Viral Vedio: ಫ್ಲರ್ಟ್ ಮಾಡಲು ಬಂದ ಶಾರುಖ್ಗೆ ವಯಸ್ಸಿನ ಅಂತರ ನೆನಪಿಸಿದ ದೀಪಿಕಾ
ಶಾರುಖ್ ಖಾನ್ ವಯಸ್ಸಿನಲ್ಲಿ ತಮಗಿಂತ ತುಂಬಾ ಹಿರಿಯರು ಎಂಬುದನ್ನು ದೀಪಿಕಾ ಪಡುಕೋಣೆ ಅವರಿಗೆ ನೆನಪಿಸಿದ್ದ ವಿಡಿಯೋ ಒಂದು ಸಕತ್ ವೈರಲ್ ಆಗಿದೆ. ದೀಪಿಕಾ ಹೇಳಿದ್ದೇನು?
ಬಾಲಿವುಡ್‌ನಲ್ಲಿ (Bollywood) ಹಿರಿಯ ನಟರು ಕಿರಿಯ ನಟಿಯರನ್ನು ರೊಮ್ಯಾನ್ಸ್ ಮಾಡುವುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದು ಇಂದು ನಿನ್ನೆಯದ್ದಲ್ಲ. ಹಲವಾರು ವರ್ಷಗಳಿಂದಲೇ ಇದು ನಡೆದು ಬಂದಿದೆ. ಬಾಲಿವುಡ್ ಮಾತ್ರವಲ್ಲದೇ ಎಲ್ಲಾ ಭಾಷೆಗಳ ಚಲನಚಿತ್ರಗಳಲ್ಲಿಯೂ ಇದು ಕಾಮನ್. ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರಗಳಲ್ಲಿ ನಟನಿಗೆ ನಾಯಕಿಯಾಗಿ ನಟಿಸುತ್ತಿರುವ ನಟಿ ಕೆಲ ವರ್ಷಗಳ ಬಳಿಕ ಅಮ್ಮ, ಅತ್ತಿಗೆ ಪಾತ್ರ ಮಾಡುತ್ತಾಳೆ. ತಾನೊಮ್ಮೆ ನಾಯಕಿಯಾಗಿ ನಟಿಸಿದ ನಟನಿಗೇ ನಟಿ ಅಮ್ಮನಾದರೆ ನಟ ಮಾತ್ರ ತಮಗಿಂದ ತೀರಾ ಚಿಕ್ಕವಳಾಗಿರುವ ನಟಿಯ ಜೊತೆ ರೊಮ್ಯಾನ್ಸ್ (Romance) ಮಾಡುವುದು ಹೊಸ ವಿಷಯವೇನಲ್ಲ. ಇದು ಹಿಂದಿನ ಮಾತಾದರೆ ಈಗಂತೂ ಕೆಲವು ನಟರು ವಯಸ್ಸು 60 ದಾಟಿದರೂ ತಮ್ಮ ಮಗಳ ವಯಸ್ಸಿನ ನಟಿಯ ಜೊತೆ ರೊಮ್ಯಾನ್ಸ್ ಮಾಡುವುದು ಮಾಮೂಲಾಗಿದೆ.
ಪಠಾಣ್ (Pathaan) ಚಿತ್ರದಲ್ಲಿ ಶಾರುಖ್ ಖಾನ್ ತಮಗಿಂತ ಅತ್ಯಂತ ಕಿರಿಯ ವಯಸ್ಸಿನ ದೀಪಿಕಾ ಪಡುಕೋಣೆ (Deepika Padukone) ಅವರ ಜೊತೆ ರೊಮ್ಯಾನ್ಸ್ ಮಾಡಿದಾಗಲೂ ಇದೇ ರೀತಿ ಸುದ್ದಿಯಾಗಿತ್ತು. ಅದರಲ್ಲಿಯೂ ದೀಪಿಕಾ ಮೈ ಚಳಿ ಬಿಟ್ಟು ಅತ್ಯಂತ ಕಡಿಮೆ ಬಟ್ಟೆ ತೊಟ್ಟು ರೊಮ್ಯಾನ್ಸ್ ಮಾಡಿ ಹಲವರ ನಿದ್ದೆ ಕದ್ದಿದ್ದರೆ, ಈ ವಯಸ್ಸಿನಲ್ಲಿ ಇಷ್ಟು ಚಿಕ್ಕ ವಯಸ್ಸಿನ ಹುಡುಗಿ ಜೊತೆ ಶಾರುಖ್ಗೆ ಇದೆಲ್ಲಾ ಬೇಕಿತ್ತಾ ಎಂದವರೇ ಹೆಚ್ಚು. ಆದರೆ ಅವರ ಫ್ಯಾನ್ಸ್ ಮಾತ್ರ, ದೀಪಿಕಾ ಅಲ್ಲ ಆಕೆಗಿಂತಲೂ ಚಿಕ್ಕ ವಯಸ್ಸಿನ ನಟಿಯ ಜೊತೆ ಶಾರುಖ್ ನಟನಾಗುವುದಕ್ಕೂ ಅರ್ಹರಿದ್ದಾರೆ ಎಂದಿದ್ದರು. ಅದೇನೆ ಇದ್ದರೂ ಪಠಾಣ್ನ ಈ ಜೋಡಿಯ ಕೆಮಿಸ್ಟ್ರಿಗೆ ಲಕ್ಷಾಂತರ ಮಂದಿ ಫಿದಾ ಆಗಿದ್ದಂತೂ ಸುಳ್ಳಲ್ಲ.
ಸ್ನಾನದ ವಿಡಿಯೋ ಶೇರ್ ಮಾಡಿ ಫ್ಯಾನ್ಸ್ ಎದೆಬಡಿತ ಹೆಚ್ಚಿಸಿದ ನಟಿ ಸೋನಂ, ವೀಡಿಯೋ ನೋಡಿ
ಆದರೆ ಇದೀಗ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ದೀಪಿಕಾ ಪಡುಕೋಣೆ (Deepika Padukone) ಶಾರುಖ್ ಅವರಿಗೆ ತಮ್ಮ ನಡುವೆ ಇರುವ ವಯಸ್ಸಿನ ಅಂತರದ ಕುರಿತು ಪರೋಕ್ಷವಾಗಿ ಮಾತನಾಡಿರುವುದನ್ನು ನೋಡಬಹುದು. ಶಾರುಖ್ ದೀಪಿಕಾರ ಜೊತೆ ರೊಮ್ಯಾನ್ಸಿಂಗ್ ವಿಷಯ ಮಾತನಾಡಲು ಬಂದಾಗ ವಯಸ್ಸಿನ ಅಂತರದ ಬಗ್ಗೆ ಸೂಚ್ಯವಾಗಿ ದೀಪಿಕಾ ಹೇಳಿದ್ದಾರೆ.
ಅದೇನೆಂದರೆ, ಟಾಕ್ ಷೋ ಒಂದರಲ್ಲಿ ಪತ್ರಕರ್ತ ಕೇಳಿದ ಪ್ರಶ್ನೆಗೆ ದೀಪಿಕಾ ನಾನು ಬೆಂಗಳೂರಿನಲ್ಲಿ ಓದಿದವಳು ಮತ್ತು ಮುಂಬೈಗೆ ಬಂದು ಐದು ವರ್ಷಗಳಾಗಿವೆ ಎಂದಿದ್ದಾರೆ. ಆ ಸಮಯದಲ್ಲಿ ಬೆಂಗಳೂರಿನಲ್ಲಿ ನಂದಿದುರ್ಗ ರಸ್ತೆಯಲ್ಲಿ ಇದ್ದುದಾಗಿ ಹೇಳಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿದ ಶಾರುಖ್ ಖಾನ್, ನಾನೊಮ್ಮೆ ಅಲ್ಲಿಗೆ ಬಂದಾಗ ಹುಡುಗಿಯೊಬ್ಬಳ ಜೊತೆ ರೊಮ್ಯಾನ್ಸ್ ಮಾಡಿದ್ದೆ, ನೀನೇ ಇರಬಹುದು ಎಂದಾಗ ಸ್ವಲ್ಪ ಮುನಿಸಿನಿಂದಲೇ ದೀಪಿಕಾ, ಆ ಟೈಂ ನಲ್ಲಿ ನಾನು ಹುಟ್ಟೇ ಇರಲಿಲ್ಲ ಬಿಡಿ ಎಂದಿದ್ದಾರೆ. ಈ ಮೂಲಕ ತಮ್ಮ ನಡುವಿನ ವಯಸ್ಸಿನ ಅಂತರವನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಕೆನ್ನೆಗೆ ಹೊಡೆದವನನ್ನೇ ಮದ್ವೆಯಾದ ಇಶಾ ಡಿಯೋಲ್: ಇಂಟರೆಸ್ಟಿಂಗ್ ಲವ್ ಸ್ಟೋರಿ
ಇದು ಸಾಮಾಜಿಕ ಜಾಲತಾಣದಲ್ಲಿ (Social Media) ಸಕತ್ ವೈರಲ್ ಆಗಿದ್ದು, ದೀಪಿಕಾ ಮಾತು ಶಾರುಖ್ ಅವರನ್ನು ಕಸಿವಿಸಿ ಮಾಡಿತು ಎಂದಿದ್ದಾರೆ. ಕೆಲವರು ವಯಸ್ಸು ಒಂದು ಮ್ಯಾಟರ್ ಅಷ್ಟೇ. ಇವರಿಬ್ಬರ ಕೆಮೆಸ್ಟ್ರಿಗೆ ಅವರೇ ಸಾಟಿ ಎಂದಿದ್ದಾರೆ. ಇನ್ನು ಕೆಲವರು ಇನ್ನು ಮುಂದಾದರೂ ತಮ್ಮ ಮಗಳ (Daughters age) ವಯಸ್ಸಿನ ನಟಿಯರ ಜೊತೆ ನಟನಾಗಿ ಕೆಲಸ ಮಾಡುವ ಬದಲು ಶಾರುಖ್ ನಾಯಕನ ವೃತ್ತಿಯಿಂದ ನಿವೃತ್ತಿ ತೆಗೆದುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ. ಅಂದ ಹಾಗೆ ದೀಪಿಕಾಗೆ 37 ವರ್ಷ ವಯಸ್ಸು ಹಾಗೂ ಶಾರುಖ್ಗೆ 57 ವರ್ಷ ವಯಸ್ಸು.