ಬರೋಬ್ಬರಿ 25 ಫ್ಲಾಪ್ ಸಿನ್ಮಾ ಮಾಡಿದ್ರೂ ಈ ನಟನನ್ನು ಫ್ಯಾನ್ಸ್ ಸೂಪರ್‌ಸ್ಟಾರ್ ಅಂತಾನೆ ಕರೆದ್ರು!
ಬಾಲಿವುಡ್‌ನಲ್ಲಿ ಕೆರಿಯರ್ ಆರಂಭಿಸಿದ ಎಲ್ಲರೂ ಸಕ್ಸಸ್ ಆಗುವುದಿಲ್ಲ. ಇಲ್ಲಿ ಯಶಸ್ವೀಯಾಗಲು ಪ್ರತಿಭೆಯ ಜೊತೆಗೆ ಅದೃಷ್ಟ ಸಹ ಚೆನ್ನಾಗಿರಬೇಕು. ಆದರೆ ಇಷ್ಟಪಟ್ಟು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಈ ನಟನಿಗೆ ಗೆಲುವು ಅಷ್ಟು ಸುಲಭವಾಗಿ ಸಿಗಲ್ಲಿಲ್ಲ. ಅಭಿನಯಿಸಿದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆದವು. ಆದರೂ ಅಭಿಮಾನಿಗಳು ಇವರನ್ನು ಸೂಪರ್ ಸ್ಟಾರ್ ಎಂದೇ ಕರೆದರು.
ಬಾಲಿವುಡ್‌ನಲ್ಲಿ ಕೆರಿಯರ್ ಆರಂಭಿಸಿದ ಎಲ್ಲರೂ ಸಕ್ಸಸ್ ಆಗುವುದಿಲ್ಲ. ಇಲ್ಲಿ ಯಶಸ್ವೀಯಾಗಲು ಪ್ರತಿಭೆಯ ಜೊತೆಗೆ ಅದೃಷ್ಟ ಸಹ ಚೆನ್ನಾಗಿರಬೇಕು. ಆದರೆ ಇಷ್ಟಪಟ್ಟು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಈ ನಟನಿಗೆ ಗೆಲುವು ಅಷ್ಟು ಸುಲಭವಾಗಿ ಸಿಗಲ್ಲಿಲ್ಲ. ಅಭಿನಯಿಸಿದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆದವು. ಆದರೂ ಅಭಿಮಾನಿಗಳು ಇವರನ್ನು ಸೂಪರ್ ಸ್ಟಾರ್ ಎಂದೇ ಕರೆದರು.
ನಾವಿಲ್ಲಿ ಹೇಳ್ತಾ ಇರೋದು 60 ರ ದಶಕದ ಪ್ರಸಿದ್ಧ ನಟ ಶಮ್ಮಿ ಕಪೂರ್ ಬಗ್ಗೆ. ಅದ್ಭುತ ನಟನೆ, ನೃತ್ಯ ಮತ್ತು ಆಕ್ಷನ್‌ನಿಂದ ಅನೇಕ ಅಭಿಮಾನಿಗಳ ಗಮನವನ್ನು ಸೆಳೆದಿದ್ದರು. ಅವರ ನಟನಾ ಶೈಲಿಯು ಎಷ್ಟು ವಿಶಿಷ್ಟವಾಗಿತ್ತು ಎಂದರೆ ಮೊಹಮ್ಮದ್ ರಫಿ ಶಮ್ಮಿ ಕಪೂರ್‌ಗಾಗಿ ಹಾಡುವ ವಿಧಾನವನ್ನು ಬದಲಾಯಿಸಬೇಕಾಯಿತು.
Shammi kapoor
ಆದರೆ ಶಮ್ಮಿ ಕಪೂರ್ ಅವರ ವೃತ್ತಿಜೀವನದ ಆರಂಭದಲ್ಲಿ 25 ಫ್ಲಾಪ್ ಚಲನಚಿತ್ರಗಳನ್ನು ನೀಡಿದ್ದರು. ಅಭಿನಯಿಸಿದ ಸಿನಿಮಾಗಳು ಸಾಲು ಸಾಲಾಗಿ ಸೋತು ಹೋದವು. ಪತ್ನಿ ನಿಧನರಾದರು. ಆದರೂ ನಟ ಹಿಂಜರಿಯಲ್ಲಿಲ್ಲ. ವರ್ಷಗಳ ಪರಿಶ್ರಮದ ನಂತರ ಸೂಪರ್ ಹಿಟ್ ಸಿನಿಮಾ ನೀಡಿದರು.
ಶಮ್ಮಿ ಕಪೂರ್ ಆರಂಭದಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಲು ಬಯಸಿದ್ದರು. ಆದರೆ ಕಲಿಯಲು ಕಷ್ಟವಾದ ಕಾರಣ, ಹೆಚ್ಚು ಮಾರ್ಕ್ಸ್ ದೊರೆಯದ ಕಾರಣ ಸಿನಿಮಾದಲ್ಲಿ ಅಭಿನಯಿಸಲು ನಿರ್ಧರಿಸಿದರು. ಶಮ್ಮಿ ಕಪೂರ್ ನಂತರ ತಮ್ಮ ತಂದೆಯ ಪೃಥ್ವಿ ಥಿಯೇಟರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 1964ರಲ್ಲಿ 'ರಾಜಕುಮಾರ' ಚಿತ್ರದಲ್ಲಿ ಕೆಲಸ ಮಾಡಿದರು.
1969ರ ಬ್ಲಾಕ್‌ಬಸ್ಟರ್ ಚಿತ್ರ 'ಆರಾಧನಾ' ಗೆ ರಾಜೇಶ್ ಖನ್ನಾ ಮೊದಲ ಆಯ್ಕೆಯಾಗಿರಲಿಲ್ಲ. ನಿರ್ದೇಶಕ ಶಕ್ತಿ ಸಮಂತ್ ಈ ಚಿತ್ರದಲ್ಲಿ ಶಮ್ಮಿ ಕಪೂರ್ ಕೆಲಸ ಮಾಡಬೇಕೆಂದು ಬಯಸಿದ್ದರು. ಆದರೆ ಆ ಸಮಯದಲ್ಲಿ ಶಮ್ಮಿ ಅವರ ಪತ್ನಿ ಗೀತಾ ಬಾಲಿ ನಿಧನರಾದರು. ಹೀಗಾಗಿ ಶಮ್ಮಿ ಕಪೂರ್ ಈ ಸಿನಿಮಾದಲ್ಲಿ ಅಭಿನಯಿಸಲ್ಲಿಲ್ಲ. ರಾಜೇಶ್ ಖನ್ನಾ ಈ ಮೂವಿಯಲ್ಲಿ ಅಭಿನಯಿಸಿದರು. ಸಿನಿಮಾ ಹಿಟ್ ಆಗುವುದರ ಜೊತೆಗೇ ಸೂಪರ್‌ಸ್ಟಾರ್ ಆದರು.
ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಶಮ್ಮಿ ಕಪೂರ್ ಹಲವಾರು ಫ್ಲಾಪ್ ಚಿತ್ರಗಳನ್ನು ಮಾಡಿದ್ದರು. 1957ರಲ್ಲಿ ಬಿಡುಗಡೆಯಾದ 'ತುಮ್ಸಾ ನಹಿ ದೇಖಾ' ಮೂವಿ ಸೂಪರ್ ಹಿಟ್ ಆಯಿತು. ಇದರ ನಂತರ, 1957 ರಿಂದ 1971ರ ವರೆಗೆ, ನಟ 'ದಿಲ್ ದೇಕೆ ದೇಖೋ' ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
'ಜಂಗ್ಲೀ', 'ಉಜಾಲಾ', 'ಚೀನಾ ಗೇಟ್', 'ಜಾನ್ವಾರ್' ಮತ್ತು 'ಕಾಶ್ಮೀರ್ ಕಿ ಕಲಿ'. ಶಮ್ಮಿ ಕಪೂರ್ ಅವರ ಕೊನೆಯ ಪ್ರಮುಖ ಪಾತ್ರವಾಗಿದೆ. 1981ರಲ್ಲಿ 'ಅಂದಾಜ್' ಸಿನಿಮಾದಲ್ಲಿ ಅಭಿನಯಿಸಿದರು. ಅವರ ಅಭಿನಯದ ಕೊನೆಯ ಚಿತ್ರ 'ರಾಕ್‌ಸ್ಟಾರ್'.
ಹಲವಾರು ಫ್ಲಾಪ್ ಸಿನಿಮಾಗಳನ್ನು ನೀಡಿದರೂ ಶಮ್ಮಿ ಕಪೂರ್ ಅಭಿಮಾನಿಗಳ ಪಾಲಿಗೆ ಸೂಪರ್‌ಸ್ಟಾರ್ ಆಗಿದ್ದರು. ಶಮ್ಮಿ ಕಪೂರ್ ತೆಗೆದುಕೊಂಡ ಒಂದು ನಿರ್ಧಾರ ರಾಜೇಶ್ ಖನ್ನಾ ಅವರನ್ನು ಸಹ ಸೂಪರ್‌ಸ್ಟಾರ್ ಮಾಡಿತು