Asianet Suvarna News Asianet Suvarna News

Prabhas-Amitabh Bachchan: 'ಪ್ರಾಜೆಕ್ಟ್​​ ಕೆ' ಶೂಟಿಂಗ್ ಬಳಿಕ ಪರಸ್ಪರ ಹೊಗಳಿಕೊಂಡ ಪ್ರಭಾಸ್-ಅಮಿತಾಭ್

ಬಾಲಿವುಡ್​ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮಿತಾಬ್ ಅವರ ಜೊತೆ ನಟಿಸಬೇಕು ಎಂಬುದು ಎಲ್ಲ ಕಲಾವಿದರ ಕನಸು. ಇದೀಗ ಈ ಕನಸನ್ನು ಟಾಲಿವುಡ್‌ನ ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ನನಸು ಮಾಡಿಕೊಂಡಿದ್ದಾರೆ. 

Actor Prabhas and Amitabh Bachchan Praises Each other After First Day Shoot in Project K gvd
Author
Bangalore, First Published Feb 20, 2022, 4:08 PM IST | Last Updated Feb 20, 2022, 4:08 PM IST

ಬಾಲಿವುಡ್​ನ (Bollywood) ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮಿತಾಭ್ ಬಚ್ಚನ್ ಅವರ ಜೊತೆ ನಟಿಸಬೇಕು ಎಂಬುದು ಎಲ್ಲ ಕಲಾವಿದರ ಕನಸು. ಇದೀಗ ಈ ಕನಸನ್ನು ಟಾಲಿವುಡ್‌ನ (Tollywood) ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ (Prabhas) ನನಸು ಮಾಡಿಕೊಂಡಿದ್ದಾರೆ. ಹೌದು! ಅಮಿತಾಭ್ ಬಚ್ಚನ್ ಹಾಗೂ ಪ್ರಭಾಸ್ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ 'ಪ್ರಾಜೆಕ್ಟ್ ಕೆ' (Project K) ಎಂದು ಕರೆಯಲಾಗುತ್ತಿದೆ. ಚಿತ್ರಕ್ಕೆ ನಾಗ್‍ ಅಶ್ವಿನ್ ಆಕ್ಷನ್ (Nag Ashwin) ಕಟ್ ಹೇಳುತ್ತಿದ್ದು, ವೈಜಯಂತಿ ಮೂವೀಸ್ ಸಿನಿಮಾವನ್ನು ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್ ಎದುರಿಗೆ ಮೊದಲ ಬಾರಿಗೆ ದೀಪಿಕಾ ಪಡುಕೋಣೆ (Deepika Padukone) ನಟಿಸುತ್ತಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ 'ಪ್ರಾಜೆಕ್ಟ್​ ಕೆ' ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಹೈದರಾಬಾದ್​ನಲ್ಲಿ ನಡೆಸಲಾಗಿತ್ತು. ಇದೀಗ ಚಿತ್ರತಂಡ ಮುಂದಿನ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ವಿಶೇಷವಾಗಿ ಈ ಹಂತದಲ್ಲಿ ಪ್ರಭಾಸ್ ಹಾಗೂ ಅಮಿತಾಭ್ ಬಚ್ಚನ್ ಪಾತ್ರಗಳು ಜತೆಯಾಗಿ ಕಾಣಿಸಿಕೊಳ್ಳುವ ಭಾಗಗಳನ್ನು ಚಿತ್ರೀಕರಿಸಲಾಗುತ್ತಿದೆ. ಇತ್ತೀಚೆಗಷ್ಟೇ ಪ್ರಭಾಸ್ ಹಾಗೂ ಅಮಿತಾಭ್ ಬಚ್ಚನ್ ಮೊದಲ ಬಾರಿಗೆ ಶೂಟಿಂಗ್​ ಸೆಟ್​ನಲ್ಲಿ ಮುಖಾಮುಖಿಯಾಗಿದ್ದು, ಈ ಸಂದರ್ಭದ ಆದಂತಹ ಅನುಭವವನ್ನು ಇಬ್ಬರೂ ಕಲಾವಿದರು ತಮ್ಮ ಸಾಮಾಜಿಕ ಜಾಲತಾಣ (Social Media) ಖಾತೆಗಳಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ (Viral) ಆಗಿದೆ.

Puneeth James Teaser: 'ಜೇಮ್ಸ್ ಸಿನಿಮಾ ಮಾಸ್ಟರ್‌ಪೀಸ್​ ಸಿನಿಮಾವಾಗುತ್ತೆ' ಎಂದ ಡಾರ್ಲಿಂಗ್ ಪ್ರಭಾಸ್!

ಅಮಿತಾಭ್ ಬಚ್ಚನ್ ಜತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವುದರ ಬಗ್ಗೆ ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ಅಮಿತಾಭ್ ಬಚ್ಚನ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಕನಸು ನನಸಾಯಿತು' ಎಂದು ಬರೆದುಕೊಂಡಿದ್ದು,  ಅಮಿತಾಬ್ ನಟನೆಯ 1975ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ 'ದೀವಾರ್​' ಸಿನಿಮಾದ ಪೋಸ್ಟರನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ರಭಾಸ್ ಜತೆ ತೆರೆ ಹಂಚಿಕೊಂಡಿರುವುದರ ಬಗ್ಗೆ ಅಮಿತಾಭ್ ಬಚ್ಚನ್ ಕೂಡ ತಮ್ಮ ಮೊದಲ ದಿನದ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದು, ಈ ಬಗ್ಗೆ ಟ್ವೀಟರ್‌ನಲ್ಲಿ (Twitter) 'ಮೊದಲ ದಿನ, ಮೊದಲ ಶಾಟ್. ಬಾಹುಬಲಿ ಪ್ರಭಾಸ್ ಅವರೊಂದಿಗಿನ ಮೊದಲ ಚಿತ್ರ. ಅಂತಹ ಪ್ರತಿಭೆ, ನಮ್ರತೆಯ ವ್ಯಕ್ತಿತ್ವದ ಜತೆಗೆ ಕೆಲಸ ಮಾಡುವುದು ದೊಡ್ಡ ಗೌರವ ಮತ್ತು ಕಲಿಯಲು ಉತ್ತಮ ಅವಕಾಶ' ಎಂದು ಟ್ವೀಟ್ (Tweet) ಮಾಡುವ ಮೂಲಕ ಪ್ರಭಾಸ್​ಗೆ ಶಹಬ್ಬಾಸ್​ಗಿರಿ ನೀಡಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by Prabhas (@actorprabhas)


ಇನ್ನು ಕಳೆದ ವರ್ಷ ಅನೌನ್ಸ್ ಆಗಿದ್ದ 'ಪ್ರಾಜೆಕ್ಟ್ ಕೆ' ಸಿನಿಮಾ ಸೈನ್ಸ್ ಫಿಕ್ಷನ್ ಮಾದರಿಯಾಗಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಬಜೆಟ್​​ನಲ್ಲಿ ತಯಾರಾಗಲಿರುವ ಚಿತ್ರ ಎನ್ನಲಾಗಿದೆ. ಹಾಗಾಗಿ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದ್ದು, ಚಿತ್ರತಂಡ ಇದುವರೆಗೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಇದರಿಂದ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿದೆ. ಸದ್ಯ ಚಿತ್ರತಂಡ ಆದಷ್ಟು ಬೇಗ ಚಿತ್ರದ ಶೂಟಿಂಗ್ ಮುಗಿಸಲು ಪ್ಲ್ಯಾನ್ ಹಾಕಿಕೊಂಡಿದ್ದು, ಅದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದೆ. 2023ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಈ ಚಿತ್ರ ರಿಲೀಸ್ ಆಗಲಿದೆ ಎಂದು ಈ ಹಿಂದೆ ವರದಿಯಾಗಿತ್ತು.

Legends League Cricket ಬಿಗ್ ಬಿ ಅಮಿತಾಭ್ ಬಚ್ಚನ್ ರಾಯಭಾರಿ!

ಇನ್ನು ಪ್ರಭಾಸ್, ಇತ್ತೀಚೆಗೆ ಬಿಡುಗಡೆಯಾದ ಪುನೀತ್​ ರಾಜ್​ಕುಮಾರ್ (Puneeth Rajkumar)​  ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' (James) ಟೀಸರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಬಗ್ಗೆ  'ಜೇಮ್ಸ್ ಸಿನಿಮಾ ಮಾಸ್ಟರ್‌ಪೀಸ್​ ಸಿನಿಮಾವಾಗುತ್ತೆ ಎಂಬುದನ್ನು ನಾನು ಖಾತ್ರಿ ಪಡಿಸುತ್ತೇನೆ. ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರನ್ನು ಇಷ್ಟಪಡುವ ಲಕ್ಷಾಂತರ ಜನರಿಗೆ ಈ ಸಿನಿಮಾ ವಿಶೇಷವಾಗಿರುತ್ತದೆ. ವಿ ಮಿಸ್​ ಯೂ ಅಂತ' ಪ್ರಭಾಸ್​ ಬರೆದುಕೊಂಡು 'ಜೇಮ್ಸ್​' ಚಿತ್ರದ ಟೀಸರ್ ವಿಡಿಯೋ ಲಿಂಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸದ್ಯ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್​' (Radhe Shyam) ಚಿತ್ರವು ತೆರೆಗೆ ಬರಲು ಸಜ್ಜಾಗಿದೆ. 
 

Latest Videos
Follow Us:
Download App:
  • android
  • ios