Asianet Suvarna News Asianet Suvarna News

‍ಅಪ್ಪುನೇ ದೇವ್ರು ಅನ್ನೋದು ಯಾಕೆ ಅಂತ ಅವತ್ತೇ ಗೊತ್ತಾಗೋಯ್ತು.. ಪವಾಡ ಬಿಚ್ಚಿಟ್ಟ ಫುಡ್‌ ವ್ಲಾಗರ್‌

ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅಭಿಮಾನಿಗಳು ಅಷ್ಟೊಂದು ಪ್ರೀತಿ ಯಾಕೆ ಮಾಡ್ತಾರೆ, ಅವರನ್ನು ದೇವರು ಎಂದು ಅಂದುಕೊಳ್ಳೋದ್ಯಾಕೆ ಎನ್ನುತ್ತಲೇ ತಮಗಾದ ಅನುಭವ ಬಿಚ್ಚಿಟ್ಟಿದ್ದಾರೆ ಫುಡ್‌ ವ್ಲಾಗರ್‌ ಕೃಪಾಲ್ ಅಮನ್ನಾ
 

Food vlogger Kripal Amanna revealed his experience with Puneeth Rajkumar in rapid rashmi show suc
Author
First Published Aug 20, 2024, 2:28 PM IST | Last Updated Aug 20, 2024, 2:28 PM IST

ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಎರಡೂವರೆ ವರ್ಷಗಳಾಗುತ್ತಾ ಬಂದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಇದೀಗ ಫುಡ್‌ ವ್ಲಾಗರ್‌ ಕೃಪಾಲ್ ಅಮನ್ನಾ ಪುನೀತ್‌ ರಾಜ್‌ ಅವರನ್ನು ಅವರ ಅಭಿಮಾನಿಗಳು ದೇವರು ಎಂದು ಯಾಕೆ ಕರೆಯುತ್ತಾರೆ ಎನ್ನುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ರ್‍ಯಾಪಿಡ್‌ ರಶ್ಮಿ ಯುಟ್ಯೂಬ್‌ ಚಾನೆಲ್‌ಗೆ ಕೃಪಾಲ್‌ ಅವರು ನೀಡಿರುವ ಸಂದರ್ಶನದಲ್ಲಿ ತಮ್ಮ ಜೀವನದಲ್ಲಿ ಆದ ಪವಾಡವನ್ನು ಅವರು ಸ್ಮರಿಸಿಕೊಂಡಿದ್ದಾರೆ. ಅಷ್ಟಕ್ಕೂ, ಸೋಷಿಯಲ್‌ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಅದರಲ್ಲಿಯೂ ಆಹಾರಗಳ ವಿಡಿಯೋ ಹೆಚ್ಚು ನೋಡುವವರಿಗೆ  ಕೃಪಾಲ್ ಅಮನ್ನಾ ಪರಿಚಿತ ಹೆಸರು. ವಿವಿಧ ಪ್ರದೇಶಗಳ ತಿನಿಸುಗಳ ಬಗ್ಗೆ ವಿವರಣೆ ಕೊಡುತ್ತಾ, ಅದರ ರಸದೌತಣವನ್ನು ಉಣಬಡಿಸುತ್ತಾರೆ. ವಿವಿಧ ಪ್ರದೇಶಗಳ ಆಹಾರಗಳ ವಿವರಣೆ ನೀಡುತ್ತಾರೆ. ಆಹಾರ ಪ್ರಿಯರೂ ಆಗಿದ್ದ ಪುನೀತ್‌ ರಾಜ್‌ಕುಮಾರ್‌ ಅವರಿಂದ ತಮ್ಮ ಜೀವನದಲ್ಲಿ ನಡೆದ ಕುತೂಹಲದ ಅನುಭವವನ್ನು ಅವರು ಈಗ ಬಿಚ್ಚಿಟ್ಟಿದ್ದಾರೆ.

ರಾಜ್​ ಅಭಿಮಾನಿಯಂತ ಹುಡುಗಿನ ನೋಡದೇ ಮದ್ವೆಯಾದೆ: ಲವ್​ಸ್ಟೋರಿಗೆ ಅಪ್ಪು ಭಾವುಕ- ಹಳೆ ವಿಡಿಯೋ ವೈರಲ್​

ಅದು ಲಾಕ್‌ಡೌನ್‌ ಸಮಯವಾಗಿತ್ತು. ಪತ್ರಿಕೆಯೊಂದರ ಸಂದರ್ಶನದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ನೀವು ಹೇಗೆ ಸಮಯ ಕಳೆಯುತ್ತೀರಿ ಎಂದು ಪ್ರಶ್ನಿಸಲಾಗಿತ್ತು. ಆಗ ಅವರು, ನಾನು ಯೂಟ್ಯೂಬ್‌ ನೋಡುತ್ತೇನೆ. ಆಹಾರದ ಕುರಿತು ವಿಡಿಯೋ ನೋಡುತ್ತೇನೆ ಎಂದು ಹೇಳಿ ನನ್ನ ಹೆಸರನ್ನೂ ಉಲ್ಲೇಖಿಸಿದ್ದರು. ನನಗೆ ಆ ಸುದ್ದಿ ಓದಿ ತುಂಬಾ ಖುಷಿಯಾಗಿತ್ತು. ಆದರೆ ಮುಂದೊಂದು ದಿನ ಪವಾಡ ನಡೆಯುತ್ತದೆ ಎಂದು ಗೊತ್ತಿರಲಿಲ್ಲ ಎಂದಿದ್ದಾರೆ. ಇದಾದ ಬಳಿಕ ಕೆಲವು ದಿನಗಳ ನಂತರ ನನಗೆ ಲೇಡಿಯೊಬ್ಬರು ಕಾಲ್‌ ಮಾಡಿದ್ರು.  ಪಿಆರ್‌ಕೆ ಪ್ರೊಡಕ್ಷನ್‌ನಿಂದ ತಾವು ಕರೆ ಮಾಡುತ್ತಿರುವುದಾಗಿ ಹೇಳಿದರು. ಪಿಆರ್‌ಕೆ ಅಂದ್ರೆ ಏನು ಅಂತ ಗೊತ್ತಿರಲಿಲ್ಲ. ಆನಂತರ ಅವರೇ  ಪುನೀತ್‌ ರಾಜ್‌ಕುಮಾರ್‌ ಎಂದು ಹೇಳಿ, ಪುನೀತ್‌ ಅವರು ನಿಮ್ಮ ಜೊತೆ ಒಂದು ವಿಡಿಯೋ ಮಾಡಬೇಕು ಎಂದಿದ್ದಾರೆ ಎಂದರು. ನನಗೆ ನಂಬಲು ಆಗಲಿಲ್ಲ. ಇದು ಫೇಕ್‌ ಕಾಲ್‌ ಎಂದುಕೊಂಡು ಸುಮ್ಮನಾಗಿಬಿಟ್ಟೆ. ಆ ವಿಷಯವನ್ನು ಪತ್ನಿಗೂ ಹೇಳಿರಲೇ ಇಲ್ಲ ಎಂದರು ಕೃಪಾಲ್‌.

ಆ ಬಳಿಕ ಮತ್ತೆ ಮತ್ತೆ ಕಾಲ್‌ ಬಂತು. ನಂತರ ನನಗೆ ಕನ್‌ಫರ್ಮ್ ಆಯಿತು. ಆಗ ಯುವರತ್ನ ಚಿತ್ರದ ಪ್ರೆಸ್‌ಮೀಟ್‌ ನಡೀತಾ ಇತ್ತು. ನಾನು ಅಲ್ಲಿಗೆ ಹೋದೆ. ಅವರು ಅಲ್ಲೆಲ್ಲೋ ಕುಳಿತಿದ್ದರು. ಅಲ್ಲಿಂದಲೇ ನನ್ನನ್ನು ನೋಡಿ ಸ್ಮೈಲ್‌ ಮಾಡಿದರು. ಕೊನೆಗೆ ಬಳಿಗೆ ಕರೆದು ಹಗ್‌ ಮಾಡಿಬಿಟ್ಟರು. ಅಬ್ಬಾ! ಅದೊಂದು ಅದ್ಭುತ ಕ್ಷಣ ಎಂದಿರುವ ಕೃಪಾಲ್‌ ಅವರು ಪುನೀತ್‌ ರಾಜ್‌ ಅವರು ಹೇಗೆ ನನ್ನನ್ನು ಬರಮಾಡಿಕೊಂಡರು ಎಂದರೆ ನಮ್ಮಿಬ್ಬರಿಗೂ ಹತ್ತು ವರ್ಷದ ಪರಿಚಯ ಇದ್ದಂತೆ ನನ್ನನ್ನು ಟ್ರೀಟ್‌ ಮಾಡಿದರು. ಬಳಿಕ ತಾವೇ ಕಾರನ್ನು ಡ್ರೈವ್‌ ಮಾಡಿಕೊಂಡು ನನ್ನನ್ನು ಪಕ್ಕದಲ್ಲಿ ಕುಳ್ಳರಿಸಿಕೊಂಡು ವಿಡಿಯೋ ಮಾಡಿಸಿಕೊಂಡರು. ಅದೊಂದು ರೀತಿಯಲ್ಲಿ ಪವಾಡ ಎಂದೇ ಈಗಲೂ ಅನಿಸುತ್ತಿದೆ. ದೇವರಿಂದ ಆಗ ಪವಾಡ ಆಯ್ತು ಎಂದುಕೊಂಡೆ. ಆಮೇಲೆ ಗೊತ್ತಾಯ್ತು, ಪುನೀತ್‌ ಅವರೇ ದೇವರು ಎಂದು. ಜನ ಯಾಕೆ ಅವರಿಗೆ ಅಷ್ಟು ಪ್ರೀತಿ ತೋರುತ್ತಾರೆ ಎಂದು ತಿಳಿಯಿತು ಎಂದಿದ್ದಾರೆ.

ಸುಧಾರಾಣಿ ಅಣ್ಣ ನಾಗರಹಾವು ಸಾಕಿದ್ರಂತೆ! ತೆಂಗಿನಚಿಪ್ಪಲ್ಲಿ ಹಾಲು ಕುಡೀತಿದ್ದ ಅಚ್ಚರಿ ವಿಷ್ಯ ರಿವೀಲ್​

Latest Videos
Follow Us:
Download App:
  • android
  • ios