ಕಪ್ಪು ಡ್ರೆಸ್‌ನಲ್ಲಿ ಕಂಗೊಳಿಸಿದ ಶ್ವೇತಾ ಚಂಗಪ್ಪ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ
ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದು, ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ 1 ಸೀಸನ್ 2 ರಿಯಾಲಿಟಿ ಶೋ ನಲ್ಲಿ ಶ್ವೇತಾ ಚಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆ ಮಾಡುತ್ತಿದ್ದಾರೆ.
ಜೋಡಿ ನಂ 1 ಸೀಸನ್ 2 ನಿರೂಪಣೆಗಾಗಿ ಈ ಬಟ್ಟೆ ಧರಿಸಿದ್ದು, ಶ್ವೇತಾರ ಲುಕ್ ಗೆ ಅವರ ಫಾಲೋವರ್ಸ್ ಫಿದಾ ಆಗಿದ್ದು, ಕಮೆಂಟ್ ಮಾಡಿದ್ದಾರೆ.
ಶ್ವೇತಾ ಚಂಗಪ್ಪ ಕಪ್ಪು ಬಣ್ಣದ ಕ್ರಾಪ್ ಟಾಪ್ ಲೆಹಂಗಾ ಧರಿಸಿದ್ದು, ಲವ್ಲಿ , ರಿಯಲ್ ಬ್ಯೂಟಿ ಅಂತೆಲ್ಲ ಕಮೆಂಟ್ ,ಮಾಡಿದ್ದಾರೆ.
ಇನ್ನೂ ಕೆಲವರು ಶ್ವೇತಾ ಲುಕ್‌ಗೆ, ಲುಕ್ಕಿಂಗ್ ಕ್ಯೂಟ್, ಏಜೆಂಲ್ , ಸೋ ಕ್ಯೂಟ್ ಬಂಗಾರ ಅಂತೆಲ್ಲ ತರಹೇವಾರಿ ಕಮೆಂಟ್ ಮಾಡಿದ್ದಾರೆ.
ಶ್ವೇತಾ ಚಂಗಪ್ಪ ಸ್ವತಃ ಫ್ಯಾಷನ್ ಬಗ್ಗೆ ಒಲವು ಹೊಂದಿದವರಾಗಿದ್ದು, ತನ್ನದೇ ಆದ ತಾರಾ ಡಿಸೈನರ್ ವೇರ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.
ಇತ್ತೀಚೆಗೆ ಶ್ವೇತಾ ಚಂಗಪ್ಪ ತಮ್ಮ ಪುಟಾಣಿ ಮಗ ಜಿಯಾನ್ ಜೊತೆ ಕುಳಿತು ಅವನು ಮುದ್ದಾಗಿ ಮಾತನಾಡುವ ಕನ್ನಡ ಪದಗಳನ್ನು ತಮ್ಮ ಅಭಿಮಾನಿ ಬಳಗದ ಮಂದಿಟ್ಟಿದ್ದರು.
ಕಳೆದ 20 ವರ್ಷಗಳಿಂದ ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರೀಯರಾಗಿರುವ ಶ್ವೇತಾ ಚಂಗಪ್ಪಗೆ ವಯಸ್ಸೇ ಆಗದಂತೆ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.
ಶ್ವೇತಾ ಚಂಗಪ್ಪ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರೀಯವಾಗಿದ್ದಾರೆ. ಹೆಚ್ಚಾಗಿ ತಮ್ಮ ಫ್ಯಾನ್ಸ್‌ಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕನೆಕ್ಟ್ ಆಗಿರುತ್ತಾರೆ.
ತನ್ನ ಹವ್ಯಾಸಗಳು, ವೃತ್ತಿ-ಪ್ರವೃತ್ತಿ ಮತ್ತು ಫ್ಯಾಮಿಲಿ ಮೆಂಬರ್ಸ್ ಎಲ್ಲವನ್ನೂ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುವ ಶ್ವೇತಾ ಚಂಗಪ್ಪ ಬಗ್ಗೆ ಹಲವರಿಗೆ ವಿಶೇಷ ಅಭಿಮಾನ ಹಾಗೂ ಅಕ್ಕರೆ.
ಒಟ್ಟಿನಲ್ಲಿ, ಕನ್ನಡದ ನಟಿ-ನಿರೂಪಕಿ ಆಗಿ ಜನಪ್ರಿಯತೆ ಗಳಿಸಿರುವ ಶ್ವೇತಾ ಚಂಗಪ್ಪಅವರನ್ನು ಬಹಳಷ್ಟು ಅಭಿಮಾನಿಗಳು ಸಂತೂರ್ ಮಮ್ಮಿ ಎಂದು ಕರೆಯುವ ಮೂಲಕ ಅವರ ಸೌಂದರ್ಯವನ್ನು ಸಹ ಇಷ್ಟಪಟ್ಟು ಹೊಗಳುತ್ತಾರೆ.