ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಇಡೀ ಜಗತ್ತನ್ನು ತನ್ನ ಹಿಡಿತದಲ್ಲಿರಿಸಿಕೊಂಡಿರುವ ಕೊರೋನಾ ಎಂಬ ಅತಿ ಕ್ರೂರ ಚೀನಿ ವೈರಾಣು ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡಿದೆ.ಅದರ ಬಲೆಯಲ್ಲಿ ಸಿಲುಕಿರುವ ಅದೆಷ್ಟೋ ಜನ ಈಗಲೂ ಹೊರಬರಲಾರದೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. 

ನಾಲ್ಕು ಬಾರಿ ಲಾಕ್ ಡೌನ್ ಮಾಡಿದರೂ ಈ ಕೊರೋನಾ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.ಸರ್ಕಾರ ಅದೆಷ್ಟೇ ಕ್ರಮಗಳನ್ನು ಕೈಗೊಂಡಿದ್ದಾರೆ ಆದರೂ ಈ ಬಲಿಷ್ಠ ವೈರಾಣುವಿನಿಂದ ತಪ್ಪಿಸಿಕೊಳ್ಳಲು ಆಗುತಿಲ್ಲ.

ಕೇಶ ರಹಸ್ಯ ಬಿಚ್ಚಿಟ್ಟ ಸಾಯಿ ಪಲ್ಲವಿ  

ಈ ನಡುವೆ ಭಾರತಕ್ಕೆ ಮತ್ತೊಂದು ಅಪರೂಪದ ಸಂಕಷ್ಟ ಎದುರಾಗಿದ್ದು ಉತ್ತರ ಭಾರತದ ಇದಕ್ಕೆ ಮೊದಲ ತುತ್ತಾಗಿದೆ.ಸರ್ಕಾರಕ್ಕೆ ಮತ್ತೊಂದು ದೊಡ್ಡ ಸವಾಲು ಎದುರಿಸುವ ಕಾಲ ಬಂದಿದೆ.ಹೌದು ಉತ್ತರ ಭಾರತದ ಮೇಲೆ ಸಾಮೂಹಿಕ ದಾಳಿ ನಡೆಸಿರುವ ಮಿಡತೆಗಳನ್ನು ಕಂಡು ಅಲ್ಲಿನ ಜನ ಭಯಭೀತರಾಗಿದ್ದಾರೆ. ಮೊದಲೇ ಕೊರೋನಾದಿಂದ ಕಂಗೆಟ್ಟಿದ್ದ ಜನ ಇದೀಗ ಈ ಸಮಸ್ಯೆಯಿಂದ ಮತ್ತಷ್ಟು ಕಂಗಾಲಾಗಿದ್ದಾರೆ.ಸದ್ಯ ಇಡೀ ದೇಶಕ್ಕೆ ಈ ಮಿಡತೆಗಳು ವ್ಯಾಪಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. 

ಕೋರೋನಾ ವೈರಸ್ ಮತ್ತು ಮಿಡತೆ ದಾಳಿಯ ಬಗ್ಗೆ ಈ ಹಿಂದೆಯೇ ತಮಿಳಿನಲ್ಲಿ ಎರಡು ಸಿನಿಮಾಗಳು ಬಂದಿದ್ದು ಎರಡೂ ಚಿತ್ರಗಳ್ಲಲೂ ನಾಯಕ ನಟನಾಗಿ ಅಭಿನಯಿಸಿದ್ದು ನಟ ಸೂರ್ಯ ಎನ್ನುವುದು ವಿಶೇಷ. 

ಬಿಕನಿ ಲುಕ್‌ನಲ್ಲಿ ಬಸಣ್ಣಿ

2011 ರಲ್ಲಿ ತೆರೆಕಂಡ ಖ್ಯಾತ ನಿರ್ದೇಶಕ ಎ ಆರ್ ಮುರುಗದಾಸ್ ನಿರ್ದೇಶನದ ಏಳಾಮ್ ಅರಿವು ಚಿತ್ರದಲ್ಲಿ ಚೈನಾ ದೇಶದ ಜನ ಭಾರತದ ಮೇಲೆ ಹೇಗೆ ಅಣುವಿನ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ತೋರಿಸಿದ್ದರೆ 2019 ರಲ್ಲಿ ಬಿಡುಗಡೆಯಾದ ಕೆವಿ ಆನಂದ್ ನಿರ್ದೇಶನದ ಕಾಪ್ಪನ್ ಸಿನಿಮಾದಲ್ಲಿ ಮಿಡತೆಗಳ ದಾಳಿಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. 

ಏಳಾಮ್ ಅರಿವು ಚಿತ್ರದ ಸೂರ್ಯ ಜೊತೆ ನಾಯಕಿಯಾಗಿ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದರು ಮತ್ತು ಕಾಪ್ಪನ್ ಚಿತ್ರದಲ್ಲಿ ಸೂರ್ಯ ಜೊತೆ ಭಾರತ ಕಂಡ ಶ್ರೇಷ್ಠ ನಟ ಮೋಹಲ್ ಲಾಲ್ ಕೂಡ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈ ಚೀನಿ ಅಣುವಿನ ದಾಳಿಯನ್ನು ಹೇಗೆ ಎದುರಿಸಬೇಕು ಅದಕ್ಕೆ ಬೋಧಿಧರ್ಮದಲ್ಲಿ ಇರುವ ಪರಿಹಾರದ ಬಗ್ಗೆ ತೋರಿಸುವ ಪ್ರಯತ್ನ ಮಾಡಿದ್ದರು ನಿರ್ದೇಶಕ ಮುರುಗದಾಸ್ ಅಲ್ಲದೆ ನಟ ಸೂರ್ಯ ತಮ್ಮಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು. 

ಪ್ಯಾಟೇ ಹುಡುಗಿ ಹಳ್ಳಿ ಲೈಫ್ ವಿನ್ನರ್ ಅಪಘಾತದಲ್ಲಿ ಸಾವು

ಬೋಧಿಧರ್ಮದ  ವಿಶೇಷತೆಗಳು, ಅದರಲ್ಲಿರುವ ಸಮಸ್ಯೆಗಳಿಗೆ ಪರಿಹಾರಗಗಳನ್ನೂ ಅರ್ಥಗರ್ಭಿತವಾಗಿ ತೋರಿಸಿರುವ  ನಿರ್ದೇಶಕ ಮುರುಗದಾಸ್ ಮತ್ತು ಈ ಕಥೆಗಳನ್ನು ಒಪ್ಪಿಕೊಂಡು ಅದ್ಭುತವಾಗಿ ನಟಿಸಿರುವ ಸೂರ್ಯ ಅವರ ಧೈರ್ಯವನ್ನು ಎಲ್ಲಾರೂ ಮೆಚ್ಚುವಂತ ವಿಷಯವೇ. 

ತಮ್ಮ ಪ್ರತಿ ಸಿನಿಮಾದಲ್ಲೂ ಒಂದೊಂದು ವಿಶೇಷ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಸೂರ್ಯ ಈ ಎರಡೂ ಚಿತ್ರಗಳಲ್ಲೂ ವಿಶೇಷ ಅನುಭವ ನೀಡುತ್ತಾರೆ.ಈ ಸಿನಿಮಾಗಳಲ್ಲಿ ತೋರಿಸಿರುವಂತೆ ಎರಡೂ ವಿಚಿತ್ರ ಸಮಸ್ಯೆಗಳಾದ ಕೊರೊನ ವೈರಾಣು ಮತ್ತು  ಸೀಲಿಫೆರಾದಂಥ ಮಿಡತೆ  ಸದ್ಯ ಭಾರತಕ್ಕೆ ಕಾಲಿಟ್ಟು ಆತಂಕ ಉಂಟುಮಾಡಿ ಜನ ಭಯ ಭೀತರಾಗಿದ್ದಾರೆ.ಭಾರತಕ್ಕೆ ಎದುರಾದ ಕಂಟಕದ ಬಗ್ಗೆ ಸೂಚಿಸಿದ್ದ ಸಿನಿಮಾಗಳಿವು!