ಸಾನಿಯಾ ಮಿರ್ಜಾಗೆ ಮರು ಮದುವೆ: ಅರಬ್​ ದೇಶಗಳನ್ನು ಪ್ರಸ್ತಾಪಿಸುತ್ತಲೇ ಪಾಕ್​ ನಟ ಹೇಳಿದ್ದೇನು?


ಸಾನಿಯಾ ಮಿರ್ಜಾಗೆ ಮರು ಮದುವೆ ಕುರಿತಂತೆ ಅರಬ್​ ದೇಶಗಳನ್ನು ಪ್ರಸ್ತಾಪಿಸುತ್ತಲೇ ಪಾಕ್​ ನಟ ಹೇಳಿದ್ದೇನು? 
 

Divorce doesnt mean end of the world Nabeel Zafar thinks Sania Mirza should remarry suc

ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು  ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವಿಚ್ಛೇದನದ ಸುದ್ದಿ ಇನ್ನೂ ನಿಂತಿಲ್ಲ.   14 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಳಿಸಿದೆ ಈ ಜೋಡಿ. ಇದಾಗಲೇ  ಶೋಯೆಬ್​   ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಮದುವೆಯಾಗಿದ್ದು ಹನಿಮೂನ್​ ಮೂಡ್​ನಲ್ಲಿದ್ದಾರೆ. ಇದು ಶೋಯೆಬ್​ ಅವರಿಗೆ ಮೂರನೆಯ ಮದುವೆ. ಇದಾದ ಕೆಲವೇ ದಿನಗಳಲ್ಲಿ,  ಸಾನಿಯಾ ಮಿರ್ಜಾ ಮೊಹಮ್ಮದ್ ಶಮಿ ಅವರೊಂದಿಗಿನ ವಿವಾಹ ಆಗಲಿದ್ದಾರೆ ಎಂದು ಭಾರಿ ಸದ್ದು ಮಾಡಿತ್ತು. ಆದರೆ ಇವೆಲ್ಲವೂ ಗಾಳಿ ಸುದ್ದಿಯೇ ವಿನಾ ಅಸಲಿಯತ್ತು ಅಲ್ಲ ಎನ್ನುವುದು ತಿಳಿದುಬಂತು. 

ಇದೀಗ ಪಾಕಿಸ್ತಾನದ ನಟ  ನಟ ನಬೀಲ್ ಜಾಫರ್ ಅವರು ಸಾನಿಯಾ ಮಿರ್ಜಾ ಅವರ ಮರುಮದುವೆಯ ಕುರಿತು ಮಾತನಾಡಿದ್ದು, ಅದೀಗ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.  ಸಾನಿಯಾ ಕೂಡ ಸರಿಯಾದ ಸಂಗಾತಿಯನ್ನು ಹುಡುಕಿ ಮರುಮದುವೆಯಾಗುವುದನ್ನು ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು. ಇದೇ ವೇಳೆ ತಮ್ಮ ಧರ್ಮದಲ್ಲಿನ  ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳ ಕುರಿತು ಮಾತನಾಡಿದ ಅವರು,  ಯಾವುದೇ ಮಹಿಳೆಗೆ ವಿಚ್ಛೇದನದಂಥ  ಅಹಿತಕರ ಘಟನೆ ಸಂಭವಿಸಿದರೆ, ಅವಳು ಧಾರ್ಮಿಕ ಬೋಧನೆಗಳು ಮತ್ತು ಅರಬ್ ದೇಶಗಳಲ್ಲಿ ಹೇಗೆ ಆಚರಣೆಯಲ್ಲಿವೆ ಎಂಬುದನ್ನು ನೋಡಬೇಕು. ಇದು ನಮ್ಮ ಸಮಾಜದಲ್ಲಿ ಒಂದು ಸಂದಿಗ್ಧತೆಯಾಗಿದೆ. ಆದರೆ ಮಹಿಳೆಯರು ಅಂತಹ ಅಗ್ನಿಪರೀಕ್ಷೆಯನ್ನು ಮೀರಿ  ಮರುಮದುವೆಯಾಗುವತ್ತ ಯೋಚನೆ ಮಾಡಬೇಕಿದೆ ಎಂದರು.  ಒಬ್ಬ ಮನುಷ್ಯನು ನಿಮ್ಮ ಜೀವನದಲ್ಲಿ ಇಲ್ಲದಿರುವುದು ಪ್ರಪಂಚದ ಅಂತ್ಯವಲ್ಲ. ಪ್ರತಿಯೊಬ್ಬರೂ ತಮಗಾಗಿ ಇನ್ನೊಬ್ಬನನ್ನು ಹುಡುಕುವುದು, ಇನ್ನೊಬ್ಬರ ಜೊತೆ ಇರುವುದು ಬ್ರಹ್ಮಾಂಡದ ದೈವಿಕ ಕ್ರಮವಾಗಿದೆ. ದೇವರು ಕುಟುಂಬವನ್ನು ಸೃಷ್ಟಿಸಲು ಜಗತ್ತನ್ನು ಸೃಷ್ಟಿಸಿದ್ದಾನೆ. ಅದಕ್ಕೆ ಅನುಗುಣವಾಗಿ ನೀವು ಮದುವೆಯಾಗಬೇಕು ಎಂದಿದ್ದಾರೆ.   

ಸಂಸದೆಯಾದ್ರೆ ನಟನೆಗೆ ಗುಡ್​​ಬೈ ಹೇಳ್ತಾರಾ ಕಂಗನಾ? ನಟಿಯ ಹೇಳಿಕೆಗೆ ಅಭಿಮಾನಿಗಳು ಏನಂತಿದ್ದಾರೆ?

 ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರ ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಸಾನಿಯಾ ಮಿರ್ಜಾ ಮೊದಲ ಬಾರಿಗೆ ಶೋಯೆಬ್ ಮಲಿಕ್ ಅವರನ್ನು ಭೇಟಿಯಾಗಿದ್ದಾಗ ಪಾಕ್ ಕ್ರಿಕೆಟಿಗ ಇಷ್ಟವಾಗಿರಲಿಲ್ಲವಂತೆ. ಈ ಮಾತನ್ನು ಸ್ವತಃ ಮಲಿಕ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಪಾಕಿಸ್ತಾನದ ಟಿವಿ ಶೋ ವೊಂದರಲ್ಲಿ ಮಾತನಾಡಿದ್ದ ಮಲಿಕ್, ತಾವು ಸಾನಿಯಾ ಮಿರ್ಜಾ ಅವರನ್ನು 2003ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದಾಗಿ ತಿಳಿಸಿದ್ದರು. ಆ ಸಂದರ್ಭದಲ್ಲಿ ಸಾನಿಯಾಗೆ ನಾನು ಒಂಚೂರು ಇಷ್ಟವಾಗಿರಲಿಲ್ಲ ಎಂದು ಹೇಳಿದ್ದರು. ಆ ಸಂದರ್ಭದಲ್ಲೇ ಮಾತನಾಡಿದ್ದ ಸಾನಿಯಾ, ಕ್ರಿಕೆಟರ್‌ಗಳದ್ದು ಎಂತಹ ಬದುಕು ಆಗಿರುತ್ತದೆ ಎಂದು ನಮಗೆ ಗೊತ್ತಿದೆ. ಹೀಗಾಗಿ ಅವರಿಂದ ದೂರವಿರುವುದೇ ಒಳ್ಳೆಯದು ಎಂದು ಭಾವಿಸಿದ್ದೆ ಎಂದು ಸಾನಿಯಾ ತಮ್ಮ ಮೊದಲ ಭೇಟಿಯನ್ನು ಸ್ಮರಿಸಿಕೊಂಡಿದ್ದರು. 

ಇದಾದ ಆರು ವರ್ಷಗಳ ಬಳಿಕ ಅಂದರೆ 2009ರಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಎರಡನೇ ಬಾರಿಗೆ ಮುಖಾಮುಖಿಯಾದರು. ಇದು ಅವರಿಬ್ಬರ ಜೀವನದ ಟರ್ನಿಂಗ್ ಪಾಯಿಂಟ್ ಎನಿಸಿತು. 2009ರಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಆಸ್ಟ್ರೇಲಿಯಾದ ಹೋಬರ್ಟ್‌ನಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾದರು. ಆಗ ಮಾತುಕತೆ ಅವರಿಬ್ಬರನ್ನು ಹತ್ತಿರಕ್ಕೆ ತರುವಂತೆ ಮಾಡಿತು. ಪರಿಣಾಮ ಅದು ಮರು ವರ್ಷವೇ ಅವರಿಬ್ಬರು ಮದುವೆಯಾದರು. ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ಏಪ್ರಿಲ್ 10, 2010ರಲ್ಲಿ ಮುಸ್ಲಿಂ ಸಂಪ್ರದಾಯದಂತೆಯೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಹೈದರಾಬಾದ್‌ನಲ್ಲಿ ಸಾನಿಯಾ-ಶೋಯೆಬ್ ಮದುವೆ ಅದ್ಧೂರಿಯಾಗಿ ನಡೆಯಿತು. ಇದಾಗಿ ಎಂಟು ವರ್ಷಗಳ ಬಳಿಕ ಅಂದರೆ 2018ರಲ್ಲಿ ಈ ದಂಪತಿಗೆ ಇಜಾನ್ ಮಿರ್ಜಾ ಮಲಿಕ್ ಎನ್ನುವ ಗಂಡು ಮಗು ಜನಿಸಿತು. ಈಗ ಇಜಾನ್‌ ಮಿರ್ಜಾ ಮಲಿಕ್‌ಗೆ 5 ವರ್ಷವಾಗಿದ್ದು, ಸದ್ಯ ಅಮ್ಮ ಸಾನಿಯಾ ಮಿರ್ಜಾ ಜತೆಗಿದ್ದಾನೆ.

ಪ್ರಿಯಾ- ಅಶೋಕ್​ ಫಸ್ಟ್​ನೈಟ್​ ಶೂಟಿಂಗ್​ ಹೇಗಿತ್ತು? ವಿಡಿಯೋ ಮೂಲಕ ಫುಲ್​ ಡಿಟೇಲ್ಸ್​ ನೀಡಿದ ನಟಿ

Latest Videos
Follow Us:
Download App:
  • android
  • ios