ಮದ್ವೆಗಾಗಿ ಮತಾಂತರಗೊಂಡಿದ್ರಾ ಖುಷ್ಬೂ? ಟ್ರೋಲಿಗರ ಪ್ರಶ್ನೆಗೆ ಹೀಗ್ ಹೇಳಿದ್ರು ನಟಿ

ನಿರ್ದೇಶಕ ಸುಂದರ್​ ಸಿ ಅವರನ್ನು ಮದುವೆಯಾಗಲು ನಟಿ ಖುಷ್ಬೂ ಮತಾಂತರಗೊಂಡಿದ್ರಾ? ಈ ಪ್ರಶ್ನೆಗೆ ನಟಿಯ ದಿಟ್ಟ ಉತ್ತರ ಹೀಗಿದೆ. 
 

Khushbu Sundar Replies To Trolls Claiming She Converted To Marry Husband Sundar C

ಈಗ ಮತಾಂತರದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ The Kerala Story. ಹುಡುಗಿಯರು ಹಾಗೂ ಯುವತಿಯರನ್ನು ಮತಾಂತರಗೊಳಿಸಿ ಅವರನ್ನು ಹೇಗೆ ಉಗ್ರ ಸಂಘಟನೆಗಳಿಗೆ ಕಳುಹಿಸಲಾಗುತ್ತಿದೆ ಎಂಬ ಕಥಾಹಂದರವುಳ್ಳ ಈ ಚಿತ್ರ ಬಿಡುಗಡೆಗೂ ಮುನ್ನವೇ ಬಹಳ ಸದ್ದು ಮಾಡಿದೆ. ಈಗ ಬಿಡುಗಡೆಯಾದ ಮೇಲೂ ಅಲ್ಲಲ್ಲಿ ಇದರ ವಿರುದ್ಧ ಟೀಕೆಗಳು ಕೇಳಿಬರುತ್ತಿದೆ. ಇದರ ನಡುವೆಯೇ, ಮತಾಂತರದ ಘಟನೆಗಳು  ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಲೇ ಇವೆ. ಇನ್ನು ಸಿನಿ ಇಂಡಸ್ಟ್ರಿಯ ಇತಿಹಾಸ ಕೆದಕಿದರೂ ಬಹಳ ಹಿಂದಿನಿಂದಲೂ ಹಿಂದೂ, ಕ್ರೈಸ್ತ ನಟಿಯರು   ಇಸ್ಲಾಂ ಧರ್ಮದ ಯುವಕನ ಜೊತೆ ಮದುವೆಯಾಗಿದ್ದನ್ನು ನೋಡಬಹುದು. ಇದಾಗಲೇ ಮದುವೆಯಾದವರ ಜೊತೆ ಎರಡನೆಯ, ಮೂರನೆಯ ಪತ್ನಿಯಾಗಿ (Wife) ಹೋಗಿರುವ ಉದಾಹರಣೆಗಳೂ ಇವೆ.   ಅವರಲ್ಲಿ ಕೆಲವರು ಮತಾಂತರಗೊಂಡ ಮೇಲೆ ತಮಗಾಗಿರುವ ಕಹಿ ಅನುಭವಗಳನ್ನು ಇದಾಗಲೇ ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದರೆ, ಇನ್ನು ಕೆಲವರು ನೆಮ್ಮದಿಯ  ಸಂಸಾರ ಮಾಡಿಕೊಂಡಿದ್ದಾರೆ.

ನೆಮ್ಮದಿಯಿಂದ ಸಂಸಾರ ನಡೆಸುತ್ತಿರುವವರಲ್ಲಿ ಒಬ್ಬರು ಬಹುಭಾಷಾ ನಟಿ ಖುಷ್ಬೂ. 80-90ರ ದಶಕದಲ್ಲಿ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಖುಷ್ಬೂ. ಕನ್ನಡಿಗರು ಇವರನ್ನು ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವುದು  ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಜೊತೆ ನಟಿಸಿದ ಸಿನಿಮಾಗಳ ಮೂಲಕ. ಈ ಜೋಡಿಯ ರಣಧೀರ, ಅಂಜದ ಗಂಡು ಮತ್ತು ಯುಗ ಪುರುಷ ಚಿತ್ರಗಳಲ್ಲಿ ರವಿಚಂದ್ರನ್-ಖುಷ್ಬೂ ಜೋಡಿ ಕೆಲಸ ಮಾಡಿತ್ತು. ರವಿಚಂದ್ರನ್ ನಿರ್ದೇಶನದ ಶಾಂತಿ ಕ್ರಾಂತಿ ಚಿತ್ರ ಸಕತ್​ ಹಿಟ್​ ಆಗಿತ್ತು. ಈಗ ಪುನಃ ಈ ಜೋಡಿ  ಥ್ರಿಲ್ಲರ್ ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ, ಈ ಸಿನಿಮಾವನ್ನು  ಗುರುರಾಜ್ ಕುಲಕರ್ಣಿ ನಿರ್ದೇಶಕ ಮಾಡಲಿದ್ದಾರೆ ಎನ್ನಲಾಗಿದೆ. 

ಹಲವರ ನಿದ್ದೆಗೆಡಿಸಿರೋ ದಿ ಕೇರಳ ಸ್ಟೋರಿ ಎರಡು ದಿನಗಳಲ್ಲಿ ಗಳಿಸಿದ್ದೆಷ್ಟು?

ಈಗ 52 ವರ್ಷ ತುಂಬಿರುವ ನಟಿ ಖುಷ್ಬೂ ದಿ ಕೇರಳ ಸ್ಟೋರಿ (The Kerala Story) ಚಿತ್ರದ ಬಳಿಕ ಮತ್ತೆ ಸುದ್ದಿ ಮಾಡುತ್ತಿರುವುದಕ್ಕೆಕಾರಣ, ಮುಸ್ಲಿಂ ಧರ್ಮದ ನಟಿ ಹಿಂದೂ ಯುವಕನನ್ನು ವರಿಸಿ ಮದುವೆಯಾಗಿರುವುದಕ್ಕೆ! ಹೌದು.  ಬಿಜೆಪಿಯಲ್ಲಿ ಸದ್ಯ ಗುರುತಿಸಿಕೊಂಡಿರುವ ಖುಷ್ಬೂ  ತಮಿಳುನಾಡಿನಲ್ಲಿ ಸಕ್ರಿಯರಾಗಿರುವ ನಡುವೆಯೇ ಅವರಿಗೆ ಈಗ  ಮತಾಂತರದ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ.  'ದಿ ಕೇರಳ ಸ್ಟೋರಿ' ರಿಲೀಸ್ ಆಗುತ್ತಿದ್ದಂತೆ ಖುಷ್ಬೂಗೆ ಮದುವೆಗಾಗಿ ಮತಾಂತರಗೊಂಡಿದ್ದೀರಾ? ಎಂದು ಪ್ರಶ್ನೆ ಅವರಿಗೆ ಎದುರಾದಾಗ ನಟಿ ಹೇಳಿದ್ದೇನು ಎನ್ನುವುದೇ ಕುತೂಹಲವಾದದ್ದು.
 
ತಮಗೆ ಪ್ರಶ್ನೆ ಮಾಡುವವರಿಗೆ ನಟಿ ಟ್ವೀಟ್​ ಮೂಲಕ ಖಡಕ್​ ಉತ್ತರ ನೀಡಿದ್ದಾರೆ.  ಅಷ್ಟಕ್ಕೂ ಇವರು ತಮಿಳು ನಿರ್ದೇಶಕ ಸುಂದರ್ ಸಿ. ಅವರನ್ನು ಮದುವೆಯಾಗಿ 23 ವರ್ಷಗಳೇ ಕಳೆದಿವೆ. ಈಗ ಅವರಿಗೆ ಈ ಪ್ರಶ್ನೆಯನ್ನು ಕೇಳಲಾಗಿದೆ. ಸಿನಿಮಾರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಖುಷ್ಬೂ  ಸುಂದರ್ ಸಿ ಅವರನ್ನು ವಿವಾಹವಾದರು. ಮುಸ್ಲಿಂ ಧರ್ಮದವರಾದ ಖುಷ್ಬೂ ಸುಂದರ್ ಅವರನ್ನು ಮದುವೆ ಆಗುವುದಕ್ಕಾಗಿ ಮತಾಂತರಗೊಂಡಿದ್ದಾರೆ ಎಂದು ಟೀಕೆ ಮಾಡಲಾಗಿತ್ತು. ಈ ಟೀಕೆ ಖುಷ್ಬೂ (Khushboo) ಖಾರಾವಾಗಿ ಪ್ರತಿಕ್ರಿಯಿಸಿದ್ದಾರೆ. 

ಖುಷ್ಬೂ ಮುಂಬೈನ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ್ದರು. ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿದ್ದರಿಂದ ದಕ್ಷಿಣ ಭಾರತದ ಕಡೆಗೆ ಪಯಣ ಬೆಳೆಸಿದ್ದರು. 1991ರಲ್ಲಿ 'ಚಿನ್ನತಂಬಿ' ಅನ್ನೋ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇಲ್ಲಿಂದ ಖುಷ್ಬೂ ಮತ್ತೆಂದೂ ತಿರುಗಿ ನೋಡಿಲ್ಲ.

Weekend With Ramesh: ಹನುಮಂತನನ್ನು ಹಣೆ ಮೇಲೆ ನೋಡಲು ನಟ ಪ್ರೇಮ್​ ಹೀಗೆ ಮಾಡಿದ್ರಂತೆ!

  ಯಾರು ನಮ್ಮ ಮದುವೆಯನ್ನು ಪ್ರಶ್ನೆ ಮಾಡುತ್ತಿದ್ದಾರೋ ಅಥವಾ ಸುಂದರ್​ ಅವರನ್ನು  ಮದುವೆಯಾಗಲು ಮತಾಂತರಗೊಂಡ ಎನ್ನುತ್ತಿದ್ದಾರೋ ಅವರು ಸ್ವಲ್ಪ ಇಲ್ಲಿ ಕಿವಿಕೊಟ್ಟು ಕೇಳಿ. ನಾನು ಮತಾಂತರಗೊಂಡಿಲ್ಲ. ಅಥವಾ ಯಾರೂ ಮತಾಂತರವಾಗು ಅಂತ ಒತ್ತಡ ಹೇರಿಲ್ಲ. ಅವರಿಗೆ ಸ್ವಲ್ಪನಾದರೂ ಕಾನೂನಿನ ಅರಿವು ಇರಬೇಕು.  ನಮ್ಮ ದೇಶದಲ್ಲಿ ವಿಶೇಷ ವಿವಾಹ ಕಾಯ್ದೆ ಇದೆ ಅನ್ನೋದು ನಿಮಗೆಲ್ಲಾ ಗೊತ್ತಿಲ್ಲದೆ ಇರೋ ಬೇಸರದ ಸಂಗತಿ. ನನ್ನ ದಾಂಪತ್ಯಕ್ಕೆ  23 ವರ್ಷ ಮುಗಿದಿದೆ. ನಮ್ಮ ಸುಂದರ  ವೈವಾಹಿಕ (Married life) ಜೀವನವು ನಂಬಿಕೆ, ಗೌರವ, ಸಮಾನತೆ ಮತ್ತು ಪ್ರೀತಿಯ ತಳಪಾಯದ ಮೇಲೆ ನಿಂತಿದೆ ಎಂದು ಟ್ವೀಟ್​ ಮಾಡಿದ್ದಾರೆ.
 
ಖುಷ್ಬೂ ನಟ, ನಿರ್ದೇಶಕ ಸಿ ಸುಂದರ್ ಅವರನ್ನು ಮದುವೆ ಆಗುವುದಕ್ಕೂ ಮುನ್ನ ಪ್ರಭು ಗಣೇಶನ್ ಅವರನ್ನು ಪ್ರೀತಿಸುತ್ತಿದ್ದರು. 1993ರಲ್ಲಿ ಖುಷ್ಬೂ ಹಾಗೂ ಪ್ರಭು ಮದುವೆಯಾದರು. ಆದರೆ, ಪ್ರಭು ತಂದೆ ಶಿವಾಜಿ ಗಣೇಶನ್ ಇವರಿಬ್ಬರ ಮದುವೆಯನ್ನು ಒಪ್ಪಲಿಲ್ಲ. ಈ ಕಾರಣಕ್ಕೆ ನಾಲ್ಕು ತಿಂಗಳ ಬಳಿಕ ಇಬ್ಬರು ಬೇರೆಯಾದರು ಎನ್ನಲಾಗಿದೆ.
 

Latest Videos
Follow Us:
Download App:
  • android
  • ios