ಮುಖ ಮುಚ್ಚಿಕೊಂಡು ಓಡಾಡುತ್ತಿರುವ ರಾಜ್ ಕುಂದ್ರ; ನೆಟ್ಟಿಗರಿಂದ ಟ್ರೋಲ್
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ರಾಜ್ ಕುಂದ್ರ ಮತ್ತೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಆದರೆ ಮುಖ ಮುಚ್ಚಿಕೊಂಡು ಓಡಾಡುತ್ತಿರುವ ರಾಜ್ ಕುಂದ್ರ ನೋಡಿ ಅನೇಕರು ಕಾಲೆಳೆಯುತ್ತಿದ್ದಾರೆ. ಪತಿಯನ್ನು ನೋಡಿ ಸ್ವತಃ ಶಿಲ್ಪಾ ಶೆಟ್ಟಿ ಕೂಡ ನಕ್ಕಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ರಾಜ್ ಕುಂದ್ರ ಮತ್ತೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಮುಖ ಮುಚ್ಚಿಕೊಂಡು ಓಡಾಡುತ್ತಿರುವ ರಾಜ್ ಕುಂದ್ರ ನೋಡಿ ಅನೇಕರು ಕಾಲೆಳೆಯುತ್ತಿದ್ದಾರೆ. ಕೊರೊನಾ ವೈರಸ್ ಹಾವಳಿ ಕೊಂಚ ಮಟ್ಟಿಗೆ ತಗ್ಗಿದೆ ಈ ನಡುವೆ ರಾಜ್ ಕುಂದ್ರ ಸಂಪೂರ್ಣ ಫೇಸ್ ಮಾಸ್ಕ್ ಧರಿಸಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ ಮುಚ್ಚಿಕೊಂಡು ಓಡಾಡುತ್ತಿರುವ ರಾಜ್ ಕುಂದ್ರ ನೋಡಿ ಸ್ವತಃ ಶಿಲ್ಪಾ ಶೆಟ್ಟಿ ಕೂಡ ನಕ್ಕಿದ್ದಾರೆ. ರಾಜ್ ಕುಂದ್ರ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ ಕುಂದ್ರ ಇಂದು ಭಾನುವಾರ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಮತ್ತು ಅವರ ತಾಯಿ ಸುನಂದಾ ಶೆಟ್ಟಿ ಹಾಗೂ ರಾಜ್ ಕುಂದ್ರ ತಾಯಿಯೊಂದಿಗೆ ಮುಂಬೈನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ಕುಂದ್ರ ಕಪ್ಪು ಬಣ್ಣ ಬಟ್ಟೆ ಧರಿಸಿದ್ದರು ಜೊತೆ ಕಪ್ಪು ಫೇಸ್ ಮಾಸ್ಕ್ ಹಾಕಿದ್ದರು. ಕಾರಿನಿಂದ ಇಳಿದು ಮನೆಯೊಳಗೆ ತೆರಳುವ ವಿಡಿಯೋ ಸೆರೆಯಾಗಿದೆ. ಲಿಫ್ಟ ಬಳಿ ನಿಂತಿದ್ದ ಶಿಲ್ಪಾ ಶೆಟ್ಟಿ ಪತಿಯನ್ನು ನೋಡಿ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋವನ್ನು ಮುಂಬೈ ಕ್ಯಾಮರಾ ಮ್ಯಾನ್ ಒಬ್ಬರು ಶೇರ್ ಮಾಡಿದ್ದಾರೆ.
ಶಿಲ್ಪಾ ಶೆಟ್ಟಿ ತಾಯಿಗೆ ಮತ್ತೆ ಸಂಕಷ್ಟ; ವಾರೆಂಟ್ ಜಾರಿ
ಈ ವಿಡಿಯೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಒಬ್ಬ ಕಾಮೆಂಟ್ ಮಾಡಿದ್ರೆ ಇನ್ನೊಬ್ಬ ಕಾಮೆಂಟ್ ಮಾಡಿ, ಮುಂಬೈನಲ್ಲಿ ಮಾಸ್ಕ್ ಧರಿಸಲೇ ಬೇಕು ಅಂತ ಇಲ್ಲ ಆದರೂ ಯಾಕೆ ಹೀಗೆ ಹಾಕಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಇದು ಹೆಲ್ಮೆಟ್ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ರಾಜ್ ಕುಂದ್ರ ಅವರನ್ನು ಕನ್ಯೆ ವೆಸ್ಟ್ ಎಂದು ಕರೆಯುತ್ತಿದ್ದಾರೆ. ಇವರು ಭಾರತದ ಕನ್ಯೆ ವೆಸ್ಟ್ ಎನ್ನುತ್ತಿದ್ದಾರೆ. ಇನ್ನು ಕೆಲವರು ರಣ್ವೀರ್ ಸಿಂಗ್ ಅವರಿಗೆ ಹೋಲಿಸಿ ರಣ್ವೀರ್ ಸಿಂಗ್ ಹಾಗೆ ಉಡುಗೆ ಧರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆ ಕೂಡ ರಾಜ್ ಕುಂದ್ರ ವಿಭಿನ್ನ ರೀತಿಯ ಬಟ್ಟೆ ಧರಿಸಿ ಮುಂಬೈ ನಗರದಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಟ್ ಮ್ಯಾನ್ ಸಿನಿಮಾ ವೀಕ್ಷಿಸಲು ಕುಟುಂಬದ ಜೊತೆ ತೆರಳಿದ್ದ ಕುಂದ್ರ ಸಂಪೂರ್ಣ ಕಪ್ಪು ಬಣ್ಣದ ಬಟ್ಟೆ ಧರಿಸಿ ಮುಖ ಕೂಡ ಮುಚ್ಚಿಕೊಂಡು ತೆರಳಿದ್ದರು. ಇದೀಗ ಮತ್ತೆ ಮುಖ ಮುಚ್ಚಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಶಿಲ್ಪಾ ಶೆಟ್ಟಿಗೆ ಪೋಕರ್ ಆಡಲು ಕಲಿಸಿದ ಸ್ಪಿನ್ನರ್ ಶೇನ್ ವಾರ್ನ್ !
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಕಳೆದ ವರ್ಷ ಜುಲೈನಲ್ಲಿ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಜೈಲು ಸೇರಿದ್ದರು. ಅಶ್ಲೀಲ ವಿಡಿಯೋ ಮಾಡಿ ಅಪ್ ಲೋಡ್ ಮಾಡುತ್ತಿದ್ದ ಆರೋಪದ ಮೇಲೆ ರಾಜ್ ಕುಂದ್ರ ಅವರನ್ನು ಬಂಧಿಸಲಾಗಿತ್ತು. ಬಳಿಕ ಸೆಪ್ಟಂಬರ್ ನಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದರು. ರಾಜ್ ಕುಂದ್ರ ಹಾಟ್ ಶಾಟ್ಸ್ ಎನ್ನುವ ಆಪ್ ಮೂಲಕ ಪೋರ್ನ್ ವಿಡಿಯೋ ಚಿತ್ರೀಕರಿಸಿ ಅಪ್ ಲೋಡ್ ಮಾಡಿತ್ತಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ಈ ಎಲ್ಲಾ ಆರೋಪವನ್ನು ರಾಜ್ ಕುಂದ್ರ ತಳ್ಳಿ ಹಾಕಿದ್ದರು. ತನ್ನನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು.