ಶಾರುಖ್ ಬಂಗ್ಲೆ ಎದುರು 300 ಫ್ಯಾನ್ಸ್ ಗಿನ್ನೆಸ್ ವಿಶ್ವ ದಾಖಲೆ! ಏನಿದು?
ಶಾರುಖ್ ಖಾನ್ ಅಭಿಮಾನಿಗಳು ಇತಿಹಾಸ ಸೃಷ್ಟಿಸಿದ್ದಾರೆ. ಶಾರುಖ್ ಬಂಗಲೆ ಎದುರು ಗಿನ್ನೆಸ್ ದಾಖಲೆ ಮಾಡಿದ್ದಾರೆ. ಏನಿದು ಹೊಸ ವಿಷ್ಯ?
ಬ್ಯಾಕ್ ಟು ಬ್ಯಾಕ್ ಫ್ಲಾಪ್ ಚಿತ್ರಗಳನ್ನು ನೀಡುತ್ತಿದ್ದ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಇನ್ನೇನು ತಮ್ಮ ಕರಿಯರ್ ಮುಗಿದೇ ಹೋಯ್ತು ಎನ್ನುತ್ತಿರುವಾಗಲೇ ಪಠಾಣ್ ಅಬ್ಬರದಿಂದ ಶಾರುಖ್ ಪುನಃ ಕಿಂಗ್ ಖಾನ್ ಆಗಿ ಮಿಂಚಿದರು. ತಮ್ಮ ಕರಿಯರ್ ಮಾತ್ರವಲ್ಲದೇ ಮಕಾಡೆ ಮಲಗಿದ್ದ ಬಾಲಿವುಡ್ಗೂ ಜೀವ ತುಂಬಿದರು. ಕಳೆದೇ ಹೋಗಿದ್ದ ಶಾರುಖ್ ಪಠಾಣ್ ಮೂಲಕ ಮರು ಹುಟ್ಟು ಪಡೆದರೂ ಎಂದರೂ ತಪ್ಪಾಗಲಿಕ್ಕಿಲ್ಲ. ಹಲವಾರು ದಾಖಲೆಗಳನ್ನು ಮುರಿದ ಪಠಾಣ್ ರಷ್ಯಾ ಸೇರಿದಂತೆ ಕೆಲ ದೇಶಗಳಲ್ಲಿ ಮತ್ತೆ ಮೂರು ಸಾವಿರ ಪರದೆಯ ಮೇಲೆ ಮಿಂಚಲು ಸಜ್ಜಾಗಿ ನಿಂತಿದೆ. ಇಷ್ಟೆಲ್ಲಾ ರಾರಾಜಿಸುತ್ತಿರೋ ಶಾರುಖ್ ಅವರ ಸಿನಿಮಾ ಗಳಿಕೆಯ ಲೆಕ್ಕಾಚಾರ ಸಿನಿ ಮಾರ್ಕೆಟ್‌ನಲ್ಲಿ ಮತ್ತೆ ಶುರುವಾಗಿದೆ. ಪಠಾಣ್ ಭರ್ಜರಿ ಗೆಲುವಿನ ಬೆನ್ನಲ್ಲೇ ಶಾರುಖ್ ನಟನೆಯ ಜವಾನ್ (Jawan) ಇನ್ನೂ ಒಂದು ಸಿನಿಮಾ ಅತಿ ಹೆಚ್ಚು ಸದ್ದು ಮಾಡುತ್ತಿದೆ. ಪಠಾಣ್ ಸಿನಿಮಾದ ಗೆಲುವನ್ನ ಕಂಡ ಬಾಲಿವುಡ್ ಪಂಡಿತರು ಈ ಚಿತ್ರದ ಗೆಲುವನ್ನು ಪಠಾಣ್‌ಗೆ ಹೋಲಿಸಿ ನೋಡುತ್ತಿದ್ದು, ಲೆಕ್ಕಾಚಾರ ಶುರುವಿಟ್ಟುಕೊಂಡಿದ್ದಾರೆ.
ಇದರ ಬೆನ್ನಲ್ಲೇ ಇನ್ನೊಂದು ಭರ್ಜರಿ ನ್ಯೂಸ್ ಹೊರಬಂದಿದೆ. ಅದೇನೆಂದರೆ, ಶಾರುಖ್ ಫ್ಯಾನ್ಸ್ ಗಿನ್ನೆಸ್ ದಾಖಲೆ ಸೃಷ್ಟಿಸಿರೋ ವಿಷ್ಯ. ಹೌದು. ಎಲ್ಲರಿಗೂ ತಿಳಿದಿರುವಂತೆ ಮುಂಬೈನ ಬಾಂದ್ರಾ(Bandra) ದಲ್ಲಿರುವ ಶಾರುಖ್ ಖಾನ್ ಅವರ ನಿವಾಸ 'ಮನ್ನತ್' ಅವರ ಅಭಿಮಾನಿಗಳಿಗೆ ನೆಚ್ಚಿನ ತಾಣವಾಗಿದೆ, ಅಲ್ಲಿ ಜನರು ಕಿಂಗ್ ಖಾನ್ ಅವರನ್ನು ನೋಡಲು ಪ್ರತಿದಿನ ಸುಡುವ ಬಿಸಿಲಿನಲ್ಲಿ ನಿಲ್ಲುತ್ತಾರೆ. ಶಾರುಖ್ ಕೂಡ ಆಗಾಗ ಮನೆಯ ಬಾಲ್ಕನಿಗೆ ಬಂದು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿ ಶುಭಾಶಯ ಕೋರುತ್ತಾರೆ. ಅದೇ ರೀತಿ ಮೊನ್ನೆ ಅಂದರೆ ಜೂನ್ 10ರಂದು ಶಾರುಖ್ ಖಾನ್ ಅವರ ಬಂಗಲೆ 'ಮನ್ನತ್' (Mannth) ಹೊರಗೆ ಅಭಿಮಾನಿಗಳು ಮತ್ತೊಮ್ಮೆ ನೆರೆದಿದ್ದರು, ಆದರೆ ಈ ಬಾರಿ ಇತಿಹಾಸವನ್ನು ಸೃಷ್ಟಿಸಿದ ಘಟನೆ ನಡೆದಿದೆ. ವಾಸ್ತವವಾಗಿ, ಶಾರುಖ್ ಅಭಿನಯದ ಚಿತ್ರ 'ಪಠಾಣ್', ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಇದೇ 18ರಂದು ಸ್ಟಾರ್ ಗೋಲ್ಡ್‌ನಲ್ಲಿ ಅದರ ವಿಶ್ವ ಪ್ರೀಮಿಯರ್ ಪ್ರದರ್ಶನಗೊಳ್ಳಲಿದೆ. ಹಾಗಾಗಿ ಸ್ಟಾರ್ ಗೋಲ್ಡ್ ಎಸ್ಆರ್ಕೆ ಅವರ ಅಭಿಮಾನಿಗಳೊಂದಿಗೆ ಇತಿಹಾಸ ಸೃಷ್ಟಿಸಲು ನಿರ್ಧರಿಸಿದೆ.
Viral Vedio: ಫ್ಲರ್ಟ್ ಮಾಡಲು ಬಂದ ಶಾರುಖ್ಗೆ ವಯಸ್ಸಿನ ಅಂತರ ನೆನಪಿಸಿದ ದೀಪಿಕಾ
ಸ್ಟಾರ್ ಗೋಲ್ಡ್ ಶಾರುಖ್ ಖಾನ್ (Shah Rukh Khan) ಅವರ ಅಭಿಮಾನಿಗಳನ್ನು ಒಂದು ವೇದಿಕೆಯಲ್ಲಿ ಒಟ್ಟುಗೂಡಿಸಲು ನಿರ್ಧರಿಸಿತು, ಅದು ಐತಿಹಾಸಿಕ ದಾಖಲೆಯಾಗಿ ಮಾರ್ಪಟ್ಟಿದೆ. ಮಾಧ್ಯಮಗಳ ಸಮ್ಮುಖದಲ್ಲಿ, ಶಾರುಖ್ ಖಾನ್ ಅವರ 300 ಅಭಿಮಾನಿಗಳು ಶಾರುಖ್ ಅವರ ಸಾಂಪ್ರದಾಯಿಕ ಭಂಗಿಯನ್ನು ಮರುಸೃಷ್ಟಿಸಿದರು ಮತ್ತು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಶನಿವಾರ ಮಧ್ಯಾಹ್ನ ಶಾರುಖ್ ಅವರ ಬಂಗಲೆ 'ಮನ್ನತ್' ಹೊರಗೆ ಸ್ಟಾರ್ ಗೋಲ್ಡ್ ಈ ಮೆಗಾ ಕಾರ್ಯಕ್ರಮವನ್ನು ಆಯೋಜಿಸಿತ್ತು, ಅಲ್ಲಿ ಶಾರುಖ್ ಅವರ 300 ಕ್ಕೂ ಹೆಚ್ಚು ಅಭಿಮಾನಿಗಳು ಅವರೊಂದಿಗೆ ಪೋಸ್ ನೀಡಲು ಉತ್ಸುಕರಾಗಿದ್ದರು. ಸುಡು ಬಿಸಿಲಿನಲ್ಲಿ 300 ಮಂದಿ ಅಭಿಮಾನಿಗಳು ಸೇರಿ ಕಿಂಗ್ ಖಾನ್ ಅವರ ಐಕಾನಿಕ್ ಪೋಸ್ ನೀಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.
ಶಾರುಖ್ ಖಾನ್ ಅವರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಇದರಲ್ಲಿ ಕಿಂಗ್ ಖಾನ್ ಅಭಿಮಾನಿಗಳೊಂದಿಗೆ ಸಾಂಪ್ರದಾಯಿಕ ಭಂಗಿಯಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ನಟ 'ಪಠಾಣ್' ಚಿತ್ರದ 'ಜೂಮೇ ಜೋ ಪಠಾಣ್' (Zhoom Le Pathan) ಹಾಡಿನ ಹುಕ್-ಸ್ಟೆಪ್ ಅನ್ನು ಸಹ ಮಾಡಿದರು. ಹಾಯ್-ಹಲೋ ಹೇಳುವ ಮೂಲಕ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೂಡ ನೀಡಿದ್ದಾರೆ.
ಶಾರುಖ್ ಚಿತ್ರದಲ್ಲಿ ನಟನೆಗೆ ₹1 ಪಡೆದ ಪಾಕ್ ನಟ, ವರ್ಷಗಳ ಬಳಿಕ ಕಾರಣ ಬಹಿರಂಗ!