Asianet Suvarna News Asianet Suvarna News

ಕನ್ನಡಿಗ ಉದ್ಯಮಿ ನಿಖಿಲ್ ಜತೆ ಡೇಟಿಂಗ್ ನಲ್ಲಿರುವ ನಟಿ ರಿಯಾ ಚಕ್ರವರ್ತಿ ಮದುವೆಯಾಗೋದಿಲ್ಲವಂತೆ!

ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಮದುವೆಯಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮದುವೆಗೆ ಸರಿಯಾದ ವಯಸ್ಸು ಎಂಬುದಿಲ್ಲ ಮತ್ತು ತಮ್ಮ ವೃತ್ತಿಜೀವನದತ್ತ ಗಮನ ಹರಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

Sushant Singh Rajput Ex Rhea Chakraborty Revealed  Not Ready To Marry Right Now gow
Author
First Published Sep 3, 2024, 8:16 PM IST | Last Updated Sep 3, 2024, 8:16 PM IST

ಬಾಲಿವುಡ್‌  ನಟ ಸುಶಾಂತ್ ಸಿಂಗ್ ರಜಪೂತ್ 2020ರಲ್ಲಿ ಹಠಾತ್ ನಿಧನ ಹೊಂದಿದ ನಂತರ, ಸಾವಿಗೂ ಮೊದಲು ಅವರ ಜೊತೆಗೆ ಡೇಟಿಂಗ್‌ನಲ್ಲಿದ್ದ   ಗೆಳತಿ ರಿಯಾ ಚಕ್ರವರ್ತಿ ಪ್ರಸ್ತುತ ಝೆರೋದಾ ಸಹ ಸಂಸ್ಥಾಪಕ, ಉದ್ಯಮಿ, ಕನ್ನಡಿಗ ನಿಖಿಲ್ ಕಾಮತ್‌ ಜೊತೆಗೆ ಡೇಟಿಂಗ್ ನಲ್ಲಿದ್ದಾರೆಂದು ಸುದ್ದಿ ಹಬ್ಬಿದೆ. ಅವರು ಮದುವೆಯಾಗಲಿದ್ದಾರೆ ಎಂದು ಜನರು ಊಹಿಸುತ್ತಿದ್ದಾರೆ. 

ಆದರೆ ತನ್ನ ಹೊಸ ಸಂಬಂಧದ ಬಗ್ಗೆ ಸ್ಪಷ್ಟನೆ ಕೊಡದಿರುವ 32 ವರ್ಷದ ನಟಿ ರಿಯಾ ಇದೀಗ ನಾನು  ಮದುವೆಯಾಗಲು ಬಯಸುವುದಿಲ್ಲ ಎಂದಿದ್ದಾರೆ. ಮದುವೆಯಾಗಲು ಯಾವುದೇ ಸರಿಯಾದ ವಯಸ್ಸು ಎಂಬುದಿಲ್ಲ. ಸಾಧಕ ಬಾಧಕಗಳ ಪಟ್ಟಿಯ ಆಧಾರದ ಮೇಲೆ 40 ವರ್ಷಗಳು ಉತ್ತಮ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬಿಗ್‌ಬಾಸ್‌ ತೆಲುಗಿನಲ್ಲಿ ಹೆಚ್ಚು ಸಂಭಾವನೆ ಸೆಕ್ಸಿಯೆಸ್ಟ್ ವಿಷ್ಣುಪ್ರಿಯಾಗೆ, ಕಿಚ್ಚನ ಗೂಳಿಯಲ್ಲಿ ನಟಿಸಿದಾಕೆ!

ಹಾಗಾದರೆ ರಿಯಾ ಚಕ್ರವರ್ತಿ ಮದುವೆಯ ಬಗ್ಗೆ  ಏನು ಹೇಳಿದರು?
ರಿಯಾ ಚಕ್ರವರ್ತಿ ಹ್ಯೂಮನ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಸಂದರ್ಶಕರು ಮದುವೆಯ ಸರಿಯಾದ ವಯಸ್ಸಿನ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಿಯಾ, “ಮೊದಲನೆಯದಾಗಿ, ಮದುವೆಗೆ ಸರಿಯಾದ ವಯಸ್ಸು ಎಂಬುದಿಲ್ಲ. ಎರಡನೆಯದಾಗಿ, ನಾನು ಆ ಸ್ಥಳವನ್ನು ಏಕೆ ತಲುಪಬೇಕು? ನೀವು ಏಕೆ ಬಯಸುತ್ತೀರಿ? ನೀವು ಏಕೆ ಮದುವೆಯಾಗಲು ಬಯಸುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.

ಮಹಿಳೆಯರಿಗೆ ಎಗ್‌ ಫ್ರೀಜ್ ಮಾಡಲು ಸಲಹೆ ನೀಡಿದ ರಿಯಾ ಚಕ್ರವರ್ತಿ 
ಈ ವೇಳೆ ಯಾವಾಗಲೂ ಹುಡುಗಿಯರ ಮೇಲೆ ಒತ್ತಡ ಏಕೆ ಎಂದು ಪ್ರಶ್ನಿಸಿ ರಿಯಾ ಚಕ್ರವರ್ತಿ, ಹುಡುಗರು ಇಂತಹ ಒತ್ತಡವನ್ನು ಅನುಭವಿಸುವುದಿಲ್ಲ. ಜೈವಿಕ ಗಡಿಯಾರದ ಕಾರಣ, ಮಹಿಳೆಯರು ಮೊಟ್ಟೆಗಳನ್ನು ಫ್ರೀಜ್ ಮಾಡುವುದು ಉತ್ತಮ. ಇದು ಸ್ವಲ್ಪ ನೋವಿನಿಂದ ಕೂಡಿದೆ, ಆದರೆ ಅದನ್ನು ಮಾಡಿ. ಏಕೆಂದರೆ ಈಗ ಅದು ಲಭ್ಯವಿದೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ ತೆಲುಗು ಸ್ಪರ್ಧಿಗಳ ಸಂಭಾವನೆ, ಕನ್ನಡ ತಾರೆಯರಿಗೆಷ್ಟು? ವಿಷ್ಣುಪ್ರಿಯಾಗೆ ಅಷ್ಟೋಂದಾ!

ರಿಯಾಳ ಹೆಚ್ಚಿನ ಸ್ನೇಹಿತರು ಮದುವೆಯಾಗಿದ್ದಾರೆ:
ಇನ್ನು ಸಂದರ್ಶನದಲ್ಲಿ ಮಾತನಾಡಿದ ರಿಯಾ, ನನ್ನ ಹೆಚ್ಚಿನ ಸ್ನೇಹಿತರು 40 ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. 40ರ ಹರೆಯದಲ್ಲಿ ಗರ್ಭಿಣಿಯಾಗಿ 40ರ ಹರೆಯದಲ್ಲಿ ಮಕ್ಕಳನ್ನು ಪಡೆದಿದ್ದಾರೆ. ಅವರಲ್ಲಿ ಬಹುಪಾಲು ಜನರು ಎಗ್ ಪ್ರೀಜ್ ಮಾಡಿದ್ದರು ಎಂದು ರಿಯಾ ಚಕ್ರವರ್ತಿ ಬಹಿರಂಗಪಡಿಸಿದ್ದಾರೆ. 20-30 ರ ದಶಕದಲ್ಲಿ ಕೆಲವು ಸ್ನೇಹಿತರು ಮದುವೆಯಾದರು  ಎರಡೂ ಕಡೆಯವರನ್ನು ನೋಡಿದಾಗ, 30 ಮತ್ತು 40 ರ ದಶಕದಲ್ಲಿ ಮದುವೆಯಾದವರು ಗೆಲ್ಲುತ್ತಾರೆ ಎಂದಿದ್ದಾರೆ.

32ನೇ ವಯಸ್ಸಿನಲ್ಲಿ ಮದುವೆಗೆ ಸಿದ್ಧನಿಲ್ಲ:
 ನನ್ನ ಸಾಧಕ-ಬಾಧಕಗಳ ಎಕ್ಸೆಲ್ ಶೀಟ್‌ನಲ್ಲಿ 40 ವರ್ಷ ವಯಸ್ಸಿನವರ ವಿಭಾಗ ಗೆಲ್ಲುತ್ತಿದೆ. ನನಗೆ ಇನ್ನೂ 32 ವರ್ಷ, ಮತ್ತು ನಾನು ಇನ್ನೂ ಮದುವೆಗೆ ಸಿದ್ಧನಾಗಿಲ್ಲ.  ಏಕೆಂದರೆ ನಾನು ನನ್ನ ವೃತ್ತಿಪರ ಜೀವನದಲ್ಲಿ ಬಹಳಷ್ಟು ಸಾಧಿಸಲು ಬಯಸುತ್ತೇನೆ  ಎಂದು ಹೇಳಿದ್ದಾರೆ. ರಿಯಾ ಚಕ್ರವರ್ತಿ ಮುಂದುವರಿದು, ಒಂದು ವಿಷಯಕ್ಕಾಗಿ ನಾನು ಕೋರ್ಟಿಗೆ ಹೋಗಲು ಬಯಸುವುದಿಲ್ಲ,  ಯಾರನ್ನು ಮದುವೆಯಾಗಲು ನಾನು ಅಲ್ಲಿಂದ ಅನುಮತಿಯನ್ನು ತೆಗೆದುಕೊಳ್ಳುಬೇಕು.  ಅನುಮತಿಗಾಗಿ ನಾನು ಯಾರನ್ನು ಪ್ರೀತಿಸಬೇಕು ಎಂದು ಹೇಳಿದ್ದಾರೆ.

ರಿಯಾ ಚಕ್ರವರ್ತಿ ಈಗ ಏನು ಮಾಡುತ್ತಿದ್ದಾರೆ:
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ರಿಯಾ ಚಕ್ರವರ್ತಿಗೆ ಚಿತ್ರಗಳು ಸಿಗುತ್ತಿಲ್ಲ.  ಕೊನೆಯದಾಗಿ 2021 ರಲ್ಲಿ ಬಂದ 'ಚೆಹ್ರೆ'ಯಲ್ಲಿ ಕಾಣಿಸಿಕೊಂಡಿದ್ದರು. 'ಮೇರೆ ಡ್ಯಾಡ್ ಕಿ ಮಾರುತಿ' ಮತ್ತು 'ಜಲೇಬಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ರಿಯಾ ಚಕ್ರವರ್ತಿ ಪ್ರಸ್ತುತ ತಮ್ಮ ಪಾಡ್‌ಕ್ಯಾಸ್ಟ್ 'ಚಾಪ್ಟರ್ 2' ನಲ್ಲಿ ಕೇಂದ್ರೀಕರಿಸಿದ್ದಾರೆ, ಇದರಲ್ಲಿ ಸುಷ್ಮಿತಾ ಸೇನ್ ಮತ್ತು ಆಮಿರ್ ಖಾನ್ ಭಾಗವಹಿಸಿದ್ದಾರೆ. 

Latest Videos
Follow Us:
Download App:
  • android
  • ios