Asianet Suvarna News Asianet Suvarna News

Radhe Shyam: ಪ್ರಭಾಸ್​ ಚಿತ್ರದ ಕಥೆ ಹೇಳಲಿದ್ದಾರೆ ಕರುನಾಡ ಚಕ್ರವರ್ತಿ ಶಿವಣ್ಣ!

'ಪ್ಯಾನ್ ಇಂಡಿಯಾ ಸ್ಟಾರ್‌' ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರವು ಈಗಾಗಲೇ ಹಲವು ಕಾರಣಗಳಿಂದ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಚಿತ್ರಕ್ಕೆ ಸ್ಯಾಂಡಲ್​ವುಡ್​ ಸೆಂಚೂರಿ ಸ್ಟಾರ್​ ಶಿವರಾಜ್‌ಕುಮಾರ್ ಜತೆಯಾಗಿದ್ದಾರೆ.

Shivarajkumar Rajamouli Prithviraj Sukumaran Voice Over for Prabhas Starrer Radhe Shyam Film gvd
Author
Bangalore, First Published Feb 28, 2022, 8:39 PM IST

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ರಾಧೆ ಶ್ಯಾಮ್' (Radhe Shyam) ಟಾಲಿವುಡ್‌ (Tollywood) ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ ಸಿನಿಮಾ. ಚಿತ್ರದ ಮೋಷನ್ ಪೋಸ್ಟರ್, ಟೀಸರ್‌ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷ್ಟಿಸಿದೆ. ಈಗಾಗಲೇ ಚಿತ್ರದ ಹಾಡುಗಳು ಕೂಡ ಅಭಿಮಾನಿಗಳ ಮನಗೆದ್ದಿದೆ. ಸದ್ಯ 'ರಾಧೆ ಶ್ಯಾಮ್' ಚಿತ್ರವು ಬಿಡುಗಡೆಗೆ ಸಜ್ಜಾಗುತ್ತಿದೆ. ಇದೀಗ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಹೌದು! ಪ್ರಭಾಸ್​ರ 'ರಾಧೆ ಶ್ಯಾಮ್' ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಸೆಂಚೂರಿ ಸ್ಟಾರ್​ ಶಿವರಾಜ್‌ಕುಮಾರ್ (Shivarajkumar)​ ಅವರು ಜೊತೆಯಾಗಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕರು ಸ್ವತಃ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ವಿಶೇಷವಾಗಿ ಶಿವರಾಜ್​ಕುಮಾರ್​ ಮಾತ್ರವಲ್ಲದೇ ಖ್ಯಾತ ನಿರ್ದೇಶಕ ರಾಜಮೌಳಿ (SS Rajamouli), ಮಲಯಾಳಂ ಸೂಪರ್​ ಸ್ಟಾರ್​ ಪೃಥ್ವಿರಾಜ್ ಸುಕುಮಾರನ್ (Prithviraj Sukumaran)​ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳಿಗೆ ಸಖತ್​ ಥ್ರಿಲ್​ ಆಗಿದ್ದು, ಕೊನೇ ಹಂತದಲ್ಲಿ ಈ ದಿಗ್ಗಜರೆಲ್ಲ 'ರಾಧೆ ಶ್ಯಾಮ್' ಸಿನಿಮಾ ತಂಡವನ್ನು ಸೇರಿಕೊಂಡಿದ್ದು ಯಾಕೆ ಎಂಬ ಕುತೂಹಲ ಹುಟ್ಟಿದೆ.

Radhe Shyam: ಪ್ರಭಾಸ್-ಪೂಜಾ ಹೆಗ್ಡೆ ಕಾಂಬಿನೇಷನ್‌ನ ಚಿತ್ರಕ್ಕೆ ಅಮಿತಾಭ್ ಬಚ್ಚನ್ ಧ್ವನಿ!

'ರಾಧೆ ಶ್ಯಾಮ್' ಸಿನಿಮಾ ತೆಲುಗಿನಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. 'ಬಾಹುಬಲಿ' ಚಿತ್ರದ ಯಶಸ್ಸಿನ ನಂತರ ಪ್ರಭಾಸ್​ ಅವರು ದೇಶಾದ್ಯಂತ ಫೇಮಸ್ ಆಗಿ ಪ್ಯಾನ್ ಇಂಡಿಯಾ ಸ್ಟಾರ್​ ಆದರು. ಹಾಗಾಗಿ ಅವರ ಎಲ್ಲ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, 'ರಾಧೆ ಶ್ಯಾಮ್' ಕೂಡ ಅದೇ ದಾರಿಯನ್ನು ಅನುಸರಿಸುತ್ತಿದೆ. ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಿಗೆ ಈ ಸಿನಿಮಾ ಡಬ್ಬಿಂಗ್ ಆಗಿ ತೆರೆ ಕಾಣುತ್ತಿದೆ. ಸಿನಿಮಾದಲ್ಲಿ ಬರುವ ಒಂದೊಂದು ಭಾಷೆಯ ಹಿನ್ನೆಲೆ ನಿರೂಪಣೆಗೆ ಧ್ವನಿ ನೀಡಲು ಆಯಾ ಭಾಷೆಯ ದೊಡ್ಡ ಸೆಲೆಬ್ರಿಟಿಗಳು ಒಪ್ಪಿಕೊಂಡಿದ್ದಾರೆ.

Shivarajkumar Rajamouli Prithviraj Sukumaran Voice Over for Prabhas Starrer Radhe Shyam Film gvd

ಈಗಾಗಲೇ ತಿಳಿದಿರುವಂತೆ ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) 'ರಾಧೆ ಶ್ಯಾಮ್' ಹಿಂದಿ ವರ್ಷನ್‌ಗೆ ಧ್ವನಿ ನೀಡಿದ್ದಾರ. ಇದೀಗ ಕನ್ನಡ ವರ್ಷನ್​ ನಿರೂಪಣೆಗೆ ಶಿವರಾಜ್​ಕುಮಾರ್​ ಅವರು ಹಿನ್ನೆಲೆ ಧ್ವನಿ ನೀಡಿದ್ದು, ಅದೇ ರೀತಿ ತೆಲುಗಿನಲ್ಲಿ ರಾಜಮೌಳಿ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್​ ಸುಕುಮಾರನ್​ ಅವರು ನಿರೂಪಿಸಿದ್ದಾರೆ. ಆ ಮೂಲಕ ಈ ಘಟಾನುಘಟಿಗಳು ಸ್ಟಾರ್‌ಗಳು 'ರಾಧೆ ಶ್ಯಾಮ್​' ತಂಡದ ಭಾಗವಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿಸಿದ್ದಾರೆ. 'ನಿಮ್ಮ ಧ್ವನಿಯಿಂದಾಗಿ ಈ ರೊಮ್ಯಾಂಟಿಕ್​ ಕಥೆಯನ್ನು ಇನ್ನಷ್ಟು ವಿಶೇಷವಾಗಿಸಿದ್ದಕ್ಕೆ ಧನ್ಯವಾದಗಳು' ಎಂದು ಶಿವರಾಜ್​ಕುಮಾರ್​, ರಾಜಮೌಳಿ ಹಾಗೂ ಪೃಥ್ವಿರಾಜ್​ ಸುಕುಮಾರನ್​ ಅವರಿಗೆ 'ರಾಧೆ ಶ್ಯಾಮ್​' ನಿರ್ಮಾಣ ಸಂಸ್ಥೆಯಾದ 'ಯುವಿ ಕ್ರಿಯೇಷನ್ಸ್​' ಟ್ವೀಟ್​ ಮೂಲಕ ಧನ್ಯವಾದ ತಿಳಿಸಿದೆ. 

Prabhas-Amitabh Bachchan: 'ಪ್ರಾಜೆಕ್ಟ್​​ ಕೆ' ಶೂಟಿಂಗ್ ಬಳಿಕ ಪರಸ್ಪರ ಹೊಗಳಿಕೊಂಡ ಪ್ರಭಾಸ್-ಅಮಿತಾಭ್

ಇನ್ನು 'ರಾಧೆ ಶ್ಯಾಮ್' ಚಿತ್ರದ ಬಿಡುಗಡೆಯ ಡಿಜಿಟಲ್‌ ಹಕ್ಕುಗಳು (Digital Rights) 250 ಕೋಟಿ ರೂ ಗೆ ಮಾರಾಟವಾಗಿದೆ. ದಕ್ಷಿಣ ಭಾರತದ ಭಾಷೆಗಳಾದ- ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಚಿತ್ರವು ಜೀ-5 (Zee5) ವೇದಿಕೆಯಲ್ಲಿ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ (Netflix) ಬಿಡುಗಡೆಯಾಗಲಿದೆ. 'ರಾಧೆ ಶ್ಯಾಮ್' ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ (Radha Krishna Kumar) ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಪೂಜಾ ಹೆಗ್ಡೆ ಪ್ರೇರಣಾ ಎಂಬ ಪಾತ್ರವನ್ನು ನಿರ್ವಹಿಸಿದ್ದು, ಪ್ರಭಾಸ್ ವಿಕ್ರಮಾದಿತ್ಯ ಎಂಬ ಹಸ್ತಸಾಮುದ್ರಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು 1970ರ ಕಾಲಘಟ್ಟದಲ್ಲಿ ನಡೆಯುವ ಕತೆಯಾಗಿದ್ದು, ಯುರೋಪ್ ಭೂಮಿಕೆಯಲ್ಲಿ ಚಿತ್ರ ಮೂಡಿಬರಲಿದೆ. 
 

Follow Us:
Download App:
  • android
  • ios