ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ ಸುದೀಪ್ ಪರ ನಿಂತಿದ್ದಾರೆ. 'ಅಜಯ್ ದೇವಗನ್ ನಿಮ್ಮ ಹಿಂದಿ ಟ್ವೀಟ್ ಗೆ ಕನ್ನಡದಲ್ಲಿ ಉತ್ತರ ನೀಡಿದ್ದರೆ ಏನು ಗತಿ. ಉತ್ತರ, ದಕ್ಷಿಣ ಅಂತ ಯಾವುದೇ ಭೇದಭಾವವಿಲ್ಲ, ಮೊದಲು ಭಾರತ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು' ಎಂದಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಮತ್ತು ಬಾಲಿವುಡ್ ನಟ ಅಜಯ್ ದೇವಗನ್( Ajay devgan) ನಡುವಿನ ರಾಷ್ಟ್ರಭಾಷೆ ಕಿಡಿ ದೇಶದಾದ್ಯಂತ ಸದ್ದು ಮಾಡುತ್ತಿದೆ. ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ ಮಾತಿಗೆ ಅಜಯ್ ದೇವಗನ್ ಟ್ವಿಟ್ಟರ್ ಮೂಲಕ ಕಿಡಿ ಕಾರಿದ್ದರು. ಅಜಯ್ ದೇವಗನ್ ಟ್ವೀಟ್ ಗೆ ಖಡಕ್ ಪ್ರತಿಕ್ರಿಯೆ ನೀಡಿ ಬಳಿಕ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದ್ರು ಸುದೀಪ್. ಆದರೆ ಇಬ್ಬರು ಸ್ಟಾರ್ ನಟರ ನಡುವೆ ರಾಷ್ಟ್ರಭಾಷಾ ಚರ್ಚೆ ಕ್ಷಣಾರ್ಧದಲ್ಲಿ ವೈರಲ್ ಆಗಿ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಯಿತು.

ಅಜಯ್ ದೇವಗನ್ ವಿರುದ್ಧ ಕನ್ನಡಿಗರು ಮಾತ್ರವಲ್ಲದೆ ಅನೇಕ ದಕ್ಷಿಣ ಭಾರತದ ಸ್ಟಾರ್ಸ್ ಅಜಯ್ ಹೇಳಿಕೆಯನ್ನು ಖಂಡಿಸಿದರು. ಅಲ್ಲದೆ ಅಜಯ್ ದೇವಗನ್ ಅವರಿಗೆ ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವಾ ಎಂದು ಕಿಡಿಕಾರುತ್ತಿದ್ದಾರೆ. ಕನ್ನಡ ಕಲಾವಿದರು, ಸ್ಟಾರ್ ಮಾತ್ರವಲ್ಲದೆ ಪರಭಾಷೆಯಿಂದಲೂ ಕಿಚ್ಚನ ಹೇಳಿಕೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಸ್ಯಾಂಡಲ್ ವುಡ್ ಕಲಾವಿದರ ಜೊತೆಗೆ ರಾಜಕಾರಣಿಗಳು ಸಹ ಸುದೀಪ್ ಪರ ನಿಂತಿದ್ದಾರೆ. ಸುದೀಪ್ ಅವರ ಮಾತಿಗೆ ಕನ್ನಡದ ನಟ ನೀನಾಸಂ ಸತೀಶ್ (Ninasam Satish), ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (siddaramaiah), ನಟಿ ಹಾಗೂ ರಾಜಕಾರಣಿ ರಮ್ಯಾ (Ramya) ಸೇರಿದಂತೆ ಹಲವರು ಸುದೀಪ್ ಮಾತಿಗೆ ದನಿಗೂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದಾರೆ.

ಇದೀಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ ಸುದೀಪ್ ಪರ ನಿಂತಿದ್ದಾರೆ. 'ಅಜಯ್ ದೇವಗನ್ ನಿಮ್ಮ ಹಿಂದಿ ಟ್ವೀಟ್ ಗೆ ಕನ್ನಡದಲ್ಲಿ ಉತ್ತರ ನೀಡಿದ್ದರೆ ಏನು ಗತಿ. ಉತ್ತರ, ದಕ್ಷಿಣ ಅಂತ ಯಾವುದೇ ಭೇದಭಾವವಿಲ್ಲ, ಮೊದಲು ಭಾರತ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು' ಎಂದಿದ್ದಾರೆ.

ಅಜಯ್ ದೇವಗನ್ ಗೆ ಸುದೀಪ್ ಟ್ವೀಟ್ ಏಟು, ಬೆಂಬಲಕ್ಕೆ ನಿಂತ ದಕ್ಷಿಣ ಭಾರತ!

'ಸದ್ಯ ಬಾಲಿವುಡ್ ಮತ್ತು ದಕ್ಷಿಣ ಎಂದು ವಾರ್ ನಡೆಯುತ್ತಿರುವ ಸಮಯದಲ್ಲಿ ಶಾಂತವಾಗಿರಲು ಸಾಧ್ಯವಿಲ್ಲ' ಎಂದು ರಾಮ್ ಗೋಪಾಲ್ ವರ್ಮಾ ಸರಣಿ ಟ್ವೀಟ್ ಮಾಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

Scroll to load tweet…

'ದಕ್ಷಿಣ ಭಾರತದವರು ಭಾರತದ ಎಲ್ಲಾ ಭಾಷೆಯನ್ನು ಗೌರಿಸುತ್ತಾರೆ. ಆದರೆ ಕೇವಲ ಗುಟ್ಕಾ ಜನರು ಮಾತ್ರ ಎಲ್ಲಾ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡುತ್ತಿದ್ದಾರೆ. ಗುಟ್ಕಾ ಪೀಪಲ್ ದಯವಿಟ್ಟು ಜನಗನಮನ ರಾಷ್ಟ್ರಗೀತೆಯನ್ನು ಅರ್ಥಮಾಡಿಕೊಳ್ಳಿ. ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ಹಿಂದಿಯೂನಿವರ್ಸಿಟಿಯನ್ನು ಅಲ್ಲ' ಎಂದು ಹೇಳಿದ್ದಾರೆ.

Scroll to load tweet…

ಇನ್ನು ನಟಿ ಮೇಘನಾ ಗಾವಂಕರ್ ಪ್ರತಿಕ್ರಿಯೆ ನೀಡಿ, 'ಕಿಚ್ಚ ಸುದೀಪ್ ಸ್ಟಾರ್ ನಿಮಗೆ ಅಪಾರ ಗೌರವ. ನಾವು ಕನ್ನಡಿಗರು, ಭಾರತೀಯರು ಮತ್ತು ಪ್ರಮುಖವಾಗಿ ಮನುಷ್ಯ ಎಂದು ಹೆಮ್ಮೆಯಾಗುತ್ತಿದೆ. ನೀವು ತುಂಬ ಅರ್ಥಪೂರ್ಣವಾಗಿ ಹೇಳಿದ್ದೀರಿ. ನಾವು ನೀವಾಗಿರುವುದಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ.

Scroll to load tweet…