Asianet Suvarna News Asianet Suvarna News

ನನ್ನ ಶರೀರದ ತುಂಬೆಲ್ಲಾ ವಿಷವಿದೆ ಎಂದ ಶೆರ್ಲಿನ್​! ಸತ್ತವರ ಲೆಕ್ಕ ಕೊಡಿ ಅನ್ನೋದಾ ನೆಟ್ಟಿಗರು?

ಬಾಲಿವುಡ್​ ನಟಿ ಶೆರ್ಲಿನ್​ ಚೋಪ್ರಾ ನನ್ನ ಶರೀರದ ತುಂಬೆಲ್ಲಾ ವಿಷವಿದೆ ಎನ್ನುತ್ತಾ  ಪೋಸ್​ ಕೊಟ್ಟರೆ, ಟ್ರೋಲಿಗರು ಏನೆಲ್ಲಾ ಹೇಳಿದ್ರು ನೋಡಿ... 
 

Sherlyn Chopra posed saying that her body is full of poison trollers wants death rate suc
Author
First Published May 20, 2024, 5:37 PM IST

ನಟಿ ಶೆರ್ಲಿನ್​ ಚೋಪ್ರಾ ಎಂದಾಕ್ಷಣ ಸಿನಿ ಪ್ರಿಯರಿಗೆ ಕಾಣಿಸುವ ರೂಪವೇ ಬೇರೆಯದ್ದು.  ಪ್ಲಾಸ್ಟಿಕ್​ ರಾಣಿ ಎಂದೇ ಈಕೆ ಫೇಮಸ್​ ಆದವರು. ದೇಹದ ಭಾಗಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರುವ ಶೆರ್ಲಿನ್​ ಅದರ ಮೂಲಕವೇ ಪ್ರಸಿದ್ಧಿಗೆ ಬಂದವರು. ತೆಳ್ಳಗೆ, ಬೆಳ್ಳಗೆ ಇರಲು ಸಾಕಷ್ಟು ಡಯಟ್​ ಪಾಲನೆ, ಯೋಗ, ಜಿಮ್​, ವ್ಯಾಯಾಮಗಳ ಮೊರೆ ಹೋಗುವ ನಟಿಯರು ಎದೆ ಭಾಗವನ್ನು ದೊಡ್ಡದಾಗಿ ತೋರಿಸಿಕೊಳ್ಳಲು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಇವರ ಪೈಕಿ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಕೂಡ ಒಬ್ಬರು.  ಇದೇ ಕಾರಣಕ್ಕೆ ಈಕೆ ಹೋದಲ್ಲಿ, ಬಂದಲ್ಲಿ ಪಾಪರಾಜಿಗಳ ಕಣ್ಣು ಇವರ ಮೇಲೆ ನೆಟ್ಟಿರುತ್ತದೆ. ಈಗ ಅವರು, ವೆಬ್​ಸೀರಿಸ್​ ಒಂದರಲ್ಲಿ ಡಬಲ್​ ರೋಲ್​ ಮಾಡಿರುವ ಕುರಿತು ಮಾತನಾಡಿದ್ದಾರೆ. ಇದರಲ್ಲಿ ನಾನು ವಿಷ ಕನ್ಯೆ. ನನ್ನ ದೇಹದ ತುಂಬೆಲ್ಲಾ ವಿಷವಿದೆ ಎಂದು ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಸುಮ್ಮನೇ ಬಿಟ್ಟಾರೆಯೆ? ಥಹರೇವಾರಿ ಕಮೆಂಟ್ಸ್​ ಮಾಡಿದ್ದಾರೆ. 

ಇದಾಗಲೇ ನಟಿಯ ಹೆಸರು ಹಲವರ ಜೊತೆ ಕೇಳಿಬಂದಿದೆ. ಮಾತ್ರವಲ್ಲದೇ, ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಖುದ್ದು ನಟಿಯೇ ಹೇಳಿಕೊಂಡಿದ್ದರು. ಅದಾದ ಬಳಿಕ,  ಉದ್ಯಮಿಯೊಬ್ಬರ ವಿರುದ್ಧ  ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ  ನಟಿ ದೂರಿನಲ್ಲಿ ತಿಳಿಸಿದ್ದರು.  

ಸಾನಿಯಾ ಮಿರ್ಜಾಗೆ ಮರು ಮದುವೆ: ಅರಬ್​ ದೇಶಗಳನ್ನು ಪ್ರಸ್ತಾಪಿಸುತ್ತಲೇ ಪಾಕ್​ ನಟ ಹೇಳಿದ್ದೇನು?

ನಟಿ ಇಷ್ಟೆಲ್ಲಾ ಹೇಳಿದ  ಮೇಲೆ ಮೈತುಂಬಾ ವಿಷವಿದೆ ಎನ್ನುತ್ತಿದ್ದಂತೆಯೇ ಹಾಗಿದ್ದರೆ ಅದನ್ನು ಎಷ್ಟು ಮಂದಿ ಸೇವಿಸಿದ್ದಾರೆ? ಆ ಪೈಕಿ ಸತ್ತವರೆಷ್ಟು ಲೆಕ್ಕ ಕೊಡಿ ಎಂದು ನಟಿಯ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು. ಈಕೆ ಫೋಟೋ ಶೂಟ್​  ಮಾಡಿಸಿಕೊಂಡಾಗಲೆಲ್ಲವೂ ನೆಗೆಟಿವ್​ ಕಮೆಂಟ್​ಗಳೇ ಜಾಸ್ತಿ ಬರುತ್ತವೆ. ಆದರೂ ಟ್ರೋಲ್​  ಮೂಲಕವೇ ಫೇಮಸ್​ ಆಗಬಯಸುವ ಇಂದಿನ ಕೆಲವು ತಾರೆಯರಂತೆ ಈಕೆ ಕೂಡ ಒಬ್ಬರು. ಇದೇ ಕಾರಣಕ್ಕೆ ಇಂಥ ಡ್ರೆಸ್​ಗಳನ್ನು ಧರಿಸಿ ಜನರ ಮುಂದೆ ಕಾಣಿಸಿಕೊಳ್ಳುತ್ತಾರೆ.  
 
ಕೆಲ ದಿನಗಳ ಹಿಂದೆ ನಟಿ, ಐಸ್​ಕ್ರೀಂ ಹೇಗೆ ತಿನ್ನಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದರು. ಐಸ್​ಕ್ರೀಂ ಷಾಪ್​ ಒಂದರಲ್ಲಿ ಕೋನ್​ ಐಸ್​ಕ್ರೀಂ ಖರೀದಿ ಮಾಡಿರುವ ಶೆರ್ಲಿನ್​ ಹೆಣ್ಣುಮಕ್ಕಳು ಐಸ್​ಕ್ರೀಂ ಹೀಗೆ ತಿನ್ನಬೇಕು ಎಂದು ಹೇಳಿದ್ದರು. ಈ ಹಿಂದೆ ನಟಿ ಫ್ರೀ ಆಗಿ  ರೋಡ್​ಸೈಡ್​ನಲ್ಲಿ ಕೋನ್​ ಐಸ್​ಕ್ರೀಂ ತಿಂದಿದ್ದು, ಅದಕ್ಕೆ ದುಡ್ಡು ಕೊಡದೇ ಭಾರಿ ಟೀಕೆಗೆ ಒಳಗಾಗಿದ್ದರು. ಇದೀಗ  ಅದೇ ರೀತಿ ಮತ್ತೆ ಐಸ್​​ಕ್ರೀಂ ಸೇವನೆ ಮಾಡಿದ್ದರು. ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬಂದಿದ್ದು, ನಟಿಯ ವಿರುದ್ಧ ಟೀಕೆಗಳ ಸುರಿಮಳೆಯೇ ಆಗಿತ್ತು.   

ಐಶ್ವರ್ಯಾಳ ಬ್ಯೂಟಿಯನ್ನು ಈ ರೀತಿ ಹಾಳು ಮಾಡಿದ್ದೇ ಪ್ಲಾಸ್ಟಿಕ್​! ನಟಿ ಕಸ್ತೂರಿ ಶಂಕರ್​ ಶಾಕಿಂಗ್​ ಹೇಳಿಕೆ

Latest Videos
Follow Us:
Download App:
  • android
  • ios