ಸೌತ್‌ ಕೊರಿಯಾದಲ್ಲಿ ಇದೇ ಮೊದಲ ಬಾರಿ ಸಣ್ಣ ಅವಧಿಯಲ್ಲಿ ಮೂವರು ಸ್ಟಾರ್ ನಟರು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಪೊಲೀಸ್‌ ವರದಿ ಪ್ರಕಾರ ಮಂಗಳವಾರ ಚಾ ಇನ್‌ ಮನೆಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಜಾಕೆಟ್ ಬಿಚ್ಚಿ ಎದೆ ಸೀಳು ತೋರಿಸಿದ 'ಗಂಡ-ಹೆಂಡತಿ' ನಟಿ!

ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ಚಾ 'ಸರ್ಪ್ರೈಸ್‌ ಯು' ಎಂಬ ಹುಡುಗರ ಬ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆ ನಂತರ ಹೆಸರು 'ಲೀ ಜಾ-ಹೋ' ಎಂದು ಬದಲಾಯಿಸಿಕೊಂಡು ನಟನಾಗಿ ವೃತ್ತಿ ಆರಂಭಿಸಿದ್ದರು.

ಸಾಯುವ ಹಿಂದಿನ ದಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳಿಗೆ ಒನ್‌ ಲೈನ್‌ ಮೆಸೇಜ್‌ ನೀಡಿದ್ದರು, 'Everyone be careful not to catch cold' ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಚಾ ಏಜನ್ಸಿ ಸಾವಿನ ವಿಚಾರದ ಬಗ್ಗೆ ತಪ್ಪಾಗಿ ವದಂತಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ರಪ್ ರಪ್ ಅಂತ ಉತ್ತರ ಕೊಡುವ ರ‍್ಯಾಪಿಡ್ ರಶ್ಮಿ ಅಸಲಿ ಕಹಾನಿಯಿದು!

ಈ ಹಿಂದೆ ಕೆ-ಪಾಪ್ ತಂಡದ 28 ವರ್ಷದ ಗಾಯಕಿ ಗೂ-ಹರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿತ್ತು. ತನಿಖೆ ನಂತರ ಆಕೆ ಸಾಮಾಜಿಕ ಜಾಲತಾಣದ ನಿಂದನೆಗೆ ಒಳಗಾಗಿದ್ದಳು ಎಂದು ತಿಳಿದು ಬಂದಿತ್ತು.. ಇದಾದ ನಂತರ ಕೆ-ಪಾಪ್ ತಂಡದ 25 ವರ್ಷದ ಸುಲ್ಲಿ ಸೈಬರ್ ಬುಲ್ಲಿಂಗ್ ತಡೆಯಲಾರದೆ ಮನೆಯಲ್ಲಿ ಸಾವಿಗೀಡಾಗಿದ್ದಾರೆ.

ಕೆ-ಪಾಪ್‌ ತಂಡದವರು ಒಬ್ಬೊಬ್ಬರಾಗಿ ಮೃತಪಡುತ್ತಿರುವುದು ಸೌತ್‌ ಕೋರಿಯನ್‌ ಮಾಧ್ಯಮದಲ್ಲಿ ಚರ್ಚೆಗೀಡಾಗಿದೆ.

'ಶೃಂಗಾರದ ಹೊಂಗೇ ಮರ'ದ ಹುಡುಗಿ ತುಂಡು ಬಟ್ಟೆ ಗಿಟ್ಟಿಸಿತು ನೆಟ್ಟಿಗರ ಗಮನ!