ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ಸಿಕ್ಕಿದೆ ಕ್ಲೀನ್ ಚಿಟ್ ಎನ್‌ಸಿಬಿ ವಿಚಾರಣೆ ವೇಳೆ ಭಾವುಕರಾಗಿದ್ದ ಶಾರುಖ್ ಖಾನ್ ಶಾರುಖ್ ಮಾತು ಬಹಿಂಗಪಡಿಸಿದ NCB ಉಪನಿರ್ದೇಶಕ
ಮುಂಬೈ(ಜೂ.11): ಸಮಾಜವನ್ನು ನಾಶ ಮಾಡಲು ಹೊರಟಿರುವ ಅತೀ ದೊಡ್ಡ ರಾಕ್ಷಸ ಅಪರಾಧಿಯಂತೆ ಚಿ್ತ್ರಿಸಿದ್ದೀರಿ. ತಪ್ಪಿಲ್ಲದಿದ್ದರೂ ಪ್ರಕರಣದಲ್ಲಿ ಸಿಲುಕಿಸಿ ಮಾನಸಿಕ ಹಿಂಸೆ ನೀಡಿದ್ದೀರಿ. ಇದು ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ವೇಳೆ NCB ನಡೆಸಿದ ವಿಚಾರಣೆ ವೇಳೆ ಹೇಳಿದ ಮಾತುಗಳು.
ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಡ್ರಗ್ಸ್ ಪ್ರಕರಣ ಅಂತ್ಯಗೊಂಡಿದೆ. ಆದರೆ ಈ ಪ್ರಕರಣ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ಹಾಗೇ ಉಳಿದುಕೊಂಡಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆಯಿಂದ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಲಾಗಿದೆ. ಆದರೆ ಈ ಘಟನೆ ಬಳಿಕ ಎನ್‌ಸಿಬಿ ಅಧಿಕಾರಿಗಳ ವಿಚಾರಣೆಯಲ್ಲಿ ಶಾರುಖ್ ಖಾನ್ ಆಡಿದ ಮಾತುಗಳನ್ನು ಎನ್‌ಸಿಬಿ ಉಪನಿರ್ದೇಶಕ ಸಂಜಯ್ ಸಿಂಗ್ ಬಹಿರಂಗ ಪಡಿಸಿದ್ದಾರೆ.
ನಿದ್ರಾಹೀನತೆಯಿಂದ ಹೊರಬರಲು ಗಾಂಜಾ ಸೇವನೆ ಕಲಿತಿದ್ದೆ: ಆರ್ಯನ್
ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಳಿಯಿಂದ ಡ್ರಗ್ಸ್ ಸಿಗದೇ ಇದ್ದರೂ ಬಂಧಿಸಿದ್ದೀರಿ. ಬಳಿಕ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ರೀತಿ ನೋಡಿಕೊಂಡಿದ್ದೀರಿ. ತಪ್ಪಿಲ್ಲದಿದ್ದರೂ ಮಗನ ಜೈಲಿಲ್ಲಿ ಇರಲಿಸಲಾಯಿತು. ಈ ಆಘಾತದಿಂದ ಮಾನಸಿಕವಾಗಿ ನೊಂದ ಪುತ್ರ ಮಲಗಲೂ ಆಗದೆ, ಇರಲೂ ಆಗದೆ ತೊಳಲಾಡಿದ್ದಾನೆ ಎಂದು ವಿಚಾರಣೆ ವೇಳೆ ಶಾರುಖ್ ಖಾನ್ ಅಳಲು ತೋಡಿಕೊಂಡಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಅಧಿಕಾರಿಗಳು ಆರ್ಯನ್ ಖಾನ್‌ನನ್ನು ಅಪರಾಧಿಯನ್ನು ನೋಡಿಕೊಂಡರು. ಹಲವು ಪ್ರಕರಣಗಳ ಆರೋಪಿಯನ ಬಳಿಕ ಕೇಳುವ ಪ್ರಶ್ನೆಗಳನ್ನು ಕೇಳಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದೀರಿ. ಈ ಪ್ರಕರಣ ನನ್ನ ಪುತ್ರನ ಮೇಲೆ ಬೀರಿರುವ ವ್ಯತಿರಿಕ್ತ ಪರಿಣಾಮವೇನು ಅನ್ನೋದು ನಮಗೆ ಮಾತ್ರ ಗೊತ್ತು ಎಂದು ಶಾರುಖ್ ಖಾನ್ ಹೇಳಿದ್ದರು.
ಶಾರುಖ್ ಪುತ್ರನ ಸಿಲುಕಿಸಲು ಯತ್ನ!
ಡಗ್ರ್ಸ್ ಪ್ರಕರಣಧಲ್ಲಿ ಬಾಲಿವುಡ್ ಶಾರುಖ್ ಖಾನ್ ಅವರ ಪುತ್ರನಿಗೆ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಕ್ಲೀನ್‌ಚಿಟ್ ನೀಡಿದ ಬೆನ್ನಲ್ಲೇ, ಆರ್ಯನ್ ಖಾನ್ ಅವರನ್ನು ಬಂಧಿಸಿದ್ದ ಎನ್‌ಸಿಬಿಯ ಅಂದಿನ ಅಧಿಕಾರಿ ಸಮೀರ್ ವಾಂಖೇಡೆಗೆ ಸಂಕಷ್ಟಎದುರಾಗಿದೆ. ಅತ್ಯಂತ ಕಳಪೆ ರೀತಿಯಲ್ಲಿ ತನಿಖೆ ನಡೆಸಿರುವ ವಾಂಖೆಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಣಕಾಸು ಸಚಿವಾಲಯಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
Drug Case ಶಾರುಖ್ ಪುತ್ರ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್
ಈ ನಡುವೆ, ನಕಲಿ ಜಾತಿ ಪ್ರಮಾಣಪತ್ರ ನೀಡಿರುವ ಆರೋಪವೂ ವಾಂಖೇಡೆ ಮೇಲಿದೆ. ಇದರ ವಿರುದ್ಧ ಕೂಡ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಾಂಖೆಡೆ ಅವರು ಭಾರತೀಯ ಕಂದಾಯ ಸೇವೆ ಅಧಿಕಾರಿಯಾಗಿದ್ದಾರೆ. ಅವರಿಗೆ ಹಣಕಾಸು ಸಚಿವಾಲಯವೇ ನೋಡಲ್ ಪ್ರಾಧಿಕಾರವಾಗಿದ್ದು, ವಾಂಖೆಡೆ ವಿರುದ್ಧ ವಿತ್ತ ಸಚಿವಾಲಯವೇ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ವಿತ್ತ ಸಚಿವಾಲಯಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ.
ಕ್ಷಮಿಸಿ, ಕ್ಲೀನ್‌ಚಿಟ್ ಬಗ್ಗೆ ಪ್ರತಿಕ್ರಿಯಿಸಲ್ಲ- ವಾಂಖೇಡೆ:
ಆದರೆ, ಡ್ರಗ್‌್ಸ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ ಸಿಕ್ಕ ಕುರಿತು ಪ್ರತಿಕ್ರಿಯೆಗೆ ಎನ್‌ಸಿಬಿ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ನಿರಾಕರಿಸಿದ್ದಾರೆ. ‘ಕ್ಷಮಿಸಿ, ನಾನು ಪ್ರತಿಕ್ರಿಯಿಸಲಾರೆ. ನಾನು ಎನ್‌ಸಿಬಿಯಲ್ಲಿಲ್ಲ. ಎನ್‌ಸಿಬಿ ಅಧಿಕಾರಿಗಳ ಜತೆ ಮಾತನಾಡಿ’ ಎಂದು ಟೀವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
