Asianet Suvarna News Asianet Suvarna News

ಜವಾನ್​ ಪಾರ್ಟ್​-2 ಬರುತ್ತಾ? ಯಾವಾಗ? ಫ್ಯಾನ್ಸ್​ಗೆ ಗುಡ್​​ ನ್ಯೂಸ್​​ ನೀಡಿದ ನಿರ್ದೇಶಕ ಅಟ್ಲಿ

ಜವಾನ್​ ಪಾರ್ಟ್​-2 ಬಿಡುಗಡೆಯಾಗಲಿದೆಯೆ? ಏನಿರಲಿದೆ ಅದರ ಕಥೆ? ಇದರ ಬಗ್ಗೆ  ನಿರ್ದೇಶಕ ಅಟ್ಲಿ ಹೇಳಿದ್ದೇನು?
 

Jawan Director Atlee Confirms He will Be Making A  Jawan Sequel suc
Author
First Published Sep 17, 2023, 6:25 PM IST

ಜವಾನ್​ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ. ಇಲ್ಲಿಯವರೆಗೆ ಜವಾನ್ ಭಾರತದಲ್ಲಿ ಇದುವರೆಗೆ  439 ಕೋಟಿ ಗಳಿಸಿದ್ದರೆ,  ಜಾಗತಿಕವಾಗಿ  700 ಕೋಟಿ ಗಳಿಸಿದೆ. ಬಾಲಿವುಡ್​ನ ಹಲವು ದಾಖಲೆಗಳನ್ನು ಅಳಿಸಿಹಾಕಿ ಇನ್ನೂ ಮುನ್ನುಗ್ಗುತ್ತಲೇ ಸಾಗಿವೆ.  ಜವಾನ್​ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ. ಇಲ್ಲಿಯವರೆಗೆ ಜವಾನ್ ಭಾರತದಲ್ಲಿ ಇದುವರೆಗೆ  439 ಕೋಟಿ ಗಳಿಸಿದ್ದರೆ,  ಜಾಗತಿಕವಾಗಿ  700 ಕೋಟಿ ಗಳಿಸಿದೆ. ಬಾಲಿವುಡ್​ನ ಹಲವು ದಾಖಲೆಗಳನ್ನು ಅಳಿಸಿಹಾಕಿ ಇನ್ನೂ ಮುನ್ನುಗ್ಗುತ್ತಲೇ ಸಾಗಿವೆ. ಈ ಚಿತ್ರದಲ್ಲಿ ಎಂಟು ವಿಭಿನ್ನ ಶೇಡ್​ಗಳಲ್ಲಿ ನಾಯಕ ನಟ ಶಾರುಖ್​ ಕಾಣಿಸಿಕೊಂಡಿದ್ದರೆ, ಕಾಳಿ ಗಾಯಕ್ವಾಡ್ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿದ್ದಾರೆ. ಘಟಾನುಘಟಿ ತಾರೆಯರ ದಂಡು ಈ ಚಿತ್ರದಲ್ಲಿದೆ.   ಇದರ ನಡುವೆಯೇ ಈಗ ಜವಾನ್​-2 ಬಗ್ಗೆ ಸಕತ್​ ಚರ್ಚೆಯಾಗುತ್ತಿದೆ. 

ಇದರ ನಡುವೆಯೇ, ಕೆಲ ದಿನಗಳ ಹಿಂದೆ ಶಾರುಖ್​ ಖಾನ್​ ಕೂಡ ಇದರ ಹಿಂಟ್​ ನೀಡಿದ್ದರು. ಅಭಿಮಾನಿಯೊಬ್ಬರು, ಸರ್, ನೀವೇಕೆ ಕಾಳಿ ವಿಜಯ್ ಸೇತುಪತಿ ಜೊತೆಗೆ ಡೀಲ್ ಮಾಡಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದರು. ತಾವು  ವಿಜಯ್ ಸೇತುಪತಿಯವರ ಫ್ಯಾನ್​ ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ಶಾರುಖ್​ ಖಾನ್​,  ನಾನು ಕೂಡ ವಿಜಯ್ ಅವರ  ದೊಡ್ಡ ಅಭಿಮಾನಿ ಎಂದಿದ್ದರು. ನಂತರ ತಮಾಷೆಯ ರೂಪದಲ್ಲಿ ನಾನು ಈಗಾಗಲೇ ಕಾಳಿಯ ಕಪ್ಪು ಹಣವನ್ನು ತೆಗೆದುಕೊಂಡು ಬಂದಿದ್ದೇನೆ. ಈಗ ಬೇರೆಯವರ ಕಪ್ಪು ಹಣವನ್ನು ಹೊರ ತೆಗೆಯುವುದಕ್ಕೆ ಕಾಯುತ್ತಿದ್ದೇನೆ. ವೀಸಾಗಾಗಿ ಕಾಯುತ್ತಿದ್ದೇನೆ ಎಂದು ಟ್ಟೀಟ್ ಮಾಡಿದ್ದರು.  ಈ ಟ್ವೀಟ್ ಜವಾನ್ 2 ಬರುವ ಬಗ್ಗೆ ಸೂಚನೆ ನೀಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಚರ್ಚೆಯಾಗುತ್ತಿದೆ. 

ವಿಜಯ್​ ಸೇತುಪತಿಯನ್ನು ಮದ್ವೆಯಾಗಲಿದ್ದಾರಂತೆ ಶಾರುಖ್​ ಖಾನ್​: ಟೈಮ್​ ಕೂಡ ಫಿಕ್ಸ್​!

ಇದಕ್ಕೆ ಕಾರಣವೂ ಇದೆ. ಜವಾನ್‌ ಚಿತ್ರದ  ಕ್ಲೈಮ್ಯಾಕ್ಸ್‌ ಮುಗಿದ ಮೇಲೆ ಪಾರ್ಟ್ 2 ಬರುವ ರೀತಿಯಲ್ಲಿ ಒಂದು ದೃಶ್ಯವನ್ನು ತೋರಿಸಲಾಗಿದೆ.   ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಡಬಲ್ ರೋಲ್​ನಲ್ಲಿದ್ದು, ಓಪನ್ ಎಂಡಿಂಗ್​​ನಲ್ಲಿ ಕನ್​ಕ್ಲೂಡ್ ಆಗಿದೆ. ಕೊನೆಯ ಸೀನ್​ನಲ್ಲಿ ಶಾರುಖ್ ಖಾನ್ ಅವರು ಆಜಾದ್ ಹಾಗೂ ವಿಕ್ರಮ್ ರಾಥೋಡ್ ಆಗಿ ಬರಲಿದ್ದಾರೆ ಎಂಬ ಹಿಂಟ್ ಕೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಶಾರುಖ್ ಟ್ವೀಟ್ ಕೂಡ ಹೋಲಿಕೆಯಾಗುತ್ತಿದೆ. ಜವಾನ್ ಸೀಕ್ವೆಲ್ ಬಂದೇ ಬರುತ್ತೆ ಅಂತಾ ಫ್ಯಾನ್ಸ್ ಸಂಭ್ರಮದಲ್ಲಿದ್ದಾರೆ. ‘ಜವಾನ್ 2’ ಬರುವ ಬಗ್ಗೆ ಈ ಮೂಲಕ ನಟ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಇದು ಅಷ್ಟು ಖಚಿತವಾಗಿರಲಿಲ್ಲ. ಆದರೆ ಇದೀಗ  ಖುದ್ದು ನಿರ್ದೇಶಕ ಅಟ್ಲಿ ಅವರು ಜವಾನ್ 2 ಸಿನಿಮಾವನ್ನು ಮಾಡುವುದಾಗಿ ಖಚಿತ ಪಡಿಸಿದ್ದಾರೆ.
 
ಪಿಂಕ್​ವಿಲ್ಲಾ ಜೊತೆ ನಡೆದ ಸಂದರ್ಶನದಲ್ಲಿ ಅಟ್ಲಿಯವರು ಮಾತನಾಡಿದ್ದು, ಜವಾನ್​ 2 ಬರುವುದಾಗಿ ಹೇಳಿದ್ದಾರೆ.  ಸ್ಕ್ರಿಪ್ಟ್ ತುಂಬಾ ಸ್ಟ್ರಾಂಗ್ ಆಗಿದ್ದರೆ ಜವಾನ್ 2 ಸಿನಿಮಾ ಮಾಡುವುದಾಗಿ ಹೇಳಿದ್ದು, ಸೀಕ್ವೆಲ್​ ಬರುವುದು ಬಹುತೇಕ ಖಚಿತವಾಗಿದೆ.  ಅಟ್ಲಿಯವರು ಹೇಳಿದ್ದೇನೆಂದರೆ, ನನ್ನ ಪ್ರತಿ ಸಿನಿಮಾ ಕೂಡಾ ಓಪನ್ ಎಂಡ್​ನಲ್ಲಿಯೇ ಮುಗಿಯುತ್ತದೆ. ಆದರೆ ಆ ಸಿನಿಮಾಗಳಿಗೆ ಸೀಕ್ವೆಲ್ ಮಾಡಬೇಕೆಂದು ನಾನೆಂದೂ ಯೋಚಿಸಿಲ್ಲ. ಆದರೆ ಜವಾನ್ ಸಿನಿಮಾಗೆ ಯಾವುದಾದರೂ ಸ್ಟ್ರಾಂಗ್ ಕಥೆ ಸಿಕ್ಕಿದರೆ ಪಾರ್ಟ್ 2 ಮಾಡುತ್ತೇನೆ. ನಾನು ಓಪನ್ ಎಂಡ್ ಇಟ್ಟಿರುವ ಕಾರಣ ಬೇಕಾದರೆ ಸೀಕ್ವೆಲ್ ಈಗ ಅಥವಾ ಮುಂದೆಯೂ ಮಾಡಬಹುದು ಎಂದಿದ್ದು,  ಖಂಡಿತವಾಗಿಯೂ ಜವಾನ್ ಸಿನಿಮಾಗೆ ಒಂದು ಸೀಕ್ವೆಲ್ ಮಾಡುವ ಇಚ್ಛೆ ಇದೆ ಎಂದಿದ್ದಾರೆ.

ಜವಾನ್ ನಿರ್ದೇಶಕರಿಂದ ಪ್ರಿಯಾಮಣಿಗೆ ಮಹಾಮೋಸ! ಶಾಕಿಂಗ್​ ವಿಚಾರ ತಿಳಿಸಿದ ನಟಿ
 

Follow Us:
Download App:
  • android
  • ios