ಚೋರಿ 2 ನಟಿ, ಸೈಫ್ ಅಲಿ ಖಾನ್ ಸೋದರಿ ಸೋಹಾ ಅಲಿ ಖಾನ್ ಅವರು ತಮ್ಮ ಮಗಳು ಇನಾಯಾಳನ್ನು ಪಿತೃಪ್ರಧಾನವಾಗಿರುವ ಈ ಸಮಾಜದಲ್ಲಿ ಬೆಳೆಸುವುದಕ್ಕೆ ತೀವ್ರ ಚಿಂತೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. 

ಚೋರಿ 2 ನಟಿ, ಸೈಫ್ ಅಲಿ ಖಾನ್ ಸೋದರಿ ಸೋಹಾ ಅಲಿ ಖಾನ್ ಅವರು ತಮ್ಮ ಮಗಳು ಇನಾಯಾಳನ್ನು ಪಿತೃಪ್ರಧಾನವಾಗಿರುವ ಈ ಸಮಾಜದಲ್ಲಿ ಬೆಳೆಸುವುದಕ್ಕೆ ತೀವ್ರ ಚಿಂತೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. 
ಜೂಮ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶರ್ಮಿಳಾ ಟಾಗೋರ್ ಪುತ್ರಿ ಸೋಹಾ ಅಲಿ ಖಾನ್ ತಮ್ಮ ಮಗಳು ಇನಾಯಾ ನೌಮಿ ಕೆಮ್ಮುಳನ್ನು ಇಂದಿನ ಸಮಾಜದಲ್ಲಿ ಬೆಳೆಸುವುದಕ್ಕೆ ಆತಂಕವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಸಮಾಜದ ಪಿತೃಪ್ರಧಾನ ಸ್ವರೂಪವನ್ನು ಪರಿಗಣಿಸಿ ತಾನು ಕಳವಳಗೊಂಡಿದ್ದೇನೆ ಎಂದು ನಟಿ ಹೇಳಿದ್ದಾರೆ. 

ಜೂಮ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಸೋಹಾ ಪಿತೃಪ್ರಭುತ್ವ ಮತ್ತು ಮೂಢನಂಬಿಕೆಗಳು ಸಹಬಾಳ್ವೆ ನಡೆಸುವ ಈ ಸಮಾಜದಲ್ಲಿ ತನ್ನ ಮಗಳನ್ನು ಬೆಳೆಸುವ ಬಗ್ಗೆ ಕಾಳಜಿ ವಹಿಸುತ್ತಿದ್ದೀರಾ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸೋಹಾ ಅವರು ಈ ಸಮಾಜದಲ್ಲಿ ಮಗಳನ್ನು ಬೆಳೆಸುವುದಕ್ಕೆ ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ. ಮುಂದುವರಿದು, ದಾಸಿ ಮಾ ಅವರಂತಹ ಗಾಢ ಪಾತ್ರಗಳು ನಿಮ್ಮನ್ನು ಪ್ರಭಾವಿಸುತ್ತವೆ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಸೋಹಾ, ನಾವು ನಿರ್ವಹಿಸುವ ಪಾತ್ರಗಳು ನಮ್ಮನ್ನೇ ಪ್ರಭಾವಿಸಿದಂತಾದರೆ ನಮ್ಮ ಜೀವನದ ಗುಣಮಟ್ಟವು ಹಾಳಾಗುತ್ತದೆ ಎಂದು ನಾನು ಭಾವಿಸುವ ಕಾರಣಕ್ಕೆ ಈ ರೀತಿ ಪಾತ್ರವೊಂದನ್ನು ನನ್ನನ್ನು ಪ್ರಭಾವಿಸುವುದಕ್ಕೆ ಬಿಡಲಿಲ್ಲ ಎಂದು ಹೇಳಿದ್ದರು. 

ಪಟೌಡಿ ಕುಟುಂಬದ 5 ಸೆಲೆಬ್ರಿಟಿಗಳ ನೋ ಮೇಕಪ್ ಲುಕ್, ಸೈಫ್‌ರಿಂದ-ಕರೀನಾವರೆಗೆ

ಪಾತ್ರದೊಂದಿಗೆ ಸಂಪರ್ಕ ಕಡಿತಗೊಳಿಸುವುದು ಒಬ್ಬ ಕಲಾವಿದ ತ್ವರಿತವಾಗಿ ಕಲಿಯಬೇಕಾಗಿರುವ ಕಲೆ. ಆದರೆ ಅದು ಕಷ್ಟ. ಇದು ರಂಗಭೂಮಿಯಂತೆ ಅಲ್ಲ, ಅಲ್ಲಿ ನೀವು ನೀವು 3 ಗಂಟೆಗಳ ಕಾಲ ಪಾತ್ರವನ್ನು ನಿರ್ವಹಿಸಿ ಅದರಿಂದ ಹೊರಬರುವಿರಿ. ಇಲ್ಲಿ, ನೀವು ಅದರಲ್ಲಿಯೇ(ಪಾತ್ರದಲ್ಲಿಯೇ) ಮುಳುಗಬೇಕು ಮತ್ತು ಆಗಾಗ್ಗೆ ಹೊರಬರಬೇಕು. ಆಕ್ಷನ್ ಮತ್ತು ಕಟ್ ನಡುವಿನ ತಂತ್ರ ಮ್ಯಾಜಿಕ್ ಅನ್ನು ಮುನ್ನೆಲೆಗೆ ತರುವುದಾಗಿದೆ. ವಿಶ್ರಾಂತಿ ಪಡೆಯುವುದು, ನಿಮ್ಮ ಶಕ್ತಿಯನ್ನು ಸಂರಕ್ಷಿಸುವುದು ಮತ್ತು ಸಾಮಾನ್ಯ ಮನುಷ್ಯನಂತೆ ಸಮಾಜದಲ್ಲಿ ಸಂಯೋಜಿಸಬೇಕು.. ನೀವು ನಾಯಿಮರಿಗಳು ಮತ್ತು ಚಿಕ್ಕ ಮಕ್ಕಳ ಸುತ್ತಲೂ ಸಾಕಷ್ಟು ಸಮಯವನ್ನು ಕಳೆದರೆ, ಅದು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ಅವರು ನಿಮ್ಮನ್ನು ವಿಶ್ರಾಂತಿ ಪಡುವಂತೆ ಮಾಡುತ್ತಾರೆ. ಹೀಗಾಗಿ ನನಗೆ ನಾನು ಮನೆಗೆ ಬಂದಾಗ, ಆ ಪಾತ್ರದಿಂದ ಹೊರಬರುವುದು ಸುಲಭವಾಯಿತು ಎಂದು ಹೇಳಿಕೊಂಡಿದ್ದಾರೆ.

ಹಾಗೆಯೇ ಪ್ರಸ್ತುತ ಸನ್ನಿವೇಶದಲ್ಲಿ ಮಗಳು ಇನಾಯಾಳನ್ನು ಬೆಳೆಸುವ ಬಗ್ಗೆ ಮಾತನಾಡುತ್ತಾ, ಇಂದಿನ ಸಮಾಜದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ, ಅದು ಇನ್‌ಸ್ಟಾಗ್ರಾಮ್ ಆಗಿರಲಿ ಅಥವಾ ಇದೇ ರೀತಿಯ ಇನ್ಯಾವುದೇ ಆಗಿರಲಿ ಅಭ್ಯಾಸಗಳಾಗಿರಲಿ ಅವು ನಮ್ಮ ಜೀವನವನ್ನು ನೇರವಾಗಿ ಮುಟ್ಟುವುದಿಲ್ಲ ಎಂದು ನಮಗೆ ತಿಳಿದಿದ್ದರೂ, ಹೆಣ್ಣು ಮಗಳೊಬ್ಬಳನ್ನು ಬೆಳೆಸುವ ಬಗ್ಗೆ ನನಗೆ ತೀವ್ರ ಕಾಳಜಿ ಆತಂಕ ಇದೆ. ನಾವು ಪಿತೃಪ್ರಭುತ್ವ ಇನ್ನೂ ಇರುವ ಸಮಾಜದ ರಚನೆಗೆ ಸೇರಿದವರು. ಮಹಿಳೆಯರನ್ನು ಕೆಳಮಟ್ಟಕ್ಕೆ ಇಳಿಸುವ ಮತ್ತು ನೀವು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕೆಂದು ನಿರೀಕ್ಷಿಸುವ ಆಳವಾದ ಕಂಡೀಷನಿಂಗ್ ಇಲ್ಲಿದೆ, ಮತ್ತು ನೀವು ಹೊಂದಿಕೊಳ್ಳಲು ನಿರಾಕರಿಸಿದರೆ, ಅದು ನಿಮ್ಮನ್ನು ದೂರ ಮಾಡುತ್ತದೆ. ಆ ನಿಷೇಧವನ್ನು ಮುರಿಯುವ ವ್ಯಕ್ತಿಯಾಗುವುದು ಕಷ್ಟ ಏಕೆಂದರೆ ಹಾಗೆ ಮಾಡಿದರೆ ನೀವೊಬ್ಬ ಕಠಿಣ ಮಹಿಳೆ ಅಥವಾ ಕಿರಿಕಿರಿಗೊಳಿಸುವ ಮಹಿಳೆ ಎಂದು ಕರೆಯಲ್ಪಡುವಿರಿ. ಹಾಗೂ ಹಾಗೆ ಆಗುವುದು ಬಹಳ ಕಷ್ಟ ಎಂದು ಹೇಳಿದರು. 

ಮಗು ಬರಮಾಡಿಕೊಳ್ಳಲು ರೆಡಿಯಾದ ಪದ್ಮಿನಿ ದೇವನಹಳ್ಳಿ, 'ಲಕ್ಷ್ಮೀ ನಿವಾಸ' ...

ಸೋಹಾ ಅವರ ಇತ್ತೀಚಿನ ಸಿನಿಮಾ ಛೋರಿ 2 ಬಗ್ಗೆ ಹೇಳುವುದಾದರೆ ಛೋರಿ-2 ಒಂದು ಟಿ-ಸೀರೀಸ್ ಸಿನಿಮವಾಗಿದ್ದು, ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್, ಸೈಕ್ ಮತ್ತು ಟಮರಿಸ್ಕ್ ಲೇನ್ ಪ್ರೊಡಕ್ಷನ್ ಮೂಲಕ ಸಿದ್ದಗೊಂಡಿದೆ. ಪ್ರಸ್ತುತ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಛೋರಿ-2 ಸಿನಿಮಾವೂ ಬಾಲ್ಯವಿವಾಹ ಮತ್ತು ಗ್ರಾಮೀಣ ಭಾರತದಲ್ಲಿ ಆಳವಾಗಿ ಹುದುಗಿರುವ ಕೆಲ ಮೂಢನಂಬಿಕೆಗಳ ಕತೆಯನ್ನು ಆಧರಿಸಿದೆ. ಅಮೆಜಾನ್ ಪ್ರೈಮ್‌ನಲ್ಲಿ ಇರುವ ಈ ಛೋರಿ- 2 ಸಿನಿಮಾದ ಮೊದಲ ಭಾಗದ ಕತೆಯೂ ಹೆಣ್ಣು ಶಿಶುಹತ್ಯೆಯ ಸುತ್ತ ಕೇಂದ್ರೀಕೃತವಾಗಿದ್ದರೆ, ಎರಡನೇ ಭಾಗವು ಮೂಢನಂಬಿಕೆಯ ಆಚರಣೆಗಳ ಹಿನ್ನೆಲೆಯಲ್ಲಿ ಬಾಲ್ಯವಿವಾಹವದ ಬಗ್ಗೆ ತಿಳಿಸುತ್ತದೆ.