Asianet Suvarna News Asianet Suvarna News

Shamita Shetty ಇನ್ನೂ ಯಾಕೆ ಸಿಂಗಲ್​? 44ನೇ ಬರ್ತ್​ಡೆಗೆ ಸೀಕ್ರೇಟ್​ ಬಯಲು!

ವಯಸ್ಸು 44 ಆದರೂ ನಟಿ ಶಮಿತಾ ಶೆಟ್ಟಿ ಇನ್ನೂ ಏಕೆ ಮದುವೆಯಾಗಿಲ್ಲ, ಮೊನ್ನೆ ತಾನೇ ಹುಟ್ಟುಹಬ್ಬ ಆಚರಿಸಿಕೊಂಡ ನಟಿಯ ಬಾಳಲ್ಲಿ ನಡೆದಿದ್ದಾದರೂ ಏನು?
 

44 year old Shamita Shetty is still single news of affair surfaced many times
Author
First Published Feb 4, 2023, 9:42 PM IST

ಬಾಲಿವುಡ್​ನ ಸುಂದರ ನಟಿಯರ ಪೈಕಿ ಟಾಪರ್​ ಲಿಸ್ಟ್​ನಲ್ಲಿ ಇರುವಾಕೆ ಶಿಲ್ಪಾ ಶೆಟ್ಟಿ (Shilpa Shetty). ಯೋಗ, ಧ್ಯಾನ ಎಂದೆಲ್ಲಾ ಫಿಟ್​ನೆಸ್​ ಕಾಪಾಡಿಕೊಳ್ತಿರೋ 47 ವರ್ಷದ ಈ ಸುಂದರಿ ಯಾರಿಗೆ ತಾನೆ ಗೊತ್ತಿಲ್ಲ? 2009ರಲ್ಲಿ ಉದ್ಯಮಿ ರಾಜ್​ ಕುಂದ್ರಾ ಅವರನ್ನು ವಿವಾಹವಾಗಿ ಸುಖಿ ದಾಂಪತ್ಯವನ್ನು ನಡೆಸುತ್ತಿದ್ದರೂ ಇವರ ತಂಗಿ, ನಟಿ ಶಮಿತಾ ಶೆಟ್ಟಿ ಮಾತ್ರ ಇನ್ನೂ ಸಿಂಗಲ್​ ಆಗಿಯೇ ಉಳಿದಿದ್ದಾರೆ. ಮೊನ್ನೆಯಷ್ಟೇ (ಫೆ.2) 44ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡ ಶಮಿತಾ ಶೆಟ್ಟಿ  ತಮ್ಮ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಈಗ ಅವರ ಮದುವೆಯ ಕುರಿತಾಗಿಯೇ ಹೆಚ್ಚು ಚರ್ಚೆಯಲ್ಲಿ ಇದ್ದಾರೆ.  ಹಂಗಾಮಾ-2, ನಿಕಮ್ಮಾ, ಅಪ್ನೆ, ಲೈಫ್​ ಇನ್​ ಮೆಟ್ರೊ... ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶಮಿತಾ ಇದುವರೆಗೂ ಮದುವೆಯೇ ಆಗಿಲ್ಲ. ಅಷ್ಟಕ್ಕೂ ಆಕೆಗೆ ಇರುವ ಸಮಸ್ಯೆಯಾದರೂ ಏನು ಎಂಬ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಿದ್ದರೂ ಅವರ ಪರ್ಸನಲ್​ ಜೀವನದ ಬಗ್ಗೆ ಅವರು ಮಾತನಾಡಿಕೊಂಡಿದ್ದೇ ಕಮ್ಮಿ.

ನೋಡಲು ಸುಂದರವಾಗಿರುವ, ಸಕತ್ ಟ್ಯಾಲೆಂಟೂ ಆಗಿರುವ ಶಮಿತಾ  ಇನ್ನೂ ಸಿಂಗಲ್ (Single) ಆಗಿರುವುದರ ಹಿಂದೆ ಹಿಂದೆ ದೊಡ್ಡ ಕಾರಣವೇ ಇದೆ. ಇದಕ್ಕೆ ಮುಖ್ಯ ಕಾರಣ ಆರು ಬಾರಿ ಈಕೆಯ ಲವ್​ ಫೇಲ್ಯೂರ್​ ಆಗಿರುವುದು! ಹೌದು. ಶಮಿತಾ ಅವರ ಜೀವನದಲ್ಲಿ ಪ್ರೀತಿಯ ವಿಷಯಕ್ಕೆ ಬಂದರೆ ಲವ್​ ಫೇಲ್ಯೂರ್​ ಆಗಿದ್ದೇ ಹೆಚ್ಚು. ಇವರ  ಮೊದಲ ಬಾಯ್ ಫ್ರೆಂಡ್ (Boyfriend) ಕಾರು ಅಪಘಾತದಲ್ಲಿ ಮೃತಪಟ್ಟರು. ಇವರನ್ನು ತುಂಬಾ ಇಷ್ಟಪಟ್ಟಿದ್ದ ಶಮಿತಾ, ಸ್ನೇಹಿತನ ಸಾವಿನ ನಂತರ ಖಿನ್ನತೆಗೆ ಜಾರಿದ್ದರು. ಜೀವನದಲ್ಲಿ ಏನೂ ಬೇಡ ಎನ್ನುವಷ್ಟರ ಮಟ್ಟಿಗೆ ಇವರ ಬದುಕಾಯಿತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಖುದ್ದು ಶಮಿತಾ ಕೂಡ ಹೇಳಿಕೊಂಡಿದ್ದರು. 

ಡಿವೋರ್ಸ್ ಆಗಿಲ್ಲ, ಮತ್ತೊಂದು ಮಗದೊಂದು ಮದುವೆಯಾದ ಬಾಲಿವುಡ್ ಸ್ಟಾರ್ಸ್

ಇದಾದ ಬಳಿಕ ಸ್ನೇಹಿತನ ಸಾವಿನ ಬಗ್ಗೆ ಮರೆಯುತ್ತಾ ಬಂದ ಹಾಗೆ ಇವರ ಲೈಫ್​ನಲ್ಲಿ ಎಂಟ್ರಿಕೊಟ್ಟವರು ನಟರಾದ ಅಫ್ತಾಬ್​ ಶಿವದಾಸನಿ, ಹರ್ಮನ್​ ಬವೇಜಾ, ಯುವರಾಜ್​ ಸಿಂಗ್, ಮನೋಜ್​ ಬಾಜ್​ಪೇಯಿ ಹಾಗೂ ಉದಯ್​ ಚೋಪ್ರಾ. ಇವರ ಜೊತೆ ಡೇಟಿಂಗ್​ ಕೂಡ ಮಾಡಿದ್ದರು ಶಮಿತಾ. ಆದರೆ ಪ್ರೀತಿ ಯಶಸ್ವಿಯಾಗಲೇ ಇಲ್ಲ. ಯಾವ ಹುಡುಗನೂ ಅವರ ಜೀವನದಲ್ಲಿ ಹೆಚ್ಚು ಕಾಲ ಉಳಿಯಲೇ ಇಲ್ಲ. ಇದರಿಂದ ಪ್ರೀತಿ, ಮದುವೆಯಿಂದ ಶಮಿತಾ ದೂರವೇ ಉಳಿದಿದ್ದಾರೆ.

ಆದರೆ ಬಿಗ್​ಬಾಸ್​ ಒಟಿಟಿಯಲ್ಲಿ (OTT) ಎಂಟ್ರಿ ಕೊಟ್ಟ ಬಳಿಕ ಅವರು ಬಹಳ ಚರ್ಚೆಗೆ ಗ್ರಾಸರಾಗಿದ್ದರು. ಇದಕ್ಕೆ ಕಾರಣ, ಇವರ ಭಾವ ಅಂದರೆ ಶಿಲ್ಪಾ  ಶೆಟ್ಟಿಯ ಗಂಡ ರಾಜ್ ಕುಂದ್ರಾ ಅವರು ಪೋರ್ನ್​ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅದೇ ಸಮಯದಲ್ಲಿ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿದ್ದ ಶಮಿತಾ ಬಿಗ್​ಬಾಸ್​ಗೆ (Bigg Boss) ಬಂದಿದ್ದರು. ಇದರ ಬಗ್ಗೆ ಗುಸುಗುಸು ಶುರುವಾಗಲೇ ಇವರ ಹೆಸರು ಬಿಗ್ ಬಾಸ್ ಮನೆಯಲ್ಲಿದ್ದ ರಾಕೇಶ್ ಬಾಪಟ್​ (Rakesh Bapat) ಜೊತೆ ಕೇಳಿಬಂತು. ಇಬ್ಬರ ನಡುವೆ ಕುಚ್​ ಕುಚ್​ ಆಗ್ತಿದೆ ಎಂದು ಹೇಳಲಾಯಿತು. ಇದಕ್ಕೆ ಕಾರಣ, ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ಜೋಡಿಯಂತೆ ಬಿಂಬಿಸಿಕೊಂಡಿದ್ದರು. ಸಾಲದು ಎಂಬುದಕ್ಕೆ  ಶಮಿತಾ ಶೆಟ್ಟಿ ಮಲಗಿದ್ದಾಗ ಆಕೆಯನ್ನು ಎಬ್ಬಿಸಲು ಹೋದ ರಾಕೇಶ್ ಕೈಗೆ ಕಿಸ್ ಮಾಡಿದ್ದರು. ಆಮೇಲೆ ಇಬ್ಬರು ಒಟ್ಟಿಗೆ ನರ್ತಿಸಿದ್ದರು. ಈ ವಿಡಿಯೋ ಭಾರಿ  ವೈರಲ್ ಆಗಿತ್ತು. 

ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಕೇಸಲ್ಲಿ ನಟಿ ಸಪ್ನಾ ಜೌಧರಿ, ಜೈಲು ಪಕ್ಕಾ?

ಆದರೆ ಈ ಬಗ್ಗೆ ಹೇಳಿಕೊಂಡಿದ್ದ,  ರಾಕೇಶ್, 'ಶಮಿತಾ ನನ್ನವಳು ಎಂಬ ಭಾವನೆ ಇದೆ. ನಾನು ಯಾರೊಂದಿಗೆ ಹತ್ತಿರವಾಗುತ್ತೇನೊ ಅವರೊಂದಿಗೆ ಬಹಳ ನಿಷ್ಠೆಯಿಂದ ಇರುತ್ತೇನೆ. ಇಲ್ಲಿಯೂ ಅಷ್ಟೆ ಶಮಿತಾ ಜೊತೆ ನಾನು ನಿಷ್ಠೆಯಿಂದ ಇರುತ್ತೇನೆ' ಎಂದು  ಹೇಳಿಕೊಂಡಿದ್ದರು. ಅದಾದ ಮೇಲೆ ಪೋಸ್ಟ್​ ಮಾಡಿದ್ದ ಅವರು, ಶಮಿತಾ ಮತ್ತು ನಾನು ಇನ್ನು ಮುಂದೆ ಒಟ್ಟಿಗೆ ಇಲ್ಲ ಎಂಬುದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ವಿಧಿಯು ನಮ್ಮ ಹಾದಿಯನ್ನು ಅತ್ಯಂತ ಅಸಾಮಾನ್ಯ ಸಂದರ್ಭಗಳಲ್ಲಿ ಭೇಟಿ ಮಾಡಿಸಿತು. ನಿಮ್ಮ ಈ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ಖಾಸಗಿ ವ್ಯಕ್ತಿಯಾಗಿರುವ ನಾನು, ಬ್ರೇಕ್‌ಅಪ್‌ ವಿಚಾರವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಬಯಸುವುದಿಲ್ಲ. ಆದರೂ ಈ ವಿಚಾರ ನಿಮ್ಮ ಹೃದಯವನ್ನು ಒಡೆಯಲಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಮೇಲಿನ ಈ ನಿಮ್ಮ ಪ್ರೀತಿ, ಬೆಂಬಲ ಹೀಗೆ ಮುಂದುವರಿಯಲಿ" ಎಂದು ರಾಕೇಶ್‌ ಸಹ ಹೇಳಿಕೊಂಡಿದ್ದರು. 

ನಂತರ ಶಮಿತಾ ಜೀವನ ಮತ್ತೆ ಒಂಟಿಯಾಗಿ ಹೋಯಿತು. ನಾನು ಸಿಂಗಲ್ (Single) ಆಗಿ ಆರಾಮಾಗಿದ್ದೇನೆ. ಮದುವೆಯಾದಾಗ ಜೊತೆಗಾರರು ಸರಿಯಾದ ಗೌರವ ಕೊಡಲ್ಲ ಎಂದು  ಸಂದರ್ಶನವೊಂದರಲ್ಲಿ ಹೇಳಿಕೊಂಡರು.  ಪ್ರೀತಿ, ಮದುವೆ ಮೇಲೆ ನಂಬಿಕೆಯಿಲ್ಲ.  ಪ್ರೀತಿಯಲ್ಲಿ ಬೀಳುವುದು, ಮದುವೆಯಾಗುವುದನ್ನು ನಾನು ನಂಬುವುದಿಲ್ಲ. ಇದೆಲ್ಲ ನನಗೆ ಸಂಬಂಧಿಸಿದ್ದಲ್ಲ'' ಎಂದು ಹೇಳಿಕೊಂಡಿದ್ದರು.  

Follow Us:
Download App:
  • android
  • ios