ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಫಿಟ್‌ನೆಸ್‌ ರಹಸ್ಯವೇ ಒನ್‌ ಮೀಲ್‌ ಎ ಡೇ ಡಯಟ್‌. ದಿನಕ್ಕೆ ಒಂದೇ ಬಾರಿ ಊಟ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಜೊತೆಗೆ ನಿಯಮಿತ ವ್ಯಾಯಾಮವನ್ನು ಕೂಡ ಮಾಡುತ್ತಾರೆ.


ಬಾಲಿವುಡ್‌ನ ಕಿಂಗ್‌ ಖಾನ್‌ ಅಂತಲೇ ಫೇಮಸ್‌ ಆಗಿರುವ ಶಾರುಖ್‌ ಖಾನ್‌ನನ್ನು ನೋಡಿದರೆ ಈತನಿಗೆ 58 ವರ್ಷ ವಯಸ್ಸಾಗಿದೆ ಎಂದು ಯಾರು ಹೇಳುತ್ತಾರೆ? 35 ಅಥವಾ 40 ವರ್ಷ ಅಂತ ಭಾವಿಸುತ್ತಾರೆ ಎಲ್ಲರೂ. ಫಿಟ್‌ನೆಸ್‌ ವಿಷಯದಲ್ಲಿ ಸದಾ ಕೇರ್‌ಫುಲ್‌ ಆಗಿರುವ ಶಾರುಖ್‌ ಖಾನ್‌ ಇಷ್ಟು ಫಿಟ್‌ ಆಗಿರುವ ಡಯಟ್‌ ಸೀಕ್ರೆಟ್‌ ಅನ್ನು ಬಿಚ್ಚಿಟ್ಟಿದ್ದಾರೆ. ಅದು ಒನ್‌ ಮೀಲ್‌ ಎ ಡೇ ಡಯಟ್.‌ 

ಇದರ ಪ್ರಕಾರ ಶಾರುಖ್‌ ಮಾಡುವುದು ದಿನಕ್ಕೆ ಒಂದೇ ಊಟ. ಆದರೆ ಸಾಕಷ್ಟು ಪೌಷ್ಟಿಕಾಂಶಭರಿತವಾದ ಊಟ. ಇದು ಸಾಮಾನ್ಯವಾಗಿ ಮಧ್ಯಾಹ್ನ ಮತ್ತು ಸಂಜೆಯ ನಡುವೆ. ಶಾರುಖ್‌ ಖಾನ್‌ ಸಾಮಾನ್ಯವಾಗಿ ಬೆಳಗಿನ ಜಾವ 5 ಗಂಟೆಗೆ ಮಲಗುತ್ತಾರಂತೆ. 5 ಗಂಟೆಗೆ ಮಲಗಿ 10 ಗಂಟೆಗೆ ಎಚ್ಚರವಾಗುತ್ತಾರಂತೆ. ನಂತರ ಶೂಟಿಂಗ್‌ ಮುಗಿಸಿಕೊಂಡು ಮನೆಗೆ ಬಂದ ನಂತರ ಬೆಳಗ್ಗೆ 2 ಗಂಟೆಗೆ ವರ್ಕೌಟ್‌ ಮಾಡುತ್ತಾರಂತೆ. ದಿನಕ್ಕೆ ಅರ್ಧ ಗಂಟೆ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವ ಶಾರುಖ್‌ ಖಾನ್‌ ದಿನಕ್ಕೆ ಒಂದೇ ಬಾರಿಯಷ್ಟೆ ಆಹಾರ ಸೇವಿಸುತ್ತಾರಂತೆ. ದಿನದ ಉಳಿದ ಭಾಗ ಉಪವಾಸ ಕಳೆಯುತ್ತಾರೆ. ಆದರೆ ಮಧ್ಯೆ ಮಧ್ಯೆ ನೀರು, ಎಳನೀರು ಸೇವಿಸುತ್ತಾರಂತೆ. 

ಇತ್ತೀಚಿನ ವರ್ಷಗಳಲ್ಲಿ, ಈ ಒನ್‌ ಮೀಲ್‌ ಎ ಡಟಯ್‌ ಅಥವಾ ಮಧ್ಯಂತರ ಉಪವಾಸದ ಡಯಟ್‌ ಜನಪ್ರಿಯತೆಯನ್ನು ಗಳಿಸಿದೆ. ತೂಕ ನಿರ್ವಹಣೆ, ಚಯಾಪಚಯ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಪರಿಣಾಮಕಾರಿ ತಂತ್ರವಾಗಿ ಹೊರಹೊಮ್ಮಿದೆ. ಹೆಸರೇ ಸೂಚಿಸುವಂತೆ OMAD ನಿಮ್ಮ ಎಲ್ಲಾ ದೈನಂದಿನ ಕ್ಯಾಲೊರಿಗಳನ್ನು ಒಂದೇ ಊಟದಲ್ಲಿ ಸೇವಿಸುವುದನ್ನು ಒಳಗೊಂಡಿರುತ್ತದೆ. ದಿನದ ಉಳಿದ ಭಾಗ ಉಪವಾಸ ಇರುತ್ತದೆ. ಈ ಆಹಾರ ಸೇವನೆ ಮಾದರಿ ಕೇವಲ ಆಹಾರಕ್ರಮವಲ್ಲ. ಗಮನಾರ್ಹವಾದ ಆರೋಗ್ಯ ಪ್ರಯೋಜನಗಳು ಮತ್ತು ಸರಳತೆಯನ್ನು ಬಯಸುವ ಅನೇಕರಿಗೆ ಜೀವನಶೈಲಿಯ ಆಯ್ಕೆಯಾಗಿದೆ. 

ಶಾರುಖ್ ಖಾನ್‌ ವೈಯಕ್ತಿಕ ತರಬೇತುದಾರ ಪ್ರಶಾಂತ್ ಸಾವಂತ್ ಹೇಳುವ ಪ್ರಕಾರ, ಶಾರುಖ್‌ ಅವರ ವರ್ಕೌಟ್‌ 45 ನಿಮಿಷಗಳಿಗಿಂತ ಹೆಚ್ಚು ಸೆಷನ್‌ಗಳನ್ನು ಒಳಗೊಂಡಿಲ್ಲ.‌ ಶಾರೂಖ್ ದಿನವಿಡೀ ಬಿಝಿಯಾಗಿರುವ ಕಾರಣ ಸಾಮಾನ್ಯವಾಗಿ ಸಂಜೆ ತಡವಾಗಿ ವರ್ಕೌಟ್ ಮಾಡುತ್ತಾರೆ. ಇದು ರಿಹ್ಯಾಬ್ ವರ್ಕೌಟ್‌ಗಳು, ಸೈಕ್ಲಿಂಗ್ ಮತ್ತು ಕಾರ್ಡಿಯೋಗಳನ್ನು ಒಳಗೊಂಡಿದೆ.‌

ಕಿಂಗ್‌ ಖಾನ್‌ ಆಹಾರ ಗ್ರೀನ್‌ ಸಲಾಡ್ ಒಳಗೊಂಡಿರುತ್ತದೆ. ಇದು ವಿಟಮಿನ್‌, ಮಿನರಲ್‌, ಕಬ್ಬಿಣ, ಮೆಗ್ನೀಶಿಯಂ, ಪೊಟ್ಯಾಶಿಯಂ, ಕ್ಯಾಲ್ಶಿಯಂ ಅಂಶಗಳನ್ನು ಒಳಗೊಂಡಿರುತ್ತದೆ. ಇದು ಕಣ್ಣಿನ ದೃಷ್ಟಿಯನ್ನು ಚುರುಕಾಗಿಸಲು ನೆರವಾಗುತ್ತದೆ. ಮಾತ್ರವಲ್ಲ, ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಜೊತೆಗೆ ಪ್ರೊಟೀನ್‌ಗಳ ಮೂಲವಾದ ಬಾದಾಮಿ, ಪಿಸ್ತಾ, ಗೋಡಂಬಿಗಳನ್ನು ತಿನ್ನುತ್ತಾರೆ. ಈ ನಟ್ಸ್‌ ಹೆಲ್ದೀ ಫ್ಯಾಟ್‌, ಪೈಬರ್‌, ವಿಟಮಿನ್‌ ಹಾಗೂ ಮಿನರಲ್‌ಗಳನ್ನು ದೇಹಕ್ಕೆ ನೀಡಲು ನೆರವಾಗುತ್ತದೆ.

ನಾಯಕ ತೊಟ್ಟಿದ್ದ ಟೋಪಿ 5 ಕೋಟಿಗೆ ಹರಾಜು; ಯಾರೋ ಬಕ್ರ ಗೋವಾದಲ್ಲಿ 200 ರೂ. ಟೋಪಿ ನೋಡಿಲ್ಲ ಅನ್ಸುತ್ತೆ ಎಂದ ನೆಟ್ಟಿಗರು!

ಗ್ರಿಲ್ಡ್‌ ತರಕಾರಿಗಳನ್ನು ಶಾರುಖ್‌ ಹೆಚ್ಚೆಚ್ಚು ತಿನ್ನುತ್ತಾರೆ. ಇದರಲ್ಲಿ ಫ್ಯಾಟ್ ಕಡಿಮೆಯಿರುತ್ತದೆ. ಕಬ್ಬಿಣ, ಮೆಗ್ನೇಶಿಯಂ, ಪೊಟ್ಯಾಶಿಯಂ, ವಿಟಮಿನ್‌ ಇ, ಸಿ, ಕೆ ಅಧಿಕವಾಗಿರುತ್ತದೆ. ಇದು ದೇಹವನ್ನು ಸ್ಟ್ರಾಂಗ್ ಮತ್ತು ಹೆಲ್ದೀ ಆಗಿಡಲು ಸಹಾಯ ಮಾಡುತ್ತದೆ. ಗ್ರಿಲ್ಡ್ ಚಿಕನ್ ಸಹ ಇವರ ಆದ್ಯತೆಯಾಗಿದೆ. ಶಾರುಖ್‌ ತಾಜಾ ಹಣ್ಣುಗಳನ್ನು ಹೆಚ್ಚು ತಿನ್ನಲು ಬಯಸುತ್ತಾರೆ. ಯಾವುದೇ ಆಹಾರ ಸೇವಿಸುವ ಮೊದಲು ಫ್ರೆಶ್ ಹಣ್ಣುಗಳನ್ನು ಮಿಸ್ ಮಾಡದೇ ತಿನ್ನುತ್ತಾರೆ. ಹೀಗೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಭರಿತ ಐಟಂ ಹಾಗೂ ಡೆಸರ್ಟ್‌ಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಕಿಂಗ್ ಖಾನ್ ತಿಳಿಸಿದ್ದಾರೆ. ಮೊಟ್ಟೆಯ ಬಿಳಿಭಾಗವನ್ನು ಸೇವಿಸುತ್ತಾರೆ. ಮೊಟ್ಟೆ ಪ್ರೊಟೀನ್‌ನ ಆಗರ. ಇದು ಮಸಲ್ಸ್‌ ಬಿಲ್ಡ್‌ ಮಾಡಲು ನೆರವಾಗುವುದು ಮಾತ್ರವಲ್ಲದೆ, ತೂಕ ಇಳಿಕೆಗೂ ನೆರವಾಗುತ್ತದೆ.

‍ಅಪ್ಪುನೇ ದೇವ್ರು ಅನ್ನೋದು ಯಾಕೆ ಅಂತ ಅವತ್ತೇ ಗೊತ್ತಾಗೋಯ್ತು.. ಪವಾಡ ಬಿಚ್ಚಿಟ್ಟ ಫುಡ್‌ ವ್ಲಾಗರ್‌