Asianet Suvarna News Asianet Suvarna News

ನಾನು ನಿಮ್ಮವ; ಜಾನ್ವಿ ಕಪೂರ್ ಪ್ರೀತಿ ಗುಟ್ಟಾಗಿಟ್ರೂ ರಟ್ಟು ಮಾಡಿದ ಬಾಯ್‌ಫ್ರೆಂಡ್!

ರೊಮ್ಯಾಂಟಿಕ್ ರಿಲೇಷನ್‌ಶಿಪ್‌ನ ಪಬ್ಲಿಕ್ ಮಾಡಿದ ಜಾನ್ವಿ ಕಪೂರ್ ಬಾಯ್‌ಫ್ರೆಂಡ್‌. ಶ್ರೀದೇವಿ ಮಗಳ ಮದುವೆ ಯೋಚನೆಯಲ್ಲಿ ಫ್ಯಾನ್ಸ್‌.

Shikhar Pahariya says Im all yours for Sridevi daughter Janhvi Kapoor vcs
Author
First Published Nov 8, 2023, 11:04 AM IST

ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಮುದ್ದಿನ ಮಗಳ ಜಾನ್ವಿ ಕಪೂರ್ ಬಿ-ಟೌನ್‌ ಬಹು ಬೇಡಿಕೆಯ ನಟಿ. ಕೈ ತುಂಬಾ ಸಿನಿಮಾ, ಜಾಹೀರಾತು ಜೊತೆಯಲ್ಲಿ ತಂದೆ ವ್ಯವಹಾರ ನೋಡಿಕೊಳ್ಳುತ್ತಿರುವ ಜಾನು ಪ್ರೀತಿಯಲ್ಲಿ ಬಿದ್ದಿದ್ದರು. ಕೆಲವು ತಿಂಗಳುಗಳಿಂದ ಶಿಖರ್ ಪಹಾರಿಯಾ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಈಗ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಕಾಮೆಂಟ್ ಮೂಲಕ ಬಹಿರಂಗವಾಗಿದೆ.

ಶಿಖರ್ ಪಹಾರಿಯಾ ಮತ್ತು ಜಾನ್ವಿ ಕಪೂರ್...ಇಬ್ಬರಿಗೂ ಕ್ಲೋಸ್ ಆಗಿರುವ ಸ್ನೇಹಿತ ಓರಿ ಕಳೆದ ವಾರ ನಡೆದ ಬರ್ತಡೇ ಪಾರ್ಟಿ ವಿಡಿಯೋ ಹಂಚಿಕೊಳ್ಳುತ್ತಾರೆ. ದೊಡ್ಡ ದೊಡ್ಡ ಸ್ಟಾರ್‌ಗಳು ಮಾತ್ರ ಭಾಗಿಯಾಗಿರುತ್ತಾರೆ.  ಆ ರೀಲ್‌ನಲ್ಲಿ ಶಿಖರ್ ಪಹಾರಿಯಾ ಒಬ್ಬರ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಅದನ್ನು ಗಮನಿಸಿದ ಜಾನು ಪಿಂಕ್ ಡ್ರೆಸ್‌ನಲ್ಲಿರುವ ಹುಡುಗಿ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಓರಿ 'ರನ್' ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲಿಗೆ ಸುಮ್ಮನಾಗದೆ ಶಿಖರ್ ಪಹಾರಿಯಾ 'ನಾನು ನಿಮ್ಮವ' ಎಂದು ಹೇಳಿದ್ದಾನೆ. 

ಬಾಯ್​ಫ್ರೆಂಡ್​​ ಜೊತೆ ತಿರುಪತಿಗೆ ಹೋದ ಜಾಹ್ನವಿ ಕಪೂರ್​ ಬೆರಳಲ್ಲಿ ವಜ್ರದ ಉಂಗುರ! ಆಗಿದ್ದೇನು?

ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಅಗುತ್ತಿದ್ದಂತೆ ಕಾಮೆಂಟ್‌ಗಳನ್ನು ಡಿಲೀಟ್ ಮಾಡಲಾಗಿದೆ. ಆದರೆ ಕೆಲವು ಅಭಿಮಾನಿಗಳು ಅದನ್ನು ಸ್ಕ್ರೀನ್‌ಶಾಟ್‌ ತೆಗೆದುಕೊಂಡು ವೈರಲ್ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಬಹಿರಂಗವಾಗಿ ಈ ರೀತಿ ಇವರಿಬ್ಬರು ಕಾಮೆಂಟ್ ಮಾಡಿರುವುದು ಮೊದಲಲ್ಲ. ಈ ಹಿಂದೆಯೂ ಮಿಲ್ಲಿ ಗುಂಪಿನಲ್ಲಿ ಹುಡುಗಿರು ನಿಂತುಕೊಂಡಿರುವ ಫೋಟೋ ಹಾಕಿದ್ದರು ಅದರಲ್ಲಿ ಜಾನ್ವಿ ಕೂಡ ಇದ್ದರು ಆಗ ವಾವ್ ವಾವ್ ವಾವ್ ಎಂದು ಕಾಮೆಂಟ್ ಮಾಡಿದ್ದಾರೆ. 

ಬಾಯ್‌ಫ್ರೆಂಡ್ ಜೊತೆ ತಿರುಪತಿಯಲ್ಲಿ: 

ಜಾನ್ವಿ ಕಪೂರ್ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ತಿರುಪತಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ಮತ್ತು ಶಿಖರ್ ಪಹಾರಿಯಾ ಇಬ್ಬರೂ ತಿರುಪತಿಗೆ ಭೇಟಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾನ್ವಿ ಕಪೂರ್ ಹಸಿರು ಮತ್ತು ಪಿಂಕ್ ಬಣ್ಣದ ದಾವಣಿಯಲ್ಲಿ ಮಿಂಚಿದ್ದಾರೆ. ಇಂದು ಸೋಮವಾರ (ಏಪ್ರಿಲ್ 3) ಬೆಳ್ಳಂಬಳಗ್ಗೆ ಜಾನ್ವಿ ಮತ್ತು ಶಿಖರ್ ಪಹಾರಿಯಾ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದರು.

ಬಾಯ್​ಫ್ರೆಂಡ್​ ಜೊತೆ ವಿದೇಶಕ್ಕೆ ಹಾರಿದ ನಟಿ Janhvi Kapoor

ಕಾಫಿ ವಿತ್ ಕರಣ್ ಶೋನಲ್ಲಿ ನಟಿ ಜಾನ್ವಿ ಕಪೂರ್, ಶಿಖರ್ ಬಗ್ಗೆ ಮಾತನಾಡಿದ್ದರು. ಶಿಖರ್ ಜೊತೆಗಿನ ಡೇಟಿಂಗ್ ವದಂತಿಯನ್ನು ಬಹುತೇಕ ಖಚಿತ ಪಡಿಸಿದ್ದರು. ಅಲ್ಲದೇ ಅದು ಹಳೆಯ ವಿಚಾರ ಎಂದು ಹೇಳಿದ್ದರು. ಜಾನ್ವಿ ಪಾತ್ರವಲ್ಲದೇ ನಟ ಸಾರಾ ಅಲಿ ಖಾನ್ ಕೂಡ ಶಿಖರ್ ಜೊತೆ ಡೇಟ್ ಮಾಡುತ್ತಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು. ಇದೀಗ ಜಾನ್ವಿ ಕಪೂರ್ ಮತ್ತೆ ಶಿಖರ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. 

Follow Us:
Download App:
  • android
  • ios