Asianet Suvarna News Asianet Suvarna News

ಐಶ್ವರ್ಯಾಳ ಬ್ಯೂಟಿಯನ್ನು ಈ ರೀತಿ ಹಾಳು ಮಾಡಿದ್ದೇ ಪ್ಲಾಸ್ಟಿಕ್​! ನಟಿ ಕಸ್ತೂರಿ ಶಂಕರ್​ ಶಾಕಿಂಗ್​ ಹೇಳಿಕೆ

ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ನಟಿ ಐಶ್ವರ್ಯ ರೈ ಅವರ ಫೋಟೋ ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದು, ಅವರು ಈ ರೀತಿ ಕಾಣಿಸಲು ಪ್ಲಾಸ್ಟಿಕ್​ ಕಾರಣ ಎಂದು ಹೇಳಿದ್ದಾರೆ ನಟಿ ಕಸ್ತೂರಿ ಶಂಕರ್​ 
 

Plastic Has Ruined Aishwarya Rais Timeless Beauty Tamil Actress Kasturi statement suc
Author
First Published May 20, 2024, 3:47 PM IST

 ಫ್ರಾನ್ಸ್​ನಲ್ಲಿ ನಡೆಯುತ್ತಿರುವ ವಿಶ್ವವಿಖ್ಯಾತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಅವರು ತಮ್ಮ ಪುತ್ರಿ ಆರಾಧ್ಯ ಜೊತೆ ಪಾಲ್ಗೊಂಡಿದ್ದಾರೆ.   . ನಟಿ ಐಶ್ವರ್ಯ ಎಂದಿನಂತೆ ಇಲ್ಲಿ ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.  ನಟಿ  ಕೈ ಮುರಿದುಕೊಂಡಿದ್ದರೂ  ರೆಡ್ ಕಾರ್ಪೆಟ್ ಮೇಲೆ  ಮಾರ್ಜಾಲ ನಡಿಗೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ ಇದೇ ವೇಳೆ ಐಶ್ವರ್ಯ ಮತ್ತು ಆರಾಧ್ಯ ಅವರ ಫೋಟೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಇದರಲ್ಲಿ ಐಶ್ವರ್ಯ ಅವರ ಲುಕ್​  ನೋಡಿದ ನೆಟ್ಟಿಗರು ನೋಡಲು ಆಗ್ತಿಲ್ಲ ಎಂದು ಹೇಳುತ್ತಿದ್ದಾರೆ. ಇವರು ಐಶ್ವರ್ಯ ರೈನೋ, ರಾಖಿ ಸಾವಂತೋ ಗೊತ್ತಾಗ್ತಿಲ್ಲ ಎನ್ನುತ್ತಿದ್ದಾರೆ.  ಐಶ್ವರ್ಯ ರೈ ಲುಕ್​ಗೆ ತೀರಾ ಕೆಟ್ಟದಾಗಿರುವ ಕಮೆಂಟ್​ಗಳು ಬಂದಿವೆ. ಇವರ ಈ ಫೋಟೋ ನೋಡಿ  ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ಕೆಟ್ಟದ್ದಾಗಿ ಯಾಕೆ ಕಾಣಿಸುತ್ತಿದ್ದಾರೆ, ಇಂಥ ಫೋಟೋ ಹಾಕುವ ಅಗತ್ಯವೇನಿತ್ತು ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವು ಐಶ್ ಫ್ಯಾನ್ಸ್ ಪ್ಲೀಸ್​ ದಯವಿಟ್ಟು ಈ ಫೋಟೋ ಡಿಲೀಟ್​ ಮಾಡಿ ನೋಡಲು ಆಗ್ತಿಲ್ಲ ಎಂದಿದ್ದಾರೆ.  

ಇದರ ಬಗ್ಗೆ ಈಗ ಸೋಷಿಯಲ್​  ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ನಟಿ ಕಸ್ತೂರಿ ಶಂಕರ್​ ಹೇಳಿಕೆ ವೈರಲ್​ ಆಗಿದ್ದು, ಇದೀಗ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ನಟಿ ಕಸ್ತೂರಿ ಅವರು ಹೇಳಿದ್ದೇನೆಂದರೆ,   ವಿಶ್ವದ ಅತ್ಯಂತ ಸುಂದರ ಮಹಿಳೆಯರನ್ನೂ ಸಮಯವು ಬಿಡುವುದಿಲ್ಲ. ಐಶ್ವರ್ಯಾ ರೈ ಗಡಿಯಾರವನ್ನು ಹಿಂತಿರುಗಿಸುವ ಅಗತ್ಯವಿಲ್ಲ. ಆದರೆ ಅವರು ಸಹಜವಾಗಿಯೇ ಇದ್ದಿದ್ದರೆ ಸುಂದರವಾಗಿಯೇ ಉಳಿಯುತ್ತಿದ್ದರು. ಆದರೆ ಪ್ಲಾಸ್ಟಿಕ್ ಅವರ ಸಾರ್ವಕಾಲಿಕ ಸೌಂದರ್ಯವನ್ನು ಹಾಳುಮಾಡಿದೆ ಎಂದಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಅವರು ವಿಷಯ ತಿಳಿಸಿದ್ದಾರೆ. 

ಕುರುಡನ ಮಾಡಯ್ಯಾ ತಂದೆ... ಈ ಫೋಟೋ ನೋಡಲಾಗ್ತಿಲ್ಲಾ ಅಂತಿದ್ದಾರೆ ಐಶ್​ ಫ್ಯಾನ್ಸ್​!

ಕೆಲ ವರ್ಷಗಳ ಹಿಂದೆ ಬಹು ವಿವಾದಿತ ರಿಯಾಲಿಟಿ ಷೋ ಎಂದೇ ಫೇಮಸ್​ ಆಗಿರೋ ಕಾಫಿ ವಿತ್​ ಕರಣ್​ ಷೋದಲ್ಲಿ ಇದೇ ವಿಷಯವನ್ನು ಬಾಲಿವುಡ್​​ ನಟ ಇಮ್ರಾನ್​ ಹಶ್ಮಿ ಕೂಡ ಹೇಳಿದ್ದರು.  ಕಾಫಿ ವಿತ್ ಕರಣ್‌ಗೆ ಬಂದಿದ್ದ ಇಮ್ರಾನ್​ ಅವರಿಗೆ ಕರಣ್​ ಅವರು,  ಕೆಲವು ನಿರ್ದಿಷ್ಟ ಪದಗಳನ್ನು ಕೇಳಿದಾಗ ಅವರ ಮನಸ್ಸಿಗೆ ಬರುವ ನಟ, ನಟಿಯನ್ನು ಹೆಸರಿಸಲು ಇಮ್ರಾನ್ ಅವರನ್ನು ಕೇಳಿದ್ದರು. ಕರಣ್ ‘ಪ್ಲಾಸ್ಟಿಕ್’ ಎಂದು ಹೇಳಿದಾಗ ಇಮ್ರಾನ್ ಹಶ್ಮಿ ಐಶ್ವರ್ಯ ರೈ ಎಂದು ಹಿಂದೆ ಮುಂದೆ ಯೋಚಿಸದೇ ಹೇಳಿದರು. ಇದು ಭಾರಿ ವಿವಾದಕ್ಕೆ ಗುರಿಯಾಗಿತ್ತು. ಇದೀಗ ಅದೇ ವಿಷಯವನ್ನು ನಟಿ ಕಸ್ತೂರಿ ಅವರೂ ಹೇಳಿದ್ದಾರೆ. ಮಾತ್ರವಲ್ಲದೇ ಸೋಷಿಯಲ್​ ಮೀಡಿಯಾದಲ್ಲಿ ಕೂಡ ಹಲವು ನೆಟ್ಟಿಗರು ಇದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 

ಅಷ್ಟಕ್ಕೂ ಹಲವಾರು ನಟಿಯರು ತಮ್ಮ ದೇಹದ ವಿವಿಧ ಭಾಗಗಳನ್ನು ಅಂದಗೊಳಿಸಲು ಪ್ಲಾಸ್ಟಿಕ್​ ಸರ್ಜರಿ ಮೊರೆ ಹೋಗುವುದು ಇದೆ. ಅದರಲ್ಲಿಯೂ ಬಳಕುವ ಬಳ್ಳಿಯಂತೆ ಇರಲು ಏನೆಲ್ಲಾ ಸರ್ಕಸ್​ ಮಾಡುವ ಕೆಲ ನಟಿಯರು ಸ್ತನದ ಗಾತ್ರವನ್ನು ಪ್ಲಾಸ್ಟಿಕ್​ ಸರ್ಜರಿ ಮೂಲಕ ದೊಡ್ಡದಾಗಿಸಿಕೊಳ್ಳುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಅದೇ ರೀತಿ, ಐಶ್ವರ್ಯಾ ಅವರು  ಸುಕ್ಕುಗಳನ್ನು ಸುಗಮಗೊಳಿಸಲು ಬೊಟೊಕ್ಸ್ ಚುಚ್ಚುಮದ್ದನ್ನು ಪಡೆದಿದ್ದಾರೆ ಎಂದೇ ಹೇಳಲಾಗುತ್ತದೆ. ಇದು ಒಂದು ಹಂತದಲ್ಲಿ ಮುಖದ ಸೌಂದರ್ಯವನ್ನು ಸಂಪೂರ್ಣ ಹಾಳು ಮಾಡುತ್ತದೆ. ಇದೇ ರೀತಿ ಐಶ್ವರ್ಯ ರೈ ಅವರಿಗೂ ಆಗಿದೆ ಎನ್ನಲಾಗುತ್ತಿದೆ. 

ಐಶ್ವರ್ಯ ರೈಯನ್ನು ಈ ಹಿಂದೆ ಪ್ಲಾಸ್ಟಿಕ್​ ಅಂತನೂ ಕರೆಯಲಾಗಿತ್ತು! ಹೀಗೆ ಅಂದೋರು ಯಾರು ಗೊತ್ತಾ?

Latest Videos
Follow Us:
Download App:
  • android
  • ios