Janhvi Kapoor: ಮೇಲೆ-ಕೆಳಗೆ ಸರಿ ಮಾಡ್ಕೊಂಡೇ ಮುಗೀತಿಲ್ವಲ್ಲಾ ತಾಯೀ ಎಂದು ನಟಿ ಟ್ರೋಲ್​

ಅವಾರ್ಡ್​ ಫಂಕ್ಷನ್​ ಒಂದರಲ್ಲಿ ಉದ್ದನೆಯ ಗೌನ್​ ತೊಟ್ಟು ಪಡಬಾರದ ಕಷ್ಟ ಪಟ್ಟ ನಟಿ ಜಾಹ್ನವಿ ಕಪೂರ್​. ಟ್ರೋಲಿಗರು ಹೇಳಿದ್ದೇನು?
 

Janhvi Kapoor saves herself from major embarrassing moment in THIS body hugging gown

ಚಿತ್ರ ನಟಿಯರು ಎಂದರೆ ಹಾಗೆ ಅಲ್ವೆ? ಫಂಕ್ಷನ್​ಗಳಿಗೆ ಹೋಗುವಾಗ ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್​ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್​ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಕೆಲವೊಮ್ಮೆ ಹೀಗೆ ಆದರೆ ಟ್ರೋಲ್​ ಆಗಿ ಸಕತ್​ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್​ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ. ಡ್ರೆಸ್​ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.

ಈಗ ಅಂಥದ್ದೇ ಒಂದು ಘಟನೆ ನಡೆದಿರುವುದು ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ (Janhvi Kapoor) ಅವರಿಗೆ.  ಫ್ಯಾಷನ್ ಇವೆಂಟ್ ಒಂದಕ್ಕೆ ತೆರಳಿದ್ದ ನಟಿ, ಉದ್ದದ ಗೌನ್​ ಧರಿಸಿ ಪಡಬಾರದ ಕಷ್ಟ ಪಟ್ಟಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ರೆಡ್​ಕಾರ್ಪೆಟ್ ಮೇಲೆ  ಹೆಜ್ಜೆ ಹಾಕಲು ರೆಡಿಯಾದ ನಟಿಗೆ ಆರಂಭಕ್ಕೂ ಮೊದ್ಲೇ ವಿಘ್ನವಾಯಿತು.  ಏಕೆಂದ್ರೆ ಅವರು ಧರಿಸಿದ್ದ  ಟೈಟ್ ಗೌನ್ ಕಾಲಿಗೆ ಎಡವುತ್ತಿತ್ತು.  ತಾವು ಹಾಕಿದ  ಬಟ್ಟೆಯಿಂದಲೇ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಬಂತು.   

Kangana to Janhvni: ಈ ಬಾಲಿವುಡ್​ ಮಂದಿ ಹೊಟ್ಟೆಗೇನು ತಿಂತಾರೆ?

ಜಾಹ್ನವಿ ಕಪೂರ್ ಹಾಕಿದ್ದ ಗೌನ್ ತುಂಬಾ ಉದ್ದ ಇತ್ತು. ಹೀಗಾಗಿ ಒಂದಷ್ಟು ಭಾಗ ನೆಲಕ್ಕೆ ಉದ್ದನೆ ಹಾಸಿತ್ತು. ಅವರು ನಡೆಯಲು ಮುಂದಾದಾಗ  ಡ್ರೆಸ್ ಕಾಲಿಗೆ ಸಿಗುತ್ತಿತ್ತು. ಅವರ ಪಿಎ ಅದನ್ನು ಸರಿ ಮಾಡಿದರೂ ನಡಿಯಲು ನಟಿ ಕಷಟಪಟ್ಟರು. ಒಂದು ಕ್ಷಣದಲ್ಲಿ ಅವರು  ಬೀಳುವವರಾಗಿದ್ದರು. ಆದರೆ, ಹೇಗೋ ಸುಧಾರಿಸಿಕೊಂಡರು. ಇದು ಅನೇಕ ಬಾರಿ ಉದ್ದನೆಯ ಗೌನ್​ ಮುಜುಗರ ತಂದಿತು. ಇನ್ನು ವೇದಿಕೆ ಮೇಲೇರುತ್ತಿದ್ದಂತೆಯೇ ತಮ್ಮ ದೇಹದ ಮೇಲಿದ್ದಡ್ರೆಸ್​ ಅನ್ನು ಮೇಲಕ್ಕೆ ಎತ್ತಿ ಸರಿಮಾಡಿಕೊಳ್ಳುತ್ತಾ ಮತ್ತಷ್ಟು ಗಮನ ಸೆಳೆದರು.
 
ಇದರ ವಿಡಿಯೋ ವೈರಲ್​ ಆಗುತ್ತಲೇ ಸಕತ್​ ಟ್ರೋಲ್​ಗೆ ಒಳಗಾಗಿದ್ದಾರೆ. ಗುಡಿಸಲು ಬೇರೆ ಜನರು ಇದ್ರಲ್ಲಾ, ನೀವ್ಯಾಕೆ ಗೌನ್​ನಿಂದ ಗುಡಿಸಲು ಹೋದ್ರಿ ಎಂದು ಒಬ್ಬಾತ ಪ್ರಶ್ನಿಸಿದರೆ, ಏನಮ್ಮಾ ತಾಯಿ, ಮೇಲೆ ಕೆಳಗೆ ಸರಿ ಮಾಡಿಕೊಂಡೇ ಮುಗೀತಿಲ್ವಲ್ಲಾ ನಿಂದು, ಮೊದ್ಲೇ ಎಲ್ಲಾ ಸರಿಯಾಗಿ ಪ್ರಾಕ್ಟೀಸ್​  ಮಾಡಿ ಬರಬಾರದಾ ಎಂದು ಕೇಳಿದರು. ಇನ್ನು ಕೆಲವರು ಇವೆಲ್ಲಾ ಅಟೆನ್ಷನ್​ ಸೀಕಿಂಗ್​ ಸ್ಟಂಟ್​ಗಳು ಅಷ್ಟೇ. ಚಿತ್ರಗಳೆಲ್ಲಾ ತೋಪೆದ್ದು ಹೋಗಿದ್ದಕ್ಕೆ ಹೀಗೆ ಸುದ್ದಿಯಾಗಲು ನೋಡ್ತಿದ್ದಾರೆ ಎಂದರು. ಇನ್ನು ಕೆಲವರು ಇನ್ನೊಬ್ಬರನ್ನು ನೋಡಿ ಹೀಗೆಲ್ಲಾ ಡ್ರೆಸ್​ ಮಾಡಿಕೊಳ್ಳೋದು ಸರಿಯಲ್ಲ, ನಿಮಗೆ ಸೂಟ್​ ಆಗತ್ತಾ ಅಂತ ನೋಡಿಕೊಂಡು ಡ್ರೆಸ್​ ಹೊಲಿಸಿಕೊಳ್ಳಬೇಕಮ್ಮಾ ಎಂದಿದ್ದಾರೆ. ಶ್ರೀದೇವಿಯವರ ಮಗಳಾಗಿ ಬರಿ  ಬಿಕಿನಿ ತೊಟ್ಟು ತೊಟ್ಟು ಅಭ್ಯಾಸವಾಗಿರೋ ಕಾರಣ, ಉದ್ದನೆಯ ಡ್ರೆಸ್​ ಪಾಪ ಕಾಪಾಡಿಕೊಳ್ಳಲು ಬರಲ್ಲ ಎಂದು ಇನ್ನು ಕೆಲವರು ಜಾಹ್ನವಿಯ ಕಾಲೆಳೆದಿದ್ದಾರೆ.  

Janhvi Kapoor: ಬಾಯ್​ಫ್ರೆಂಡ್​ ಜೊತೆ ಮತ್ತೆ 'ಸೆರೆ'ಯಾದ ಶ್ರೀದೇವಿ ಪುತ್ರಿ
  
ಜಾನ್ವಿ ಕಪೂರ್ ಅವರು ಸದ್ಯ ಜೂನಿಯರ್ ಎನ್​ಟಿಆರ್ ಅವರ 30ನೇ ಸಿನಿಮಾಗೆ ನಾಯಕಿ ಆಗಿದ್ದಾರೆ. ಈ ಚಿತ್ರದ ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.  ಈ ಚಿತ್ರದ ಮೂಲಕ ಅವರು ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ.  

Latest Videos
Follow Us:
Download App:
  • android
  • ios