ಶಾರುಖ್ ಖಾನ್ ನಿವಾಸ ಮನ್ನತ್ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದಕ್ಕೆ ಕಾರಣ ಹೊಸ ನಾಮಫಲಕ. ಶಾರುಖ್ ಮನೆಯ ನಾಮಫಲಕವನ್ನು ಬದಲಾಯಿಸಲಾಗಿದೆ. ಅನೇಕ ವರ್ಷಗಳಿಂದ ಇದ್ದ ಮಾಮಫಲಕ ಬದಲಾಗುತ್ತಿದ್ದಂತೆ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು. ಅಂದಹಾಗೆ ಈ ಆಕರ್ಷಕವಾಗಿರುವ ನಾಮಫಲಕದ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಬರೋಬ್ಬರಿ 20 ರಿಂದ 25 ಲಕ್ಷ ಎಂದು ಹೇಳಲಾಗುತ್ತಿದೆ.

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್( Shah Rukh Khan ) ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಶಾರುಖ್ ಹೀನಾಯ ಸೋಲಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಶಾರುಖ್ ಇದೀಗ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಸಾರಥ್ಯದಲ್ಲಿ ಬರ್ತಿರುವ ಹೊಸ ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದಾರೆ. ಶಾರುಖ್ ಸಿನಿಮಾಗಳು ಇಲ್ಲ ಅಂದರೂ ಆಗಾಗ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಹೆಸರು ಟ್ರೆಂಡಿಂಗ್ ನಲ್ಲಿರುತ್ತದೆ.

ಇತ್ತೀಚಿಗಷ್ಟೆ ಶಾರುಖ್ ಮತ್ತೆ ಟ್ರೆಂಡಿಂಗ್ ನಲ್ಲಿದ್ದರು. ಇದಕ್ಕೆ ಕಾರಣವಾಗಿದ್ದು ಶಾರುಖ್ ಮನ್ನತ್(Mannat) ನಿವಾಸ. ಹೌದು, ಶಾರುಖ್ ಖಾನ್ ನಿವಾಸ ಮನ್ನತ್ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದಕ್ಕೆ ಕಾರಣ ಹೊಸ ನಾಮಫಲಕ. ಶಾರುಖ್ ಮನೆಯ ನಾಮಫಲಕವನ್ನು ಬದಲಾಯಿಸಲಾಗಿದೆ. ಅನೇಕ ವರ್ಷಗಳಿಂದ ಇದ್ದ ಮಾಮಫಲಕ ಬದಲಾಗುತ್ತಿದ್ದಂತೆ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು. ಅಭಿಮಾನಿಗಳು ಹೊಸ ನಾಮಫಲಕದ ಫೋಟೋ ಕ್ಲಿಕ್ಕಿಸಿ ವೈರಲ್ ಮಾಡಿದ್ದರು. ಅಂದಹಾಗೆ ಹೊಸ ನಾಮಫಲಕ ಡಿಸೈನ್ ಮಾಡಿಸಿದ್ದು ಶಾರುಖ್ ಪತ್ನಿ ಗೌರಿ ಖಾನ್. ಶಾರುಖ್ ಪತ್ನಿ ಇಂಟೀರಿಯರ್ ಡಿಸೈನರ್. ಬಾಲಿವುಡ್ ನ ಅನೇಕ ಸ್ಟಾರ್ ಕಲಾವಿದರ ಮನೆಯ ಇಂಟೀರಿಯರ್ ಡಿಸೈನ್ ಮಾಡಿಸಿದ್ದು ಗೌರಿ ಖಾನ್. ಇದೀಗ ತನ್ನ ನಿವಾಸದ ನಾಮಫಲಕ ಬಲಾಯಿಸಿ ಸುದ್ದಿಯಾಗಿದ್ದಾರೆ.

Shahrukh Khan ಹೇಗಾಗಿದ್ದಾರೆ ನೋಡಿ; ಕಿಂಗ್‌ ಖಾನ್‌ ಗುರುತೇ ಸಿಗೋಲ್ಲ!

ಅಂದಹಾಗೆ ಈ ಆಕರ್ಷಕವಾಗಿರುವ ನಾಮಫಲಕದ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಬರೋಬ್ಬರಿ 20 ರಿಂದ 25 ಲಕ್ಷ ಎಂದು ಹೇಳಲಾಗುತ್ತಿದೆ. ಕ್ಲಾಸಿಕ್ ಆಂಡ್ ರಿಚ್ ಆಗಿರುವ ನಾಮಫಲಕದ ಬೆಲೆ ಕೂಡ ಅಷ್ಟೆ ದುಬಾರಿಯಾಗಿದೆ. ಕಿಂಗ್ ಖಾನ್ ಮನೆ ಎಂದಮೇಲೆ ಅದೇನು ದೊಡ್ಡ ವಿಚಾರವಲ್ಲ ಎಂದು ಕೆಲವರು ಕೇಳಿದರೆ ಇನ್ನು ಕೆಲವರು ಈ ಬೆಲೆಯಲ್ಲಿ ಎರಡು ಮೂರು ಮನೆಯೇ ಕಟ್ಟಿಸಬಹುದ್ದಿತ್ತು ಎನ್ನುತ್ತಿದ್ದಾರೆ. ಒಟ್ನಲ್ಲಿ ಶಾರುಖ್ ಮನ್ನತ್ ನಾಮಫಲಕ ಅಭಿಮಾನಿಗಳ ಗಮನಸೆಳೆಯುತ್ತಿದೆ.

'ಪಠಾಣ್' ಸಿನಿಮಾತಂಡಕ್ಕೆ ಹೃದಯಸ್ಪರ್ಶಿ ಪತ್ರ ಬರೆದ ಶಾರುಖ್ ಖಾನ್

ಇನ್ನು ಶಾರುಖ್ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದ ಸೋಲಿನ ಬಳಿಕ ಶಾರುಖ್ ಮತ್ತೆ ತೆರೆಮೇಲೆ ಬಂದಿಲ್ಲ. ಸದ್ಯ ಮೂರು ವರ್ಷಗಳ ಬಳಿಕ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರುವ ಶಾರುಖ್ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇತ್ತೀಚಿಗಷ್ಟೆ ಪಠಾಣ್ ಸಿನಿಮಾದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಮತ್ತು ಅಟ್ಲೀ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಶಾರುಖ್ ತಾಪ್ಸಿ ಪನ್ನು ಮತ್ತು ದಕ್ಷಿಣದ ಸ್ಟಾರ್ ನಟಿ ನಯನತಾರಾ ಜೊತೆ ನಟಿಸುತ್ತಿದ್ದಾರೆ. ಶಾರುಖ್ ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದೆ ಮುಂದಿನ ವರ್ಷ ಜನವರಿ ವರೆಗೂ ಕಾಯಲೇಬೆಕು.