ಸಾವಿರ ಕೋಟಿ ಕ್ಲಬ್ ಸೇರಿದ ಜವಾನ್: ಅಮುಲ್ ಬೇಬಿ ಅವತಾರವೆತ್ತಿದ ಶಾರುಖ್ ಖಾನ್!
ಶಾರುಖ್ ಖಾನ್ ಅವರ ಜವಾನ್ ಚಿತ್ರ 100 ಕೋಟಿ ಕ್ಲಬ್ ಸೇರಿದ ಹಿನ್ನೆಲೆಯಲ್ಲಿ ಶಾರುಖ್ ಅಮುಲ್ ಬೇಬಿಯಾಗಿ ಮಿಂಚಿದ್ದಾರೆ. ಏನಿದು ವಿಷ್ಯ?
ಜವಾನ್ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ. ಇಲ್ಲಿಯವರೆಗೆ ಜವಾನ್ ಭಾರತದಲ್ಲಿ ಇದುವರೆಗೆ 439 ಕೋಟಿ ಗಳಿಸಿದ್ದರೆ, ಜಾಗತಿಕವಾಗಿ 1000 ಕೋಟಿ ರೂಪಾಯಿ ಗಳಿಸಿದೆ. ಬಾಲಿವುಡ್ನ ಹಲವು ದಾಖಲೆಗಳನ್ನು ಅಳಿಸಿಹಾಕಿ ಇನ್ನೂ ಮುನ್ನುಗ್ಗುತ್ತಲೇ ಸಾಗಿವೆ. ಜವಾನ್ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ. ಈ ಚಿತ್ರದಲ್ಲಿ ಎಂಟು ವಿಭಿನ್ನ ಶೇಡ್ಗಳಲ್ಲಿ ನಾಯಕ ನಟ ಶಾರುಖ್ ಕಾಣಿಸಿಕೊಂಡಿದ್ದರೆ, ಕಾಳಿ ಗಾಯಕ್ವಾಡ್ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿದ್ದಾರೆ. ಘಟಾನುಘಟಿ ತಾರೆಯರ ದಂಡು ಈ ಚಿತ್ರದಲ್ಲಿದೆ. ಚಿತ್ರದ ನಿರ್ಮಾಪಕರಾದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ಸ್ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಜವಾನ್ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ 1004.92 ಕೋಟಿ ಗಳಿಸಿದೆ. 18 ದಿನಗಳಲ್ಲಿ ಚಿತ್ರ ಈ ಸಾಧನೆ ಮಾಡಿದೆ.
ಇದರ ನಡುವೆಯೇ ಈಗ ಜವಾನ್-2 ಬಗ್ಗೆ ಸಕತ್ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಜವಾನ್ ಚಿತ್ರದ ಕ್ಲೈಮ್ಯಾಕ್ಸ್ ಮುಗಿದ ಮೇಲೆ ಪಾರ್ಟ್ 2 ಬರುವ ರೀತಿಯಲ್ಲಿ ಒಂದು ದೃಶ್ಯವನ್ನು ತೋರಿಸಲಾಗಿದೆ. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಡಬಲ್ ರೋಲ್ನಲ್ಲಿದ್ದು, ಓಪನ್ ಎಂಡಿಂಗ್ನಲ್ಲಿ ಕನ್ಕ್ಲೂಡ್ ಆಗಿದೆ. ಕೊನೆಯ ಸೀನ್ನಲ್ಲಿ ಶಾರುಖ್ ಖಾನ್ ಅವರು ಆಜಾದ್ ಹಾಗೂ ವಿಕ್ರಮ್ ರಾಥೋಡ್ ಆಗಿ ಬರಲಿದ್ದಾರೆ ಎಂಬ ಹಿಂಟ್ ಕೊಟ್ಟಿದ್ದಾರೆ. ಇದರ ನಡುವೆಯೇ ಶಾರುಖ್ ಖಾನ್ ಹ್ಯಾಟ್ರಿಕ್ ಹೀರೋ ಆಗುವ ಕನಸು ಕಾಣುತ್ತಿದ್ದಾರೆ. ಅದು ಡಂಗಿ ಎನ್ನುವ ಚಿತ್ರದ ಮೂಲಕ. ಹ್ಯಾಟ್ರಿಕ್ ಚಿತ್ರ ಡಂಗಿ ಕುರಿತು ಹೇಳುವುದಾದರೆ, ಸಿನಿಮಾದಲ್ಲಿ ಶಾರುಖ್ ಖಾನ್‌ಗ ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ. ದಿಯಾ ಮಿರ್ಜಾ ಕೂಡ ಇದ್ದಾರೆ. ಹಿರಾಣಿ ಸಿನಿಮಾಗಳಲ್ಲಿ ಖಾಯಂ ಆಗಿರೋ ನಟ ಬೊಮನ್ ಇರಾನಿ ಇಲ್ಲೂ ಇದ್ದಾರೆ. ಇನ್ನುಳಿದಂತೆ ಪ್ರೀತಂ ಸಂಗಿತ ಕೊಟ್ಟಿದ್ದಾರೆ. ಸ್ವತಃ ರಾಜ್‌ಕುಮಾರ್ ಹಿರಾನಿ ಈ ಚಿತ್ರವನ್ನ ಸಂಕಲನ ಮಾಡಿದ್ದಾರೆ. ಒಟ್ಟಾರೆ ಡಂಕಿ ಮತ್ತೊಂದು ಹಿಟ್ ಸಿನಿಮಾ ಆಗೋ ಟಾಕ್ ಈಗಲೇ ಶುರು ಆಗಿದೆ.
ಜವಾನ್ನಲ್ಲಿ ನಯನತಾರಾಗೆ ಮೋಸ? ಟ್ವೀಟ್ನಲ್ಲಿ ಬೆಣ್ಣೆ ಸವರಿ ನಟಿಯನ್ನು ಸಮಾಧಾನಪಡಿಸಿದ ಶಾರುಖ್
ಇದೀಗ ಸಿನಿಮಾ 1000 ಕೋಟಿ ಕ್ಲಬ್ ಸೇರಿಕೊಂಡಿರುವ ಹಿನ್ನೆಲೆಯಲ್ಲಿ ಅಮುಲ್ ಇಂಡಿಯಾ ಡೆಲಿಷಿಯಸ್ ಪೋಸ್ಟ್ ಶೇರ್ ಮಾಡಿದೆ. ಅಮುಲ್ ಇಂಡಿಯಾ ಪೋಸ್ಟ್ ಮಾಡಿದ್ದು ಜವಾನ್ ಸಾವಿರ ಕೋಟಿ, ಅಮುಲ್ ಅಟ್ಲಿ ಬಟರ್ಲಿ ಡೆಲಿಷಿಯಸ್ ಎಂದು ಪೋಸ್ಟ್ ಮಾಡಿದ್ದು, ಇದರಲ್ಲಿ ಶಾರುಖ್ ಅಮುಲ್ ಬೇಬಿಯಾಗಿ ಮಿಂಚಿದ್ದಾರೆ. ಇದು ಸಕತ್ ವೈರಲ್ ಆಗುತ್ತಿದೆ.
ಇನ್ನು, ಜವಾನ್ ಸಕ್ಸಸ್ ದಾಖಲಿಸಿ ಸಾಕಷ್ಟು ದುಡ್ಡು ಬಾಚಿಕೊಂಡಿದೆ. ಈಗ ಜನರಿಗಾಗಿ ನೀವು ಏನು ಮಾಡುವ ಪ್ಲಾನ್ ಹಾಕಿಕೊಂಡಿದ್ದೀರಾ ಎಂಬ ಪ್ರಶ್ನೆ" ಶಾರುಖ್ ಖಾನ್ ಅವರಿಗೆ ಕೇಳಲಾಗಿತ್ತು. ಅದಕ್ಕೆ ಶಾರುಖ್ ಅವರು, "ನಮ್ಮ ರೆಡ್ ಚಿಲ್ಲೀಸ್' ಸಂಸ್ಥೆಯಿಂದ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ನಮ್ಮ ಇಡೀ ಕುಟುಂಬವು ಈ ಬಗ್ಗೆ ಉತ್ಸುಕತೆಯಿಂದ ಮಾತನಾಡುತ್ತಿದೆ. ಮೀರ್ ಫೌಂಡೇಶನ್ ವತಿಯಿಂದ ಕೆಲಸ ಮಾಡುವ ಎಲ್ಲ ಜನರಿಗೆ ಸಿನಿಮಾ ತೋರಿಸುವ ಪ್ಲಾನ್ ಮಾಡಿಕೊಂಡಿದ್ದೇವೆ. ನಮ್ಮ ಎಲ್ಲ ಪಾಲುದಾರರೊಂದಿಗೆ ಈ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ. ನಮ್ಮ ಯಾವುದೇ ಕೆಲಸದಿಂದ ನಮ್ಮೆಲ್ಲರ ಮುಖದಲ್ಲಿ ನಗು ತರಿಸಲು ಸಾಧ್ಯವಾದರೆ ಅದು ನಿಜವಾದ ಎಂಟರ್‌ಟೈನ್ಮೆಂಟ್. ಇದನ್ನು ನಾನು ನಮ್ಮ Red Chillies Entertainment ಸಂಸ್ಥೆಗೆ ಹೇಳುತ್ತಿದ್ದೇನೆ. ನೀವು ಐಡಿಯಾ ಕೊಟ್ಟಿದ್ದಕ್ಕೆ ನಿಮಗೆ ಥ್ಯಾಂಕ್ಸ್' ಎಂದಿದ್ದಾರೆ ನಟ ಶಾರುಖ್ ಖಾನ್. ಅಂದಹಾಗೆ ಈ 'ಜವಾನ್' ಚಿತ್ರವನ್ನು ಗೌರಿ ಖಾನ್ ಮತ್ತು ಶಾರುಖ್ ಖಾನ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
ರಿಸೆಪ್ಷನ್ ದಿನ ಪತ್ನಿ ಗೌರಿಗೆ ಬುರ್ಖಾ ಹಾಕ್ಕೋ, ನಮಾಜ್ ಮಾಡೋಣ ಅಂದೆ: ಆ ದಿನದ ಘಟನೆ ವಿವರಿಸಿದ ಶಾರುಖ್