Asianet Suvarna News Asianet Suvarna News

ಆಸ್ಪತ್ರೆ ಸೇರಿದ ಲಲಿತ್ ಮೋದಿ; ಶೀಘ್ರ ಗುಣಮುಖರಾಗಿ ಎಂದು ಸುಶ್ಮಿತಾ ಸೇನ್ ಸಹೋದರನ ಹಾರೈಕೆ

ಇಂಡಿಯನ್ ಪ್ರೀಮಿಯರ್ ಲೀಗ್  ಸಂಸ್ಥಾಪಕ ಲಲಿತ್ ಮೋದಿ ತೀವ್ರ ಅನಾರೋಗ್ಯದಿಂದ ಲಂಡನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೀಘ್ರ ಗುಣಮುಖರಾಗಿ ಎಂದು ಹಾರೈಕೆ.

Sushmita Sen brother Rajeev sen reacts to Lalit Modi's post about being on oxygen support sgk
Author
First Published Jan 14, 2023, 4:57 PM IST

ಇಂಡಿಯನ್ ಪ್ರೀಮಿಯರ್ ಲೀಗ್  ಸಂಸ್ಥಾಪಕ ಲಲಿತ್ ಮೋದಿ ತೀವ್ರ ಅನಾರೋಗ್ಯ ಕಾರಣ ಲಂಡನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಲಲಿತ್ ಮೋದಿ ಅವರಿಗೆ ಕೃತಕ ಆಮ್ಲಜನಕ ವ್ಯವಸ್ಥೆ ಅಳವಡಿಸಲಾಗಿದೆ. ಲಲಿತ್ ಮೋದಿ ಎರಡು ವಾರಗಳಲ್ಲಿ ಎರಡು ಬಾರಿ ಕೊರೊನಾ ಸೋಂಕು ತಗುಲಿದೆ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಆನಾರೋಗ್ಯದ ಕುರಿತಾಗಿ ಸ್ವತಃ ಲಲಿತ್ ಮೋದಿ ಅವರೇ ಇನ್‍ಸ್ಟಾಗ್ರಾಮ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಎರಡು ವಾರಗಳಲ್ಲಿ ಎರಡು ಬಾರಿ ಕೋವಿಡ್ ಸೋಂಕಿಗೆ ಒಳಗಾಗಿದ್ದೇನೆ. ಇದರ ಜೊತೆ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನನ್ನು ಏರ್ ಆಂಬುಲೆನ್ಸ್ ಮೂಲಕ ಕರೆತರಲಾಗಿತ್ತು. ನನ್ನ ಆರೋಗ್ಯದ ಕುರಿತಾಗಿ ಕಾಳಜಿ ವಹಿಸಿದ ಇಬ್ಬರು ವೈದ್ಯರು ಮತ್ತು ಮಗನಿಗೆ ಧನ್ಯವಾದ' ಎಂದು ತಿಳಿಸಿ ಪೋಸ್ಟ್ ಮಾಡಿದ್ದಾರೆ.

ಲಲಿತ್ ಮೋದಿಗೆ ಅನೇಕರು ಶೀಘ್ರ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ಮೆಕ್ಸಿಕೋದಲ್ಲಿದ್ದ ಲಲಿತ್ ಮೋದಿ ಅವರನ್ನು ತೀವ್ರ ಅನಾರೋಗ್ಯದ ಕಾರಣ  ತಕ್ಷಣ ಅವರನ್ನು ಲಂಡನ್‌ಗೆ ಏರ್ ಆಂಬುಲೆನ್ಸ್ ಮೂಲಕ ಕರೆತರಲಾಗಿದ್ದು ಆಸ್ಪತ್ರೆ ದಾಖಲಿಸಲಾಗಿದೆ ಎನ್ನಲಾಗಿದೆ. ಲಲಿತ್ ಮೋದಿ ಚೇತರಿಸಿಕೊಳ್ಳಲು ಇನ್ನೂ ಸಮಯ ಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಲಲಿತ್ ಮೋದಿ ಅವರೇ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆಸ್ಪತ್ರೆ ಬೆಡ್ ಮೇಲೆ ಆಕ್ಸಿಜನ್ ಮೂಲಕ ಉಸಿರಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. 

ಲಲಿತ್ ಮೇದಿಗೆ ಅನೇಕರು ಬೇಗ ಗುಣಮುಖರಾಗಿ ಎಂದು ವಿಶ್ ಮಾಡುತ್ತಿದ್ದಾರೆ. ಸುಶ್ಮಿತಾ ಸೇನ್ ಸಹೋದರು ರಾಜೀವ್ ಸೇನ್ ಕೂಡ ಬೇಗ ಗುಣಮುಖರಾಗಿ ಎಂದು ವಿಶ್ ಮಾಡಿದ್ದಾರೆ. 'ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಲಲಿತ್' ಎಂದು ಹೇಳಿದ್ದಾರೆ. ಆದರೆ ಸುಶ್ಮಿತಾ ಸೇನ್ ಯಾವುದೇ ಪೋಸ್ಟ್ ಶೇರ್ ಮಾಡಿಲ್ಲ.

 
 
 
 
 
 
 
 
 
 
 
 
 
 
 

A post shared by Lalit Modi (@lalitkmodi)

ಲಲಿತ್ ಮೋದಿ - ಸುಶ್ಮಿತಾ ಸೇನ್ ನಡುವೆ ಬ್ರೇಕಪ್? ಮಾಜಿ ವಿಶ್ವ ಸುಂದರಿ ಹೆಸರು, ಫೋಟೋ ತೆಗೆದಾಕಿದ IPL ಸಂಸ್ಥಾಪಕ

ಸುಶ್ಮಿತಾ ಜೊತೆ ಸಂಬಂಧ ಅಧಿಕೃತಗೊಳಿಸಿದ್ದ ಮೋದಿ

ಕಳೆದ ವರ್ಷ ಜುಲೈನಲ್ಲಿ ಸುಶ್ಮಿತಾ ಸೇನ್ ಜೊತೆಗಿನ ಸಂಬಂಧವನ್ನು ಲಲಿತ್ ಮೋದಿ ಬಹಿರಂಗ ಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸುಶ್ಮಿತಾ ಸೇನ್ ಜೊತೆಗಿನ ಫೋಟೋ ಶೇರ್ ಮಾಡಿ, 'ಮಾಲ್ಡೀವ್ಸ್‌ ಗ್ಲೋಬಲ್ ಟೂರ್‌ ಮುಗಿಸಿ ಲಂಡನ್‌ಗೆ ಹಿಂತಿರುಗಿದ್ದೀವಿ ನಮ್ಮ ಕುಟುಂಬದ ಜೊತೆ. ಹೇಳುವುದನ್ನು ಮರೆಯಬಾರದು ನನ್ನ ಬೆಟರ್‌ಹಾಫ್‌ ನನ್ನ ಜೊತೆಗಿದ್ದಾರೆ- ಸುಶ್ಮಿತಾ ಸೇನ್. ಹೊಸ ಜೀವನ. ಚಂದ್ರನ ಮೇಲಿರುವಷ್ಟೇ ಸಂತೋಷವಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದರು. ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ಇಬ್ಬರೂ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. 

2022 ರಲ್ಲಿ ಭಾರತದಲ್ಲಿ ಹೆಚ್ಚು ಗೂಗಲ್ ಮಾಡಿದ ಟಾಪ್ 10 ಲಿಸ್ಟ್‌ನಲ್ಲಿ ಸುಶ್ಮಿತಾ ಸೇನ್, ಲಲಿತ್ ಮೋದಿ!

ಬ್ರೇಕಪ್ ವದಂತಿ ವೈರಲ್ 

ಸುಶ್ಮಿತಾ ಜೊತೆಗಿನ ಸಂಬಂಧ ಬಹಿರಂಗ ಪಡಿಸಿದ ಬಳಿಕ ಲಲಿತ್ ಮೋದಿ ಇನ್ಸ್ಟಾಗ್ರಾಮ್ ನಲ್ಲಿ ಸುಶ್ಮಿತಾ ಸೇನ್ ಹೆಸರನ್ನು ಸೇರಿಕೊಂಡಿದ್ದರು. ಅಲ್ಲದೆ ಸುಶ್ಮಿತಾ ಜೊತೆ ಇದ್ದ ಫೋಟೋವನ್ನು ಡಿಪಿಗೆ ಹಾಕಿದ್ದರು.  ಆದರೆ ಇಬ್ಬರೂ ದೂರ ಆಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಲಲಿತ್ ಮೋದಿ ಡಿಪಿ ಬದಲಾಯಿಸಿದ್ದಲ್ಲದೇ ಸುಶ್ಮಿತಾ ಹೆಸರನ್ನು ಕೈಬಿಟ್ಟಿದ್ದಾರೆ. ಇನ್ಸ್ಟಾಗ್ರಾಮ್ ಬಯೋದಲ್ಲಿ ಲಲಿತ್ ಮೋದಿ, 'ಕೊನೆಗೂ ನಾನು ನನ್ನ ಸಂಗಾತಿ ಜೊತೆ ಹೊಸ ಜೀವನ ಪ್ರಾರಂಭಿಸಿದೆ. ನನ್ನ ಲವ್ ಸುಶ್ಮಿತಾ ಸೇನ್' ಎಂದು ಬರೆದುಕೊಂಡು ಹಾರ್ಟ್ ಇಮೋಜಿ ಹಾಕಿದ್ದರು. ಆದರೆ ಈಗ ಎಲ್ಲವನ್ನೂ ಡಿಲೀಟ್ ಮಾಡಿದ್ದಾರೆ.

Follow Us:
Download App:
  • android
  • ios