ನಯನತಾರಾ ಮದುವೆಯಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟ ಶಾರುಖ್ ಖಾನ್. ಕೊರೋನಾದಿಂದ ಚೇತರಿಸಿಕೊಂಡ್ರಾ ಎಂದು ಕಾಲೆಳೆದ ನಟ್ಟಿಗರು... 

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಮಹಾಬಲಿಪುರಂನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗದ ಟಾಪ್ ಸೆಲೆಬ್ರಿಟಿಗಳು ನಯನತಾರಾ ಮದುವೆಯಲ್ಲಿ ಭಾಗಿಯಾಗಿದ್ದರು. ಅದರಲ್ಲೂ ಕಿಂಗ್ ಶಾರುಖ್ ಖಾನ್‌ ಸಿಂಪಲ್ ಸೂಟ್‌ ಲುಕ್‌ನಲ್ಲಿ ಮಿಂಚುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಹೀಗಾಗಿ ನೆಟ್ಟಿಗರು ಶಾರುಖ್‌ ಖಾನ್‌ರನ್ನು ಮತ್ತೆ ಟ್ರೋಲ್ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ನಯನತಾರಾ ಮದುವೆಯಲ್ಲಿ ಭಾಗಿಯಾಗುವ ಮುನ್ನ ಶಾರುಖ್ ಖಾನ್ ಸೇರಿದಂತೆ ನೂರಾರು ಬಾಲಿವುಡ್ ಸೆಲೆಬ್ರಿಟಿಗಳು ಕರಣ್ ಜೋಹಾರ್ 50ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಪಾರ್ಟಿ ಆಫ್ಟರ್‌ ಎಫೆಕ್ಟ್‌ ರೀತಿ ಪಾರ್ಟಿಯಲ್ಲಿ ಇದ್ದವರಿಗೆಲ್ಲಾ ಕೊರೋನಾ ಸೋಂಕು ತಗುಲಿತ್ತು. ವಿಚಾರ ಬಹಿರಂಗವಾದರೆ ದೊಡ್ಡ ಸಮಸ್ಯೆ ಆಗುತ್ತೆ ಎಂದು ರಹಸ್ಯವಾಗಿ ಇಡಲಾಗಿತ್ತು. ಕಿಂಗ್ ಶಾರುಖ್‌ ಖಾನ್‌ಗೂ ಕೂಡ ಕೊರೋನಾ ಸೋಂಕು ಎರಡನೇ ಸಲ ತಗುಲಿದೆ ಎಂದು ಎಲ್ಲೆಡೆ ಹರಿದಾಡಿತ್ತು. ಈ ವಿಚಾರ ವೈರಲ್ ಆಗುತ್ತಿದ್ದಂತೆ ಶಾರುಖ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಆದರೆ ಇದ್ದಕ್ಕಿದ್ದಂತೆ ನಯನತಾರಾ ಮದುವೆಯಲ್ಲಿ ಭಾಗಿಯಾಗಿ ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ. 

ಕೊರೋನಾ ಸೋಂಕು ತಗುಲಿದೆ ಎಂದು ಹೇಳುತ್ತಿದ್ದಾರೆ ನೀವು ಮದುವೆಯಲ್ಲಿ ಇದ್ದೀರಾ, ಶ್ರೀಮಂತರಿಗೆ ಕೊರೋನಾ ಸೋಂಕು ಇಷ್ಟು ಬೇಗ ಬಿಟ್ಟು ಹೋಗುತ್ತಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕರಣ್ ಪಾರ್ಟಿಯಲ್ಲಿ ಭಾಗಿಯಾದವರಿಗೆ ಕೊರೋನಾ ಸೋಂಕು ತಗುಲಿರುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಆದರೂ ಶಾರುಖ್‌ ಅನೇಕರ ಜೊತೆ ಫೋಟೋದಲ್ಲಿ ಕಾಣಿಸಿಕೊಂಡಿರುವ ಕಾರಣ ಕಾಲೆಳೆದಿದ್ದಾರೆ ಎನ್ನಲಾಗಿದೆ.

Aryan Khan Case ನನ್ಯಾಗೆ ಈ ಚಿತ್ರಹಿಂಸೆ, NCB ಮುಂದೆ ಅಳಲತ್ತುಕೊಂಡ ಶಾರುಖ್!

ನಯನ ಮದುವೆ ಅಪ್ಡೇಟ್: 

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲಿಯೇ ಗಾಸಿಪ್ ಒಂದು ಹರಿದಾಡುತ್ತಿದ್ದು, ತಾರಾ ಜೋಡಿ ತಮ್ಮ ಮದುವೆಯ ವಿಡಿಯೋವನ್ನು ಒವರ್ ದಿ ಟಾಪ್ (ಒಟಿಟಿ) ವೇದಿಕೆಗೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದೆ ಎನ್ನಲಾಗುತ್ತಿದೆ.

ವರದಿಯ ಪ್ರಕಾರ, ದಂಪತಿಗಳು ತಮ್ಮ ಮದುವೆಯ ವೀಡಿಯೊ ಹಕ್ಕುಗಳನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ (streaming Platform) ನೆಟ್‌ಫ್ಲಿಕ್ಸ್‌ಗೆ (Netflix) ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಮುಖ ಚಲನಚಿತ್ರ ನಿರ್ಮಾಪಕ ಗೌತಮ್ ಮೆನನ್ (gautham menon) ಇಡೀ ವಿವಾಹ ಸಮಾರಂಭವನ್ನು ಸಾಕ್ಷ್ಯಚಿತ್ರ ಶೈಲಿಯಲ್ಲಿ ಚಿತ್ರೀಕರಿಸಲಿದ್ದಾರೆ ಎಂದು ವರದಿಯಾಗಿದೆ.

ಪತ್ನಿ ನಯನಾತಾರಾಗೆ ದುಬಾರಿ ಉಡುಗೊರೆ ನೀಡಿದ ವಿಘ್ನೇಶ್ ಶಿವನ್; ಗಿಫ್ಟ್‌ನ ಬೆಲೆ ಎಷ್ಟು?

ನಿಜಾಮರ ಲುಕ್‌ನಲ್ಲಿ ಕಂಗೊಳಿಸಿದ ನಯನತಾರಾ:

ನಯನತಾರಾ ಮದುವೆಯ ಉಡುಗೆಯನ್ನು ಸಂಪೂರ್ಣವಾಗಿ ಡಿಸೈನ್ ಮಾಡಿದ್ದು ಖ್ಯಾತ ಡಿಸೈನರ್ ಜೇಡ್‌ನ ಮೋನಿಕಾ ಶಾ ಮತ್ತು ಕರಿಷ್ಮಾ ಸ್ವಾಲಿ. ಮದುವೆ ಡ್ರೆಸ್ ಹೀಗೆ ಇರಬೇಕೆಂದು ನಯನತಾರಾ ಅವರೇ ಖುದ್ದು ಹೇಳಿ ಮಾಡಿಸಿದ ಡಿಸೈನ್ ಇದಾಗಿದೆ. ಲೈಟ್‌ವೈಟ್ ಕೆಂಪು ಬಣ್ಣದ ಸೀರೆಗೆ ಅದೇ ಬಣ್ಣದ ಬಾರ್ಡರ್ ಕೂಡ ಇತ್ತು. ಸೀರೆಯಲ್ಲಿ ಅನೇಕ ವಿಶೇಷ ಡಿಸೈನ್ ಮಾಡಿಸಲಾಗಿತ್ತು. ಮದುವೆ ಸೀರೆಯ ಮೇಲೆ ನಯನತಾರಾ ಮತ್ತು ವಿಘ್ನೇಶ್ ಹೆಸರನ್ನು ಬರೆಸಲಾಗಿದೆ. ಇನ್ನು ವಿಘ್ನೇಶ್ ಶಿವನ್ ಧರಿಸಿದ್ದ ಬಟ್ಟೆ ಬಗ್ಗೆ ಹೇಳುವುದಾದರೆ ವಿಘ್ನೇಶ್ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಬಿಳಿ ಮತ್ತು ಗೋಲ್ಡ್ ಬಣ್ಣದ ಕುರ್ತ , ಪಂಚೆ ಮತ್ತು ಶಾಲ್ ಧರಿಸಿದ್ದಾರೆ. ವಿಘ್ನೇಶ್ ಬಟ್ಟೆಯನ್ನು ಸಹ ಜೇಡ್ ವಿನ್ಯಾಸಕರು ವಿಶೇಷವಾಗಿ ಡಿಸೈನ್ ಮಾಡಿದ ಡ್ರೆಸ್ ಆಗಿತ್ತು. ಶಾಲ್‌ನಲ್ಲಿ ಏಕ್ ತಾರ್ ಎಂಬ್ರಾಯಿಡರಿ ಮಾಡಲಾಗಿದೆ.