Sonali Bendre: ಮಧ್ಯರಾತ್ರಿ ಕರೆ ಮಾಡಿ ಓಡಿಹೋಗೋಣ ಬಾ ಎಂದ: ಭಯಾನಕ ಅನುಭವ ಬಿಚ್ಚಿಟ್ಟ ನಟಿ
ಒಂದು ಕಾಲದಲ್ಲಿ ಸೋನಾಲಿ ಬೇಂದ್ರೆ ಮತ್ತು ಸುನೀಲ್ ಶೆಟ್ಟಿ ಜೋಡಿ ಸೂಪರ್ಹಿಟ್ ಆಗಿತ್ತು. ಆದರೆ ಇವರ ನಡುವೆ ಸಂಬಂಧದ ಗಾಳಿಸುದ್ದಿ ಹರಡಿ ಆದ ಆವಾಂತರಗಳ ಕುರಿತು ಸೋನಾಲಿ ಮಾತನಾಡಿದ್ದಾರೆ.
ಸೋನಾಲಿ ಬೇಂದ್ರೆ (Sonali Bendre) 90 ರ ದಶಕದ ಟಾಪ್ ನಟಿಯರಲ್ಲಿ ಒಬ್ಬರು. ಅವರು 1994 ರ ಚಲನಚಿತ್ರ 'ಆಗ್' ನಲ್ಲಿ ಪದಾರ್ಪಣೆ ಮಾಡಿದರು, ನಂತರ ಅವರು 'ಮೇಜರ್ ಸಾಬ್', 'ಝಕ್ಮ್', 'ಸರ್ಫರೋಶ್' ಮತ್ತು 'ಹಮ್ ಸಾಥ್ ಸಾಥ್ ಹೈ' ನಂತಹ ಕೆಲವು ಸ್ಮರಣೀಯ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅನೇಕ ನಟರ ಜೊತೆ ಇವರು ನಟಿಸಿದ್ದರೂ ಕೆಲವರ ಜೊತೆ ಇವರ ಹೆಸರು ಥಳಕು ಹಾಕಿಕೊಂಡಿತ್ತು. ಅದರಲ್ಲಿ ಮುಖ್ಯವಾಗಿ ನಟ ಸುನೀಲ್ ಶೆಟ್ಟಿ. ಸುನೀಲ್ ಶೆಟ್ಟಿ ಅವರೊಂದಿಗಿನ ಸಂಬಂಧದ ಬಗ್ಗೆ ಚರ್ಚೆಗಳು ನಡೆದವು. 'ಟಕ್ಕರ್', 'ರಕ್ಷಕ' (Rakshak) ಮತ್ತು 'ಸಪೂತ್' ಚಿತ್ರಗಳಲ್ಲಿ ಸುನಿಲ್ ಶೆಟ್ಟಿ ಜೊತೆ ಸೋನಾಲಿ ಬೇಂದ್ರೆ ಜೋಡಿಯು ಸಕತ್ ಹಿಟ್ ಆಗಿತ್ತು. ಅವರ ಸಂಬಂಧದ ಚರ್ಚೆಗಳು ಆಫ್-ಸ್ಕ್ರೀನ್‌ನಲ್ಲಿ ನಡೆಯಲು ಪ್ರಾರಂಭಿಸಿದ್ದವು. ಸುನಿಲ್ ಶೆಟ್ಟಿ (Sunil Shetty) ಮದುವೆಯಾದಾಗ ಮತ್ತು ಸೋನಾಲಿ ಬೇಂದ್ರೆ ಒಂಟಿಯಾಗಿರುವಾಗ ಅವರ ಪ್ರಣಯದ ವದಂತಿಗಳು ಪ್ರಾರಂಭವಾದವು. ವದಂತಿಗಳು ತಮ್ಮ ಸ್ನೇಹ ಮತ್ತು ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ನಟಿ 'ಸ್ಟಾರ್ಡಸ್ಟ್' ಜೊತೆಗಿನ ಸಂಭಾಷಣೆಯಲ್ಲಿ ನಟಿ ಸೋನಾಲಿ ಹೇಳಿಕೊಂಡಿದ್ದರು. 'ಸುನಿಲ್ ಮತ್ತು ನನ್ನ ನಡುವೆ ಟೆನ್ಷನ್ ಹೆಚ್ಚಿತ್ತು. ಆರಂಭದಲ್ಲಿ ನಾವು ವದಂತಿಗಳಿಗೆ ನಗುತ್ತಿದ್ದೆವು. ಅದನ್ನು ತಮಾಷೆಯಾಗಿ ಸ್ವೀಕರಿಸುತ್ತಿದ್ದೆವು. ಆದರೆ ಇದೇ ನಿಜ ಎಂಬಂತೆ ಸುದ್ದಿಯಾಗುತ್ತಿದ್ದಂತೆಯೇ ಬಹಳ ಭಯವಾಗಲು ಶುರುವಾಯಿತು. ಇದು ತಮಾಷೆಯಲ್ಲ ಎಂದು ಸೀರಿಯಸ್ ಆಗಿ ತೆಗೆದುಕೊಂಡೆವು. ಇಷ್ಟೇ ಅಲ್ಲದೇ, ಇದು ನಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು' ಎಂದು ಸೋನಾಲಿ ಹೇಳಿದ್ದಾರೆ.
'ಆಗ ನಾನಿನ್ನೂ ಒಂಟಿಯಾಗಿದ್ದೆ. ಆದರೆ ಸುನೀಲ್ ಅವರಿಗೆ ಮದುವೆಯಾಗಿತ್ತು. ಅದು ನನಗಿಂತಲೂ ಅವರ ಬದುಕಿನ ಮೇಲೆ ಬಹಳ ಗಂಭೀರ ಪರಿಣಾಮ ಬೀರಿತ್ತು ಎನ್ನುವುದನ್ನು ನಾನು ಊಹಿಸಬಲ್ಲೆ' ಎಂದಿರುವ ನಟಿ, ಅಪರಿಚಿತ ವ್ಯಕ್ತಿಯೊಬ್ಬ ತನಗೆ ಕರೆ ಮಾಡಿ ಮಧ್ಯರಾತ್ರಿ (Mid night) ಮಾತನಾಡಿದ್ದ ಭಯಾನಕ ಘಟನೆಯನ್ನು ವಿವರಿಸಿದ್ದಾರೆ. ಒಬ್ಬರ ವ್ಯಕ್ತಿ ರಾತ್ರಿ ಎರಡು ಗಂಟೆಯ ಹೊತ್ತಿಗೆ ಸೋನಾಲಿ ಅವರಿಗೆ ಕರೆ ಮಾಡಿದ್ದನಂತೆ. ಇಬ್ಬರೂ ಓಡಿಹೋಗೋಣ ಬಾ. ನನಗೆ ಈ ಮದುವೆ ಇಷ್ಟ ಇಲ್ಲ ಎಂದು ಹೇಳಿರುವ ಕುರಿತು ವಿಷಯ ಬಹಿರಂಗಪಡಿಸಿದ್ದಾರೆ ಸೋನಾಲಿ.
ಮದ್ವೆಗಾಗಿ ಮತಾಂತರಗೊಂಡಿದ್ರಾ ಖುಷ್ಬೂ? ಟ್ರೋಲಿಗರ ಪ್ರಶ್ನೆಗೆ ಹೀಗ್ ಹೇಳಿದ್ರು ನಟಿ
'ತಾನು ಸುನೀಲ್ ಶೆಟ್ಟಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ರಾತ್ರಿ 2 ಗಂಟೆಗೆ ಕರೆ ಮಾಡಿದ್ದ. ಮಧ್ಯರಾತ್ರಿ ಯಾರಾದರೂ ನಿಮಗೆ ಕರೆ ಮಾಡಿದರೆ ಅದು ತಮಾಷೆ ಅಲ್ಲ ಎಂದೇ ಅನ್ನಿಸುವುದು ಉಂಟು. ಆದ್ದರಿಂದ ಫೋನ್ ರಿಂಗ್ ಆದಾಗ ಗಾಬರಿಯಿಂದ ಫೋನ್ ರಿಸೀವ್ ಮಾಡಿದ್ದೆ. ಆತ ಅಲ್ಲಿದ್ದ ವ್ಯಕ್ತಿ. ನಾನು ಸುನೀಲ್ ಶೆಟ್ಟಿ. ಮದುವೆ ಸಾಕಾಗಿದೆ ನನ್ನ ಜೊತೆ ಓಡಿ ಬಾ' ಎಂದ. ಅದು ಫೇಕ್ ಎಂದು ತಿಳಿಯುತ್ತಲೇ ಕೋಪದಿಂದ ಫೋನ್ ಕುಕ್ಕಿದೆ ಎಂದು ನಟಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಸುನೀಲ್ ಶೆಟ್ಟಿ ಜೊತೆ ನಿನ್ನ ತಂಗಿಗೆ ಸಂಬಂಧ (Relation) ಇದ್ಯಾ ಎಂದು ನನ್ನ ಅಕ್ಕನಿಗೆ ಕಾಲೇಜಿನಲ್ಲಿ ನೇರವಾಗಿ ಕೇಳುತ್ತಿದ್ದರಂತೆ. ಇದು ನನ್ನ ಕುಟುಂಬಕ್ಕೂ ಬಹಳ ಮುಜುಗರ ತಂದಿತ್ತು ಎಂದರು. ಇನ್ನು ಕೆಲವರಂತೂ ತೀರಾ ಕೆಳಮಟ್ಟಕ್ಕೆ ಹೋಗಿದ್ದರು. ನಿಮ್ಮ ಮಗಳಿಗೆ ಬಿಡಿ ಯಾರ ಜೊತೆ ಸಂಬಂಧವಿದ್ದರೂ ಪರವಾಗಿಲ್ಲ. ನಿಮಗಂತೂ ಹಣ ಸಿಗುತ್ತಿದೆ. ನಿಮ್ಮ ಮಗಳು ಯಾವುದೇ ನಟನ ಜೊತೆ ಏನು ಮಾಡಿದರೂ ಈಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಿದ್ದರು. ಇದರಿಂದ ನಾನು ಜರ್ಜರಿತಳಾಗಿದ್ದೆ. ಕುಟುಂಬದವರಿಗೂ ಸಾಕು ಸಾಕಾಗಿ ಹೋಗಿತ್ತು ಎಂದಿದ್ದಾರೆ.
ಇಂತಹ ಸಂಗತಿಗಳು ನನ್ನನ್ನು ತುಂಬಾ ಬಾಧಿಸುತ್ತಿದ್ದವು. ನಾನು ಅಳುತ್ತಿದ್ದೆ. ಇದರ ನಡುವೆಯೇ ಸುನೀಲ್ ಶೆಟ್ಟಿ ಜೊತೆಗೆ ತಬ್ಬಿಕೊಳ್ಳುವ ಫೋಟೋಶೂಟ್ (Photoshoot) ಮಾಡಿಕೊಳ್ಳಬೇಕಾಗಿ ಬಂತು. ನನಗೆ ಇವೆಲ್ಲಾ ವಿಷಯಗಳು ಕಣ್ಮುಂದೆ ಬಂದು ವಿಚಿತ್ರವಾಗಿ ವರ್ತಿಸಿದೆ. ಸುನೀಲ್ ಅವರನ್ನು ತಳ್ಳುತ್ತಿದ್ದೆ. ಇದರಿಂದಾಗಿ ಸುನೀಲ್ ಅವರೇ ನನ್ನನ್ನು ಮುಟ್ಟಲು ನಿರಾಕರಿಸುತ್ತಿದ್ದರು ಎಂದಿದ್ದಾರೆ.
Janhvi Kapoor: ಮೇಲೆ-ಕೆಳಗೆ ಸರಿ ಮಾಡ್ಕೊಂಡೇ ಮುಗೀತಿಲ್ವಲ್ಲಾ ತಾಯೀ ಎಂದು ನಟಿ ಟ್ರೋಲ್
ಈಗ ಸೋನಾಲಿ ಅವರಿಗೆ 48 ವರ್ಷ ವಯಸ್ಸು. ಸದ್ಯ ಸೋನಾಲಿ ಬೇಂದ್ರೆ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುನೀಲ್ ಶೆಟ್ಟಿ 61 ನೇ ವಯಸ್ಸಿನಲ್ಲಿ OTT ಗೆ ಪದಾರ್ಪಣೆ ಮಾಡುವ ಮೂಲಕ ಸ್ಪ್ಲಾಶ್ ಮಾಡಿದ್ದಾರೆ. 'ಧಾರವಿ ಬ್ಯಾಂಕ್' ಮತ್ತು 'ಹಂಟರ್' ನಂತಹ ಶೋಗಳಲ್ಲಿ ಅವರ ಕೆಲಸವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.