದ ಸೋಶಿಯಲ್‌ ಮೀಡಿಯಾದಲ್ಲಿ ಕಿಡಿ ಹಚ್ಚಿದ್ದಾರೆ. 

ಮಾಜಿ ಬ್ಯೂಟಿ ಕ್ವೀನ್ ನ್ಯೂಡ್ ಡ್ರೆಸ್‌ನಲ್ಲಿ ಕೊಳದಲ್ಲಿ ಸ್ನಾನ ಮಾಡಿ ಅದರ ಫೋಟೋ ಶೇರ್​ ಮಾಡಿಕೊಂಡಿದ್ದು, ನೆಟಿಜನ್‌ಗಳು ಇದನ್ನು ನೋಡಿ ಥಹರೇವಾರಿ ಕಮೆಂಟ್​ (comment) ಮಾಡುತ್ತಿದ್ದಾರೆ. ನಟಿ ತಮ್ಮ ದೇಹವನ್ನು ಸಂಪೂರ್ಣವಾಗಿ ಪ್ರದರ್ಶಿಸಿದ್ದಾರೆ. ಇದನ್ನು ನೋಡಿ ಹಲವರು ಬೆಚ್ಚಿಬಿದ್ದಿದ್ದಾರೆ. ಮೈ ಬಣ್ಣದ ಬಟ್ಟೆತೊಟ್ಟು ಕೊಳದಲ್ಲಿ ಸ್ನಾನ ಮಾಡಿ ಒಳ ಉಡುಪು ಇಲ್ಲದೆಯೇ ಸಂಪೂರ್ಣ ನಗ್ನ ದೇಹವನ್ನು ತೋರಿಸಿದ್ದಾರೆ ಪೂಜಾ. ಇದನ್ನು ನೋಡಿ ಈಕೆಯ ಫ್ಯಾನ್ಸ್​ ನೋಡಲು ಎರಡು ಕಣ್ಣು ಸಾಲ್ತಿಲ್ಲ ಎಂದಿದ್ದರೆ, ಇನ್ನು ಹಲವರು ಥೂ, ಛೀ ಎಂದು ಕಮೆಂಟ್​ ಹಾಕಿದ್ದಾರೆ. 'ಆಕೆಗೆ 47 ವರ್ಷ ಎಂದು ನಂಬಲು ಸಾಧ್ಯವಿಲ್ಲ' ಎಂದು ಒಬ್ಬ ಬಳಕೆದಾರರು ಬರೆದಿದ್ದರೆ, ನೀವು ಇನ್ನೂ 18 -20 ವರ್ಷದ ಯುವತಿಯಂತೆ ಕಂಗೊಳಿಸುತ್ತಿದ್ದೀರಿ ಎಂದಿದ್ದಾರೆ ಕೆಲವರು.

ನಾಯಕ ಬಿಗಿದಪ್ಪಿ ಐದು ನಿಮಿಷ ಕಿಸ್​ ಮಾಡಿದ ಕರಾಳ ಅನುಭವ ಬಿಚ್ಚಿಟ್ಟ ನಟಿ ರೇಖಾ

ಅಂದಹಾಗೆ ಪೂಜಾ, 2019 ಜುಲೈನಲ್ಲಿ ನಟ ನವಾಬ್ ಷಾ ಅವರನ್ನು ವಿವಾಹವಾದರು. ನವಾಬ್ ಮತ್ತು ನಾನು ದೆಹಲಿಯಲ್ಲಿ ಪ್ರತಿಜ್ಞೆ ವಿನಿಮಯ ಮಾಡಿಕೊಂಡೆವು, ನಮ್ಮ ಕುಟುಂಬಗಳು ಮಾತ್ರ ಹಾಜರಿದ್ದರು. ನಮ್ಮಮನಸ್ಸು ಒಂದಾದ ಮೇಲೆ ವಿಳಂಬ ಮಾಡುವುದು ಸರಿಯಲ್ಲ ಎಂದು ಸರಳವಾಗಿ ವಿವಾಹವಾಗಿದ್ದೇವೆ ಎಂದು ನಟಿ ಹೇಳಿದ್ದರು.

View post on Instagram