ಜವಾನ್ನಲ್ಲಿ ನಯನತಾರಾಗೆ ಮೋಸ? ಟ್ವೀಟ್ನಲ್ಲಿ ಬೆಣ್ಣೆ ಸವರಿ ನಟಿಯನ್ನು ಸಮಾಧಾನಪಡಿಸಿದ ಶಾರುಖ್
ಜವಾನ್ ಚಿತ್ರದಲ್ಲಿ ನಟಿ ದೀಪಿಕಾ ಅವರಿಗಾಗಿ ನಯನತಾರಾಗೆ ಮೋಸ ಆಗಿರುವುದಾಗಿ ಫ್ಯಾನ್ಸ್ ಅಸಮಾಧಾನ ಹೊರಹಾಕುತ್ತಿದ್ದು, ಟ್ವೀಟ್ ಮೂಲಕ ಶಾರುಖ್ ತೇಪೆ ಹಚ್ಚುವ ಕಾರ್ಯ ಮಾಡಿದ್ದಾರೆ.
ಜವಾನ್ (Jawan) ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ. ಇಲ್ಲಿಯವರೆಗೆ ಜವಾನ್ ಭಾರತದಲ್ಲಿ ಇದುವರೆಗೆ 500 ಕೋಟಿ ಗಳಿಸಿದ್ದರೆ, ಜಾಗತಿಕವಾಗಿ 700 ಕೋಟಿ ಗಳಿಸಿದೆ. ಬಾಲಿವುಡ್ನ ಹಲವು ದಾಖಲೆಗಳನ್ನು ಅಳಿಸಿಹಾಕಿ ಇನ್ನೂ ಮುನ್ನುಗ್ಗುತ್ತಲೇ ಸಾಗಿವೆ. ಜವಾನ್ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ. ಇಲ್ಲಿಯವರೆಗೆ ಜವಾನ್ ಭಾರತದಲ್ಲಿ ಇದುವರೆಗೆ 439 ಕೋಟಿ ಗಳಿಸಿದ್ದರೆ, ಜಾಗತಿಕವಾಗಿ 700 ಕೋಟಿ ಗಳಿಸಿದೆ. ಬಾಲಿವುಡ್ನ ಹಲವು ದಾಖಲೆಗಳನ್ನು ಅಳಿಸಿಹಾಕಿ ಇನ್ನೂ ಮುನ್ನುಗ್ಗುತ್ತಲೇ ಸಾಗಿವೆ. ಈ ಚಿತ್ರದಲ್ಲಿ ಎಂಟು ವಿಭಿನ್ನ ಶೇಡ್ಗಳಲ್ಲಿ ನಾಯಕ ನಟ ಶಾರುಖ್ ಕಾಣಿಸಿಕೊಂಡಿದ್ದರೆ, ಕಾಳಿ ಗಾಯಕ್ವಾಡ್ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿದ್ದಾರೆ. ಘಟಾನುಘಟಿ ತಾರೆಯರ ದಂಡು ಈ ಚಿತ್ರದಲ್ಲಿದೆ. ಇದರ ನಡುವೆಯೇ ಈಗ ಜವಾನ್-2 ಬಗ್ಗೆ ಸಕತ್ ಚರ್ಚೆಯಾಗುತ್ತಿದೆ.
ಈ ಚಿತ್ರದಲ್ಲಿ ಹಲವು ತಾರೆಯರ ದಂಡು ಇರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅವರಲ್ಲಿ ಒಬ್ಬರು ಖ್ಯಾತ ನಟಿ ನಯನತಾರಾ. ಜವಾನ್ನಲ್ಲಿ ನಟಿ ನರ್ಮದಾ ಎಂಬ ಪಾತ್ರ ಮಾಡಿದ್ದಾರೆ. ಈ ಪಾತ್ರದ ಶೂಟಿಂಗ್ ಬಹಳ ನಡೆದಿದ್ದರೂ, ಕೊನೆಯಲ್ಲಿ ಚಿತ್ರ ತೆರೆ ಕಂಡಾಗ ಇವರ ಪಾತ್ರ ಅತ್ಯಂತ ಸ್ವಲ್ಪವೇ ಕಾಣಿಸಿದೆ. ಇದರ ಬಗ್ಗೆ ಇದಾಗಲೇ ನಟಿ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಪಾತ್ರ ಸ್ವಲ್ಪವೇ ಇರುವುದಕ್ಕೆ ತಮಗೆ ಮೋಸ ಆಗಿದೆ ಎಂಬರ್ಥದಲ್ಲಿ ನಟಿ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಚಿತ್ರದ ಸಕ್ಸಸ್ ಸೆಲೆಬ್ರೇಷನ್ನಲ್ಲೂ ಅವರು ಕಾಣಿಸಿಕೊಳ್ಳಲಿಲ್ಲ. ನಯನತಾರಾ ಅವರ ಪಾತ್ರವನ್ನು ಹೆಚ್ಚು ತೋರಿಸುವ ಅವಕಾಶ ಇದ್ದರೂ ದೀಪಿಕಾ ಪಡುಕೋಣೆ ಅವರನ್ನು ಹೈಲೈಟ್ ಮಾಡಲು ಇವರ ಪಾತ್ರವನ್ನು ಗೌಣವಾಗಿಸಲಾಗಿದೆ ಎಂಬ ಬಗ್ಗೆ ನಯನತಾರಾ ಫ್ಯಾನ್ಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶವನ್ನೂ ಹೊರಹಾಕಿದ್ದರು. ತಮ್ಮ ನೆಚ್ಚಿನ ನಟಿಗೆ ಮೋಸ ಮಾಡಲಾಗಿದೆ ಎಂದೂ ಅವರು ಹೇಳುತ್ತಿದ್ದರು.
ಜವಾನ್ ಪಾರ್ಟ್-2 ಬರುತ್ತಾ? ಯಾವಾಗ? ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಿದ ನಿರ್ದೇಶಕ ಅಟ್ಲಿ
ಈ ವಿಷಯ ಸ್ವಲ್ಪ ಹೆಚ್ಚಿಗೆ ಎನ್ನುವಷ್ಟರ ಮಟ್ಟಿಗೆ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಶಾರುಖ್ ಖಾನ್ ತೇಪೆ ಹಚ್ಚುವ ಕಾರ್ಯ ಮಾಡಿದ್ದಾರೆ. ಟ್ವೀಟ್ ಮೂಲಕ ನಟಿಗೆ ಸಮಾಧಾನ ಪಡಿಸುವ ಕಾರ್ಯ ಮಾಡಿದ್ದು, ಇದರ ಬಗ್ಗೆ ನಯನತಾರಾ ಅಭಿಮಾನಿಗಳು ಪುನಃ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಶಾರುಖ್ ಅವರು ದೀಪಿಕಾ ಪಡುಕೋಣೆ ನಿರ್ವಹಿಸಿದ ಪಾತ್ರವನ್ನು ಹೆಚ್ಚು ಹೈಲೈಟ್ ಮಾಡಲು ಹೀಗೆಲ್ಲಾ ಮಾಡಿ ಈಗ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. ಆದರೆ ಶಾರುಖ್ (Shah Rukh Khan) ಫ್ಯಾನ್ಸ್ ತಮ್ಮ ನೆಚ್ಚಿನ ನಟನ ಔದಾರ್ಯವನ್ನು ಹಾಡಿ ಹೊಗಳುತ್ತಿದ್ದಾರೆ.
ನಯನತಾರಾ ಅವರು ಪಾತ್ರಧಾರಿಯಾಗಿದ್ದ ನರ್ಮದಾ ಪಾತ್ರಕ್ಕೆ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ ಎಂಬುದನ್ನು ಶಾರುಖ್ ಖಾನ್ ಪರೋಕ್ಷವಾಗಿ ಒಪ್ಪಿಕೊಂಡಿದ್ದು, ಆ ಬಗ್ಗೆ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ನಯನತಾರಾ ಅಭಿಮಾನಿಯೊಬ್ಬರು ನರ್ಮದಾ ಪಾತ್ರದ ಬಗ್ಗೆ ಎಕ್ಸ್ ಖಾತೆಯಲ್ಲಿ (Twitter) ಮೆಚ್ಚುಗೆ ಸೂಚಿಸಿದ್ದಾರೆ. ನಯನತಾರಾ ಅವರು ಬೇಸರ ಹೊರಹಾಕಿರುವ ಬೆನ್ನಲ್ಲೇ ಈ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದಿದ್ದರು. ‘ಒಂಟಿಯಾಗಿ ಮಗುವನ್ನು ಸಾಕುತ್ತಿರುವ ನರ್ಮದಾ ಎಂಬ ಮಹಿಳೆಯ ಪಾತ್ರ ತುಂಬ ಸೂಕ್ಷ್ಮವಾಗಿ ಮೂಡಿಬಂದಿದೆ. ಎಲ್ಲ ಕ್ಷೇತ್ರದ ಮಹಿಳೆಯರನ್ನು ಪ್ರತಿನಿಧಿಸುವಂತಹ ಪಾತ್ರಗಳನ್ನು ಸಿನಿಮಾದಲ್ಲಿ ತೋರಿಸಿದ್ದಕ್ಕೆ ಧನ್ಯವಾದಗಳು’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಶಾರುಖ್ ಅವರು, ‘ಸಿಂಗಲ್ ಮದರ್ ಆಗಿ ನರ್ಮದಾ ಪಾತ್ರದ ಕಥೆ ನನಗೂ ಅದ್ಭುತ ಎನಿಸಿತು. ದುರಾದೃಷ್ಟ ಏನೆಂದರೆ, ಆ ಪಾತ್ರಕ್ಕೆ ಒಟ್ಟಾರೆಯಾಗಿ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಗಲಿಲ್ಲ. ಹಾಗಿದ್ದರೂ ಕೂಡ ಅದು ತುಂಬ ಚೆನ್ನಾಗಿ ಮೂಡಿಬಂದಿದೆ’ ಎಂದು ಹೇಳಿದ್ದಾರೆ.
ವಿಜಯ್ ಸೇತುಪತಿಯನ್ನು ಮದ್ವೆಯಾಗಲಿದ್ದಾರಂತೆ ಶಾರುಖ್ ಖಾನ್: ಟೈಮ್ ಕೂಡ ಫಿಕ್ಸ್!