ಒಂದು ಕಾಲದಲ್ಲಿ ಶಾರುಖ್ ಖಾನ್ ಮತ್ತು ಅಭಿಜೀತ್ ಭಟ್ಟಾಚಾರ್ಯ ಬಾಲಿವುಡ್‌ನಲ್ಲಿ ಜನಪ್ರಿಯ ಜೋಡಿಯಾಗಿದ್ದರು. ಆದರೆ, ಇತ್ತೀಚೆಗೆ ಅಭಿಜಿತ್, ಶಾರುಖ್ ತಮ್ಮ ಕೆಲಸಕ್ಕೆ ಮನ್ನಣೆ ನೀಡಲಿಲ್ಲ ಎಂದು ಟೀಕಿಸಿದ್ದಾರೆ. 2007ರ ನಂತರ ಶಾರುಖ್ ಜೊತೆ ಕೆಲಸ ಮಾಡಿಲ್ಲ. ಶಾರುಖ್ ಜೊತೆ ಯಾವುದೇ ವೈಯಕ್ತಿಕ ಸಂಬಂಧವಿಲ್ಲ. ಅವರ ಹಾಡುಗಳ ಕ್ರೆಡಿಟ್ ಶಾರುಖ್‌ಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಈ ಭಿನ್ನಾಭಿಪ್ರಾಯದಿಂದ ಇಬ್ಬರ ಬಾಂಧವ್ಯ ಮುರಿದುಬಿದ್ದಿದೆ.
ಒಂದು ಕಾಲದಲ್ಲಿ ನಟ ಶಾರುಖ್ ಖಾನ್ ಮತ್ತು ಗಾಯಕ ಅಭಿಜೀತ್ ಭಟ್ಟಾಚಾರ್ಯ ಜೊತೆಯಾಗಿ ಬಾಲಿವುಡ್ ಗೆ ಅತ್ಯಂತ ಸ್ಮರಣೀಯ ಹಾಡುಗಳನ್ನು ಕೊಟ್ಟಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇವರಿಬ್ಬರ ನಡುವೆ ಯಾವುದೂ ಸರಿ ಇಲ್ಲ ಎಂಬುದು ಬಹಿರಂಗವಾಗಿದೆ. ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ಶಾರುಖ್ ಕಾನ್ ಅವರನ್ನು ವ್ಯಂಗ್ಯ ಮಾಡಿದ್ದಾರೆ ಕೂಡ. ANI ಜೊತೆಗಿನ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಕೆಲಸಕ್ಕೆ ಸರಿಯಾದ ಮನ್ನಣೆ ನೀಡದ ನಟನ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. 2007 ರಲ್ಲಿ ಓಂ ಶಾಂತಿ ಓಂ ಚಿತ್ರದ ನಂತರ ಶಾರುಖ್ ಅವರೊಂದಿಗೆ ಯಾವುದೇ ಕೆಲಸ ಮಾಡದ ಅವರು, ನಟನೊಂದಿಗೆ ನನಗೆ ಯಾವುದೇ ವೈಯಕ್ತಿಕ ಸಂಬಂಧವಿಲ್ಲ ಮತ್ತು ಅವರ ಎಲ್ಲಾ ಹಾಡುಗಳ ಕ್ರೆಡಿಟ್ ಅವರಿಗೆ ಸಲ್ಲುತ್ತದೆ ಎಂದು ಹೇಳಿ ವ್ಯಂಗ್ಯವಾಡಿದ್ದಾರೆ.
ಶಾರುಖ್ ಜೊತೆಗಿನ ನಿಮ್ಮ ಪ್ರಸ್ತುತ ಸಂಬಂಧ ಹೇಗಿದೆ ಎಂದು ಕೇಳಿದಾಗ, "ಕೋಯಿ ಸಂಬಂಧ ಹೇಯಿ ನಹಿ ಹೈ" (ಯಾವುದೇ ಸಂಬಂಧ ಇದ್ದಿರಲಿಲ್ಲ) ನಾನು ಅವರನ್ನು ಹಲವು ಸಲ ಭೇಟಿಯಾಗಿದ್ದೇನೆ, ಇದು ಹಲೋ ಅಥವಾ ಹಾಯ್ ಗೆ ಮಾತ್ರ ಸೀಮಿತವಾಗಿತ್ತು. ನಾನು ಈಗ ನಿಮ್ಮೊಂದಿಗೆ ಮಾತನಾಡುತ್ತಿರುವಂತೆ ಅವರೊಂದಿಗೆ ಸರಿಯಾಗಿ ಕುಳಿತು ಮಾತನಾಡಿಲ್ಲ" ಎಂದಿದ್ದಾರೆ.
ಗಾಂಧೀಜಿ ಭಾರತಕ್ಕಲ್ಲ ಪಾಕ್‌ಗೆ ರಾಷ್ಟ್ರಪಿತ: ಬಾಲಿವುಡ್ ಗಾಯಕನ ವಿವಾದಾತ್ಮಕ ಹೇಳಿಕೆ
ಮುಂದುವರೆದು ಮಾತನಾಡುತ್ತಾ ಅಭಿಜಿತ್ ಭಟ್ಟಾಚಾರ್ಯ ಮತ್ತು ಶಾರುಖ್ ಖಾನ್ ಅವರ ಹಾಡುಗಳನ್ನು ನಿರೂಪಕ ಕಿಶೋರ್ ಕುಮಾರ್ ಮತ್ತು ಅಮಿತಾಬ್ ಬಚ್ಚನ್ ಅವರ ಐಕಾನಿಕ್ ಜೋಡಿಗೆ ಹೋಲಿಕೆ ಮಾಡಿದರು. ಇದಕ್ಕೆ ವ್ಯಂಗ್ಯವಾಗಿ ಉತ್ತರಿಸಿದ ಅಭಿಜಿತ್ , ನನ್ನ ಮತ್ತು ಶಾರುಖ್ ಪ್ರಕರಣ ವಿಭಿನ್ನವಾಗಿದೆ. ನಮ್ಮ ಧ್ವನಿಯನ್ನು ಕೇಳಿದ ನಂತರ, ನಾವು ಅವಳಿ ಮಕ್ಕಳಂತೆ ಭಾಸವಾಗುತ್ತದೆ. ಈ ಎಲ್ಲಾ ಹಾಡುಗಳು ನನ್ನದಲ್ಲ, ಶಾರುಖ್ ಅವುಗಳನ್ನು ಹಾಡಿದ್ದಾರೆ, ಬರೆದಿದ್ದಾರೆ, ಸಂಗೀತ ನೀಡಿದ್ದಾರೆ, ಚಿತ್ರ ಅವರದ್ದೇ, ಮತ್ತು ಛಾಯಾಗ್ರಾಹಕ ಕೂಡ ಶಾರುಖ್ ಎಂದು ನನಗೆ ಈಗ ಅರಿವಾಗುತ್ತಿದೆ. ಎಲ್ಲವೂ ಶಾರುಖ್ ಅವರದ್ದೇ. ತೋ ಮೈ ಕ್ಯಾ ಕರೂಂ? ಲೋಗ್ ಮುಜೆ ಬೋಲ್ತೇ ಹೈ, 'ಆಪ್ಕಾ ವೋ ಶಾರುಖ್ ಕಾ ಗಾನಾ' (ಈಗ ನಾನೇನು ಮಾಡಬೇಕು, ಜನ ನನಗೆ ಹೇಳ್ತಾರೆ ಇದು ನಿಮ್ಮ ಹಾಡಾ? ಅಥವಾ ಶಾರುಕ್ ಅವರದ್ದಾ?). ಆಗ ಅದು ನನ್ನ ಹಾಡು ಅಲ್ಲ ಎಂದು ನನಗೆ ಅರಿವಾಯಿತು" ಎಂದಿದ್ದಾರೆ.
ಪಾಕಿಗಳ ಬೆಂಬಲಿಸ್ತಿರೋ ನೀನು ನನ್ನ ದ್ವೇಷಕ್ಕೂ ಅರ್ಹನಲ್ಲ: ಸಲ್ಮಾನ್ ವಿರುದ್ಧ ತಿರುಗಿಬಿದ್ದ ಗಾಯಕ ಅಭಿಜಿತ್!
ಅಭಿಜೀತ್ ಭಟ್ಟಾಚಾರ್ಯ ಅವರು ಶಾರುಖ್ ಖಾನ್ ಅವರ ಹಿಟ್ ಹಾಡುಗಳಾದ ಸುನೋ ನಾ (ಚಲ್ತೇ ಚಲ್ತೆ), ಚಾಂದ್ ತಾರೆ (ಎಸ್ ಬಾಸ್), ತುಮ್ಹೆ ಜೋ ಮೈನೆ ದೇಖಾ" (ಮೈ ಹೂ ನಾ), ವೋ ಲಡ್ಕಿ ಜೋ (ಬಾದ್‌ಶಾಹ್) ಹೀಗೆ ಅನೇಕ ಹಾಡುಗಳನ್ನು ಹಾಡಿದ್ದಾರೆ. ನಟನೊಂದಿಗಿನ ಕೆಲಸ ಮಾಡಿದಾಗ ಸರಿಯಾದ ಗೌರವ ಪಡೆಯದಿರುವ ಬಗ್ಗೆ ಗಾಯಕ ಭಟ್ಟಾಚಾರ್ಯ ಕಳವಳ ವ್ಯಕ್ತಪಡಿಸಿದಾಗ ಇಬ್ಬರ ಮಧ್ಯೆ ಬಿರುಕು ಪ್ರಾರಂಭವಾಯಿತು. ಭವಿಷ್ಯದಲ್ಲಿ ಶಾರುಕ್‌ಗಾಗಿ ಹಾಡುವುದನ್ನು ನಿಲ್ಲಿಸಲು ಕಾರಣವಾಯಿತು.
ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಶಾರುಖ್ ಅವರ ಧ್ವನಿ ಎಂದು ಅಭಿಜೀತ್ ಭಟ್ಟಾಚಾರ್ಯ ಅವರನ್ನು ಕರೆಯಲಾಗುತ್ತಿತ್ತು. 1990 ಮತ್ತು 2000 ರ ದಶಕದಲ್ಲಿ, ಅಭಿಜೀತ್ ಬಾಲಿವುಡ್‌ನ ಅಗ್ರ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು. ಶಾರುಖ್ ಖಾನ್ ಅವರಿಗೆ ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಗಾಯಕನ ಧ್ವನಿ ಶಾರುಖ್ ಧ್ವನಿಗೆ ಹೋಲಿಕೆಯಾಗುತ್ತಿತ್ತು. ಹೀಗಾಗಿ ಅಭಿಮಾನಿಗಳು ಅದು ಶಾರುಖ್ ಹಾಡುತ್ತಿರುವುದು ಎಂದು ನಂಬುತ್ತಿದ್ದರು. ಸಂದರ್ಶನದಲ್ಲಿ ನಟನ ಸಂಗೀತ ಪರಂಪರೆಗೆ ಕೊಡುಗೆ ನೀಡಿದ್ದರೂ ಅವರನ್ನು ಕಡೆಗಣಿಸಲ್ಪಟ್ಟಿದ್ದಾರೆಂದು ಸುಳಿವು ನೀಡಿದರು.
ಚಲ್ತೆ ಚಲ್ತೆ ಸಾಧಾರಣ ಚಿತ್ರವಾಗಿತ್ತು. ಹಾಡುಗಳು ಮಾತ್ರ ಸೂಪರ್ ಹಿಟ್ ಆಯ್ತು ಎಂದು 2003 ರ 'ಚಲ್ತೆ ಚಲ್ತೆ' ಚಿತ್ರದ ಬಗ್ಗೆ ಅಭಿಜೀತ್ ಹೇಳಿದರು. ಚಿತ್ರದಲ್ಲಿ ಅವರು 'ತೌಬಾ ತುಮ್ಹಾರೆ ಯೇ ಇಶಾರೆ' ಎಂಬ ಜನಪ್ರಿಯ ಹಾಡನ್ನು ಹಾಡಿದರು. ಈ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ರಾಣಿ ಮುಖರ್ಜಿ ಜೋಡಿಯಾಗಿ ನಟಿಸಿದ್ದರು. ಜೊತೆಗೆ ತುಂಬಾ ಇಷ್ಟವಾದ ಧ್ವನಿಪಥವನ್ನು ಹೊಂದಿತ್ತು. ಆದರೆ ಅಭಿಜೀತ್ ಪ್ರಕಾರ ಹಾಡುಗಳು ಮಾತ್ರ ಪ್ರಭಾವ ಬೀರಿದವು. ಸರಾಸರಿ ಚಿತ್ರದಲ್ಲಿ ಹಾಡುಗಳು ಮಾತ್ರ ಹಿಟ್ ಆಗಿವೆ, ಆದರೆ ಏನು ಮಾಡಬಹುದು ಎಂದರು. ಈ ಮೂಲಕ ಶಾರುಖ್ ಮತ್ತು ತನ್ನ ಮಧ್ಯೆ ಉತ್ತಮ ಬಾಂಧವ್ಯ ಶಾಶ್ವತವಾಗಿ ಮುಚ್ಚಿ ಹೋಗಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
