Asianet Suvarna News Asianet Suvarna News

3 ಸಾವಿರಕ್ಕೆ ಕೆಲಸ ಮಾಡಿದ್ದೆ; ಅಮಿತಾಭ್ ಪುತ್ರಿ ಶ್ವೇತಾ ಬಚ್ಚನ್ ಹೇಳಿಕೆ ಹಿಗ್ಗಾಮುಗ್ಗಾ ಟ್ರೋಲ್

ಮದುವೆಯಾದ ಬಳಿಕ ಶ್ವೇತಾ ಬಚ್ಚನ್ ಆರ್ಥಿಕವಾಗಿ ಹೇಗೆ ಕಷ್ಟ ಅನುಭವಿಸಿದೆ ಎಂದು ಹೇಳಿದ್ದಾರೆ. 3 ಸಾವಿರ ರೂಪಾಯಿಗೆ ಕೆಲಸಕ್ಕೆ ಸೇರಿದ್ದೆ ಎಂದು ಹೇಳಿದ್ದಾರೆ. 

Shweta Bachchan gets trolled for get Rs 3000 per month as a kindergarten teacher sgk
Author
First Published Nov 10, 2022, 12:35 PM IST

ಸ್ಟಾರ್‌ಕಿಡ್ ಹೇಗಿರಾಗುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಪ್ಪ-ಅಮ್ಮನ ಹಾಗೆ ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ. ಅದರಲ್ಲೂ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮಕ್ಕಳು ಅಂದಮೇಲೆ ಕೇಳಬೇಕಾ? ಯಾವುದೇ  ಸೌಕರ್ಯ, ಸೌಲಭ್ಯಗಳಿಗೆ ಕೊರೆತೆ ಇರಲ್ಲದೇ ಜೀವನ ನಡೆಸಿರುತ್ತಾರೆ. ಅಭಿಮಾನಿಗಳು ಸಹಾ ಸ್ಟಾರ್ ಕಿಡ್‌ಗಳನ್ನು ಸ್ಟಾರ್ಗಳಂತೇ ಟ್ರೀಟ್ ಮಾಡುತ್ತಾರೆ. ರಾಯಲ್ ಆಗಿ ಲೈಫ್ ಲೀಡ್ ಮಾಡುತ್ತಿರುತ್ತಾರೆ ಅಂತನೇ ಅಂದುಕೊಂಡಿರುತ್ತಾರೆ. ಆದರೆ ಅಮಿತಾಭ್ ಮಗಳು ಶ್ವೇತಾ ಬಚ್ಚನ್ ಇತ್ತಾಚಿಗಷ್ಟೆ ತನ್ನ ಕಷ್ಟದ ಜೀವನದ ಬಗ್ಗೆ ತೆರೆದಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಸ್ಟಾರ್ ಮಗಳಾಗಿ ಕಷ್ಟಪಟ್ಟಿದ್ದೀರಾ ಅಂತ ಹೇಳಿದ್ರೆ ನಂಬಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಶ್ವೇತಾ ಬಚ್ಚನ್ ಮದುವೆಯಾದ ಬಳಿಕ ಆರ್ಥಿಕವಾಗಿ ಹೇಗೆ ಫೈಟ್ ಮಾಡಿದರೂ ಎಂದು ಬಹಿರಂಗ ಪಡಿಸಿದ್ದಾರೆ. ಶ್ವೇತಾ ಬಚ್ಚನ್ ದೆಹಲಿ ಮೂಲದ ಉದ್ಯಮಿ ನಿಖಿಲ್ ನಂದ ಅವರನ್ನು ಮದುವೆಯಾಗಿದ್ದಾರೆ. ಮದುವೆಯಾಗಿ ದೆಹಲಿಗೆ ಹೋದ ಬಳಿಕ ಶ್ವೇತಾ ಆರ್ಥಕವಾಗಿ ಕಷ್ಟ ಅನುಭವಿಸಿದೆ ಎಂದು ಹೇಳಿದ್ದಾರೆ. ಹಣಕ್ಕಾಗಿ ತಾನು ಕಿಂಡರ್‌ಗಾರ್ಡನ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಸೇರಿದೆ, 3 ಸಾವಿರ ಸಂಬಳ ಸಿಗುತ್ತಿತ್ತು ಎಂದು ಹೇಳಿದ್ದಾರೆ. ಮಗಳು ನವ್ಯಾ ನವೇಲಿ ಅವರ 'ವಾಟ್ ದಿ ಹೆಲ್ ನವ್ಯಾ' ಪೋಡ್ ಕಾಸ್ಟ್ ಬಗ್ಗೆ ಮಾತನಾಡನಲ್ಲಿ ಮಾತನಾಡಿದ ಶ್ವೇತಾ ಬಚ್ಚನ್ ಈ ಎಲ್ಲಾ ವಿಚಾರಗಳನ್ನು ಶೇರ್ ಮಾಡಿದ್ದಾರೆ. 

ಅಮ್ಮ ನನಗೆ ತುಂಬಾ ಹೊಡೆಯುತ್ತಿದ್ದರು ಎಂಬ ರಹಸ್ಯ ರೀವಿಲ್‌ ಮಾಡಿದ ಅಮಿತಾಬ್ ಮಗಳು

'ನಾನು ಸಹೋದರ ಅಭಿಷೇಕ್ ಬಚ್ಚನ್‌ನಿಂದ ಹಣವನ್ನು ಪಡೆಯುತ್ತಿದೆ. ಶಾಲೆ ಮತ್ತು ಕಾಲೇಜು ಹೋಗುವಾಗ ಏನಾದರೂ ತಿನ್ನಲು ಅಭಿಷೇಕ್ ಬಳಿ ಹಣ ತೆಗೆದುಕೊಳ್ಳುತ್ತಿದ್ದೆ. ಬೋರ್ಡಿಂಗ್ ಶಾಲಿಯಲ್ಲಿ ಇದ್ದಾಗ ತಿನ್ನಲು ಇಲ್ಲದೆ ಬದಲು ಸಾಧ್ಯವೇ ಇಲ್ಲ. ನಾನು ಹಣಕಾಸಿನ ಬಗ್ಗೆ ಹೆಚ್ಚು ತಿಳಿದುಕೊಂಡಿರಲಿಲ್ಲ. ಮದುವೆ ಬಳಿಕ ನಾನು ದೆಹಲಿಗೆ ತೆರಳಿದೆ. ಅಲ್ಲಿ ಟೀಚರ್ ಆಗಿ ನಾನು ಡಿಂಗರ್‌ಗಾರ್ಡನ್ ನಲ್ಲಿ ಕೆಲಸ ಸೇರಿದೆ. 3 ಸಾವಿರ ಸಂಬಳ ಸಿಗುತ್ತಿತ್ತು. ಅದನ್ನು ಬ್ಯಾಂಕ್‌ನಲ್ಲಿ ಇರಿಸಿದೆ' ಎಂದು ಹೇಳಿದರು. 

ನಾನು ಆರ್ಥಿಕವಾಗಿ ಸ್ವತಂತ್ರಳಲ್ಲ, ತನ್ನ ಮಕ್ಕಳಿಗೆ ಹೀಗಾಗಬಾರದು ಎಂದ ಬಿಗ್‌ ಬಿ ಪುತ್ರಿ

ಶ್ವೇತಾ ಅವರ ಈ ಮಾತುಗಳು ಈಗ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಸ್ಟಾರ್ ಕಿಡ್ ಆಗಿ 3 ಸಾವಿರಕ್ಕೆ ಕೆಲಸ ಮಾಡುವುದೇ, ನಂಬಲು ಅಸಾಧ್ಯ ಎನ್ನುತ್ತಿದ್ದಾರೆ. '300 ಕೋಟಿ ಬಂಗಲೆಯಲ್ಲಿ ಪೋಷಕರು ವಾಸುತ್ತಿದ್ದರೆ ಮಗಳು 3 ಸಾವಿರಕ್ಕಾಗಿ ಕೆಲಸ ಮಾಡುವುದಾ' ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ. ಮತ್ತೋಬ್ಬ ವ್ಯಕ್ತಿ ಕಾಮೆಂಟ್ ಮಾಡಿ, ಅವರು ಕೆಲಸಕ್ಕೆ ಸೇರಿ ಕಮ್ಮಿ ಸಂಬಳ ಪಡೆದರು ಎಂದು ಹೇಳಿರುವುದು ಟೀಚರ್ಸ್‌ಗೆ ಕಡಿಮೆ ಸಂಬಳ ಎಂದು ಹೇಳುತ್ತಿದ್ದಾರಾ? ಎಂದು ಕೇಳಿದ್ದಾರೆ. ಮತ್ತೋರ್ವ ವ್ಯಕ್ತ ಕಾಮೆಂಟ್ ಮಾಡಿ 'ಇದನ್ನು ನಂಬಲು ಸಾಧ್ಯವೇ ಇಲ್ಲ' ಎಂದು ಹೇಳಿದ್ದಾರೆ. ತನ್ನ ಕೆಲಸದ ಬಗ್ಗೆ ಮಾತಾಡಿ ಶ್ವೇತಾ ಬಚ್ಚನ್ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಶ್ವೇತಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ಾದರೆ ಮಾಡೆಲಿಂಗ್ ಮೂಲಕ ಆಗಾಗಾ ಕ್ಯಾಮರಾಗೆ ಪೋಸ್ ನೀಡುತ್ತಿರುತ್ತಾರೆ. 

Follow Us:
Download App:
  • android
  • ios