ಇಂದಿಗೂ 50ರ ಹರೆಯದ ಈ ನಟಿ ಮದುವೆಯಾಗದೆ ಉಳಿದಿರುವುದಕ್ಕೆ ಆ ನಟನ ಮೇಲಿನ ಪ್ರೇಮವೇ ಕಾರಣವೇ? ಅಥವಾ ವಿಧಿಯ ಆಟವೇ? ಎಂಬುದು ಮಾತ್ರ ನಿಗೂಢ. ಒಟ್ಟಿನಲ್ಲಿ, ಬೆಳ್ಳಿತೆರೆಯ ಮೇಲೆ ಅದ್ಭುತವಾಗಿ ಕಂಡ ಈ ಜೋಡಿ, ನಿಜ ಜೀವನದಲ್ಲಿ ಒಂದಾಗಲು ಸಾಧ್ಯವಾಗಲೇ ಇಲ್ಲ.

15 ವರ್ಷಗಳ ಮೌನ ಪ್ರೀತಿ ಮತ್ತು ಮದುವೆಯಾಗದ ನಟಿಯ ನಿಗೂಢ ಕಥೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿನಿಮಾ ರಂಗವೆಂದರೆ ಅಲ್ಲಿ ಕೇವಲ ಬಣ್ಣದ ಲೋಕವಷ್ಟೇ ಅಲ್ಲ, ಅದರ ಹಿಂದೆ ಸಾಲು ಸಾಲು ನೋವಿನ ಮತ್ತು ಕುತೂಹಲದ ಕಥೆಗಳಿರುತ್ತವೆ. ಟಾಲಿವುಡ್‌ನ 'ಕಿಂಗ್' ಅಕ್ಕಿನೇನಿ ನಾಗಾರ್ಜುನ (Nagarjuna) ಮತ್ತು ಬಾಲಿವುಡ್‌ನ ಗಂಭೀರ ನಟಿ ಟಬು (Tabu) ನಡುವಿನ ಸಂಬಂಧ ಇಂದಿಗೂ ಚಿತ್ರರಂಗದ ಅತಿದೊಡ್ಡ ರಹಸ್ಯಗಳಲ್ಲಿ ಒಂದು. ನಾಗಾರ್ಜುನ ಎರಡು ಬಾರಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರೆ, ಅವರಿಗಾಗಿ ಮುಂಬೈ ಬಿಟ್ಟು ಬಂದ ಟಬು ಮಾತ್ರ ಇಂದಿಗೂ 'ಸಿಂಗಲ್' ಆಗಿ ಉಳಿದಿರುವುದು ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸಿದೆ.

ನಾಗಾರ್ಜುನರ ವೈವಾಹಿಕ ಜೀವನ:

ನಾಗಾರ್ಜುನ ಅವರ ಜೀವನದಲ್ಲಿ ಇಬ್ಬರು ಮಹಿಳೆಯರ ಪ್ರವೇಶವಾಗಿತ್ತು. ಮೊದಲು 1984 ರಲ್ಲಿ ಲಕ್ಷ್ಮಿ ದಗ್ಗುಬಾಟಿ ಅವರನ್ನು ವರಿಸಿದ ನಾಗಾರ್ಜುನ, 1990 ರಲ್ಲಿ ಅವರಿಂದ ವಿಚ್ಛೇದನ ಪಡೆದರು. ಆನಂತರ 1992 ರಲ್ಲಿ ನಟಿ ಅಮಲಾ ಅವರನ್ನು ಪ್ರೀತಿಸಿ ವಿವಾಹವಾದರು. ಇಬ್ಬರು ಮಕ್ಕಳೊಂದಿಗೆ ನಾಗಾರ್ಜುನ ಸುಖಿ ಸಂಸಾರ ನಡೆಸುತ್ತಿದ್ದಾರೆ. ಆದರೆ, ಈ ಸುಂದರ ಸಂಸಾರದ ನಡುವೆಯೇ ಸಿನಿರಂಗದಲ್ಲಿ ಕೇಳಿಬರುತ್ತಿದ್ದ ಮತ್ತೊಂದು ಹೆಸರು 'ಟಬು'.

ಹೈದರಾಬಾದ್‌ಗೆ ಶಿಫ್ಟ್ ಆದ ಟಬು:

ಟಬು ಮತ್ತು ನಾಗಾರ್ಜುನ ಅವರ ನಡುವಿನ ಗೆಳೆತನ ಕೇವಲ ಸಿನಿಮಾಗೆ ಸೀಮಿತವಾಗಿರಲಿಲ್ಲ. ವರದಿಗಳ ಪ್ರಕಾರ, ಟಬು ನಾಗಾರ್ಜುನ ಅವರನ್ನು ಎಷ್ಟು ಆಳವಾಗಿ ಪ್ರೀತಿಸುತ್ತಿದ್ದರು ಎಂದರೆ, ಅವರಿಗಾಗಿ ತನ್ನ ಬಾಲಿವುಡ್ ಕೆರಿಯರ್ ಮತ್ತು ಮುಂಬೈ ಜೀವನವನ್ನು ಬದಿಗೊತ್ತಿ ಹೈದರಾಬಾದ್‌ಗೆ ಶಿಫ್ಟ್ ಆದರು. ನಾಗಾರ್ಜುನ ಅವರ ಮನೆಯ ಸಮೀಪದಲ್ಲೇ ಟಬು ಮನೆ ಖರೀದಿಸಿದ್ದರು ಎನ್ನುವ ಮಾತುಗಳು ಅಂದು ಗಾಂಧಿನಗರದಲ್ಲಿ ಜೋರಾಗಿ ಕೇಳಿಬರುತ್ತಿದ್ದವು.

15 ವರ್ಷಗಳ ಸುದೀರ್ಘ ಸಂಬಂಧಕ್ಕೆ ಅಂತ್ಯ ಹಾಡಿದ್ದೇಕೆ?

ನಾಗಾರ್ಜುನ ಮತ್ತು ಟಬು ಸುಮಾರು 15 ವರ್ಷಗಳ ಕಾಲ ಸಂಬಂಧದಲ್ಲಿದ್ದರು ಎನ್ನಲಾಗುತ್ತದೆ. ಟಬು ನಾಗಾರ್ಜುನ ಜೊತೆ ಜೀವನ ನಡೆಸಲು ಬಯಸಿದ್ದರು. ಆದರೆ ನಾಗಾರ್ಜುನ ಅವರಿಗೆ ಅದಾಗಲೇ ಮದುವೆಯಾಗಿತ್ತು ಮತ್ತು ಅವರು ತನ್ನ ಪತ್ನಿ ಅಮಲಾ ಅವರಿಗೆ ವಿಚ್ಛೇದನ ನೀಡಲು ತಯಾರಿರಲಿಲ್ಲ. ಒಂದು ಹಂತದಲ್ಲಿ ತನ್ನ ಭವಿಷ್ಯದ ಬಗ್ಗೆ ಯೋಚಿಸಿದ ಟಬು, ಈ "ಅಪೂರ್ಣ ಪ್ರೇಮಕಥೆ"ಗೆ ಅಂತಿಮವಾಗಿ ಮಂಗಳ ಹಾಡಿ ಮತ್ತೆ ಮುಂಬೈಗೆ ಮರಳಿದರು.

ಪತ್ನಿ ಮತ್ತು ಗೆಳತಿಯ ವಿಚಿತ್ರ ಬಂಧ:

ಇಲ್ಲಿನ ಅಚ್ಚರಿಯ ವಿಷಯವೆಂದರೆ, ನಾಗಾರ್ಜುನ ಪತ್ನಿ ಅಮಲಾ ಮತ್ತು ಟಬು ಇಬ್ಬರೂ ಆತ್ಮೀಯ ಗೆಳತಿಯರು! ಈ ವದಂತಿಗಳ ಬಗ್ಗೆ ಅಮಲಾ ಅವರನ್ನು ಕೇಳಿದಾಗಲೆಲ್ಲಾ ಅವರು ಅದನ್ನು ತಳ್ಳಿಹಾಕುತ್ತಿದ್ದರು. "ನನ್ನ ಮತ್ತು ನಾಗಾರ್ಜುನ ನಡುವೆ ಯಾವುದೇ ರಹಸ್ಯಗಳಿಲ್ಲ, ಟಬು ನಮ್ಮ ಕುಟುಂಬದ ಆತ್ಮೀಯ ಗೆಳತಿ" ಎಂದು ಹೇಳುತ್ತಾ ಈ ವಿವಾದಕ್ಕೆ ತೆರೆ ಎಳೆಯುತ್ತಿದ್ದರು.

ಇಂದಿಗೂ 50ರ ಹರೆಯದ ಟಬು ಮದುವೆಯಾಗದೆ ಉಳಿದಿರುವುದಕ್ಕೆ ನಾಗಾರ್ಜುನ ಮೇಲಿನ ಆ ಪ್ರೇಮವೇ ಕಾರಣವೇ? ಅಥವಾ ವಿಧಿಯ ಆಟವೇ? ಎಂಬುದು ಮಾತ್ರ ನಿಗೂಢ. ಒಟ್ಟಿನಲ್ಲಿ, ಬೆಳ್ಳಿತೆರೆಯ ಮೇಲೆ ಅದ್ಭುತವಾಗಿ ಕಂಡ ಈ ಜೋಡಿ, ನಿಜ ಜೀವನದಲ್ಲಿ ಒಂದಾಗಲು ಸಾಧ್ಯವಾಗಲೇ ಇಲ್ಲ. ಇದು ಚಿತ್ರರಂಗದ ಒಂದು "ಬ್ಯೂಟಿಫುಲ್ ಬಟ್ ಟ್ರಾಜಿಕ್" ಲವ್ ಸ್ಟೋರಿ ಎನ್ನಬಹುದು.