'ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾ' ಎಂದ IFFI ಜ್ಯೂರಿ ಮುಖ್ಯಸ್ಥ ನದಾವ್; ತಿರುಗೇಟು ನೀಡಿದ ಅಗ್ನಿಹೋತ್ರಿ
'ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ ಪ್ರಚಾರದ ಸಿನಿಮಾ ಎಂದು IFFI (International Film Festival of India) ಜ್ಯೂರಿ ಮುಖ್ಯಸ್ಥ ನದಾವ್ ಲಾಪಿಡ್ ಜರಿದಿದ್ದಾರೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ ಪ್ರಚಾರದ ಸಿನಿಮಾ ಎಂದು IFFI (International Film Festival of India) ಜ್ಯೂರಿ ಮುಖ್ಯಸ್ಥ ನದಾವ್ ಲಾಪಿಡ್ ಜರಿದಿದ್ದಾರೆ. ಗೋವಾದಲ್ಲಿ ನಡೆಯುತ್ತಿದ್ದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ದೂರಿಯಾಗಿ ತೆರೆಬಿದ್ದಿದೆ. ಮುಕ್ತಾಯ ಸಮಾರಂಭದಲ್ಲಿ IFFI ತೀರ್ಪುಗಾರರ ಮುಖ್ಯಸ್ಥರಾಗಿದ್ದ ಇಸ್ರೇಲ್‌ನ ಖ್ಯಾತ ನಿರ್ದೇಶಕ ನದಾವ್ ಲಾಪಿಡ್ ದಿ ಕಾಶ್ಮಿರ್ ಫೈಲ್ಸ್ ಸಿನಿಮಾ ವಿರುದ್ಧ ಅಸಮಾಧಾನ ಹೊರಹಾಕಿದರು. ನದಾಲ್ ಮಾತಿಗೆ ತಿರುಗೇಟು ನೀಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 'ಸತ್ಯವು ಅತ್ಯಂತ ಅಪಾಯಕಾರಿ ವಿಷಯ. ಇದು ಜನರನ್ನು ಸುಳ್ಳುಹೇಳುವಂತೆ ಮಾಡಬಹುದು' ಎಂದು ನದಾವ್ ಲಾಪಿಡ್ ಹೆಸರು ಹೇಳದೆ ತಿರುಗೇಟು ನೀಡಿದ್ದಾರೆ. ಜೊತೆಗೆ ಸೃಜನಶೀಲ ಪ್ರಜ್ಞೆ ಎಂದು ಹ್ಯಾಷ್ ಟ್ಯಾಗ್ ಕೂಡ ನೀಡಿದ್ದಾರೆ.
ನದವ್ ಲಾಪಿಡ್ ಹೇಳಿದ್ದೇನು?
ಸೋಮವಾರ (ನವೆಂಬರ್ 28) ರಾತ್ರಿ ಗೋವಾದಲ್ಲಿ ನಡೆದ 53ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಈ ವರ್ಷದ ತೀರ್ಪುಗಾರರ ಮುಖ್ಯಸ್ಥ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನದಾವ್ ಲಾಪಿಡ್, 'ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ' ಎಂದು ಅಸಮಾಧಾನ ಹೊರಹಾಕಿದರು. 'ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು' ಎಂದು ಹೇಳಿದರು. 'ಈ ವೇದಿಕೆಯಲ್ಲಿ ನಿಮ್ಮೊಂದಿಗೆ ನನ್ನ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಕ್ಕೆ ನಾನು ಆರಾಮಾಗಿ ಇದ್ದೀನಿ. ಈ ಉತ್ಸಾಹದಲ್ಲಿ ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಖಂಡಿತವಾಗಿ ಸ್ವೀಕರಿಸಬಹುದು' ಎಂದು ಹೇಳಿದರು. ಜ್ಯೂರಿ ನದಾಲ್ ಹೇಳಿಕೆ ಈಗ ವಿವಾಕ್ಕೆ ಎಡೆ ಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.
ರಿಷಬ್ ಶೆಟ್ಟಿಯ ಮಾಸ್ಟರ್‌ಪೀಸ್; 'ಕಾಂತಾರ' ನೋಡಿ ಹೊಗಳಿದ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ
ಅನುಪಮ್ ಖೇರ್ ಪ್ರತಿಕ್ರಿಯೆ
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನುಪಮ್ ಖೇರ್ ಪ್ರತಿಕ್ರಿಯೆ ನೀಡಿ, 'ಟೂಲ್‌ಕಿಟ್ ಗ್ಯಾಂಗ್ ಸಕ್ರೀಯವಾದ ತಕ್ಷಣ ಇದು ಪೂರ್ವ-ಯೋಜಿತವಾಗಿದೆ ಎಂದು ತೋರುತ್ತದೆ. ಈ ರೀತಿಯ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ಹೇಳಿಕೆಯಿಂದ ಹಲವು ವರ್ಷಗಳ ಹಿಂದೆ ಈ ದುರಂತದಲ್ಲಿ ಬಲಿಯಾದ ಜನರನ್ನೂ ಅವರು ನೋಯಿಸಿದ್ದಾರೆ. ಸಾವಿರಾರು ಜನರ ಕಷ್ಟಗಳನ್ನು ಬಳಸಿಕೊಂಡು ವೇದಿಕೆಯಲ್ಲಿ ತನ್ನ ಅಜೆಂಡಾವನ್ನು ಮುಂದುವರಿಸಿದವರಿಗೆ ದೇವರು ಬುದ್ಧಿಯನ್ನು ನೀಡಲಿ' ಎಂದು ವ್ಯಂಗ್ಯವಾಡಿದರು.
ಅವಾರ್ಡ್ ಮಾಫಿಯಾ ತಿಳಿದು ಶಾಕ್ ಆಯ್ತು; ರಣ್ವೀರ್‌ಗೆ ಪರೋಕ್ಷ ಟಾಂಗ್ ಕೊಟ್ಟ ಅಗ್ನಿಹೋತ್ರಿ
ದಿ ಕಾಶ್ಮಿರ್ ಫೈಲ್ಸ್ ಬಗ್ಗೆ
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ಅಗ್ನಿಹೋತ್ರಿ ಸಾರಥ್ಯದಲ್ಲಿ ಮೂಡಿಬಂದಿದೆ. ಅನುಪಮ್ ಖೇರ್ ಪ್ರಮಪಖ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಶಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾ 1990ರ ದಶಕದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಸಾಮೂಹಿಕ ವಲಸೆಯನ್ನು ಒಳಗೊಂಡಿರುವ ಕಾಶ್ಮೀರ ಕಣಿವೆಯಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾವಾಗಿದೆ.