ಬಾಯ್​ಫ್ರೆಂಡ್​ ಜೊತೆ ವಿದೇಶಕ್ಕೆ ಹಾರಿದ ನಟಿ Janhvi Kapoor

ಶ್ರೀದೇವಿ ಪುತ್ರಿ ನಟಿ ಜಾಹ್ನವಿ ಕಪೂರ್​ ಬಾಯ್​ಫ್ರೆಂಡ್​ ಜೊತೆ ವಿದೇಶಕ್ಕೆ ಹಾರಿದ್ದು, ಅದರ ಫೋಟೋ ವೈರಲ್​ ಆಗಿದೆ. ಏನಿದರ ಕಥೆ? 
 

Shikhar Pahariya joins Janhvi Kapoor to foreign tour

ಒಂದು ಕಾಲದಲ್ಲಿ ಬಾಲಿವುಡ್​ ಆಳಿದ್ದ ಸುಂದರಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್​ (Janhvi Kapoor) ಸದಾ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಾಗಿ ಬಿಕಿನಿ ತೊಟ್ಟು ಇಲ್ಲವೇ ಚಿಕ್ಕ ಉಡುಗೆ ಹಾಕಿಕೊಂಡು ಇವರು ಟ್ರೋಲ್​  ಆಗುತ್ತಿರುವುದೇ ಹೆಚ್ಚು. ಶ್ರೀದೇವಿಯಂಥ ನಟಿಯ ಮಗಳು ಈ ರೀತಿಯ ಡ್ರೆಸ್​ ಧರಿಸುವುದು ಸರಿಯಲ್ಲ ಎಂದು ನೆಟ್ಟಿಗರು ಪಾಠ ಮಾಡುತ್ತಲೇ   ಇರುತ್ತಾರೆ.  ಆದರೆ ಇದ್ಯಾವುದಕ್ಕೂ ಕೇರೇ ಅನ್ನದ ನಟಿ, ಸದಾ ಡೇಟಿಂಗ್​, ಪಾರ್ಟಿ, ಟೂರ್​ ಎನ್ನುತ್ತಲೇ ಇರುತ್ತಾರೆ. ಇದೀಗ ಈಕೆಯ ಕುರಿತು ಕುತೂಹಲದ ಮಾಹಿತಿಯೊಂದು ಬಂದಿದೆ. ಈಗಾಗಲೇ ಜಾಹ್ನವಿ ಕಪೂರ್​ ಹೆಸರು ಹಲವಾರು ಮಂದಿಯ ಜೊತೆ ಥಳಕು ಹಾಕಿಕೊಂಡಿದೆ. ಈಕೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಕೆಲವು ಯುವಕರ ಹೆಸರೂ ಪ್ರಸ್ತಾಪಿಸಲಾಗಿದೆ. ಆದರೆ ಇದೀಗ ತಾಜಾ ಸುದ್ದಿ ಎಂದರೆ ಈಕೆ ಉದ್ಯಮಿ ಶಿಖರ್​ ಪಹರಿಯಾ (Shikhar Pahariya) ಜೊತೆ ಸುತ್ತೋಕೆ ಹೋಗಿದ್ದಾರೆ. 

ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್​ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್​  ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್​ ಕೂಡ ಮಾಡಿಸಿಕೊಂಡಿದ್ದಾರೆ.  ಬಾಲಿವುಡ್​ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್​ ಫ್ರೆಂಡ್​ (Boy Friend) ಜೊತೆ ಟ್ರಿಪ್​ಗೆ ಹೋಗಿರುವ ಫೋಟೋಗಳು ವೈರಲ್​ ಆಗಿವೆ. ಆದರೆ ಕುತೂಹಲದ ಸಂಗತಿಯೆಂದರೆ, ಜಾಹ್ನವಿ ಅವರ ತಂದೆ ಬೋನಿ ಕಪೂರ್​ (Bony Kapoor) ಕೂಡ ಈ ಟ್ರಿಪ್​ಗೆ ಹೋಗಿದ್ದಾರೆ ಎನ್ನುವುದು! ಮಗಳ ಬಾಯ್​ಫ್ರೆಂಡ್​ ಜೊತೆ ಅಪ್ಪನಿಗೆ ಏನು ಕೆಲಸ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಇನ್ನೂ ಕುತೂಹಲದ ಸಂಗತಿಯೆಂದರೆ ಇವರ ಜೊತೆಗೂಡಿದ್ದಾರೆ ಶಿಖರ್ ಪಹಾರಿಯಾ ಸಹೋದರಿ ಸಾರಾ ಕೂಡ!

Actress Sridevi ಸಾವಿಗೆ 5 ವರ್ಷ: ಭಾವುಕ ನುಡಿನಮನ ಸಲ್ಲಿಸಿದ ಮಗಳು ಜಾಹ್ನವಿ ಕಪೂರ್​
 
ಶಿಖರ್ ಪಹಾರಿಯಾ ಅವರೊಂದಿಗೆ ಈ ದಿನಗಳಲ್ಲಿ ಜಾಹ್ನವಿ ಕಪೂರ್ ಡೇಟಿಂಗ್ ಸುದ್ದಿ ಕೇಳಿ ಬರುತ್ತಿದ್ದರೂ ಅವರು ಆ ಬಗ್ಗೆ ಇನ್ನೂ  ದೃಢೀಕರಿಸಲಿಲ್ಲ. ಆದರೆ  ಕರಣ್ ಜೋಹರ್ ಅವರ ಚಾಟ್ ಶೋ 'ಕಾಫಿ ವಿತ್ ಕರಣ್ 7' ನಲ್ಲಿ ಅದರ ಬಗ್ಗೆ ಸುಳಿವು ನೀಡಿದ್ದರು. ಜಾಹ್ನವಿ ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂದು ಕರಣ್​ ಜೋಹರ್​ ಹೇಳಿದ್ದಾಗ  ಆಕೆ ನಾಚಿಕೊಂಡಿದ್ದರು. ಆದರೆ ಅದು ಯಾರು ಎಂಬ ಸುಳಿವನ್ನು ಕರಣ್​ ಕೊಟ್ಟಿರಲಿಲ್ಲ.  

ಆದರೆ ಕ್ಯಾಮೆರಾ  ಕಣ್ಣುಗಳು ಬಿಡಬೇಕಲ್ಲ. ಸೆಲೆಬ್ರಿಟಿಗಳು ಎಲ್ಲೇ ಹೋದರೂ ಫೋಟೋ ಕ್ಲಿಕ್ಕಿಸಲಾಗುತ್ತದೆ. ಅದೇ ರೀತಿ ಜಾಹ್ನವಿ ಹಾಗೂ ಕುಟುಂಬಸ್ಥರು  ವಿದೇಶಕ್ಕೆ ತೆರಳುತ್ತಿದ್ದಾಗ ಫೋಟೋ ಕ್ಲಿಕ್​ ಮಾಡಲಾಗಿದ್ದು, ಅದೀಗ ವೈರಲ್​ ಆಗಿದೆ. ಹಿಂದೆ ಇವರಿಬ್ಬರೂ ಮಾಲ್ಡವೀಸ್​ಗೆ ಒಟ್ಟಿಗೇ ಹೋಗಿದ್ದರು ಎಂಬ ಸುದ್ದಿ ಹರಡಿತ್ತು. ಇದಕ್ಕೆಲ್ಲ ಕಾರಣ ರಾತ್ರಿ ಸಮಯ ಜಾಹ್ನವಿ ಬಿಕಿನಿ ಸೆಟ್‌ನಲ್ಲಿ ತನ್ನ ಅದ್ಭುತ ಆಕೃತಿಯನ್ನು ತೋರಿ ಚಂದಿರನತ್ತ ಮುಖ ಮಾಡಿ ನಿಂತಿರುವ ಫೋಟೋ ಶೇರ್​ ಮಾಡಿಕೊಂಡಿದ್ದದರೆ, ಅತ್ತ ಶಿಖರ್ ಪಹಾರಿಯಾ ಕೂಡ ಚಂದ್ರನ ಬೆಳಕಿನಲ್ಲಿ ಕಡು ನೀಲಿ ಸಾಗರದ ಇದೇ ರೀತಿಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ (Instagram) ಸ್ಟೇಟಸ್‌ ಹಾಕಿದ್ದರು. ಹದ್ದಿನ ಕಣ್ಣಿನ ಕೆಲ ನೆಟ್ಟಿಗರು ಇವರಿಬ್ಬರ ಫೋಟೋವನ್ನು ನೋಡಿ ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ಗೆ ಹೋಗಿದ್ದಾರೆ ಎಂದು  ಅಂತ ಸಾಕ್ಷಿ ಮುಂದಿಟ್ಟಿದ್ದರು.  

Jr NTR ಜೊತೆ ರೊಮಾನ್ಸ್​ ಮಾಡಲು ಜಾಹ್ನವಿ ಕಪೂರ್‌ಗೆ​ ಈ ಪರಿ ಸಂಭಾವನೆಯಾ?

Latest Videos
Follow Us:
Download App:
  • android
  • ios