ಡಾನ್​-3 ಚಿತ್ರದಲ್ಲಿ ಶಾರುಖ್​ ಖಾನ್​ರನ್ನು ಡಾನ್​ ಆಗಿ ನೋಡಲಾಗದೇ ಬೇಸರ ಪಟ್ಟುಕೊಂಡಿರೋ ಅಭಿಮಾನಿಗಳಿಗೆ ಇಲ್ಲಿದೆ ಗುಡ್​ ನ್ಯೂಸ್​  

‘ಡಾನ್​ 3’ ಚಿತ್ರಕ್ಕೆ ಶಾರುಖ್​ ಖಾನ್​ ಅವರೇ ಡಾನ್ ಆಗಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಲೇ ಅಭಿಮಾನಿಗಳು ಸಕತ್​ ಖುಷಿ ಪಟ್ಟಿದ್ದರು. ಆದರೆ ಆ ಚಿತ್ರಕ್ಕೆ, ರಣವೀರ್ ಸಿಂಗ್​ಗೆ ಪಾತ್ರ ಕೊಡಲಾಗಿದ್ದು ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಷ್ಟಕ್ಕೂ ಅಮಿತಾಭ್​ ಬಚ್ಚನ್​, ಬಳಿಕ ಡಾನ್​ ಎಂದರೆ ಶಾರುಖ್​ ಎನ್ನುವ ಸ್ಥಿತಿ ಸದ್ಯಕ್ಕಿದೆ. ಆದರೆ ಡಾನ್​-3 ಚಿತ್ರದಲ್ಲಿ ನಿರಾಸೆ ಮೂಡಿಸಿದ್ದ ಶಾರುಖ್​ ಈಗ ಅಭಿಮಾನಿಗಳಿಗೆ ಭರ್ಜರಿ ಗುಡ್​ನ್ಯೂಸ್​​ ನೀಡಿದ್ದಾರೆ. ಮಗಳು ಸುಹಾನಾ ಖಾನ್​ಗಾಗಿ ಮಾಡುತ್ತಿರುವ ಕಿಂಗ್​ ಚಿತ್ರದಲ್ಲಿ ಶಾರುಖ್​ ಡಾನ್​ ಆಗಿ ಮಿಂಚಲಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ‘ಪಠಾಣ್’ (Paathan), ಜವಾನ್​ ಬಳಿಕ ಶಾರುಖ್​ ಅವರು ಇದಾಗಲೇ ತಮ್ಮ ಮಗಳ ಜೊತೆ ಸಿನಿಮಾ ಮಾಡುವ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ಅಪ್ಪ-ಮಗಳನ್ನ ಕಣ್ತುಂಬಿಕೊಳ್ಳುವ ಭಾಗ್ಯ ಫ್ಯಾನ್ಸ್‌ಗೆ ಸಿಗಲಿದೆ. ‘ಪಠಾಣ್ 2’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶಾರುಖ್ ಬ್ಯುಸಿಯಿದ್ರೆ, ಇತ್ತ ಸುಹಾನಾ ನಟಿಸಿದ ಮೊದಲ ಸಿನಿಮಾ ‘ಆರ್ಚೀಸ್’ ರಿಲೀಸ್ ಆದ್ಮೇಲೆ ಮತ್ತೊಂದು ಬಿಗ್ ಆಫರ್ ಅನ್ನು ಸುಹಾನಾ ಬಾಚಿಕೊಂಡಿದ್ದಾರೆ. ಸದ್ಯ ಶಾರುಖ್‌- ಸುಹಾನಾ ನಟನೆಯ ಈ ಚಿತ್ರಕ್ಕೆ ‘ಕಿಂಗ್’ ಎಂದು ಟೈಟಲ್‌ ಫೈನಲ್‌ ಮಾಡಿದ್ದಾರೆ.

ಇನ್ನು ಕಿಂಗ್​ (King) ಚಿತ್ರಕ್ಕೆ ಸ್ವತಃ ಶಾರುಖ್​ ಖಾನ್​ ಬಂಡವಾಳ ಹೂಡುತ್ತಿದ್ದಾರೆ. ಅದೂ 200 ಕೋಟಿ ರೂಪಾಯಿ. ಇದರ ಜೊತೆ ತಾವೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಅದೇ ಡಾನ್​ ಎನ್ನಲಾಗಿದೆ. ಈ ಸುದ್ದಿ ನಿಜವೇ ಆಗಿದ್ದರೆ, ಕಿಂಗ್ ಸಿನಿಮಾದಲ್ಲಿ ಶಾರುಖ್​ ನೆಗೆಟಿವ್​ ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಜಯ್​ ಘೋಷ್​ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ‘ಕಿಂಗ್’ ಆ್ಯಕ್ಷನ್ ಕುರಿತ ಸಿನಿಮಾ ಆಗಿರೋದ್ರಿಂದ ಸುಹಾನಾಗೆ ಪಾತ್ರಕ್ಕೆ ತಕ್ಕಂತೆ ಟ್ರೈನಿಂಗ್ ಕೊಡಲಾಗುತ್ತಿದೆ. ತಮ್ಮ ಪಾತ್ರಕ್ಕಾಗಿ ತೆರೆಮರೆಯಲ್ಲಿ ನಟಿ ಸಖತ್ ಕಸರತ್ತು ಮಾಡ್ತಿದ್ದಾರೆ. ಶಾರುಖ್ ಮತ್ತು ಸುಹಾನಾ ಇಬ್ಬರ ಪಾತ್ರ ಕೂಡ ವಿಭಿನ್ನವಾಗಿದೆ.

ಬಿಗ್​ಬಾಸ್​ನಲ್ಲಿ ಅವಕಾಶ ಕೊಡ್ತೆನಂದ, ವಿಡಿಯೋ ಕಳಿಸಿದೆ, ಮಧ್ಯರಾತ್ರಿ ಕರೆದ.. ಆಮೇಲೆ.. ಮನಿಷಾ ಕಹಿ ನೆನಪು


ಮಗಳ ಸಿನಿಮಾಗೆ ತಂದೆಯೇ ಸಾಥ್ ನೀಡ್ತಿದ್ದಾರೆ. ‘ಪಠಾಣ್’ ಸಿನಿಮಾ ಸಕ್ಸಸ್ ಆದ್ಮೇಲೆ ಶಾರುಖ್ ಖಾನ್‌ಗೆ ಹೆಚ್ಚಿನ ಬೇಡಿಕೆಯಿದೆ. ತನ್ನ ಹಾಗೆಯೇ ಮಗಳು ಕೂಡ ಸಕ್ಸಸ್ ಫುಲ್ ಕಲಾವಿದೆಯಾಗಿ ಮಿಂಚಬೇಕು ಎಂದು ಕಿಂಗ್ ಖಾನ್ ಆಸೆ. ಹಾಗಾಗಿ ಮಗಳಿಗೆ ಎಲ್ಲಾ ರೀತಿಯ ಟ್ರೈನಿಂಗ್ ಕೊಟ್ಟು ಕ್ಯಾಮೆರಾ ಮುಂದೆ ನಿಲ್ಲಿಸಲು ಶಾರುಖ್ ನಿರ್ಧರಿಸಿದ್ದಾರೆ. ಅದೇ ಇನ್ನೊಂದೆಡೆ, ಸುಹಾನಾ ಖಾನ್​ ಅವರು ಈಗಾಗಲೇ ‘ದಿ ಆರ್ಚೀಸ್​’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದು ಚಿತ್ರ ಬಿಡುಗಡೆಯಾಗಬೇಕಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದಿದ್ದು, ಸದ್ಯ ನೆಟ್​ಫ್ಲಿಕ್ಸ್​ ಮೂಲಕ ರಿಲೀಸ್​ ಆಗಿದೆ. 

ಈ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನವೇ ಸುಹಾನಾ ಖಾನ್​ ಅವರು ‘ಕಿಂಗ್​’ ಸಿನಿಮಾದ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಕಾರಣದಿಂದ ಶಾರುಖ್​ ಖಾನ್​ ಅವರು ಈ ಚಿತ್ರದ ಮೇಲೆ ವಿಶೇಷ ಗಮನ ಹರಿಸಿದ್ದಾರೆ. ಈ ವರ್ಷ ಮೇ ಅಂತ್ಯದಲ್ಲಿ ‘ಕಿಂಗ್’ ಸಿನಿಮಾ ಶೂಟಿಂಗ್ ಶುರುವಾಗಲಿದೆ. ರೆಡ್ ಚಿಲ್ಲೀಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ. ಈ ಚಿತ್ರದ ನಿರ್ಮಾಣಕ್ಕೆ ‘ಪಠಾಣ್’ ಡೈರೆಕ್ಟರ್ ಸಿದ್ಧಾರ್ಥ್ ಆನಂದ್ ಸಾಥ್ ನೀಡುತ್ತಿದ್ದಾರೆ.
ಸತ್ತೆನೆಂದು ಸುದ್ದಿ ಮಾಡಿದ ಬಳಿಕ ಈ ಅವತಾರದಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ: ವಿಡಿಯೋ ನೋಡಿ ತರಾಟೆ