Asianet Suvarna News Asianet Suvarna News

ನಾಯಕ ತೊಟ್ಟಿದ್ದ ಟೋಪಿ 5 ಕೋಟಿಗೆ ಹರಾಜು; ಯಾರೋ ಬಕ್ರ ಗೋವಾದಲ್ಲಿ 200 ರೂ. ಟೋಪಿ ನೋಡಿಲ್ಲ ಅನ್ಸುತ್ತೆ ಎಂದ ನೆಟ್ಟಿಗರು!

80ರ ದಶಕದ ಟೋಪಿಗೆ ಹರಾಜಿನಲ್ಲಿ 5 ಕೋಟಿ ರೂಪಾಯಿ ಬೆಲೆ. ತೋಪಿ ನೋಡಿ ಎಲ್ಲರೂ ಶಾಕ್.....

Indiana jones movie hat auctioned for 5 crore rs in Los Angeles vcs
Author
First Published Aug 20, 2024, 12:23 PM IST | Last Updated Aug 20, 2024, 12:23 PM IST

ಒಂದು ಸಿನಿಮಾ ಸೂಪರ್ ಹಿಟ್ ಆಗಲು ನಿರ್ದೇಶಕರು, ಕಲಾವಿದರು ಹಾಗೂ ತಂತ್ರಜ್ಞರು ಕಾರಣರಾಗುತ್ತಾರೆ ಆದರೆ ಅಭಿಮಾನಿಗಳಿಗೆ ಮಾತ್ರ ತಮ್ಮ ನೆಚ್ಚಿನ ಸ್ಟಾರ್ ನಟ ನಟಿಯರೇ ಕಾರಣ ಅಂದುಕೊಳ್ಳುತ್ತಾರೆ. ಹೀಗಾಗಿ ಸಿನಿಮಾದಲ್ಲಿ ಯಾವ ರೀತಿ ಡ್ರೆಸ್ ಧರಿಸಿರುತ್ತಾರೆ, ಯಾವ ಸ್ಟೈಲ್‌ನಲ್ಲಿ ಹೇರ್‌ಕಟ್ ಮಾಡಿಸಿರುತ್ತಾರೆ, ಯಾವ ಶೈಲಿಯಲ್ಲಿ ಮಾತನಾಡುತ್ತಾರೆ...ಪ್ರತಿಯೊಂದನ್ನು ಅನುಕರಣೆ ಮಾಡುತ್ತಾರೆ. ಅಪ್ಪಿತ್ತಪ್ಪಿ ನಟ ವಸ್ತುಗಳನ್ನು ಹರಾಜಿ ಇಟ್ಟರೆ ಅದೆಷ್ಟೇ ದುಬಾರಿ ಆದರೂ ಲೆಕ್ಕಿಸದೆ ಕೊಳ್ಳುತ್ತಾರೆ.

1980ರಲ್ಲಿ ಬಿಡುಗಡೆಯಾದ ಹಾಲಿವುಡ್ ಸಿನಿಮಾ ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್‌ ಡೂಮ್‌ ಸಿನಿಮಾದಲ್ಲಿ ನಾಯಕ ಧರಿಸಿದ್ದ ಟೋಪಿಯನ್ನು ಕೆಲವು ದಿನಗಳ ಹಿಂದೆ ಲಾಸ್ ಏಂಜಲ್ಸ್‌ನಲ್ಲಿ ಹರಾಜಿಗೆ ಇಡಲಾಗಿತ್ತು. ಈ ಟ್ರೋಪಿ ತುಂಬಾನೇ ಸಿಂಪಲ್ ಆಗಿದ್ದು ಯಾವ ರೀತಿಯ ಡಿಸೈನ್ ಹೊಂದಿಲ್ಲ ಅಲ್ಲದೆ ಶೂಟಿಂಗ್ ಸಮಯದಲ್ಲಿ ಆದ ಕಲೆಗಳು ಅಲ್ಲಲ್ಲಿ ಕಾಣಿಸುತ್ತದೆ. ಈ ಟೋಪಿಯನ್ನು ಚಿತ್ರದ ಸ್ಟಂಟ್ ಡಬಲ್ ಆಗಿದ್ದ ಡೀನ್ ಫರಾಂಡಿಗೆ ನೀಡಲಾಗಿತ್ತು ಆದರೆ ಕಳೆದ ವರ್ಷ ಡೀನ್‌ ಅಗಲಿದರು. ಹೀಗಾಗಿ ಈ ಟೋಪಿ ಈಗ ಆಕ್ಷನ್‌ಗೆ ಬಂದಿದೆ.

'ಲಕ್ಷ್ಮಿ ನಿವಾಸ' ಸೀರಿಯಲ್ ಭಾವನಾಳ ನಿಜವಾದ ಮಗಳು ಖುಷಿ ಅಲ್ಲ ಅವೀರಾ; ಈಕೆ ಕೂಡ ಸೆಲೆಬ್ರಿಟಿ ಕಿಡ್!

ಲಾಸ್ ಏಂಜಲ್ಸ್‌ನಲ್ಲಿ ನಡೆದ ಹರಾಜಿನಲ್ಲಿ ಈ ಟೋಪಿಯನ್ನು ಸಿನಿಮಾ ಪ್ರೇಮಿಯೊಬ್ಬ 5.28 ಕೋಟಿ ರೂಪಾಯಿಗೆ ಖರೀದಿಸಿದ್ದಾನೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ, ಈ ಬೆಲೆಗೆ ಆತ ಚಿನ್ನದ ಟೋಪಿ ಮಾಡಿಸಿಕೊಳ್ಳ ಬಹುದಿತ್ತು ಎಂದು ಕಾಲೆಳೆದಿದ್ದಾರೆ. 'ಗೋವಾದಲ್ಲಿ ಈ ಟೋಪಿ ಕೇವಲ 250 ರೂಪಾಯಿಗಳಿಗೆ ಸಿಗುತ್ತದೆ ಆತ ಯಾರೋ ಬಕ್ರ ಇರಬೇಕು' ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

ನಟ ಧನಂಜಯ್, ನಟಿ ಮೇಘನಾ ಗಾಂವ್ಕರ್ ಪಾರ್ಟಿ ಫೋಟೋ ವೈರಲ್; ಬಾಟಲ್ ಮೇಲೆ ನೆಟ್ಟಿಗರ ಕಣ್ಣು!

ಹ್ಯಾರಿಸನ್‌ ಪೋರ್ಡ್‌ ನಾಯಕನಾಗಿ ನಟಿಸಿರುವ ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್‌ ಡೂಮ್‌ ಸಿನಿಮಾವನ್ನು ಭಾರತದಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಗಿತ್ತು. ಈ ಚಿತ್ರದ ಖಳನಾಯಕನಾಗಿ ಬಾಲಿವುಡ್‌ ನಟ ಅಮರೀಶ್ ಪುರಿ ನಟಿಸಿದ್ದರು. 1984ರಲ್ಲಿ ಈ ಸಿನಿಮಾ 33 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು, ಈಗ ಅದು 3 ಸಾವಿರ ಕೋಟಿ ರೂಪಾಯಿಗಳ ಸಮ ಎನ್ನಲಾಗಿದೆ. ಅಷ್ಟೇ ಯಾಕೆ ಅತ್ಯುತ್ತಮ ವಿಷ್ಯುಲ್ ಎಫೆಟ್ಸ್‌ ಲಿಸ್ಟ್‌ನಲ್ಲಿದ್ದು ಆಸ್ಕರ್ ಪ್ರಶಸ್ತಿಯನ್ನು ಪಡೆದಿದೆ. 

Latest Videos
Follow Us:
Download App:
  • android
  • ios