- Home
- Entertainment
- TV Talk
- ಮಗು ಬರಮಾಡಿಕೊಳ್ಳಲು ರೆಡಿಯಾದ ಪದ್ಮಿನಿ ದೇವನಹಳ್ಳಿ, 'ಲಕ್ಷ್ಮೀ ನಿವಾಸ' ನಟ ಅಜಯ್ ರಾಜ್; PHOTOS
ಮಗು ಬರಮಾಡಿಕೊಳ್ಳಲು ರೆಡಿಯಾದ ಪದ್ಮಿನಿ ದೇವನಹಳ್ಳಿ, 'ಲಕ್ಷ್ಮೀ ನಿವಾಸ' ನಟ ಅಜಯ್ ರಾಜ್; PHOTOS
ʼಲಕ್ಷ್ಮೀ ನಿವಾಸʼ ಧಾರಾವಾಹಿ ಹರೀಶ್ ಪಾತ್ರಧಾರಿ ನಟ ಅಜಯ್ ರಾಜ್ ಅವರು ತಂದೆಯಾಗುವ ಖುಷಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಅದ್ದೂರಿಯಾಗಿ ಪತ್ನಿಯ ಸೀಮಂತ ಆಚರಿಸಿದ್ದರು.

ಈಗ ಅಜಯ್ ರಾಜ್ ಹಾಗೂ ಪದ್ಮಿನಿ ದೇವನಹಳ್ಳಿ ಅವರು ಕಪ್ಪು ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಬೇಬಿಬಂಪ್ ಫೋಟೋಶೂಟ್‌ಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ʼಸೀತಾರಾಮʼ ಧಾರಾವಾಹಿಯಲ್ಲಿ ವಠಾರದಲ್ಲಿರುವ ತಾತನ ಪಾತ್ರದಲ್ಲಿ ಕಲಾಗಂಗೋತ್ರಿ ಮಂಜು ನಟಿಸುತ್ತಿದ್ದಾರೆ. ಇವರ ರಿಯಲ್ ಮಗಳು ಪದ್ಮಿನಿ ದೇವನಹಳ್ಳಿ. ಇವತದ್ದು ಕಲಾವಿದರ ಕುಟುಂಬ ಎನ್ನಬಹುದು.
ಪದ್ಮಿನಿ ದೇವನಹಳ್ಳಿ ಕೂಡ ನಟಿ. ಪದ್ಮಿನಿ ಅವರು ಈ ಹಿಂದೆ ʼಮಹಾದೇವಿʼ, ʼಹಿಟ್ಲರ್ ಕಲ್ಯಾಣʼ ಸೀರಿಯಲ್‌ಗಳಲ್ಲಿ ನಟಿಸಿದ್ದರು. ಅಜಯ್ ರಾಜ್ ಕೂಡ ʼಮುಕ್ತʼ ಸೇರಿದಂತೆ ಸಾಕಷ್ಟು ಧಾರಾವಾಹಿ, ಕನ್ನಡ ಜೊತೆಗೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಜಯ್ ರಾಜ್, ಪದ್ಮಿನಿ ಅವರು2 020ರಲ್ಲಿ ಮದುವೆಯಾಗಿದ್ದರು. ಇವರದ್ದು ಲವ್? ಅರೇಂಜ್ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಖಾಸಗಿಯಾಗಿ ಈ ವಿವಾಹ ನಡೆದಿತ್ತು. ಇದಕ್ಕೂ ಮುನ್ನ ವರ್ಷದ ಹಿಂದೆಯೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಮದುವೆಯಾಗಿ 4 ವರ್ಷಗಳ ಬಳಿಕ ಇವರಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕನ್ನಡ ನಟ ಅಜಯ್ ರಾಜ್ ಅವರು 'ಮುಂದಿನ ನಿಲ್ದಾಣ' ಹಾಗೂ 'ಮುಂದುವರೆದ ಅಧ್ಯಾಯ' ಸಿನಿಮಾಗಳಲ್ಲಿ ನಟಿಸಿದ್ದರು. ಸದ್ಯ ಕಿರುತೆರೆ, ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ಅಜಯ್ ರಾಜ್ ಅವರು ನಟ ಯಶ್‌ರ ಒಳ್ಳೆಯ ಗೆಳೆಯ. ಅಜಯ್ ಅವರು ಕನ್ನಡದ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗ ಅವರು ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಹರೀಶ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.