ಕೋಟಿ ಬಜೆಟ್‌ ಸಿನಿಮಾ ಬಾಕ್ಸಾಫೀಸಿನಲ್ಲಿ ಫ್ಲಾಪ್‌; ಸಂಕಷ್ಟದಲ್ಲಿದ್ದ ಡಿಸ್ಟ್ರಿಬ್ಯೂಟರ್ಸ್‌ಗೆ ಹಣ ಹಂಚಿದ್ರು ಈ ನಟ!

ಕೋಟಿ ಕೋಟಿ ಬಜೆಟ್ ಹಾಕಿದ ಸಿನಿಮಾಗಳು ಸಹ ಫ್ಲಾಪ್ ಆಗಿಬಿಡುತ್ತವೆ. ಕೆಲವು ನಟರು ಹೀಗೆ ಹೈ ಬಜೆಟ್‌ನ ಸಿನಿಮಾ ಸೋತಾಗ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಅಥವಾ ಈಗಾಗಲೇ ಪಡೆದ ಸಂಭಾವನೆಯಲ್ಲಿ ಸ್ಪಲ್ಪ ಭಾಗವನ್ನು ಹಿಂದಿರುಗಿಸಿ ಬಿಡುತ್ತಾರೆ. ಹಾಗೆಯೇ ಈ ನಟ ತಮ್ಮ ಕೋಟಿ ಬಜೆಟ್‌ನ ಈ ಸಿನಿಮಾ ಸೋತಾಗ ಡಿಸ್ಟ್ರಿಬ್ಯೂಟರ್ಸ್‌ಗೆ ಹಣ ಹಂಚಿದ್ರು.

Superstar Rajanikanth returned money to distributors after his movie flopped badly Vin

ಚಿತ್ರರಂಗ ಅಂದ್ಮೇಲೆ ಅಲ್ಲಿ ಕೆಲವೊಂದು ಸಿನಿಮಾಗಳು ಸೂಪರ್‌ಹಿಟ್ ಆಗುತ್ತವೆ. ಇನ್ನು ಕೆಲವು ಫ್ಲಾಪ್ ಆಗಿ ಬಿಡುತ್ತವೆ. ಸೋಲು-ಗೆಲುವು ಅನ್ನೋದು ಸಿನಿಮಾರಂಗದ ಭಾಗವಾಗಿದೆ. ಅದೆಷ್ಟೋ ಸೂಪರ್‌ಸ್ಟಾರ್ ನಟರು ಸಹ ಕೆಲವೊಮ್ಮೆ ದೊಡ್ಡ ಹಿನ್ನಡೆಯನ್ನು ಅನುಭವಿಸುತ್ತಾರೆ. ಕೋಟಿ ಕೋಟಿ ಬಜೆಟ್ ಹಾಕಿದ ಸಿನಿಮಾಗಳು ಸಹ ಫ್ಲಾಪ್ ಆಗಿಬಿಡುತ್ತವೆ. ಸ್ಟಾರ್‌ ನಟ-ನಟಿಯರಿದ್ದು, ಉತ್ತಮ ಹಾಡು, ಮ್ಯೂಸಿಕ್ ಇರೋ ಸಿನಿಮಾ ಸಹ ನೆಲಕಚ್ಚಿದ್ದೂ ಇದೆ. ಕೆಲವು ನಟರು ಹೀಗೆ ಹೈ ಬಜೆಟ್‌ನ ಸಿನಿಮಾ ಸೋತಾಗ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಅಥವಾ ಈಗಾಗಲೇ ಪಡೆದ ಸಂಭಾವನೆಯಲ್ಲಿ ಸ್ಪಲ್ಪ ಭಾಗವನ್ನು ಹಿಂದಿರುಗಿಸಿ ಬಿಡುತ್ತಾರೆ.

ಹಾಗೆಯೇ ದಕ್ಷಿಣಭಾರತದಲ್ಲಿ ಸೂಪರ್‌ಸ್ಟಾರ್‌ ಎಂದು ಕರೆಸಿಕೊಳ್ಳೋ ಈ ನಟ ತಮ್ಮ ಸಿನಿಮಾವೊಂದು ಫ್ಲಾಪ್ ಆದಾಗ, ತಮ್ಮ ಡಿಸ್ಟ್ರಿಬ್ಯೂಟರ್‌ಗಳಿಗೆ ಹಣವನ್ನು ಹಂಚಿದ್ದರು. ಆ ನಟ (Actor) ಮತ್ಯಾರೂ ಅಲ್ಲ ಅಭಿಮಾನಿಗಳ ಪ್ರೀತಿಯ ತಲೈವಾ ರಜನೀಕಾಂತ್‌. 160ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಈ ನಟನ ಸಿನಿಮಾವನ್ನು ಪ್ರೇಕ್ಷಕರು ತಿರಸ್ಕರಿಸಿದ ಸಮಯವಿತ್ತು. ಬಾಬಾ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಎಂದು ಗುರುತಿಸಿಕೊಂಡಿತು. ಈ ಸಂದರ್ಭದಲ್ಲಿ ರಜನೀಕಾಂತ್‌ ಸಿನಿಮಾ ವಿತರಕರಿಗೆ (Distributors) ಹಣವನ್ನು ನೀಡಿದರು.

ಒಂದೇ ಚಿತ್ರದಲ್ಲಿ ನಟಿಸಿ ಭರ್ತಿ 1800 ಕೋಟಿ ಗಳಿಸಿದ ನಟ; ಆ ನಂತ್ರ ಆರು ವರ್ಷದಿಂದ ಮಾಡಿದ ಸಿನ್ಮಾವೆಲ್ಲಾ ಫ್ಲಾಪ್‌!

ಬಾಕ್ಸಾಫೀಸಿನಲ್ಲಿ ನೆಲ ಕಚ್ಚಿದ ರಜನೀಕಾಂತ್ ಅಭಿನಯದ 'ಬಾಬಾ' ಸಿನಿಮಾ
2002ರಲ್ಲಿ ಬಿಡುಗಡೆಯಾದ, ಸುರೇಶ್ ಕ್ರಿಸ್ನಾ ನಿರ್ದೇಶನದ 'ಬಾಬಾ' ಚಿತ್ರದಲ್ಲಿ ರಜನೀಕಾಂತ್‌ ನಟಿಸಿದ್ದಾರೆ. ಚಿತ್ರದಲ್ಲಿ ಮನೀಶಾ ಕೊಯಿರಾಲಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಲನಚಿತ್ರವು ವರ್ಷದ ಬಹು ನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ, ಇದು ಋಣಾತ್ಮಕ ವಿಮರ್ಶಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಇದು ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಮೇಲೂ ಪರಿಣಾಮ ಬೀರಿತು. ವಿತರಕರು ತಮ್ಮ ನಷ್ಟವನ್ನು ಮರುಪಡೆಯಲು ಸಹಾಯ ಮಾಡಲು ರಜನಿಕಾಂತ್ ನೆರವು ನೀಡಬೇಕಾಯಿತು.

ಮಾಧ್ಯಮ ವರದಿಗಳ ಪ್ರಕಾರ, ಹೆಚ್ಚಿನ ಬಜೆಟ್‌ನ ಬಾಬಾ ಸಿನಿಮಾವನ್ನು ವಿತರಕರಿಗೆ 17 ಕೋಟಿ ರೂಪಾಯಿಗಳ ದಾಖಲೆ ಬೆಲೆಗೆ ಮಾರಾಟ ಮಾಡಲಾಗಿತ್ತು. ಆದರೆ ಚಿತ್ರವು ಕೇವಲ 3 ಕೋಟಿ ರೂ. ಗಳಿಸಿತು. ಸಿನಿಮಾ ಬಾಕ್ಸಾಫೀಸಿನಲ್ಲಿ ನೆಲಕಚ್ಚಿತು. ಬಾಬಾ ಅವರ ಸೋಲಿನ ನಂತರ, ರಜನಿಕಾಂತ್ ವಿತರಕರ ನಷ್ಟವನ್ನು ಸರಿದೂಗಿಸಲು ಸ್ವಯಂಪ್ರೇರಿತವಾಗಿ ಮುಂದಾದರು. ವರದಿಯ ಪ್ರಕಾರ, ರಜನಿಕಾಂತ್ ಸುಮಾರು 25% ಹೂಡಿಕೆಯನ್ನು ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.

ಬರೋಬ್ಬರಿ 25 ಫ್ಲಾಪ್‌ ಸಿನ್ಮಾ ಮಾಡಿದ್ರೂ ಈ ನಟನನ್ನು ಫ್ಯಾನ್ಸ್ ಸೂಪರ್‌ಸ್ಟಾರ್ ಅಂತಾನೆ ಕರೆದ್ರು!

ವರ್ಷಗಳ ನಂತರ 'ಬಾಬಾ' ರಜಿನಿ ಹಿಟ್‌ ಸಿನಿಮಾವೆಂದು ಗುರುತಿಸಲ್ಪಟ್ಟಿತು. ಡಿಸೆಂಬರ್ 10, 2022ರಂದು ಸೂಪರ್‌ಸ್ಟಾರ್‌ ಹುಟ್ಟುಹಬ್ಬದ ಎರಡು ದಿನಗಳ ಮೊದಲು ಚಲನಚಿತ್ರವನ್ನು ಡಿಜಿಟಲ್ ಆಗಿ ಮರು ಬಿಡುಗಡೆ ಮಾಡಲಾಯಿತು. ಅಚ್ಚರಿಯೆಂದರೆ, ಈ ಚಿತ್ರವು ಜನಸಾಮಾನ್ಯರಲ್ಲಿ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಎಬಿಪಿ ವರದಿಯ ಪ್ರಕಾರ, ಚಿತ್ರವು ತಮಿಳುನಾಡು ಮತ್ತು ಇತರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿತು. ಜನಜಂಗುಳಿ ಹೆಚ್ಚಿದ ಕಾರಣ ಸ್ಕ್ರೀನ್‌ಗಳನ್ನು 200 ರಿಂದ 300ಕ್ಕೆ ಹೆಚ್ಚಿಸಲಾಯಿತು.

ಇತ್ತೀಚಿಗೆ ರಜನಿಕಾಂತ್ ಅಭಿನಯಿಸಿದ 'ಜೈಲರ್‌' ಬರೋಬ್ಬರಿ 650 ಕೋಟಿ ಗಳಿಸಿ ತಲೈವಾ ಅಭಿನಯದ ಸೂಪರ್‌ಹಿಟ್ ಸಿನಿಮಾವೆಂದು ಗುರುತಿಸಿಕೊಂಡಿದೆ. 'ಲಾಲ್ ಸಲಾಮ್' ಮತ್ತು 'ತಲೈವರ್' ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ರಜನೀಕಾಂತ್ ಬಿಝಿಯಾಗಿದ್ದಾರೆ.

Latest Videos
Follow Us:
Download App:
  • android
  • ios