Kashmir Files Controversy; ಅಶ್ಲೀಲ ಚಿತ್ರವೆಂದ ಇಸ್ರೇಲಿ ನಿರ್ದೇಶಕನಿಗೆ ಸ್ವರಾ ಭಾಸ್ಕರ್, ಪ್ರಕಾಶ್ ರಾಜ್ ಬೆಂಬಲ
ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾವೆಂದ ಇಸ್ರೇಲಿ ನಿರ್ದೇಶಕ ನದಾಲ್ ಪರ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ನಟ ಪ್ರಕಾಶ್ ರಾಜ್ ಬ್ಯಾಟ್ ಬೀಸಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ, ತಪ್ಪು ಪ್ರಚಾರ ಉದ್ದೇಶ ಹೊಂದಿದ ಸಿನಿಮಾ ಎಂದು IFFI 2022(International Film Festival of India) ಜ್ಯೂರಿ ಮುಖ್ಯಸ್ಥ ನದಾವ್ ಲಾಪಿಡ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಇಸ್ರೇಲಿ ಸಿನಿಮಾ ನಿರ್ದೇಶನಕ ನದಾವ್ ಲಾಪಿಡ್ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಅಸಮಾಧಾನ ಹೊರಹಾಕಿದರು. IFFI ಅಂತ ಚಿತ್ರೋತ್ಸವಕ್ಕೆ ಸೂಕ್ತ ಸಿನಿಮಾವಲ್ಲ ಎಂದು ಹೇಳಿದರು. ಈ ಹೇಳಿಕೆ ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನದಾವ್ ಲಾಪಿಡ್ ಹೇಳಿಕೆ ಬಗ್ಗೆ ಪರ ವಿರೋಧ ಮಾತುಗಳು ಕೇಳಿಬರುತ್ತಿದೆ. ಅನೇಕರು ನದಾಲ್ ವಿರುದ್ಧ ಕಿಡಿ ಕಾರಿದ್ರೆ ಇನ್ನು ಕೆಲವರು ನದಾಲ್ ಮಾತಿಗೆ ಸಹಮತ ಸೂಚಿಸಿದ್ದಾರೆ, ನದಾಲ್ ಪರ ಬ್ಯಾಟ್ ಬೀಸಿದ್ದಾರೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ನಟ ಪ್ರಕಾಶ್ ರಾಜ್ ಇಬ್ಬರೂ ಇಸ್ರೇಲಿ ನಿರ್ದೇಶಕ ನದಾಲ್ ಪರ ನಿಂತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸ್ವರಾ ಭಾಸ್ಕರ್, 'ಜಗತ್ತಿಗೆ ಈಗ ಇದು ಸ್ಪಷ್ಟವಾಗಿ' ಎಂದು ಹೇಳಿದ್ದಾರೆ. ಇನ್ನು ಪ್ರಕಾಶ್ ರಾಜ್ ಕೂಡ ಟ್ವೀಟ್ ಮಾಡಿ ನದಾಲ್ ಪರ ಪರ ಬ್ಯಾಟ್ ಬೀಸಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಜರಿದಿರುವ ಪ್ರಕಾಶ್ ರಾಜ್, 'ಈಗ ಅಧಿಕೃತವಾಯಿತು' ಎಂದು ಹೇಳಿದ್ದಾರೆ.
ಸ್ವರಾ ಮತ್ತು ಪ್ರಕಾಶ್ ಮಾತಿಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ನೀವಿಬ್ಬರೂ ಕಾಶ್ಮೀರಿ ಪಂಡಿತರನ್ನು ಅವಮಾನ ಮಾಡುತ್ತಿದ್ದೀರಿ ಎಂದು ಕಿಡಿ ಕಾರುತ್ತಿದ್ದಾರೆ. ಈ ರೀತಿಯ ಹೇಳಿಕೆ ನೀಡಲಿಕ್ಕೆ ನಾಚಿಕೆಯಾಗಬೇಕು ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.
ತುಂಬಾ ನೋವಾಗಿದೆ; 'ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾ' ಎಂದ ನಿರ್ದೇಶಕನ ವಿರುದ್ಧ ಇಸ್ರೇಲ್ ರಾಯಭಾರಿ ಕಿಡಿ
ನದಾವ್ ಲಾಪಿಡ್ ಹೇಳಿದ್ದೇನು?
ಸೋಮವಾರ (ನವೆಂಬರ್ 28) ರಾತ್ರಿ ಗೋವಾದಲ್ಲಿ ನಡೆದ 53ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಈ ವರ್ಷದ ತೀರ್ಪುಗಾರರ ಮುಖ್ಯಸ್ಥ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನದಾವ್ ಲಾಪಿಡ್, 'ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ, ತಪ್ಪು ಪ್ರಚಾರದ ಉದ್ದೇಶ ಹೊಂದಿದ ಸಿನಿಮಾ' ಎಂದು ಅಸಮಾಧಾನ ಹೊರಹಾಕಿದರು. 'ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು. ಜ್ಯೂರಿ ನದಾವ್ ಲಾಪಿಡ್ ಹೇಳಿಕೆ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಈ ವೇದಿಕೆಯಲ್ಲಿ ನಿಮ್ಮೊಂದಿಗೆ ನನ್ನ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಕ್ಕೆ ನಾನು ಆರಾಮಾಗಿ ಇದ್ದೀನಿ. ಈ ಉತ್ಸಾಹದಲ್ಲಿ ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಖಂಡಿತವಾಗಿ ಸ್ವೀಕರಿಸಬಹುದು' ಎಂದು ಹೇಳಿದರು.
'ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾ' ಎಂದ IFFI ಜ್ಯೂರಿ ಮುಖ್ಯಸ್ಥ ನಾಡವ್; ತಿರುಗೇಟು ನೀಡಿದ ಅಗ್ನಿಹೋತ್ರಿ
ದಿ ಕಾಶ್ಮಿರ್ ಫೈಲ್ಸ್
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ಅಗ್ನಿಹೋತ್ರಿ ಸಾರಥ್ಯದಲ್ಲಿ ಮೂಡಿಬಂದಿದೆ. ಅನುಪಮ್ ಖೇರ್ ಪ್ರಮಪಖ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಶಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾ 1990ರ ದಶಕದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಸಾಮೂಹಿಕ ವಲಸೆಯನ್ನು ಒಳಗೊಂಡಿರುವ ಕಾಶ್ಮೀರ ಕಣಿವೆಯಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾವಾಗಿದೆ.