Asianet Suvarna News Asianet Suvarna News

ಬಿಗ್‌ಬಾಸ್‌ ತೆಲುಗಿನಲ್ಲಿ ಹೆಚ್ಚು ಸಂಭಾವನೆ ಸೆಕ್ಸಿಯೆಸ್ಟ್ ವಿಷ್ಣುಪ್ರಿಯಾಗೆ, ಕಿಚ್ಚನ ಗೂಳಿಯಲ್ಲಿ ನಟಿಸಿದಾಕೆ!

ತೆಲುಗು ಬಿಗ್‌ಬಾಸ್‌ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರುವ ಸ್ಫರ್ಧಿ ಎಂದರೆ ಅದು ವಿಷ್ಣುಪ್ರಿಯಾ ಭೀಮನೇನಿ ಎನ್ನಲಾಗಿದೆ. ವಿಷ್ಣುಪ್ರಿಯ ವಾರಕ್ಕೆ ರೂ. 4 ಲಕ್ಷ ಸಂಭಾವನೆ ಪಡೆಯುತ್ತಿದ್ದಾರಂತೆ. ಕನ್ನಡದಲ್ಲಿ ಇವರು ಗೂಳಿ ಚಿತ್ರದಲ್ಲಿ ನಟಿಸಿದ್ದರು.

who is Vishnupriyaa bhimeneni  bigg boss telugu season 8 contestant gow
Author
First Published Sep 3, 2024, 6:44 PM IST | Last Updated Sep 3, 2024, 6:46 PM IST

ಈ ಬಾರಿಯ ತೆಲುಗು ಬಿಗ್‌ಬಾಸ್‌ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರುವ ಸ್ಫರ್ಧಿ ಎಂದರೆ ಅದು ವಿಷ್ಣುಪ್ರಿಯಾ ಭೀಮನೇನಿ ಎನ್ನಲಾಗಿದೆ. ವಿಷ್ಣುಪ್ರಿಯ ವಾರಕ್ಕೆ ರೂ. 4 ಲಕ್ಷ ಸಂಭಾವನೆ ಪಡೆಯುತ್ತಿದ್ದಾರಂತೆ. ಈ ಸೀಸನ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸ್ಪರ್ಧಿ ವಿಷ್ಣುಪ್ರಿಯ ಎನ್ನಲಾಗಿದೆ.  

ಅಸಲಿಗೆ ಈ ವಿಷ್ಣುಪ್ರಿಯ ಜನಪ್ರಿಯ ನಿರೂಪಕಿ, ನಟಿ, ದಯ ಎಂಬ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಗಾಗ  ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹಾಟ್‌ ಫೋಟೋಗಳನ್ನು ಹಾಕುತ್ತಿರುತ್ತಾರೆ. ಈಕೆಯ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. 

ವಿಷ್ಣು ಪ್ರಿಯ 1996 ಆಗಸ್ಟ್ 19ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಇವರ ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು. ವಿಷ್ಣು ಪ್ರಿಯಗೆ ಪಾವನಿ ಎಂಬ ತಂಗಿಯಿದ್ದಾರೆ. 28 ವರ್ಷದ ಈ ಸುಂದರಿ ಓದುತ್ತಲೇ ಮಾಡೆಲ್ ಕ್ಷೇತ್ರಕ್ಕೆ ಎಂಟ್ರಿ  ಕೊಟ್ಟ ಸುಂದರಿ. ಆನಂತರ ಟೆಲಿವಿಷನ್ ಶೋ ದ್ವಾರಾ ಬಹಳ ಜನಪ್ರಿಯತೆ ತಂದುಕೊಟ್ಟಿತು.

ಇಂಟರ್ನೆಟ್ಟಲ್ಲಿ ಸದ್ದು ಮಾಡ್ತಿದೆ ಬಿಗ್ ಬಾಸ್ ಸೀಸನ್ 11ರ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್… ನಿಮ್ಮ ಫೇವರಿಟ್ ಯಾರು?

2017ರಲ್ಲಿ  ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಪೋವೇ ಪೋರ' ಶೋನಲ್ಲಿ ಆ್ಯಂಕರ್ ಆಗಿ ಕೆಲಸ ಮಾಡಿದರು. ತೆಲುಗಿನಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದರು. ಬಳಿಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟು 2005ರಲ್ಲಿ ಮಲಯಾಳಂನಲ್ಲಿ ಮಯೂಖಂ ಎಂಬ ಚಿತ್ರದಲ್ಲಿ ನಟಿಸಿದರು. ಹಲವು ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಚೆಕ್‌ಮೇಟ್ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿ ಎಲ್ಲರ ಗಮನ ಸೆಳೆದರು. ಬಳಿಕ  'ದಯಾ' ವೆಬ್ ಸೀರೀಸ್‌ನಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.   

ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ 12ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ ವಿಷ್ಣು ಪ್ರಿಯ. ಟೆಲಿವಿಷನ್ ಸ್ಟಾರ್ ಆಗಿ ಅದ್ಭುತ ಸಾಧನೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ, ಮಲಯಾಳಂ, ಸಿನಿಮಾಗಳಲ್ಲಿ ಕೂಡ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಇನ್ನು ಎನ್ ಟಿ ಆರ್ 'ಯಮದೊಂಗ' ಸಿನಿಮಾದಲ್ಲಿ ಕೂಡ ಚಿಕ್ಕ ಪಾತ್ರದಲ್ಲಿ ನಟಿಸಿದ್ದಾರೆ ವಿಷ್ಣುಪ್ರಿಯ.  ಇತ್ತೀಚೆಗೆ ಅವರು 29ನೇ ವರ್ಷಕ್ಕೆ ಕಾಲಿಟ್ಟರು.

'ಏನ್ರಿ ಮೀಡಿಯಾ..' ಅಂದವನು ನ್ಯೂಸ್‌ ನೋಡಲು ಟಿವಿ ಕೊಡಿ ಅಂದ; ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ ಹೊಸ ಬೇಡಿಕೆ!

ವಿಷ್ಣು ಪ್ರಿಯ ನಟಿಸಿದ ಸಿನಿಮಗಳು ಮಲಯಾಳಂನಲ್ಲಿ  ಮಯೂಖಂ (2005), ತಮಿಳಿನಲ್ಲಿ  ಶಿವಪ್ಪತಿಗರಂ (2006), ತೆಲುಗಿನಲ್ಲಿ ಯಮದೊಂಗ (2007), ಕನ್ನಡದಲ್ಲಿ ಗೂಳಿ (2008). ವಿಷ್ಣು ಪ್ರಿಯ ಅವರಿಗೆ ಡ್ಯಾನ್ಸ್ ಅಂದರೆ ಬಹಳ ಇಷ್ಟ. ಅಡುಗೆ ಮಾಡುವುದು ಕೂಡ ಬಹಳ ಇಷ್ಟ. ವಿಷ್ಣು ಒಬ್ಬ ಆಹಾರ ಪ್ರಿಯೆ. ಇವರಿಗೆ ಬಹಳ ಇಷ್ಟವಾದ ಆಹಾರ ಚಾಕಲೇಟ್ ದೋಸೆ.  

ವಿಷ್ಣು ಪ್ರಿಯ 5.7 ಅಡಿ ಎತ್ತರ ಮತ್ತು 58 ಕೆಜಿ ತೂಕ ಇದ್ದಾರೆ.  ಇವರಿಗೆ ಬಹಳ ಇಷ್ಟವಾದ ನಟ ಮೆಗಾಸ್ಟಾರ್ ಚಿರಂಜೀವಿ. ಇನ್ನು ಪವರ್ ಸ್ಟಾರ್  ಪವನ್ ಕಲ್ಯಾಣ್ ಇಷ್ಟವಾದ ನಟ. ವಿಷ್ಣು ಪ್ರಿಯಗೆ ಹಾಡು ಕೇಳುವುದು ಅಂದರೆ ಬಹಳ ಇಷ್ಟ. ಇವರ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರು ಎ ಆರ್ ರೆಹಮಾನ್.  

ಇನ್ನು ವಿಷ್ಣು ಪ್ರಿಯ ಇತ್ತೀಚೆಗೆ ನಟ ಮಾನಸ್ ಜೊತೆ ಸೇರಿ ಒಂದು ಮ್ಯೂಸಿಕಲ್ ವಿಡಿಯೋ ಕೂಡ ಮಾಡಿದ್ದಾರೆ. ಆದರೆ ಈ ಮಧ್ಯೆ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ವಿಷ್ಣುಪ್ರಿಯ. ಆ ಸಮಯದಲ್ಲಿ ಇವರು ಹಲವು ವಿವಾದಗಳನ್ನು ಎದುರಿಸಿದ್ದರು. ಇವರ ಸೋಶಿಯಲ್ ಮೀಡಿಯಾ ಪೇಜ್ ಹ್ಯಾಕ್ ಆಗಿ ವಿಷ್ಣು ಪ್ರಿಯ ಡೀಪ್ ನೆಕ್ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು. ಆನಂತರ ಇವರು ಹೆಚ್ಚಾಗಿ ಕಾಣಿಸಿಕೊಳ್ಳುವುದನ್ನೇ ಬಿಟ್ಟುಬಿಟ್ಟರು. ಇದೀಗ ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ಸದ್ದು ಮಾಡಲು ಸಿದ್ಧರಾಗಿದ್ದಾರೆ. 

Latest Videos
Follow Us:
Download App:
  • android
  • ios