Asianet Suvarna News Asianet Suvarna News

45 ದಾಟಿದ್ರೂ ಮದ್ವೆಯಾಗಿಲ್ಲವೆಂದು ಕೆಟ್ಟದಾಗಿ ಟೀಕಿಸಿದವರಿಗೆ ಮುಟ್ಟಿಕೊಳ್ಳುವ ಉತ್ತರ ನೀಡಿದ ಶಮಿತಾ ಶೆಟ್ಟಿ!

ವಯಸ್ಸು 45 ಆದ್ರೂ ಮದ್ವೆಯಾಗಿಲ್ಲ ಎಂದು ಕೆಟ್ಟದಾಗಿ ಬರಹ ಬರೆದ ಟ್ರೋಲಿಗರಿಗೆ  ಮುಟ್ಟಿಕೊಳ್ಳುವ ಉತ್ತರ ನೀಡಿದ ಶಮಿತಾ ಶೆಟ್ಟಿ. ನಟಿ ಹೇಳಿದ್ದೇನು? 
 

Shamita Shetty Slams Troll Shaming For Being Unmarried  Married Is Not My Only purpose suc
Author
First Published Feb 23, 2024, 6:33 PM IST

ಬಾಲಿವುಡ್​ನ ಸುಂದರ ನಟಿಯರ ಪೈಕಿ ಟಾಪರ್​ ಲಿಸ್ಟ್​ನಲ್ಲಿ ಇರುವಾಕೆ ಶಿಲ್ಪಾ ಶೆಟ್ಟಿ (Shilpa Shetty). ಯೋಗ, ಧ್ಯಾನ ಎಂದೆಲ್ಲಾ ಫಿಟ್​ನೆಸ್​ ಕಾಪಾಡಿಕೊಳ್ತಿರೋ 47 ವರ್ಷದ ಈ ಸುಂದರಿ ಯಾರಿಗೆ ತಾನೆ ಗೊತ್ತಿಲ್ಲ? 2009ರಲ್ಲಿ ಉದ್ಯಮಿ ರಾಜ್​ ಕುಂದ್ರಾ ಅವರನ್ನು ವಿವಾಹವಾಗಿ ಸುಖಿ ದಾಂಪತ್ಯವನ್ನು ನಡೆಸುತ್ತಿದ್ದರೂ ಇವರ ತಂಗಿ, ನಟಿ ಶಮಿತಾ ಶೆಟ್ಟಿ ಮಾತ್ರ ಇನ್ನೂ ಸಿಂಗಲ್​ ಆಗಿಯೇ ಉಳಿದಿದ್ದಾರೆ. ಇದೇ ಫೆ.2ರಂದು 45 ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡ ಶಮಿತಾ ಶೆಟ್ಟಿ  ತಮ್ಮ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಈಗ ಅವರ ಮದುವೆಯ ಕುರಿತಾಗಿಯೇ ಹೆಚ್ಚು ಚರ್ಚೆಯಲ್ಲಿ ಇದ್ದಾರೆ.  ಹಂಗಾಮಾ-2, ನಿಕಮ್ಮಾ, ಅಪ್ನೆ, ಲೈಫ್​ ಇನ್​ ಮೆಟ್ರೊ... ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶಮಿತಾ ಇದುವರೆಗೂ ಮದುವೆಯೇ ಆಗಿಲ್ಲ. ಅಷ್ಟಕ್ಕೂ ಆಕೆಗೆ ಇರುವ ಸಮಸ್ಯೆಯಾದರೂ ಏನು ಎಂಬ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಿದ್ದರೂ ಅವರ ಪರ್ಸನಲ್​ ಜೀವನದ ಬಗ್ಗೆ ಅವರು ಮಾತನಾಡಿಕೊಂಡಿದ್ದೇ ಕಮ್ಮಿ.

ಈಚೆಗೆ 45ನೇ ಹುಟ್ಟುಹಬ್ಬ ಆಚರಿಸಿಕೊಂಡ ಹಿನ್ನೆಲೆಯಲ್ಲಿ, ನಟಿ ಇನ್ನೂ ಮದುವೆಯಾಗದೇ ಇರುವುದಕ್ಕೆ ಕೆಲವರು ಟೀಕೆ ಮಾಡಿದ್ದರು. ಕೆಲವರ ಮನಸ್ಥಿತಿಯೇ ಅಂಥದ್ದಲ್ಲವೆ? ಅದರಲ್ಲಿಯೂ ಸೆಲೆಬ್ರಿಟಿಗಳ ಮೇಲೆ ಕಣ್ಣು ಸದಾ ನೆಟ್ಟಿರುತ್ತದೆ. ಅದಕ್ಕಾಗಿಯೇ ಟ್ರೋಲಿಗನೊಬ್ಬ 50 ವರ್ಷಕ್ಕೆ ಹತ್ತಿರ ಬಂದರೂ ಇನ್ನೂ ಮದುವೆಯಾಗಿಲ್ಲ, ಒಬ್ಬ ಗಂಡಸೂ ಇಲ್ಲ ಎಂದೆಲ್ಲಾ ಕಮೆಂಟ್​ ಮಾಡಿದ್ದ. ‘ಬಡ್ಡಿ ಶೆಟ್ಟಿ 50 ವರ್ಷ ಕಳೆದರೂ ಗಂಡಸಿಲ್ಲ’ ಎಂದಿದ್ದ. ಇದು ಸಕತ್​ ವೈರಲ್​ ಆಗಿತ್ತು. ಇದೀಗ ನಟಿ, ಈ ಪೋಸ್ಟ್​ ಹಾಗೂ ತನ್ನ ಮದುವೆಯ ಬಗ್ಗೆ ಟೀಕಿಸಿದವರಿಗೆ ಉತ್ತರ ಕೊಟ್ಟಿದ್ದಾರೆ. 

Shamita Shetty ಇನ್ನೂ ಯಾಕೆ ಸಿಂಗಲ್​? 44ನೇ ಬರ್ತ್​ಡೆಗೆ ಸೀಕ್ರೇಟ್​ ಬಯಲು!

 ಮದುವೆಯೊಂದೇ ನನ್ನ ಜೀವನದ ಗುರಿಯಲ್ಲ.  ಮದುವೆಯಾಗದ ಕಾರಣಕ್ಕಾಗಿ ಇನ್ನೊಬ್ಬ ಮಹಿಳೆಯ ಘನತೆಗೆ ಕುಂದು ತರಲು  ಪ್ರಯತ್ನಿಸುತ್ತಿರುವರಿಗೆ ಈ ಮಾತನ್ನು ಹೇಳುತ್ತಿದ್ದೇನೆ. ಇಂಥವರಿಗೆ  ಪ್ರತಿಕ್ರಿಯಿಸಲು ನಾನು ಸಮಯ ಮೀಸಲಿಡಲು ಬಯಸುತ್ತೇನೆ. ನೀವು ನನ್ನ ಬಗ್ಗೆ ಕಾಳಜಿ ತೋರಿದ್ದಕ್ಕಾಗಿ ಅಭಿನಂದನೆಗಳು. ಆದರೆ ನಿಮ್ಮ ಮಾಹಿತಿಗಾಗಿ ಇಷ್ಟನ್ನೇ ಹೇಳಬಯಸುತ್ತೇನೆ.  ಮದುವೆ ನನ್ನ ಜೀವನದ ಏಕೈಕ ಗುರಿಯಲ್ಲ .ನಾನು ಯಾವಾಗಲೂ ನನ್ನ ಹೃದಯದಲ್ಲಿ ಕೃತಜ್ಞತೆಯಿಂದ ಜೀವನದಲ್ಲಿ ಸಂತೋಷ, ತೃಪ್ತಿ ಮತ್ತು ಮುಕ್ತವಾಗಿರಲು ಬಯಸುತ್ತೇನೆ.  ನಿಮ್ಮ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕತೆ ಇರಬೇಕೆಂದು ಹಾರೈಸುತ್ತೇನೆ. ನೀವು ಮತ್ತೆ ಇನ್ನೊಬ್ಬ ಮಹಿಳೆಯ ಘನತೆಗೆ ಧಕ್ಕೆ ತರಲು  ಪ್ರಯತ್ನಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಜನರಿಗೆ ಒಳ್ಳೆಯದನ್ನು ಹೇಳಲು ನಿಮ್ಮ ಬಳಿ ಇಲ್ಲದಿದ್ದರೆ, ಮೌನವಾಗಿರುವುದು ಉತ್ತಮ ಎಂದಿದ್ದಾರೆ.

ನಟಿಯ ಈ ಮಾತಿಗೆ ಹಲವರು ಭೇಷ್​ ಭೇಷ್​ ಎಂದಿದ್ದಾರೆ. ಮರ್ಯಾದೆ ಇದ್ದವರು ಮತ್ತೆ ಇಂಥ ಮಾತನ್ನು ಹೇಳುವುದಿಲ್ಲ ಎಂದು ಇನ್ನು ಹಲವರು ಹೇಳಿದ್ದಾರೆ. ತಮ್ಮ ಜೀವನದಲ್ಲಿ ನೂರೆಂಟು ಕುಂದುಕೊರತೆ ಇದ್ದರೂ ಬೇರೆಯವರ ಜೀವನದಲ್ಲಿ ಮೂಗು ತೂರಿಸುವುದು ಸರಿಯಲ್ಲ ಎಂದು ಇನ್ನಷ್ಟು ಮಂದಿ ಹೇಳುತ್ತಿದ್ದಾರೆ. ಅಷ್ಟಕ್ಕೂ, ನೋಡಲು ಸುಂದರವಾಗಿರುವ, ಸಕತ್ ಟ್ಯಾಲೆಂಟೂ ಆಗಿರುವ ಶಮಿತಾ  ಇನ್ನೂ ಸಿಂಗಲ್ (Single) ಆಗಿರುವುದರ ಹಿಂದೆ ಹಿಂದೆ ದೊಡ್ಡ ಕಾರಣವೇ ಇದೆ. ಇದಕ್ಕೆ ಮುಖ್ಯ ಕಾರಣ ಆರು ಬಾರಿ ಈಕೆಯ ಲವ್​ ಫೇಲ್ಯೂರ್​ ಆಗಿರುವುದು! ಹೌದು. ಶಮಿತಾ ಅವರ ಜೀವನದಲ್ಲಿ ಪ್ರೀತಿಯ ವಿಷಯಕ್ಕೆ ಬಂದರೆ ಲವ್​ ಫೇಲ್ಯೂರ್​ ಆಗಿದ್ದೇ ಹೆಚ್ಚು. ಇವರ  ಮೊದಲ ಬಾಯ್ ಫ್ರೆಂಡ್ (Boyfriend) ಕಾರು ಅಪಘಾತದಲ್ಲಿ ಮೃತಪಟ್ಟರು. ಇವರನ್ನು ತುಂಬಾ ಇಷ್ಟಪಟ್ಟಿದ್ದ ಶಮಿತಾ, ಸ್ನೇಹಿತನ ಸಾವಿನ ನಂತರ ಖಿನ್ನತೆಗೆ ಜಾರಿದ್ದರು. ಜೀವನದಲ್ಲಿ ಏನೂ ಬೇಡ ಎನ್ನುವಷ್ಟರ ಮಟ್ಟಿಗೆ ಇವರ ಬದುಕಾಯಿತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಖುದ್ದು ಶಮಿತಾ ಕೂಡ ಹೇಳಿಕೊಂಡಿದ್ದರು. 

ಇದಾದ ಬಳಿಕ ಸ್ನೇಹಿತನ ಸಾವಿನ ಬಗ್ಗೆ ಮರೆಯುತ್ತಾ ಬಂದ ಹಾಗೆ ಇವರ ಲೈಫ್​ನಲ್ಲಿ ಎಂಟ್ರಿಕೊಟ್ಟವರು ನಟರಾದ ಅಫ್ತಾಬ್​ ಶಿವದಾಸನಿ, ಹರ್ಮನ್​ ಬವೇಜಾ, ಯುವರಾಜ್​ ಸಿಂಗ್, ಮನೋಜ್​ ಬಾಜ್​ಪೇಯಿ ಹಾಗೂ ಉದಯ್​ ಚೋಪ್ರಾ. ಇವರ ಜೊತೆ ಡೇಟಿಂಗ್​ ಕೂಡ ಮಾಡಿದ್ದರು ಶಮಿತಾ. ಆದರೆ ಪ್ರೀತಿ ಯಶಸ್ವಿಯಾಗಲೇ ಇಲ್ಲ. ಯಾವ ಹುಡುಗನೂ ಅವರ ಜೀವನದಲ್ಲಿ ಹೆಚ್ಚು ಕಾಲ ಉಳಿಯಲೇ ಇಲ್ಲ. ಇದರಿಂದ ಪ್ರೀತಿ, ಮದುವೆಯಿಂದ ಶಮಿತಾ ದೂರವೇ ಉಳಿದಿದ್ದಾರೆ. ಆದರೆ ಬಿಗ್​ಬಾಸ್​ ಒಟಿಟಿಯಲ್ಲಿ (OTT) ಎಂಟ್ರಿ ಕೊಟ್ಟ ಬಳಿಕ ಅವರು ಬಹಳ ಚರ್ಚೆಗೆ ಗ್ರಾಸರಾಗಿದ್ದರು. ಇದಕ್ಕೆ ಕಾರಣ, ಇವರ ಭಾವ ಅಂದರೆ ಶಿಲ್ಪಾ  ಶೆಟ್ಟಿಯ ಗಂಡ ರಾಜ್ ಕುಂದ್ರಾ ಅವರು ಪೋರ್ನ್​ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅದೇ ಸಮಯದಲ್ಲಿ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿದ್ದ ಶಮಿತಾ ಬಿಗ್​ಬಾಸ್​ಗೆ (Bigg Boss) ಬಂದಿದ್ದರು. ಇದರ ಬಗ್ಗೆ ಗುಸುಗುಸು ಶುರುವಾಗಲೇ ಇವರ ಹೆಸರು ಬಿಗ್ ಬಾಸ್ ಮನೆಯಲ್ಲಿದ್ದ ರಾಕೇಶ್ ಬಾಪಟ್​ (Rakesh Bapat) ಜೊತೆ ಕೇಳಿಬಂತು. ಇಬ್ಬರ ನಡುವೆ ಕುಚ್​ ಕುಚ್​ ಆಗ್ತಿದೆ ಎಂದು ಹೇಳಲಾಯಿತು. ಇದಕ್ಕೆ ಕಾರಣ, ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ಜೋಡಿಯಂತೆ ಬಿಂಬಿಸಿಕೊಂಡಿದ್ದರು. ಸಾಲದು ಎಂಬುದಕ್ಕೆ  ಶಮಿತಾ ಶೆಟ್ಟಿ ಮಲಗಿದ್ದಾಗ ಆಕೆಯನ್ನು ಎಬ್ಬಿಸಲು ಹೋದ ರಾಕೇಶ್ ಕೈಗೆ ಕಿಸ್ ಮಾಡಿದ್ದರು. ಆಮೇಲೆ ಇಬ್ಬರು ಒಟ್ಟಿಗೆ ನರ್ತಿಸಿದ್ದರು. ಈ ವಿಡಿಯೋ ಭಾರಿ  ವೈರಲ್ ಆಗಿತ್ತು. 

ಸಿನಿ ತಾರೆಯರ ಬಹುದೊಡ್ಡ ರಹಸ್ಯ ಬಿಚ್ಚಿಟ್ಟ ಪ್ರಿಯಾಮಣಿ: ನನಗೇ ಶಾಕ್​ ಆಯಿತು ಎಂದ ನಟಿ

Follow Us:
Download App:
  • android
  • ios